ಲೈಕ್ ಗಳಿಗಾಗಿ ಲೈಫ್ ಕಳ್ಕೊಬೇಡಿ! ಅಲೆಗಳ ಜೊತೆ ಮೋಜು ಮಸ್ತಿಯ ಅಮಲಿನಲ್ಲಿದ್ದ ಇಬ್ಬರು ಹುಡ್ಗೀರು ಸಮುದ್ರ ಪಾಲು

ಲೈಕ್ ಗಳಿಗಾಗಿ ಲೈಫ್ ಕಳ್ಕೊಬೇಡಿ! ಅಲೆಗಳ ಜೊತೆ ಮೋಜು ಮಸ್ತಿಯ ಅಮಲಿನಲ್ಲಿದ್ದ ಇಬ್ಬರು ಹುಡ್ಗೀರು ಸಮುದ್ರ ಪಾಲು

ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ದೃಶ್ಯಗಳು ನಮ್ಮನ್ನು ಬೆಚ್ಚಿ ಬೀಳುವಂತೆ ಮಾಡುತ್ತೆ. ಈ ದೃಶ್ಯ ಕೂಡ ಅಂಥದ್ದೇ. ಯುವತಿಯರು ಅಬ್ಬರಿಸುವ ಅಲೆಗಳ ಹತ್ತಿರ ನಿಲ್ಲಲು ಹೋಗಿ ಸಂಕಷ್ಟಕ್ಕೆ ಸಿಕ್ಕಿ ಸಂಕಷ್ಟ ಎದುರಿಸಿದ ದೃಶ್ಯ ಈಗ ಎಲ್ಲರಿಗೂ ಶಾಕ್ ಉಂಟು ಮಾಡಿದೆ. ಐಪಿಎಸ್ ಅಧಿಕಾರಿ ದೀಪಾಂಶು ಕಬ್ರ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇಂಥದ್ದೊಂದು ವಿಡಿಯೋ ನ ಶೇರ್ ಮಾಡಿದ್ದಾರೆ. ಅಬ್ಬರಿಸುವ ಅಲೆಯ ದೃಶ್ಯದ ಮೂಲಕ ಈ ಕ್ಲಿಪ್ ಶುರು ಆಗುತ್ತೆ. ಸಮುದ್ರದ ದಡದ ಬಂಡೆಯ ಮೇಲೆ ಯುವತಿಯರು ನಿಂತಿರುತ್ತಾರೆ. ಅಲೆ ಅಬ್ಬರಿಸುತ್ತ ಇದ್ರು ಯಾವುದೇ ಭಯ ಇಲ್ಲದೆ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಇದಾದ ಅರೆ ಕ್ಷಣದಲ್ಲಿ ಈ ಯುವತಿಯರು ಬೆಚ್ಚಿ ಬೀಳುವ ಸನ್ನಿವೇಶ ಕ್ರಿಯೇಟ್ ಆಗುತ್ತೆ. ಅಬ್ಬರಿಸಿದ ಅಲೆ ಈ ಯುವತಿಯರನ್ನು ಬೀಳಿಸುವುದರ ಜೊತೆಗೆ ಇಬ್ಬರನ್ನೂ ನೀವು ಕರೆದುಕೊಂಡು ಹೋಗಿದೆ. ಈ ದೃಶ್ಯವನ್ನು ನೋಡುವಾಗ ಎದೆ ಝಲ್ ಎನ್ನುತ್ತೆ. ನಿಮ್ಮ ಲೈಫ್ ನಿಮ್ಮ ಲೈಕ್ ಗಳಿಗಿಂತ ಬಹಳ ಮುಖ್ಯ ಎನ್ನುವ ಕ್ಯಪ್ಷನ್ ಒಂದಿಗೆ ದೀಪಂಶೂ ಈ ವೀಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ಎಲ್ಲಿ ಮತ್ತು ಯಾವಾಗ ಸೆರೆಯಾಗಿದ್ದು ಎನ್ನುವುದು ಸ್ಪಷ್ಟ ಆಗಿಲ್ಲ. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ದೃಶ್ಯ ನಿಜಕ್ಕೂ ಎಚ್ಚರಿಕೆಯ ಪಾಠವನ್ನು ಹೇಳಿಕೊಟ್ಟಿದೆ.

ಸುದ್ದಿ