ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮರಣ ಹೊಂದಿದ ನಟ ನಟಿಯರು.!!!

ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮರಣ ಹೊಂದಿದ ನಟ ನಟಿಯರು.!!!

ನಮಸ್ತೆ ಪ್ರಿಯ ಓದುಗರೇ, ಸಿನಿಮಾ ತಾರೆಯರಿಗೆ ಬ್ಯೂಟಿ ಅನ್ನೋದು ತುಂಬಾ ಮುಖ್ಯ. ಹೀಗಾಗಿ ಮಾಡೆಲ್ ಗಳು ಸಿನಿಮಾ ತಾರೆಯರು ತುಂಬಾ ಗಾರ್ಜಿಯಸ್ ಆಗಿ ಕಾಣಬೇಕು ಅನ್ನೋ ಕಾರಣಕ್ಕೆ ಸಾಕಷ್ಟು ನಟಿಯರು ನಾನಾ ಬಗೆಯ ಕಾಸ್ಮೆಟಿಕ್ಸ್ ಸರ್ಜರಿ ಮಾಡಿಸಿಕೊಳ್ಳುವುದು ಈ ಜನರೇಶನ್ ಅಲ್ಲಿ ತುಂಬಾ ಕಾಮನ್ ಆಗಿದೆ. ನಟಿಯರು ಇರುವ ಸೌಂದರ್ಯವನ್ನು ಸರ್ಜರಿ ಮಾಡಿಸಿಕೊಂಡು ಮತ್ತಷ್ಟು ವಿಕಾರ ಮಾಡಿಕೊಳ್ಳುವುದು ಅಲ್ಲದೆ ಭವಿಷ್ಯದಲ್ಲಿ ನಾನಾ ಬಗೆಯ ರೋಗಗಳಿಗೆ ತುತ್ತಾದವರು ಇದ್ದಾರೆ. ಸರ್ಜರಿ ಆದ ಮೇಲೆ ಉಂಟಾಗುವ ಸೈಡ್ ಎಫೆಕ್ಟ್ ಗಳನ್ನು ಮೆಟ್ಟಿ ನಿಂತ ಆಕ್ಟರ್ಸ್ ನ ನಾವು ನೋಡಬಹುದು. ಆದರೆ ಸರ್ಜರಿ ಆದಮೇಲೆ ಉಂಟಾದ ಸಾಕಷ್ಟು ಸೈಡ್ ಎಫೆಕ್ಟ್ ಗಳಿಂದ ಮೃತ ಪಟ್ಟ ಆಕ್ಟರ್ಸ್ ಗಳ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ.

 

ಆರತಿ ಅಗರ್ವಾಲ್ ಟಾಲಿವುಡ್ ನ ಮೋಸ್ಟ್ ಬ್ಯೂಟಿಫುಲ್ ನಟಿ ಆರತಿ ಅಗರ್ವಾಲ್ ಅವರು ತಮ್ಮ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ತೂಕ ಇಳಿಸುವ ಲಿಪೋ ಸರ್ಜರಿಗೆ ಒಳಗಾಗಿದ್ದರು. ಆದ್ರೆ ಸರ್ಜರಿಯ ಸೈಡ್ ಎಫೆಕ್ಟ್ ನಿಂದ ಅವರಿಗೆ ಹಾರ್ಟ್ ಅಟ್ಟ್ಯಾಕ್ ಆಗಿ ಸಾವನ್ನಪ್ಪಿದರು ಎಂಬ ವದಂತಿಗಳು ಹರಿದಾಡಿದ್ದವು. ಆದ್ರೆ ಆರತಿ ಅಗರ್ವಾಲ್ ಅವರ ಸಾವಿಗೆ ನಿಜವಾಗಿ ಕಾರಣವಾಗಿದ್ದು ಸರ್ಜರಿ ನಂತರ ಸೈಡ್ ಎಫೆಕ್ಟ್ ಇಂದ ಆದ ಹಾರ್ಟ್ ಅಟ್ಟ್ಯಾಕ್. ಬುಲೆಟ್ ಪ್ರಕಾಶ್, ಸ್ಯಾಂಡಲ್ ವುಡ್ ನ ಪ್ರತಿಭಾವಂತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ಅತಿಯಾದ ತೂಕ ಇಳಿಸಿಕೊಳ್ಳಲು 2018 ರಲ್ಲಿ ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು. ಈ ವೇಳೆ ಅವರು ಬರೋಬ್ಬರಿ 35 ಕೆಜಿ ತೂಕವನ್ನು ಕಳೆದುಕೊಂಡಿದ್ದರು. ಆದ್ರೆ ಸರ್ಜರಿ ಬಳಿಕ ಅವರಿಗೆ ಹಲವಾರು ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದು ಇದರಿಂದ ಅವರ ಆರೋಗ್ಯ ಇನ್ನಷ್ಟು ಹದಗೆಡುತ್ತಾ ಬಂತು.

 

ಇದರ ಜೊತೆಗೆ ಕಿಡ್ನಿ ವೈಫಲ್ಯ ಬುಲೆಟ್ ಪ್ರಕಾಶ್ ಅವರನ್ನು ಇನ್ನೂ ಹೈರಾಣಾಗಿಸಿತು. 2020 ರಲ್ಲಿ ಬುಲೆಟ್ ಪ್ರಕಾಶ್ ಸಾವನ್ನಪ್ಪಿದರು. ಚೇತನಾ ರಾಜ್, ಕನ್ನಡದ ಕಿರುತೆರೆ ನಟಿ ಚೇತನಾ ರಾಜ್ ಕೂಡ ಫ್ಯಾಟ್ ಸರ್ಜರಿಗೆ ಒಳಗಾಗಿದ್ದು, ಈ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದರು. ಸೊಂಟದ ಬೊಜ್ಜನ್ನು ಕರಗಿಸಲು ನಟಿ ಚೇತನಾ ಫ್ಯಾಟ್ ಸರ್ಜರಿಗೆ ಒಳಗಾಗಿದ್ದು, ಆದ್ರೆ ಸರ್ಜರಿ ವೇಕೆ ನಟಿ ಸಾವನ್ನಪ್ಪಿದ್ದು ಕೇವಲ ದೇಹ ಸೌಂದರ್ಯಕ್ಕಾಗಿ ಈ ರೀತಿ ಮಾರಣಾಂತಿಕ ಸರ್ಜರಿ ಮಾಡಿಸಿಕೊಂಡ ನಟಿಯರು ತಮ್ಮ ಸೌಂದರ್ಯವನ್ನು ವಿಕಾರ ಮಾಡಿಕೊಳ್ಳುವುದು ಅಲ್ಲದೆ ಪ್ರಾಣವನ್ನು ಕಳೆದುಕೊಂಡಿದ್ದಾರೆ.ಇವಿಷ್ಟೂ ನಟ ನಟಿಯರು ಪ್ಲಾಸ್ಟಿಕ್ ಸರ್ಜರಿ ಇಂದ ತೊಂದರೆ ಅನುಭವಿಸಿ ಕೆಲವರು ಪ್ರಾಣ ಕಳೆದುಕೊಂಡ ಉದಾಹರಣೆಗಳು. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಸುದ್ದಿ