ನಮಸ್ತೆ ಪ್ರಿಯ ಓದುಗರೇ, ಯುವ ಕಾಂಗ್ರೆಸ್ ನ ಮುಖಂಡ ಮೊಹಮ್ಮದ್ ನಲಪಾಡ್ ಅವರು ನಿನ್ನೆ ನಡೆದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಸಕ್ಕತ್ ಸ್ಟೆಪ್ ಹಾಕಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದ ಕಾರ್ಯಕ್ರಮದ ವೇಳೆ ಖರಾಬು ಬಾಸು ಖರಾಬೂ ಸಾಂಗ್ ಗೆ ಸಕ್ಕತ್ ಆಗಿಯೇ ಡಾನ್ಸ್ ಮಾಡಿದಾರೆ. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹಾಗೂ ಇನ್ನಿತರೆ ಕಾಂಗ್ರೆಸ್ ಮುಖಂಡರು ಇದ್ರು. ಎಲ್ಲಾ ನಾಯಕರೂ ಕಾರ್ಯಕ್ರಮದಿಂದ ಹೋದ ಮೇಲೆ ಸಂಜೆ ಯುವ ಕಾಂಗ್ರೆಸ್ ಮುಖಂಡ ನಲಪಾಡ್ ಕನ್ನಡ ರಾಪರ್ ಚಂದನ್ ಶೆಟ್ಟಿ ಕರೆಸಿ ಹಾಡು ಹಾಡಿಸಿದ್ದಾರೆ. ಅವರ ಹಾಡಿಗೆ ಸಕ್ಕತ್ ಸ್ಟೆಪ್ ಹಾಕಿದ್ದಾರೆ. ಸದ್ಯ ನಲಪಾಡ್ ಮಾಡಿರೋ ಖಾರಾಬೂ ಡಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗ್ತಿದೆ.