ಮೋದಿಜಿ ಇತ್ತೀಚೆಗೆ ಅನಾವರಣ ಮಾಡಿದ ನೂತನ ರಾಷ್ಟ್ರ ಲಾಂಛನ ಮೇಲೆ ಇನ್ನೊಂದು ಹೊಸ ವಿವಾದ. ವಿರೋಧ ಪಕ್ಷದವರ ಪ್ರಕಾರ ಸಿಂಹ ಸೈಲೆಂಟ್ ಆಗಿರಬೇಕು, ಹಾಗೆ ಅದು ಹೊಟ್ಟೆಗೆ ಹುಲ್ಲು ತಿನ್ನಬೇಕಂತೆ!!!

ಮೋದಿಜಿ ಇತ್ತೀಚೆಗೆ ಅನಾವರಣ ಮಾಡಿದ ನೂತನ ರಾಷ್ಟ್ರ ಲಾಂಛನ ಮೇಲೆ ಇನ್ನೊಂದು ಹೊಸ ವಿವಾದ. ವಿರೋಧ ಪಕ್ಷದವರ ಪ್ರಕಾರ ಸಿಂಹ ಸೈಲೆಂಟ್ ಆಗಿರಬೇಕು, ಹಾಗೆ ಅದು ಹೊಟ್ಟೆಗೆ ಹುಲ್ಲು ತಿನ್ನಬೇಕಂತೆ!!!

ಮತ್ತೊಂದು ಹೊಸ ವಿವಾದ. ಇದು ಲೋ ಆಂಗಲ್ ವಿವಾದ. ಸಿಂಹಾವಲೋಕನ ಮಾಡಬೇಕಾದ ವಿವಾದ. ಭಾರತದ ರಾಷ್ಟ್ರೀಯ ಲಾಂಛನದ ವಿವಾದ. ಸಿಂಹ ಸೈಲೆಂಟ್ ಆಗಿರಬೇಕು ಎನ್ನುವ ವಿವಾದ. ಹಾಗಾದರೆ ಏನಿದು? ಯಾಕಿದು? ಎಂದು ಇಂದಿನ ಲೇಖನದಲ್ಲಿ ತಿಳಿಯೋಣ ಸ್ನೇಹಿತರೆ. ನೂತನ ಸಂಸತ್ ಭವನದ ಮೇಲೆ ಭಾರತದ ರಾಷ್ಟ್ರೀಯ ಲಾಂಛನ ಅನಾವರಣ ಮಾಡಲಾಯಿತು. 6ವರೆ ಮೀಟರ್ ಎತ್ತರ ಹಾಗೂ 9500 ಕೆಜಿ ತೂಕದ ಲಾಂಛನ ಇದು. ನಮಗೆ ಗೊತ್ತಿರುವ ಹಾಗೆ ಇದು ಇಲ್ಲಿಯತನಕ ದ ಅತ್ಯಂತ ಎತ್ತರದ ಮತ್ತು ಭಾರದ ಲಾಂಛನ. ಆದ್ರೆ ಈಗ ಇದು ಕಾಂಟ್ರವರ್ಸಿ ಆಗಿದೆ. ಕಾರಣ ಈ ಸಿಂಹ ಘರ್ಜಿಸುತ್ತ ಇದೆ ಅಂತ. ಲಾಂಛನದ ಸಿಂಹ ಇಲ್ಲಿಯತನಕ ಸೈಲೆಂಟ್ ಆಗಿತ್ತು ಈಗ ವೈಲೆಂಟ್ ಆಗಿದೆ ಅನ್ನುವುದು ವಿರೋಧ ಪಕ್ಷದ ನಾಯಕರ ವಾದ. ಆದ್ರೆ ಇದು ನಿಜಾನಾ? ದೇವರಾಣೆ ಅಲ್ಲ. ಯಾಕಂದ್ರೆ ಸಾರಾನಾಥದ ಮೂಲ ಲಾಂಚನಕ್ಕೊ ಇದಕ್ಕೂ ಯಾವ ವ್ಯತ್ಯಾಸವೂ ಇಲ್ಲ. ಅದು ಹೇಗಿದೆಯೋ ಇದು ಹಾಗೆ ಇದೆ. ಆದ್ರೆ ಲೋ ಆಂಗಲ್ ಅಲ್ಲಿ ಸಿಂಹವನ್ನು ನೋಡಿ ಟೆನ್ಷನ್ ಆಗಿರುವ ವಿರೋಧ ಪಕ್ಷದವರು ಸಂಸತ್ ನೆ ತಿಂದು ಹಾಕಿ ಬಿಡುತ್ತೆ ಅನ್ನೋ ರೇಂಜ್ ಗೆ ಭಯ ಬಿದ್ದಿದ್ದಾರೆ. ಸಾರಾನಾಥದಲ್ಲಿ 1904 ರಲ್ಲಿ ಉತ್ಖನನದಲ್ಲಿ ಸಿಕ್ಕ ನಾಲ್ಕು ಸಿಂಹಗಳು ಹೀಗೆ ಕಾಣುತ್ತೆ.

 

ಇದು ಸಹ ಅದರ ಹಾಗೆಯೇ ಇದೆ. ವೈಶಾಲಿಯಲ್ಲಿ ಇರುವ ಸಿಂಹ ಸಹ ಹೀಗೆ ಘಾರ್ಜಿಸುತ್ತ ಇದೆ. ಆದ್ರೆ ಸಂಸತ್ತು ಮೇಕೆ ಇರುವ ಲಾಂಛನದ ಸಿಂಹ ಮಾತ್ರ ಘರ್ಜಿಸಬಾರದು. ಇದು ಯಾವ ಸೀಮೆ ಲಾಜಿಕ್. 1950 ರಲ್ಲಿ ಈ ನಾಲ್ಕು ಸಿಂಹಗಳ ಮೂರ್ತಿಯನ್ನು ಅಧಿಕೃತವಾಗಿ ರಾಷ್ಟ್ರೀಯ ಲಾಂಛನ ವಾಗಿ ಅಳವಡಿಸಲಾಯಿತು. ಆದ್ರೆ ಅಶೋಕ ಕೆತ್ತಿಸಿದ ನಾಲ್ಕು ಸಿಂಹಗಳನ್ನು ನಾವು ರಾಷ್ಟ್ರೀಯ ಲಾಂಛನ ವಾಗೀ ಅಳವಡಿಸಿಕೊಳ್ಳ್ತವೆ ಅಂತ ಹೇಳಿ ಸೌಮ್ಯ ಸ್ವಭಾವದ ಸಿಂಹಗಳನ್ನು ಲಾಂಛನವಾಗಿ ಅಳವಡಿಸಿದರು. ಹಾಗಾದ್ರೆ ಅಲ್ಲಿ ತನಕ ಬಾಯಿ ತೆಗೆದು ಘರ್ಜಿಸುತ್ತಾ ಇರುವ ಸಿಂಹಗಳ ಬಾಯಿ ಮುಚ್ಚಿಸಿದವರು ಯಾರು? ಅಶೋಕ ಚಕ್ರವರ್ತಿಗೆ ಗತ್ತು ಗೈರತ್ತು ಹೊಂದಿರುವ ಸಿಂಹಕ್ಕೆ ಈ ದೇಶದ ಭವ್ಯ ಇತಿಹಾಸಕ್ಕೆ ಅವಮಾನ ಮಾಡಿದವರು ಯಾರು ಹಾಗಾದ್ರೆ? ಅವತ್ತು ಕಾಂಗ್ರೆಸ್ ತಾನೇ ಇದ್ದಿದ್ದು! ನಿಜ ಅಂದ್ರೆ ಅಶೋಕನ ಕಾಲದಲ್ಲಿ ಸಹ ಸಿಂಹ ಘಾರ್ಜಿಸುತ್ತನೆ ಇತ್ತು. ಕಾಂಗ್ರೆಸ್ ಅವರು ಮುಚ್ಚಿಸಿದ ಬಾಯಿಯ ಸಿಂಹ ಇವತ್ತು ಮತ್ತೆ ಘರ್ಜಿಸುತ್ತಿದೆ ಅಷ್ಟೇ. ನೀವು ತಿರುಚಿದ ಲಾಂಛನದ ಮೂಲಕ ಭಾರತ ದೇಶ ಹೇಗೆ ಎನ್ನುವುದು ಜಗತ್ತಿಗೆ ತೋರಿಸೋಕೆ ಹೋದ್ರೆ ಅಶೋಕನ ಕಾಲದಲ್ಲಿಯೇ ಸಿಂಹದಂತೆ ಇದ್ದಂಥ ಈ ದೇಶ 1947 ರ ನಂತರ ಸೈಲೆಂಟ್ ಆಯ್ತು ಅನ್ನುವುದನ್ನು ನೀವು ತೋರಿಸೋಕೆ ಹೋದ್ರಿ ಅಂತ ಅನಿಸುತ್ತೆ. ಅದಕ್ಕೆ ಲಾಂಛನದ ಸಿಂಹವನ್ನು ಶಾಂತ ಸೌಮ್ಯ ಆಗಿಸಿಬಿಟ್ಟಿರಿ. ಈ ದೇಶಕ್ಕೆ ಸಿಂಹದಷ್ಟೇ ಗತ್ತಿದೆ ತಾಕತ್ತು ಇದೆ ಗಾಂಭೀರ್ಯ ಇದೆ.

 

ಆದ್ರೆ ಅದನ್ನು ನಾವು ತೂರಿಸಲ್ಲ. ಸುಮ್ನೆ ಜಗತ್ತಿನ ಎದುರಿಗೆ ಸೈಲೆಂಟ್ ಆಗಿ ಇದ್ದುಬಿಡುತ್ತೆವೆ ಅಂತ ಹೇಳೋಕೆ ಟ್ರೈ ಮಾಡಿದ್ರೂ. ಆದ್ರೆ ಇವತ್ತು ಮೋದಿಜಿ ವಿಶ್ವ ನಾಯಕನಾಗಿ ಘರ್ಜೀಸುತ್ತ ಇದ್ದಾರೆ. ದೊಡ್ಡಣ್ಣ ರಾಷ್ಟ್ರಗಳು ಭಾರತದ ಮಾತನ್ನು ಕೇಳುತ್ತಿವೆ. ಒಟ್ಟಾರೆ ಭಾರತ ಘರ್ಜಿಸುತ್ತಾ ಇದೆ. ಹಾಗಾಗಿ ಮೋದಿಜಿ ಗತ ಇತಿಹಾಸವನ್ನು ಮತ್ತೆ ಕಣ್ಣೆದುರು ಇಟ್ಟಿದ್ದಾರೆ. ಹೊಸ ಲಾಂಛನದ ಮೂಲಕ ದೇಶದ ಘರ್ಜನೆ ಜಗತ್ತಿಗೆ ಪರಿಚಯಿಸುವ ಸಿಂಹಗಳು. ಆ ಸಿಂಹಗಳು ಇವತ್ತಿನ ಭಾರತದ ಪ್ರತಿನಿಧಿಗಳು. ಸಿಂಹ ಅಂದ್ರೆ ನಿಮ್ಮ ಪ್ರಕಾರ ಅನಸ್ತೇಶಿಯಾ ಕೊಟ್ಟ ಥರ ಇರುತ್ತೆ ಅಂಕೊಂಡ್ರಾ. ಸಿಂಹ ಅಂದ್ರೇನೆ ಘರ್ಜನೆ. ಆದ್ರೆ ಈ ವಿರೋಧ ಪಕ್ಷದವರ ಪ್ರಕಾರ ಸಿಂಹ ಸೈಲೆಂಟ್ ಆಗಿರಬೇಕು ಅದು ಹುಲ್ಲು ತಿನ್ನಬೇಕು. ಯಾವ ಸೀಮೆ ವಿವಾದ ಅಂತಾನೆ ಅರ್ಥ ಆಗಲ್ಲ. ಇದು ಲೋ ಆಂಗಲ್ ವಿವಾದ. ಯಾಕಂದ್ರೆ ಈ ಹೊಸ ಲಾಂಛನ ಮೂರ್ತಿ ಅತ್ಯಂತ ಎತ್ತರದ ಇದನ್ನು ನೋಡೋದು ನೀವು ಲೋ ಆಂಗಲ್ ಅಲ್ಲಿ. ಡೀಟೇಲ್ ಆಗಿ ತ್ರಿಡಿ ಕೆತ್ತನೆ ಆಗಿರುವುದರಿಂದ ಪ್ರತಿಯೊಂದು ಸಹ ಸ್ಪಷ್ಟವಾಗಿ ಗೋಚರಿಸುತ್ತದೆ. ಹಲ್ಲು ಮೀಸೆ ಇವೆಲ್ಲಾ ಕೂಡ ನೀಟಾಗಿ ಕಾಣುತ್ತೆ. ಲೊ ಆಂಗಲ್ ಅಲ್ಲಿ ನಾವು ನೋಡುವುದರಿಂದ ಸಿಂಹದ ಹಲ್ಲು ಎಲ್ಲವೂ ಘರ್ಜಿಸಿದಂತೆ ಕಾಣುತ್ತೆ. ಇದನ್ನು ನೋಡಿದ ವಿರೋಧ ಪಕ್ಷದವರು ಇದು ಡೇಂಜರಸ್ ಸಿಂಹ, ಆಗ್ರೆಸ್ಸಿವ್ ಸಿಂಹ ಅಂತ ಉದ್ಗಾರ ಎತ್ತುತ್ತಿದ್ದಾರೆ.

ಸುದ್ದಿ