ನಮಸ್ತೆ ಪ್ರಿಯ ಓದುಗರೇ, ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮನ್ನು ಅಗಲಿ ಆಗಲೇ 9 ತಿಂಗಳು ಆಗುತ್ತಾ ಬಂತು. ಆದ್ರೆ ಕನ್ನಡಿಗರು ಅದ್ರಲ್ಲೂ ಅವರ ಅಭಿಮಾನಿಗಳು ಒಂದೇ ಒಂದು ಕ್ಷಣ ಕೂಡ ಅವರನ್ನು ಮರೆತಿಲ್ಲ. ಮರೆಯೋದು ಇಲ್ಲ. ಕನ್ನಡಿಗರ ಎದೆಯಲ್ಲಿ ಅಪ್ಪು ಸದಾ ಜೀವಂತ. ದೊಡ್ಮನೆ ರಾಜಕುಮಾರ್ ದೈಹಿಕವಾಗಿ ಇಲ್ಲದೆ ಹೋದ್ರು ಅವರ ನೆನಪುಗಳು ಜೊತೆ ಫ್ಯಾನ್ಸ್ ಹೇಗೋ ಜೀವನ ಸಾಗಿಸುತ್ತಾ ಇದ್ದರೆ. ಅವರು ನಮ್ಮ ಜೊತೆ ಇಲ್ಲ ಅಂತ ಅಭಿಮಾನಿಗಳು ಅನ್ಕೊಂಡೆ ಇಲ್ಲ. ಆದ್ರೆ ಈ ಅಭಿಮಾನಿಗಳ ಅಭಿಮಾನಕ್ಕೆ ಅಪ್ಪು ಮೇಲಿನ ಪ್ರೀತಿಗೆ ಸೋಶಿಯಲ್ ಮೀಡಿಯಾ ದ ದಿಗ್ಗಜ ಮೈಕ್ರೋ ಬ್ಲಾಗಿಂಗ್ ಸೈಟ್ ಆದ ಟ್ವಿಟ್ಟರ್ ಅವಮಾನ ಮಾಡಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈಗ ಅಪ್ಪು ಅಭಿಮಾನಿಗಳು ಟ್ವಿಟ್ಟರ್ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇಂಥದ್ದೊಂದು ಆರೋಪ ಕೇಳಿ ಬಂದಿರುವುದು ಯಾಕೆ ಗೊತ್ತಾ? ಪುನೀತ್ ರಾಜಕುಮಾರ್ ಅವರ ಟ್ವಿಟ್ಟರ್ ಖಾತೆಯಿಂದ ಬ್ಲೂ ಟಿಕ್ ಅಥವಾ ನೀಲಿ ಗುರುತು ಏನಿದೆ ಅದನ್ನು ಟ್ವಿಟ್ಟರ್ ತೆಗೆದಿದೆ ಎನ್ನಲಾಗಿದೆ. ಇದಕ್ಕೆ ಟ್ವಿಟ್ಟರ್ ವಿರುದ್ಧ ಪುನೀತ್ ರಾಜಕುಮಾರ್ ಅಭಿಮಾನಿಗಳು ಸಕ್ಕತ್ ಗರಂ ಆಗಿದ್ದಾರೆ.
ಈ ಬ್ಲೂ ಟಿಕ್ ಏನು ಗೊತ್ತಾ? ಖ್ಯಾತ ನಾಮ ವ್ಯಕ್ತಿಗಳ ಹೆಸರಲ್ಲಿ ಅನೇಕ ಜನರು ಅಥ್ವಾವ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ಓಪನ್ ಮಾಡಿರುತ್ತಾರೆ. ಹೀಗಾದಾಗ ಅವರ ಅಧಿಕೃತ ಖಾತೆ ಯಾವುದು ಅಂತ ಗುರುತಿಸುವುದರ ಬಗ್ಗೆ ಗೊಂದಲ ಇರುತ್ತೆ. ಹೀಗಾಗಿ ಟ್ವಿಟ್ಟರ್ ಸೇರಿದಂತೆ ಬಹುತೇಕ ಎಲ್ಲ ಸೋಶಿಯಲ್ ಮೀಡಿಯಾಗಳು ಸೆಲೆಬ್ರಿಟಿಗಳ ಖಾತೆ ಮುಂದೆ ಒಂದು ಬ್ಲೂ ಟಿಕ್ ಕೊಟ್ಟಿರುತ್ತೆ. ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ಗಳನ್ನಾ ಮಾತನಾಡಿಸಲು ಕೊಂಡಿ ಆಗಿರುವುದೇ ಈ ಸೋಶಿಯಲ್ ಮೀಡಿಯಾ. ಸ್ಟಾರ್ ಗಳ ಅಕೌಂಟ್ ನ ಕಿಡಿಗೇಡಿಗಳು ನಕಲು ಮಾಡಬಾರದು ಎನ್ನುವ ಕಾರಣದಿಂದ ನಟ ನಟಿಯರ ಖಾತೆಗೆ ನೀಲಿ ಟಿಕ್ ನ ಕೊಟ್ಟಿರುತ್ತಾರೆ.
ಹೀಗಿರುವಾಗ ಟ್ವಿಟ್ಟರ್ ಅಲ್ಲಿರುವ ಪುನೀತ್ ರಾಜಕುಮಾರ್ ಅವರ ಖಾತೆಯ ನೀಲಿ ಟಿಕ್ ನ ಟ್ವಿಟ್ಟರ್ ಸಂಸ್ಥೆ ತೆಗೆದು ಹಾಕಿದ್ದು ಈ ನಡೆ ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರು ಆಗಿದೆ. ಪುನೀತ್ ರಾಜಕುಮಾರ್ ಮೃತ ಪಟ್ಟು ಒಂಭತ್ತು ತಿಂಗಳು ಆಯ್ತು ಹೀಗಾಗಿ ಅವರು ಅಗಲಿದ ಮೇಲೆ ಅವರ ಟ್ವಿಟ್ಟರ್ ಅಕೌಂಟ್ ಅಧಿಕೃತ ಖಾತೆಯಾಗಿ ಉಳಿದಿಲ್ಲ. ಜೊತೆಗೆ 8 ತಿಂಗಳಿಂದ ಅವರ ಖಾತೆ ಆಕ್ಟೀವ್ ಆಗಿಲ್ಲ ಎನ್ನುವ ಕಾರಣದಿಂದ ನೀಲಿ ಟಿಕ್ ನ ತೆಗೆದು ಹಾಕಲಾಗಿದೆ ಎನ್ನಲಾಗುತ್ತಿದೆ. ಆದ್ರೆ ಈಗಾಗಲೇ ಮೃತ ಪಟ್ಟಿರುವ ನಟ ಸಿದ್ದಾರ್ಥ್ ಶುಕ್ಲ ಅವರ ಟ್ವಿಟ್ಟರ್ ಖಾತೆಯ ನೀಲಿ ಟಿಕ್ ಹಾಗೆಯೇ ಇದೆ. ಹಾಗಾದ್ರೆ ಅಪ್ಪು ಖಾತೆಯ ನೀಲಿ ಟಿಕ್ ತೆಗೆದಿದ್ದು ಯಾಕೆ ಅಂತ ಪುನೀತ್ ರಾಜಕುಮಾರ್ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.