ಮುಸ್ಲಿಂ ಮಹಿಳೆಗೆ ಪರಿಹಾರ ಹಣವನ್ನು ಕೊಟ್ಟ ಸಿದ್ದರಾಮಯ್ಯ, ನಿಮ್ಮ ದುಡ್ಡು ಯಾರಿಗೆ ಬೇಕು ಎಂದು ಹಣ ಎಸೆದ ಮಹಿಳೆ!!!

ಮುಸ್ಲಿಂ ಮಹಿಳೆಗೆ ಪರಿಹಾರ ಹಣವನ್ನು ಕೊಟ್ಟ ಸಿದ್ದರಾಮಯ್ಯ, ನಿಮ್ಮ ದುಡ್ಡು ಯಾರಿಗೆ ಬೇಕು ಎಂದು ಹಣ ಎಸೆದ ಮಹಿಳೆ!!!

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಇತ್ತೀಚೆಗೆ ಬಾಗಲಕೋಟೆ ಯ ಬಾದಾಮಿ ವಿಧಾನ ಸಭಾ ಕ್ಷೇತ್ರದಲ್ಲಿನ ಕೆರೋರು ಪಣ್ಣನ ವ್ಯಾಪ್ತಿಯಲ್ಲಿ ಎರಡು ಗುಂಪುಗಳ ನಡುವೆ ಅಂದ್ರೆ ಎರಡು ಸಮುದಾಯಗಳ ನಡುವೆ ಘರ್ಷಣೆ ಉಂಟಾಗಿತ್ತು. ಒಂದು ಗುಂಪಿನವರು ಮುಸ್ಲಿಂ ಸಮುದಾಯಕ್ಕೆ ಸೇರಿದವರು ಇನ್ನೊಂದು ಗುಂಪಿನವರು ಹಿಂದೂ ಸಮುದಾಯಕ್ಕೆ ಸೇರಿದಂತವರು. ಪರಸ್ಪರ ಹೊಡೆದಾಡಿಕೊಂಡ ಸಾಕಷ್ಟು ಜನ ಗಾಯಾಳು ಕೂಡ ಆಗಿದ್ರೂ. ಅವರೆಲ್ಲರೂ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತ ಇದ್ರು. ಇದೆ ಸಂದರ್ಭದಲ್ಲಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಲು ಹಾಗೂ ಅವರ ಯೋಗ ಕ್ಷೇಮ ವಿಚಾರಿಸಲು ಸಾಕಷ್ಟು ರಾಜಕೀಯ ನಾಯಕರು ಬರ್ತಾ ಇದ್ರು. ಅದೇ ರೀತಿ ಇವತ್ತು ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಹೋಗಿದ್ರು. ಮೊದಲು ಹಿಂದೂ ಸಮುದಾಯದವರನ್ನು ಮಾತನಾಡಿಸಲು ಹೋದಾಗ ಅಲ್ಲಿ ತೀವ್ರ ವಿರೋಧ ವ್ಯಕ್ತ ಆಗುತ್ತೆ ಆಗ ಅಲ್ಲಿಂದ ವಾಪಸ್ ಬರ್ತಾರೆ.

 

ಆಮೇಲೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಗಾಯಾಳುಗಳನ್ನು ಮಾತನಾಡಿಸಲು ಹೋದ ಸಂದರ್ಭದಲ್ಲಿ ಅಲ್ಲೇ ಇದ್ದಂಥ ಗಾಯಾಳುಗಳ ಕುಟುಂಬಕ್ಕೆ ಸೇರಿದ ಮಹಿಳೆಗೆ 2 ಲಕ್ಷ ಹಣವನ್ನು ಕೊಡ್ತಾರೆ. ಅಂದ್ರೆ ಅದೇ ಮನೆಯ ನಾಲ್ಕು ಜನ ಗಾಯಾಳು ಆಗಿದ್ರೂ. ಹಾಗಾಗಿ ತಲಾ ಐವತ್ತು ಸಾವಿರ ದಂತೆ ತೆಗೆದುಕೊಳ್ಳಿ ಹಂಚಿಕೊಳ್ಳಿ ಅಂತ ದುಡ್ಡು ಕೊಡ್ತಾರೆ. ತಕ್ಷಣ ಆ ಮಹಿಳೆ ತೀವ್ರವಾದ ಆಕ್ರೋಶ ಹೊರ ಹಾಕುತ್ತಾರೆ. ನಿಮ್ಮ ಹಣ ನಮಗೆ ಯಾರಿಗೋ ಬೇಡ ನಮಗೆ ನೆಮ್ಮದಿಯ ವಾತಾವರಣ ಕಲ್ಪಿಸಿ ಅಂತ ಈ ಸಂದರ್ಭದಲ್ಲಿ ಅವರು ಮನವಿ ಮಾಡಿಕೊಳ್ಳುತ್ತಾರೆ. ಆದ್ರೆ ಸಿದ್ದರಾಮಯ್ಯ ಒತ್ತಾಯ ಪೂರ್ವಕ ಮಹಿಳೆಯ ಕೈಗೆ ದುಡ್ಡು ಇಡ್ತಾರೇ,ಸಿದ್ದರಾಮಯ್ಯ ಅವರ ಕಾರು ಮುಂದೆ ಹೋಗುತ್ತಿದ್ದ ಹಾಗೆ ಆ ಮಹಿಳೆ ಕಾರಿನ ಹಿಂದೆಯೇ ಆ ಹಣವನ್ನು ಎಸೆಯುತ್ತಾರೆ. 2 ಲಕ್ಷ ಹಣವು ಕೂಡ ರಸ್ತೆಗೆ ಬೀಳುತ್ತೆ. ಅದಾದ ನಂತರ ಆ ಮಹಿಳೆ ಮಾತನಾಡಿ ನಮ್ಮ ಊರಿನಲ್ಲಿ ನಾವೆಲ್ಲ ಶಾಂತಿಯುತವಾಗಿ ಇದ್ವಿ. ಹಿಂದೂಗಳು ಮುಸ್ಲಿಮರಿಗೆ, ಮುಸ್ಲಿಂ ಗಳು ಹಿಂದೂಗಳಿಗೆ ಸಹಾಯ ಮಾಡುತ್ತಾ ಇದ್ವಿ.

 

ಯಾವುದೋ ಸಣ್ಣ ಕಾರಣಕ್ಕಾಗಿ ಗಲಾಟೆ ಆಗಿದೆ ನಮ್ಮ ನಮ್ಮ ನಡುವೆ ಎಲ್ಲವೂ ಸರಿ ಆಗುತ್ತೆ. ಆದ್ರೆ ಈ ರಾಜಕೀಯ ನಾಯಕರು ಬಂದು ತಮ್ಮ ರಾಜಕೀಯ ಲಾಭಕ್ಕೆ ನಮ್ಮ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ನಮ್ಮ ನೆಮ್ಮದಿಯನ್ನು ಹಾಳು ಮಾಡ್ತಾ ಇದ್ದಾರೆ. ನಾಳೆ ಮುಸ್ಲಿಂ ಸಮುದಾಯಕ್ಕೆ ಕಷ್ಟ ಆದ್ರೆ ಹಿಂದೂ ಸಮುದಾಯದವರು ಬರ್ತಾರೆ, ಹಿಂದೂಗಳಿಗೆ ಕಷ್ಟ ಆದ್ರೆ ಮುಸ್ಲಿಮರು ಬರ್ತಾರೆ ಹೊರತಾಗಿ ಈ ರಾಜಕೀಯ ನಾಯಕರು ಜನ ಪ್ರತಿನಿಧಿಗಳು ಬರೋದಿಲ್ಲ. ಇವ್ರು ನಮ್ಮ ನಡುವೆ ಬೆಂಕಿ ಹಚ್ಚಿ ತಮ್ಮ ಬೆಳೆ ಬೆಯಿಸಿಕೊಳ್ಳುತ್ತಿದ್ದಾರೆ ಈ ಕಾರಣಕ್ಕಾಗಿ ನಾನು ಹಣ ಬೇಡ ಅಂತ ಎಸೆದೆ ಎನ್ನುವ ಮಾತನ್ನು ಆ ಮಹಿಳೆ ಹೇಳಿದ್ದಾರೆ.

ಸುದ್ದಿ