ಒಂದೆರಡು ಸಿನಿಮಾಗಳ ಮೂಲಕ ಕನ್ನಡ ಸಿನಿಮಾ ಪ್ರಿಯರಿಗೆ ಮೋಡಿ ಮಾಡಿ ಹೀಗೆ ಬಂದು ಹಾಗೆ ಹೋದ ನಟಿಯರು.!!!

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಾಕಷ್ಟು ನಟಿಯರು ಬಂದು ಸ್ಟಾರ್ ನಟಿಯರಾಗಿ ಮಿಂಚಿದ್ದಾರೆ. ಹಾಗೆ ಕೆಲವೊಂದು ನಟಿಯರು ಬೇರೆ ಭಾಷೆಯವರು ಆಗಿದ್ದರು ಬೇರೆ ಭಾಷೆ ಸಿನಿಮಾಗಳಲ್ಲಿ ನಟಿಸಿದ್ದರೂ ಅವರ ಮನೋಜ್ಞ ಅಭಿನಯ ದಿಂದ ಕನ್ನಡ ಪ್ರೇಕ್ಷಕರು ಇಂದಿಗೂ ಅವರನ್ನು ನೆನಪಿಸಿಕೊಳ್ಳುತ್ತಾರೆ. ಸೋನಿಯಾ ಅಗರ್ವಾಲ್, ಸೌತ್ ಬ್ಯೂಟಿ ಸೋನಿಯಾ ಕಿಚ್ಚ ಸುದೀಪ್ ಅಭಿನಯದ ಚಂದು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಚಂದು ಸಿನಿಮಾದ ಮೂಲಕ ಕನ್ನಡಿಗರ ಮನ ಗೆದ್ದರು. ಈಗ ಅವರು ಡೈರೆಕ್ಟರ್ ಸೆಲ್ವನ್ ಅವರನ್ನು ಮದುವೆ ಆಗಿದ್ದು ಕಾರಣಾಂತರದಿಂದ ವಿಚ್ಛೇದನ ಪಡೆದರು. ಜನಿಫರ್ ಕೊತ್ವಾಲ್. ಜೋಗಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಜೆನಿಫರ್ ಮೊದಲ ಸಿನಿಮಾದಲ್ಲಿ ಬಹಳಷ್ಟು ಫೆಂ ಗಳಿಸಿದರು. ನಂತರ ಯುಗಾದಿ, ಮಸ್ತಿ, ಈ ಬಂಧನ, ಪ್ರಿನ್ಸ್ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಶಾ ಕೋಪಿಕರ್, ಸೂರ್ಯವಂಶ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಇಶಾ ಮೊದಲ ಸಿನಿಮಾದಲ್ಲೇ ಸಿನಿ ರಸಿಕರ ಮನ ಗೆದ್ದರು. ನಂತರ ಓ ನನ್ನ ನಲ್ಲೆ ಸಿನಿಮಾದಲ್ಲಿ ಇಶಾ ಕೋಪಿಕಾರ್ ನಟಿಸಿದ್ದು ಎರಡು ಸಿನಿಮಾಗಳು ಇಶಾ ಕೋಪೀಕರ್ ಅವರಿಗೆ ಬಹಳಷ್ಟು ಹೆಸರು ತಂದು ಕೊಟ್ಟವು. ಇವರು ಹೋಟೆಲ್ ಉದ್ಯಮಿ ಟಿನ್ನಿ ಅವರನ್ನು ಮದುವೆ ಆಗಿದ್ದು ಈ ದಂಪತಿಗೆ ರಿಯಾನ ಎಂಬ ಮಗು ಇದೆ.

 

ಸ್ನೇಹ, ಸೌತ್ ಬ್ಯೂಟಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆ ರವಿಶಾಸ್ತ್ರಿ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇವರು ತಮಿಳು ಆಕ್ಟರ್ ಪ್ರಸನ್ನ ಎಂಬುವವರ ಜೊತೆ ಮದುವೆ ಆಗಿದ್ದು, ಈ ದಂಪತಿಗೆ ವಿಹಾನ ಆದ್ಯಾ ಎಂಬ ಎರಡು ಮಕ್ಕಳು ಇದ್ದಾರೆ. ರಾಶಿ. ಸೌತ್ ಅಂಡ್ ಬಾಲಿವುಡ್ ನಟಿ ರಾಶಿ ಅವರು ಸ್ನೇಹ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಇವರಿಗೆ ಹೆಸರು ತಂದುಕೊಟ್ಟಿದ್ದು ನಂತರ ಬಂದ ರಾಜ ನರಸಿಂಹ, ನಿನ್ನೆ ಪ್ರೀತಿಸುವೆ ಸಿನಿಮಾಗಳು. ಇವರು ಡೈರೆಕ್ಟರ್ ಶ್ರೀಮುನಿ ಅವರನ್ನು ಮದುವೆ ಆಗಿ ಈ ದಂಪತಿಗೆ ಒಬ್ಬಳು ಮಗಳು ಇದ್ದಾಳೆ. ಸಂಘವಿ. ಸೌತ್ ಸೇರಿದಂತೆ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಸಂಘವೀ ಸುಮಾರು 80ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು ಇವರು ದಿಗ್ಗಜರು, ಅನಾಥರು, ಇಂದ್ರ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದು ವೆಂಕಟೇಶ್ ಎನ್ನುವವರನ್ನು ಮದುವೆ ಆಗಿದ್ದು ಇವ್ರಿಗೆ ಮಗಳು ಇದ್ದಾಳೆ. ರೇಖಾ ವೇದವ್ಯಾಸ. ಚಿತ್ರಾ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರೇಖಾ ವೇದವ್ಯಾಸ 20ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು ಇವರ ನಟನೆಯ ಹುಚ್ಚಾ ಸಿನಿಮಾ ಇವರ ಕೆರಿಯರ್ ಟರ್ನಿಂಗ್ ಪಾಯಿಂಟ್ ಆಗಿದೆ.

 

ಅಭೀರಾಮಿ, ಚೈಲ್ಡ್ ಆರ್ಟಿಸ್ಟ್ ಆಗಿ ಸಿನಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಅಭಿರಾಮಿ ಡೀ ಬಾಸ್ ನಟನೆಯ ಲಾಲಿಹಾಡು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋಯಿನ್ ಆಗಿ ಪಾದಾರ್ಪಣೆ ಮಾಡಿದ್ದು, ನಂತರ ರಕ್ತ ಕಣ್ಣೀರು, ಶ್ರೀರಾಮ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಾರುಲತಾ, ಸಹಜ ಬ್ಯೂಟಿ ಚಾರುಲತಾ ಓ ಮಲ್ಲಿಗೆ ಸಿನಿಮಾದ ಮೂಲಕ ಸಿನಿ ಕೆರಿಯರ್ ಪ್ರಾರಂಭಿಸಿ ಜೋಡಿಹಕ್ಕಿ, ನೀಲಂಬರಿ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿ ಗಳಿಸಿದ್ದಾರೆ. ಪೂನಂ ಸಿಂಗಾರ್. ವಾಲಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪೂನಂ. ನಂತರ ಜೋಡಿ, ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿ ಗಳಿಸಿದರು. ಸಂಗೀತ. ಸೌತ್ ಅಕ್ಟ್ರಸ್ ಸಂಗೀತ ಅವರು ಯಾರೇ ನೀ ಚೆಲುವೆ ಸಿನಿಮಾದ ಮೂಲಕ ಕನ್ನಡ ಸಿನಿ ರಸಿಕರ ಮನ ಗೆದ್ದಿದ್ದು ನಂತರ ಯಾರೇ ನೀ ಅಭಿಮಾನಿ ಸಿನಿಮಾದಲ್ಲಿ ಸಂಗೀತ ನಟಿಸಿದ್ದರು. ಬಿಂದಿಯಾ, ಹಳ್ಳಿಮೇಶ್ಟ್ರು ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದು ಈ ಸಿನಿಮಾದಲ್ಲಿನ ಪರಿಮಳ ಪಾತ್ರ ಇವರಿಗೆ ಹೆಸರು ತಂದು ಕೊಟ್ಟಿತು.

Leave a comment

Your email address will not be published. Required fields are marked *