ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಏಕ ದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಹತ್ತು ವಿಕೆಟುಗಳಿಂದ ಭರ್ಜರಿ ಗೆಲುವು ದಾಖಲಿಸಿ ಏಕ ದಿನ ಸರಣಿಯಲ್ಲಿ 1 0 ಅಂತರದಿಂದ ಮುನ್ನಡೆ ಸಾಧಿಸಿದೆ. ಪಂದ್ಯದ ಎರಡನೇ ಇನ್ನಿಂಗ್ಸ್ ಅಲ್ಲಿ ರೋಹಿತ್ ಶರ್ಮಾ ಬಾರಿಸಿದ ಸಿಕ್ಸರ್ ಪುಟಾಣಿ ಬಾಲಕಿ ಮೇಲೆ ಬಿದ್ದಿದೆ. ಪ್ರೇಕ್ಷಕರ ಗ್ಯಾಲರಿ ಅಲ್ಲಿ ಕೂತು ಮ್ಯಾಚ್ ನೋಡ್ತಾ ಇದ್ದ ಈ ಬಾಲಕಿ ಮೇಕೆ ಬಾಲ್ ಬಿದ್ದಿದೆ. ಬಾಲ್ ಮೈ ಮೇಲೆ ಬೀಳ್ತಾ ಇದ್ದ ಹಾಗೆ ಆಕೆ ಜೋರಾಗಿ ಅಳಲು ಶುರು ಮಾಡ್ತಾಳೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ವೈದ್ಯರು ಬಾಲಕಿಗೆ ಚಿಕಿತ್ಸೆ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಂದಿರುವ ಅಪ್ಡೇಟ್ ಪ್ರಕಾರ ಆಕೆ ಪ್ರಾಣ ಅಪಾಯದಿಂದ ಪಾರಾಗಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾರತದ ಬ್ಯಾಟಿಂಗ್ ಅಲ್ಲಿ ರೋಹಿತ್ ಶರ್ಮಾ 5 ನೇ ಓವರ್ ನಲ್ಲಿ ಡೇವಿಡ್ ವಿಲ್ಲಿ ಎಸೆದ ಬಾಲ್ ಗೆ ಅದ್ಭುತ ಸಿಕ್ಸರ್ ಬಾರಿಸಿದಾರು ಈ ಬಾಲ್ ಮ್ಯಾಚ್ ನೋಡ್ತಾ ಕುಳಿತಿದ್ದ ಬಾಲಕಿಗೆ ಬಡಿದಿದೆ. ಈ ವಿಡಿಯೋ ಸದ್ಯ ತುಂಬಾ ವೈರಲ್ ಆಗ್ತಿದೆ.