ಕರ್ನಾಟಕದಲ್ಲಿ ಮಳೆ ಕಥೆ ಹಿಂಗಾದ್ರೆ ಹೆಂಗೆ ಮಾರಾಯ ಅಂತಿದ್ದಾರೆ ಜನರು!

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಇಂದು ಸಹ ಮುಂದುವರೆಯುತ್ತದೆ ಅಂತೆ. ಬಿಟ್ಟೂ ಬಿಡದೆ ಸುರಿಯುತ್ತಿರುವ ಮಳೆ ಗೆ ಜನತೆ ಹೈರಾಣಾಗಿದ್ದಾರೆ. ಇನ್ನೂ ಬಿತ್ತನೆ ಮಾಡುತ್ತಾ ಇರುವಂಥ ರೈತರು ಹೀಗೆ ಮಳೆ ಮುಂದುವರೆದರೆ ಮುಂದೆ ಬೆಳೆಗಳು ರೋಗಕ್ಕೆ ತುತ್ತಾಗುತ್ತವೆ ಅಂತ ಆತಂಕಕ್ಕೆ ಒಳಗಾಗಿದಾರೆ. ಮತ್ತೊಂದು ಕಡೆ ಬಿತ್ತನೆ ಮಾಡಬೇಕು ಎಂದುಕೊಂಡಿರುವ ರೈತರು ಮಳೆ ನಿಂತ್ರೆ ಸಾಕು ಅಂತಾ ಕಾಯುತ್ತಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಆಗಿದ್ದೂ ಜಲಾಶಯಗಳು ಭರ್ತಿ ಆಗಿವೆ. ಜಲಾಶಯಗಳಿಂದ ನದಿಗೆ ಸಾವಿರಾರು ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹರಿ ಬಿಡಲಾಗುತ್ತಿದೆ. ಆದ್ದರಿಂದ ನದಿ ತೀರದ ಗ್ರಾಮಗಳ ಜನರಿಗೆ ಎಚ್ಚರಿಕೆಯಿಂದ ಇರಬೇಕು ಅಂತ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಟ 19 ಮತ್ತು ಗರಿಷ್ಟ 25 ಡಿಗ್ರಿ ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಲವೆಡೆ ಮಳೆ ಆಗುತ್ತೆ ಎಂದು ಹೇಳುತ್ತಿದ್ದಾರೆ.

 

ಕೊಡಗು ಭಾಗದಲ್ಲಿ ಸ್ವಲ್ಪ ಮಳೆ ಇಳಿಕೆ ಆಗಿದ್ದು, ಆದ್ರೆ ಪ್ರವಾಹದ ಆತಂಕದಲ್ಲಿ ಜನರು ಇದ್ದಾರೆ. ಮಳೆಯಿಂದ ಕೆಲ ಮನೆಗಳಿಗೆ ಹಾನಿ ಉಂಟಾಗಿದೆ. ಕೊಡಗು ಜಿಲ್ಲೆಯ ನದಿ ಉಪನದಿಗಳು ತುಂಬಿ ಹರಿಯುತ್ತಿವೆ. ಮಾಡಿ ತೀರದ ದೇವಸ್ಥಾನಗಳಲ್ಲಿ ಬ್ಯಾರಿಕೇಡ್ ಹಾಕಿ ಭಕ್ತರು ನೀರಿಗೆ ಇಳಿಯದಂತೆ ನಿರ್ಭಂಧ ಹಾಕಲಾಗಿದೆ. ನದಿಯ ಮಟ್ಟ ಇಳಿಕೆ ಆಗುವ ವರೆಗೂ ಭಕ್ತರ ಪುಣ್ಯ ಸ್ನಾನಕ್ಕೆ ಬ್ರೇಕ್ ಹಾಕಲಾಗಿದೆ. ಬಿಸಿಲು ನಾಡು ಉತ್ತರ ಕರ್ನಾಟಕ ಅಕ್ಷರಶಃ ಮಲೆ ನಾಡು ಆಗಿ ಪರಿಣಮಿಸಿದೆ. ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಎಲ್ಲೆಡೆ ಹಸಿರು ವಾತಾವರಣ ಕಾಣಿಸುತ್ತಿದೆ. ತುಂತುರು ಮಳೆ ಜೊತೆಗೆ ಗಾಳಿಯ ವೇಗ ಸ್ವಲ್ಪ ಹೆಚ್ಚಾಗಿದೆ. ವಿಜಯಪುರ ಬಾಗಲಕೋಟೆ ಬೆಳಗಾವಿ ಗದಗ ಕೊಪ್ಪಳ ಯಾದಗಿರಿಯಲ್ಲಿ ಬೆಳಗಿನ ಜಾವ ಮಂಜು ಹಿತವನ್ನು ನೀಡುತ್ತಿದೆ. ಇನ್ನೂ ಹವಾಮಾನದಲ್ಲಿ ಏರುಪೇರು ಆಗುತ್ತಿರುವುದರಿಂದ ಜನರಲ್ಲಿ ಜ್ವರ ಶೀತ ಸಂಬಂಧಿ ರೋಗ ಲಕ್ಷಣಗಳು ಜಾಸ್ತಿ ಆಗುತ್ತಿದೆ.

 

ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇವತ್ತು ಮಡಿಕೇರಿಯ ಮಲ್ಲಿಕಾರ್ಜುನ ಬಡಾವಣೆಯಲ್ಲಿ ಮಳೆಯಿಂದ ಹಾನಿಗೆ ಒಳಗಾದ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಿಗೆ ಒಳಗಾದ ಮನೆಯ ಮಾಲೀಕ ಗೋಪಾಲ ಕುಟುಂಬಕ್ಕೆ ಒಟ್ಟು ಒಂದು ಲಕ್ಷದ ಐದು ಸಾವಿರ ರೂಪಾಯಿ ಪರಿಹಾರ ವಿತರಿಸಿದರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್ ಅಶೋಕ್ ಶಿಕ್ಷಣ ಸಚಿವ ನಾಗೇಶ್ ಮತ್ತು ಇತರರು ಹಾಜರಿದ್ದರು.ಆದ್ರೆ ಹೊರ ರಾಜ್ಯ ಅಂದ್ರೆ ಮಹಾರಾಷ್ಟ್ರದಲ್ಲಿ ಒಂದು ಕಡೆ ಕೃಷ್ಣ ಒಂದು ಕಡೆ ಭೀಮಾ ನದಿಯ ಆತಂಕ ಮನೆ ಮಾಡಿದೆ. ಮಹಾರಾಷ್ಟ್ರದ ಮಹಾ ಮಳೆಗೆ ಕೃಷ್ಣ ಹಾಗೂ ಭೀಮ ನದಿಗೆ ಒಳಹರಿವು ತುಂಬಾ ಹೆಚ್ಚಳ ಆಗಿದೆ. ಮಹಾರಾಷ್ಟ್ರದಲ್ಲಿ ಮಳೆಗೆ ಸಾಕಷ್ಟು ಬಸ್ ಗಳಾನ್ನು ತಮ್ಮ ಎಂದಿನ ರೂಟ್ ಇಂದ ಡಿವಿಯೆಟ್ ಮಾಡಲಾಗಿದೆ. ತಗ್ಗೂ ಪ್ರದೇಶಗಳಲ್ಲಿ ಸಿಕ್ಕಾಪಟ್ಟೆ ನೀರು ನುಗ್ಗುತ್ತಿದೆ. ಇನ್ನ ಮಳೆ ಜೊತೆಗೆ ಗಾಳಿ ಕೂಡ ಇರುವುದರಿಂದ ಸಮುದ್ರದಲ್ಲಿ ಅಲೆಗಳ ಎತ್ತರ ತುಂಬಾನೇ ಜಾಸ್ತಿ ಆಗಿದೆ.

Leave a comment

Your email address will not be published. Required fields are marked *