ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಡೀ ಕೆ ಶಿವಕುಮಾರ್ ಅವರ ಆಸ್ತಿಯ ವಿವರವನ್ನು ನಾವೆಲ್ಲ ತಿಳಿದುಕೊಳ್ಳುವ ವಿಚಾರ ಇದು. ಕಾರಣ 2004 ರ ಚುನಾವಣೆ ಸಂದರ್ಭದಲ್ಲಿ ಡಿಕೆಶಿ ಘೋಷಣೆ ಮಾಡಿದಂಥ ಆಸ್ತಿ 7 ಕೋಟಿ ರೊ. ಕಳೆದ ಚುನಾವಣೆ ಸಂದರ್ಭದಲ್ಲಿ ಅಂದ್ರೆ 2018 ರಲ್ಲಿ ಅವರು ಘೋಷಣೆ ಮಾಡಿದ ಆಸ್ತಿ 840 ಕೋಟಿ. 7 ಕೋಟಿ ಇದ್ದಿದ್ದು 840 ಕೋಟಿಗೆ ಏರಿದೆ. ಅದೆಷ್ಟು ಪಟ್ಟು ಆಸ್ತಿ ಏರಿಕೆ ಆಗಿದೆ ಎಂದು ನೀವೇ ಲೆಕ್ಕ ಹಾಕಿ. ಇದು ಚುನಾವಣೆ ಸ್ಫರ್ಧಿಸುವಾಗ ನಾಮಿನೇಷನ್ ಫೈಲ್ ಮಾಡುವಾಗ ಸಲ್ಲಿಸಿದ ಅಧಿಕೃತ ಆಸ್ತಿಯ ಒಟ್ಟು ಮೊತ್ತ. ಇನ್ನೂ ಮುಂದಿನ ಚುನಾವಣೆ ಸಂದರ್ಭದಲ್ಲಿ ಈ ಆಸ್ತಿ ಇನ್ನೆಷ್ಟು ಪಟ್ಟು ಏರಿಕೆ ಆಗುತ್ತೋ ಗೊತ್ತಿಲ್ಲ. ಪ್ರತಿ ಚುನಾವಣೆಗೆ ಹೇಗೆ ಡಿಕೆಶಿ ಆಸ್ತಿ ಏರಿಕೆ ಆಯ್ತು ಅನ್ನೋದನ್ನು ಡೀಟೇಲ್ ಆಗಿ ನೋಡೋಣ. ಡಿಕೆ ಸುರೇಶ್ ಅವರ ಆಸ್ತಿ ಎಷ್ಟರ ಮಟ್ಟಿಗಿದೆ. ಹಾಗೆ ಡಿಕೆಶಿ ಮಗಳು ಹಾಗೂ ಪತ್ನಿ ಹೆಸರಲ್ಲಿ ಎಷ್ಟು ಆಸ್ತಿ ಇದೆ ಅನ್ನೋದನ್ನು ಡೀಟೇಲ್ ಆಗಿ ನೋಡೋಣ. ನಿಮಗೆಲ್ಲ ಗೊತ್ತಿರುವ ಹಾಗೆ ಡೀ ಕೆ ಶಿವಕುಮಾರ್ ಕನಕಪುರದ ದೊಡ್ಡಾಲ ಹಳ್ಳಿಯವರು. ಅವರದು ಒಂದು ಸಾಮಾನ್ಯ ಕುಟುಂಬ. 1985 ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ. ದೇವೇಗೌಡರ ವಿರುದ್ಧ ಕೆಲವೇ ಮತಗಳ ಅಂತರದಲ್ಲಿ ಸೋಲುತ್ತಾರೆ. ಅಂದಿನಿಂದ ಕೂಡ ದೇವೇಗೌಡರ ವಿರುದ್ಧ ಬೆಳೆಯುತ್ತ ಬಂದ್ರೂ.
1989 ರಲ್ಲಿ ಮೊದಲ ಬಾರಿಗೆ ಗೆಲುವನ್ನು ಕಾಣುತ್ತಾರೆ. ಶಾಸಕರಾಗಿ ಅಂದಿನಿಂದ ನಿರಂತರವಾಗಿ ಕಾಂಗ್ರೆಸ್ ಪಕ್ಷದಲ್ಲಿ ಗೆದ್ದು ಬರ್ತಾರೆ. ಇಲಿಗೆ ನಿರಂತರವಾಗಿ 7 ಬಾರಿ ಎಂಎಲ್ಎ ಆಗಿದ್ದರೆ. 1994 ರಲ್ಲಿ ಮೊದಲ ಬಾರಿಗೆ ಸಚಿವ ಆಗ್ತಾರೆ. 1999 ರಲ್ಲಿ ನಗರಾಭಿವೃದ್ಧಿ ಸಚಿವ ಆಗ್ತಾರೆ. ಸಧ್ಯ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ಅವರು ಬೆಳೆದ ಬಂದ ದಾರಿಯಲ್ಲಿ ಸಾಕಷ್ಟು ಕಷ್ಟ ಪಟ್ಟು ಬಂದ್ರೂ. ಹಲವು ಬಾರಿ ಸಚಿವ ಆಗುವ ಸಂದರ್ಭದಲ್ಲಿ ಅಕ್ರಮ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆ ಎಲ್ಲಾ ಚಾನ್ಸ್ ಕಳೆದುಕೊಂಡರು. 2017 ರಲ್ಲಿ ಮೊದಲ ಬಾರಿಗೆ ಐಟಿ ರೈಡ್ ಆಗುತ್ತೆ. ಅದಾದ ನಂತರ ಇಡಿ, ಸಿಬಿಐ ಎಂಟ್ರಿ ಕೊಡುತ್ತೆ. ನಂತರ 50 ದಿನಗಳ ಕಾಲ ಸೆರೆ ಮನೆ ವಾಸ ಅನುಭವಿಸುತ್ತಾರೆ. ಸದ್ಯ ಬೇಲ್ ಮೇಲೆ ಡಿಕೆಶಿ ಹೊರಗಡೆ ಇದ್ದಾರೆ. ಇನ್ನೂ ವಯಕ್ತಿಕ ವಿಚಾರದ ಬಗ್ಗೆ ಹೇಳುವುದಾದರೆ ಅವರ ತಮ್ಮ ಡಿಕೆ ಸುರೇಶ್ ರಾಜಕೀಯದಲ್ಲಿ ಇದ್ದಾರೆ. ಇನ್ನೂ ಡಿಕೆಶಿ ಗೆ ಮೂರು ಮಕ್ಕಳು ಇದ್ದಾರೆ. ಐಶ್ವರ್ಯ, ಆಭರಣ ಹಾಗೆ ಮಗ ಆಕಾಶ್ ಹಾಗೂ ಪತ್ನಿ ಇದ್ದಾರೆ. ಮಗಳು ಐಶ್ವರ್ಯ ಗೆ ಮದುವೆ ಆಗಿದೆ. ನಿಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಇನ್ನೂ ಆಸ್ತಿ ವಿಚಾರಕ್ಕೆ ಬರುವುದಾದರೆ.
ಡಿಕೆಶಿ 2004 ರಿಂದ ನೋಡುವುದಾದರೆ, ಅದಕ್ಕಿಂತ ಮೊದಲು ಗ್ರಾನೆಟ್ ಬ್ಯುಸಿನೆಸ್, ರಿಯಲ್ ಎಸ್ಟೇಟ್ ಮಾಡ್ತಿದ್ರು ಹಾಗಾಗಿ ಕೋಟಿಗೆ ಬೆಲೆ ಬಾಳುತ್ತಿದ್ದ ವ್ಯಕ್ತಿ ಇವ್ರು. 2004ರ ಚುನಾವಣೆ ಸಂದರ್ಭದಲ್ಲಿ 7 ಕೋಟಿ ಅಷ್ಟು ಆಸ್ತಿಯನ್ನು ಅಧಿಕೃತವಾಗಿ ಘೋಷಣೆ ಮಾಡಿಕೊಳ್ಳುತ್ತಾರೆ. 2008 ರ ಚುನಾವಣೆ ಸಂದರ್ಭದಲ್ಲಿ 75 ಕೋಟಿ ಆಸ್ತಿಯನ್ನು ಘೋಷಣೆ ಮಾಡಿಕೊಳ್ಳುತ್ತಾರೆ. 2013 ರ ಚುನಾವಣೆ ಸಂದರ್ಭದಲ್ಲಿ 251 ಕೋಟಿ ಅಂತ ಘೋಷಣೆ ಮಾಡಿಕೊಳ್ಳುತ್ತಾರೆ. ಅದಾದ ನಂತರ ಎಲ್ಲರ ಹುಬ್ಬೇರುವಂತೆ ಮಾಡಿದ್ದು, 2018 ರ ಚುನಾವಣೆ ಸಂದರ್ಭದಲ್ಲಿ 840 ಕೋಟಿ ಆಸ್ತಿಯನ್ನು ಘೋಷಣೆ ಮಾಡಿಕೊಳ್ಳುತ್ತಾರೆ. ಇನ್ನೂ ಅವರ ಕುಟುಂಬಸ್ಥರ ಆಸ್ತಿ ವಿಚಾರಕ್ಕೆ ಬರುವುದಾದರೆ, ಅವರ ತಾಯಿ ಗೌರಮ್ಮ ಹೆಸರಲ್ಲಿ 270 ಕೋಟಿ ಆಸ್ತಿ ಇದೆ. ಇನ್ನೂ ಅವರ ಮಗಳು ಐಶ್ವರ್ಯ ಹೆಸರಲ್ಲಿ 102 ಕೋಟಿ ಇದೆ.ಅವರ ಪತ್ನಿ ಉಷಾ ಅವರ ಹೆಸರಲ್ಲಿ 48 ಕೋಟಿ ಆಸ್ತಿ ಇದೆ. ಡಿಕೆ ಸುರೇಶ್ ಅವರ ಹೆಸರಲ್ಲಿ 338 ಕೋಟಿ ಇದೆ. ಇದರ ಬಗ್ಗೆ ಡಿಕೆಶಿ ಅಥವಾ ಸುರೇಶ್ ಅವರನ್ನು ಪ್ರಶ್ನೆ ಮಾಡಿದ್ರೆ,ನಾವು ಈ ಎಲ್ಲಾ ಆಸ್ತಿಯನ್ನು ರಾಜಕೀಯದಲ್ಲಿ ಮಾಡಿಲ್ಲ. ನಮ್ಮದು ಗ್ರಾನೇಟ್ ಕಲ್ಲು ಕೋರೆ ಬ್ಯುಸಿನೆಸ್ ಇದೆ ಅಂತ ಹೇಳ್ತಾರೆ. ಇನ್ನೊಂದು ವಿಶೇಷ ಎಂದರೆ ಡಿಕೆಶಿ ಮಗಳನ್ನು ಎಸ್ ಎನ್ ಕೃಷ್ಣ ಅವರ ಮೊಮ್ಮಗನಿಗೆ ಈಕೆ ಮದುವೆ ಮಾಡಿ ಕೊಟ್ರೂ ಅಂತ ಹೇಳುವುದಾದರೆ, ಡಿಕೆಶಿ ರಾಜಕೀಯದಲ್ಲಿ ಇಷ್ಟು ಬೆಳೆಯಲು ಎಸ್ ಎನ್ ಕೃಷ್ಣ ಸಹ ಕಾರಣ ಆಗಿದ್ರೂ. ಹಾಗೆ ಅವರ ಆಲಿಯಾ ಸಿದ್ದಾರ್ಥ್ ಅವರು ತೀರಿದಾಗ ಅವರಿಗೆ ಆರ್ಥಿಕ ಸಂಕಷ್ಟ ಸಹ ಎದುರಾಗಿತ್ತು. ಡಿಕೆಶಿ ಹಾಗೂ ಸಿದ್ದಾರ್ಥ್ ಒಳ್ಳೆಯ ಸ್ನೇಹಿತರು. ಹೀಗಾಗಿ ಮಗಳನ್ನು ಕೊಡುವ ಮೂಲಕ ಗುರು ದಕ್ಷಿಣೆಯನ್ನು ಒಪ್ಪಿಸಿದರು ಎನ್ನಲಾಗಿದೆ.