ಬಿಸಿಸಿಐ ಅಧ್ಯಕ್ಷ ಗಂಗೂಲಿ ಮಾತನ್ನು ಕೇಳಿ ವಿರಾಟ್ ಕೊಹ್ಲಿ ಫುಲ್ ಖುಷ್!!! ಅದು ಯಾವ ಮಾತೂ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ನಮಸ್ತೆ ಪ್ರಿಯ ಓದುಗರೇ, ಕೋವಿಡ್ 19 ಶುರು ಆದಾಗಿಂದ ವಿರಾಟ್ ಕೋಹ್ಲಿ ಫಾರ್ಮ್ ತುಂಬಾ ಕಳಪೆ ಆಗೋಗಿದೆ. 2019 ನವೆಂಬರ್ ಇಂದ ಈಚೆಗೆ ವಿರಾಟ್ ಒಂದೇ ಒಂದು ಶತಕ ಸಹ ಸಿಡಿಸಿಲ್ಲ. ಹೀಗಾಗಿ ತುಂಬಾ ಕೆಟ್ಟ ಸಮಯವನ್ನು ಅವರು ಎದುರಿಸುತ್ತಿದ್ದಾರೆ. ಇದೆ ಸಂದರ್ಭದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೋಹ್ಲಿ ನ ತಂಡದಿಂದ ಕೈ ಬಿಡಬೇಕು ಅಂತ ಸಾಕಷ್ಟು ಜನ ಹೇಳುತ್ತಿದ್ದಾರೆ. ಆದ್ರೆ ಅವರನ್ನು ತಂಡದಿಂದ ಕೈ ಬಿಡೋಕೆ ಸಾಧ್ಯ ಇಲ್ಲ. ಸತತವಾಗಿ ರನ್ ಗಳನ್ನ ಕಲೆ ಹಾಕುವುದರಲ್ಲಿ ಅವರು ವಿಫಲ ಆಗಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರನ್ನು ತಂಡದಿಂದ ಕೈ ಬಿಡೋದು ಸರಿಯಲ್ಲ ಯಾಕಂದ್ರೆ ವಿರಾಟ್ ಕೋಹ್ಲಿ ಹಲವು ವರ್ಷಗಳ ಕಾಲ ಒಳ್ಳೆಯ ಪರ್ಫಾರ್ಮೆನ್ಸ್ ನೀಡ್ತಾ ಬಂದಿದ್ದಾರೆ ಅಂತ ಆಶಿಶ್ ನೆಹ್ರಾ ಹೇಳ್ತಾರೆ. ಆತ ಸಧ್ಯಕ್ಕೆ ರನ್ ಗಳ ಕೊರತೆ ಎದುರಿಸುತ್ತಿದ್ದಾರೆ ಅಂದ ಮಾತ್ರಕ್ಕೆ ಅವರನ್ನು ತಕ್ಷಣವೇ ಡ್ರಾಪ್ ಮಾಡೋಕೆ ಸಾಧ್ಯವಿಲ್ಲ. ವಿರಾಟ್ ಕೋಹ್ಲಿ ಅವರ ಕ್ಯಾಲಿಬರ್ ಗೆ ತಕ್ಕಂತೆ ಆಟ ಆಡುತ್ತಿಲ್ಲ ಅನ್ನುವುದು ಅವರಿಗೂ ತಿಳಿದಿದೆ.

 

ಆದ್ರೆ ಒಬ್ಬ ವ್ಯಕ್ತಿಯನ್ನು ಕೈ ಬಿಡೋದು ಯಾವಾಗಲೋ ಪರಿಹಾರ ಅಲ್ಲ ಅಂತ ನೆಹ್ರಾ ಹೇಳ್ತಾರೆ. ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಸಹ ಸ್ಥಿರ ಪರ್ಫಾರ್ಮೆನ್ಸ್ ನೀಡುವುದರಲ್ಲಿ ವಿಫಲ ಆಗಿದ್ದಾರೆ ಟಾಪ್ ಆರ್ಡರ್ ಅಲ್ಲಿ ಮಿಂಚೋದಕ್ಕೆ ರೋಹಿತ್ ಶರ್ಮಾ ಗೆ ಸಾಧ್ಯ ಆಗುತ್ತಿಲ್ಲ. ಆದ್ರೂ ಅವರನ್ನು ಯಾಕೆ ತಂಡದಲ್ಲಿ ಮುಂದುವರಿಸುತ್ತಿದ್ದಾರೆ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನೆಹ್ರಾ ಹೇಳ್ತಾರೆ. ಒಂದುವೇಳೆ ಈ ಇಬ್ಬರೂ ಆಟಗಾರರೂ ಫರ್ಮ್ ಗೆ ಮರಳಿದರೆ ದೊಡ್ಡ ಇನ್ನಿಂಗ್ಸ್ ಆಡ್ತಾರೆ ಅಂತ ನೆಹ್ರಾ ಕೊಹ್ಲಿ ಹಾಗೆ ರೋಹಿತ್ ಗೆ ಸಾಥ್ ಕೊಟ್ರು. ನೆಹ್ರಾ ಜೊತೆ ವಿರಾಟ ಕೊಹ್ಲಿ ಗೆ ಮತ್ತೊಬ್ಬ ದಿಗ್ಗಜ ಆಟಗಾರ ಸಹ ಸಾಥ್ ನೀಡಿದ್ದಾರೆ. ಹೌದು! ಆಂತ್ರಾಷ್ಟೀಯ ಕ್ರಿಕೆಟ್ ನಲ್ಲಿ ಅಗ್ರೆಸ್ಸಿವ್ ಆಟಗಾರ ಅಂತ ಗುರುತಿಸಿಕೊಂಡ ವಿರಾಟ್ ಕೋಹ್ಲಿ ಇತ್ತೀಚಿನ ದಿನಗಳಲ್ಲಿ ತಮ್ಮ ಫರ್ಮ್ ನ ಕಳೆದುಕೊಂಡಿದ್ದಾರೆ.

 

ಸತತ ವೈಫಲ್ಯ ಎದುರಿಸುತ್ತಿರುವ ವಿರಾಟ್ ನ ತಂಡದಿಂದ ಕೈ ಬಿಡಬೇಕು ಎನ್ನುವ ಕೂಗು ಹೆಚ್ಚಾಗುತ್ತಿದೆ. ಆದ್ರೆ ರನ್ ಮಿಶಿನ್ ಪರ ಬ್ಯಾಟಿಂಗ್ ಮಾಡುತ್ತಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ. ಕಮ್ ಬ್ಯಾಕ್ ಮಾರೋ ವಿಶ್ವಾಸ ನನಗಿದೆ. ಕ್ರೀಡಾ ಲೋಕದಲ್ಲಿ ಇದೆಲ್ಲ ತುಂಬಾ ಸಾಮಾನ್ಯ ಇದೆ ಸಮಸ್ಯೆಯನ್ನು ಸಚಿನ್ ಸೆಹವಾಗ್ ದ್ರಾವಿಡ್ ಸೇರಿದಂತೆ ನಾನು ಕೂಡ ಅನುಭವಿಸಿದ್ದೇನೆ ಆದ್ರೆ ಮುಂದಿನ ದಿನಗಳಲ್ಲಿ ವಿರಾಟ್ ಮತ್ತೆ ತಮ್ಮ ಹಳೆಯ ಫರ್ಮ್ ಗೆ ಬರ್ತಾರೆ ಅನ್ನುವ ಭರವಸೆ ಇದೆ ಅಂತಾ ಸೌರವ್ ಗಂಗೂಲಿ ತಮ್ಮ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ. ನಿಮಗೆ ಏನು ಅನಿಸುತ್ತೆ? ವಿರಾಟ್ ಕೋಹ್ಲಿ ಮರಳಿ ಫಾರ್ಮ್ ಗೆ ಬರ್ತಾರ? ಕಾಮೆಂಟ್ ಮಾಡಿ.

Leave a comment

Your email address will not be published. Required fields are marked *