ಮೋದಿಯವರನ್ನು ಲಾಂಛನದ ಸಿಂಹಕ್ಕೆ ಹೋಲಿಸಿದ ಜಗ್ಗೇಶ್!!!!

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ನರೇಂದ್ರ ಮೋದಿಯವರು ಇತ್ತೀಚಿನ ಪಾರ್ಲಿಮೆಂಟ್ ನ ಛಾವಣಿ ಮೇಲೆ ಉದ್ಘಾಟಿಸಿದ ಲಾಂಛನ ಎಲ್ಲಾ ಕಡೆ ಸಿಕ್ಕಾಪಟ್ಟೆ ಸದ್ದು ಮಾಡ್ತು. ರಾಷ್ಟ್ರೀಯ ಲಾಂಛನ ವನ್ನಾ ಇಲ್ಲಿ ಸ್ವಲ್ಪ ತಿರುಚಲಾಗಿದೆ ಅಂತ ಸಾಕಷ್ಟು ಜನರು ಈ ಲಾಂಛನದ ಕಡೆಗೆ ಬೆಟ್ಟು ಮಾಡಿ ತೋರಿಸಿದರು. ನನ್ನ ರಾಷ್ಟ್ರೀಯ ಲಾಂಛನ ದಲ್ಲಿ ಇರುವ ಸಿಂಹಗಳು ಶಾಂತಿಯ ಸಂಕೇತ ಅವು ಘರ್ಜಿಸುತ್ತಾ ಇಲ್ಲ. ಆದ್ರೆ ನರೇಂದ್ರ ಮೋದಿಯವರು ಉದ್ಘಾಟಿಸಿದ ಹೊಸ ಲಾಂಛನದಲ್ಲಿ ಸಿಂಹಗಳು ಘರ್ಜಿಸುತ್ತಿವೆ ಹಾಗೆ ಸಿಟ್ಟಿನಲ್ಲಿ ನೋಡ್ತಾ ಇದೆ ಅಂತ ಸಾಕಷ್ಟು ಚರ್ಚೆಗಳು ವಾದ ವಿವಾದಗಳು ನಡೆದಿತ್ತು. ಈ ಬಗ್ಗೆ ಇದೀಗ ಜಗ್ಗೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನೂ ರಾಜ್ಯ ಸಭಾ ಸದಸ್ಯ ನಟ ಜಗ್ಗೇಶ್ ಅವರು ಸಿಂಹಕ್ಕೆ ಹೋಲಿಸಿ ಮಾತನಾಡಿದ್ದಾರೆ.

 

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ ನೂತನ ಸಂಸತ್ ಭವನದ ಮೇಲೆ ಉದ್ಘಾಟಿಸಿದ ಲೋಕಾರ್ಪಣೆ ಮಾಡಿರುವ ರಾಷ್ಟ್ರ ಲಾಂಛನ ವಿವಾದಕ್ಕೆ ಸಂಬಂಧಿಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಗ್ಗೇಶ್ ಅವರು ಆರೋಪಿಗಳು ಶಿವ ಬ್ರಹ್ಮ ಕೃಷ್ಣನನ್ನೇ ಬಿಟ್ಟಿಲ್ಲ ಶಮಂತಕ ಮಣಿ ವಿಚಾರದಲ್ಲಿ ಕೃಷ್ಣನನ್ನೇ ಕಳ್ಳ ಅಂದ್ರು. ಅಂಥಾದ್ದರಲ್ಲಿ ಮೋದಿಯನ್ನು ಬಿಡ್ತಾರಾ? ಈ ರಾಷ್ಟ್ರದ ಜನರು ಎದೆ ಉಬ್ಬಿಸಿ ಮೆಚ್ಚಬೇಕಾದ ಅಂಶ ಅಂದ್ರೆ ನಮಗೆ ಒಳ್ಳೆಯ ಧೀಮಂತ ನಾಯಕ ಸಿಕ್ಕಿದ್ದಾನೆ ಆ ಸಿಂಹ ಅವರೇ ಅಂತ ಮೋದಿ ಹೆಸರನ್ನು ಉಲ್ಲೇಖಿಸಿ ಜಗ್ಗೇಶ್ ಅವರು ಅದನ್ನು ಬಣ್ಣಿಸುತ್ತಾರೆ. ಅಶೋಕ ಲಾಂಛನದ ಮೂಲ ಇವರು ಮ್ಯೂಸಿಯಂ ನಲ್ಲಿ ಹೋಗಿ ನೋಡಲಿ. ಮ್ಯೂಸಿಯಮ್ ಅಲ್ಲಿ ಇರುವ ಹಾಗೆಯೇ ಯಥಾವತ್ ಸಿಂಹ ಲಾಂಛನ ಮಾಡಲಾಗಿದೆ. ಇಷ್ಟು ವರ್ಷ ಲಾಂಛನದ ಬಾಯಿ ಮುಚ್ಚಿತ್ತು ಈಗ ಬಹಳ ಸ್ವಾಭಿಮಾನದಿಂದ ಬಾಯಿ ತೆರೆದಿದೆ. ಮತ್ತೆ ಘರ್ಜನೆ ಕೂಡ ಮಾಡುತ್ತಿದೆ. ಸುಖಾ ಸುಮ್ಮನೆ ಅವರ ವಿರುದ್ಧ ಮಾತನಾಡುತ್ತಿದ್ದರೆ ಅರಾಧಿಸುವವರ ಸಂಖ್ಯೆ ಶೇಕಡಾ 98 ರಷ್ಟು ಇದೆ ವಿರೋಧಿಸುವವರ ಸಂಖ್ಯೆ 2 ರಷ್ಟು ಇದೆ. ಅದಕ್ಕೆ ಏನು ಮಾಡಲು ಆಗಲಿ ಅಂತ ಜಗ್ಗೇಶ್ ಅವರು ಹೇಳಿದ್ದಾರೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

Leave a comment

Your email address will not be published. Required fields are marked *