ಶಿವಣ್ಣ, ಎನರ್ಜಿ ಗೆ ಪವರ್ ಗೆ ಶಕ್ತಿಗೆ ಹುಮ್ಮಸ್ಸಿಗೆ ಇನ್ನೊಂದು ಹೆಸರೇ ಶಿವ ರಾಜಕುಮಾರ್. ವಯಸ್ಸು 60 ಆದ್ರೂ ಕೂಡ ಈಗಲೂ ಉತ್ಸಾಹ ಕಡಿಮೆ ಆಗಿಲ್ಲ. ಪುನೀತ್ ರಾಜಕುಮಾರ್ ತೀರಿ ಹೋದ ನಂತರ ಒಂದಷ್ಟು ತಿಂಗಳುಗಳ ಕಾಲ ಶಿವಣ್ಣ ಉತ್ಸಾಹ ಕಳೆದುಕೊಂಡಿದ್ದು ನಿಜ. ಆದ್ರೆ ಶಿವ ರಾಜ್ಕುಮಾರ್ ಈಗ ಮತ್ತೊಮ್ಮೆ ಹಳೆ ಟ್ರಾಕ್ ಗೆ ಮರಳುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಶಿವಣ್ಣ ಒಪ್ಪಿಕೊಳ್ಳುತ್ತಿದ್ದಾರೆ. ಜುಲೈ 12 ಶಿವಣ್ಣನ ಬರ್ತಡೇ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಹೇಳುತ್ತಾ ಅವರ ಬಗೆಗಿನ ಒಂದು ಸ್ಟೋರಿ ಹೇಳುತ್ತೇವೆ ಕೇಳಿ. ಶಿವಣ್ಣ ಇತ್ತೀಚೆಗೆ ಹಲವು ವೇದಿಕೆಗಳಲ್ಲಿ ಸಾಕಷ್ಟು ಭಾವುಕ ಆಗ್ತಾ ಇದ್ದಾರೆ. ಪುನೀತ್ ರಾಜಕುಮಾರ್ ಹೋದ ನಂತರ ಯಾವುದೇ ಕಾರ್ಯಕ್ರಮ ಕೆ ಹೋದ್ರು ಅಪ್ಪು ಹೆಸರು ಹೇಳುತ್ತಿದ್ದ ಹಾಗೆ ಶಿವಣ್ಣ ಗಳಗಳನೆ ಅಳುವುದಕ್ಕೆ ಶುರು ಮಾಡ್ತಾರೆ. ಪುನೀತ್ ನನ್ನ ಮಗ ಇದ್ದ ಹಾಗೆ ಅವನನ್ನು ಕಳೆದುಕೊಂಡ ನೆನಪಿನಿಂದ ಹೊರಗೆ ಬರಲು ಸಾಧ್ಯ ಆಗುತ್ತಿಲ್ಲ ಅಂತ ಶಿವಣ್ಣ ಹೇಳ್ತಾ ಇರ್ತಾರೆ. ಆದ್ರೆ ಅಭಿಮಾನಿಗಳು ಕೇಳಿಕೊಳ್ಳುವುದು ಇಷ್ಟೇ. ಆ ದುಃಖದಿಂದ ನೋವಿನಿಂದ ಆದಷ್ಟು ಬೇಗ ಶಿವಣ್ಣ ಹೊರಗೆ ಬರಲಿ ಎಂದು. ಇತ್ತೀಚೆಗೆ ಝೀ ಕನ್ನಡ ವಾಹಿನಿಯಲ್ಲಿ ಶಿವಣ್ಣ ಮತ್ತೆ ಕಣ್ಣೀರು ಹಾಕಿದ್ರು. ಆಗ ಒಂದು ವಿಚಾರ ಪ್ರಸ್ತಾಪ ಮಾಡ್ತಾರೆ. ನಾವು ಅಣ್ಣ ತಮ್ಮಂದಿರು ಯಾವ ವಿಚಾರಕ್ಕೂ ಇಲ್ಲಿಯವರೆಗೆ ಜಗಳ ಆಗಿಲ್ಲ. ನಮ್ಮ ನಡುವೆ ಗಲಾಟೆ ವೈಮನಸ್ಸು ಯಾವುದು ಬಂದಿಲ್ಲ.
ಆದ್ರೆ ಹೊರಗಡೆ ಆಸ್ತಿ ವಿಚಾರಕ್ಕೆ ನಾವೆಲ್ಲರೂ ಕಿತ್ತಾಡಿಕೊಂಡಿದ್ದಿವಿ ಅಂತ ಯಾವುದೋ ರೀತಿಯಲ್ಲಿ ವಿಷಯಗಳನ್ನು ವದಂತಿ ಹಬ್ಬಿಸಿದರು. ಆದ್ರೆ ಆಸ್ತಿ ವಿಚಾರಕ್ಕೆ ನಾವು ಎಂದೋ ಕಿತ್ತಡಿಲ್ಲ. ಪಕ್ಕದಲ್ಲಿರುವ ರಾಘಣ್ಣ ನೇವೆ ನಮಗೆ ಪ್ರಾಪರ್ಟಿ ಇದ್ದ ಹಾಗೆ ಅಂತ. ಅಸಲಿ ವಿಚಾರ ಏನು ಅಂತ ನೋಡುವುದಾದರೆ. ಶಿವ ರಾಜಕುಮಾರ್ ಮದುವೆ ಆಗುತ್ತೆ ಗೀತಾ ಅವರು ಮನೆಗೆ ಎಂಟ್ರಿ ಕೊಡ್ತಾರೆ. ಎಂಟ್ರಿ ಆದ ಕೆಲವು ವರ್ಷಗಳ ನಂತ್ರ ಶಿವಣ್ಣ ಬೇರೆ ವಾಸ ಮಾಡೋಕೆ ಶುರು ಮಾಡ್ತಾರೆ. ಆಗ ಸಾರ್ವಜನಿಕ ವಲಯದಲ್ಲಿ ಈ ಥರ ದೊಡ್ಮನೆ ಲೀ ಡಿವೈಡ್ ಆಗಬಾರದಿತ್ತು ಅಂತ ಕೆಲವು ಚರ್ಚೆ ಆಗುತ್ತೆ. ಗೀತಾ ಅವರು ಈ ರೀತಿ ಡಿವೈಡ್ ಆಗಲು ಕಾರಣ ಅಂತ ಗಾಸಿಪ್ ಆಗುತ್ತೆ. ಇದು ಸಹಜವಾಗಿ ದೊಡ್ಮನೆ ಅವರಿಗೆ ನೋವನ್ನು ಕೊಟ್ಟಿರಿತ್ತೆ. ಅಸಲಿ ಸತ್ಯ ಏನು ಅಂದ್ರೆ. ಕುಟುಂಬ ದೊಡ್ಡದಾಗುತ್ತಾ ಹೋಗುತ್ತೆ. ರಾಜಕುಮಾರ್ ಪಾರ್ವತಮ್ಮ ವರದನ್ನ ಎಲ್ಲರೂ ಜೊತೆಗೆ ಇರ್ತಾರೆ. ಜೊತೆಗೆ ರಾಜಕುಮಾರ್ ಅವರಿಗೆ ಮಕ್ಕಳು ಹುಟ್ಟುತ್ತಾರೆ. ರಾಘಣ್ಣ, ಶಿವ ರಾಜಕುಮಾರ್, ಪುನೀತ್, ಪೂರ್ಣಿಮ ಲಕ್ಷ್ಮೀ ಎಲ್ಲರೂ ಹುಟ್ಟುತ್ತಾರೆ. ಅದಾದ ನಂತರ ಹೆಣ್ಣು ಮಕ್ಕಳು ಮದುವೆಯಾಗಿ ಹೋಗ್ತಾರೆ. ಆಮೇಲೆ ಶಿವ ರಾಜ್ಕುಮಾರ್ ಅವರಿಗೆ ಮದುವೆ ಆಗುತ್ತೆ ಗೀತಾ ಬರ್ತಾರೆ ಅವರಿಗೆ ಎರಡು ಮಕ್ಕಳು ಪುನೀತ್ ರಾಜಕುಮಾರ್ ಮದುವೆ ಆಗಿ ಎರಡು ಮಕ್ಕಳು ಆಗ್ತಾರೆ. ಕುಟುಂಬ ದೊಡ್ಡದು ಆಗಲು ಶುರು ಆಗುತ್ತೆ. ಅದೇ ರೀತಿ ಮನೆಗೆ ಬರುವ ಅಭಿಮಾನಿಗಳು ಗೆಸ್ಟ್ ಗಳ ಸಂಖ್ಯೆ ಜಾಸ್ತಿ ಆಗುತ್ತೆ. ನಿರ್ಮಾಪಕರು ನಿರ್ದೇಶಕರು ಮನೆಗೆ ಬರ್ತಾನೆ ಇರ್ತಾರೆ.
ಆದ್ರೆ ಸದಾಶಿವ ನಗರದಲ್ಲಿನ ಅವರ ಮನೆ ತುಂಬಾ ಚಿಕ್ಕದು. ಆಗಿನ ಕಾಲದಲ್ಲಿ ಅದೂ ದೊಡ್ಡ ಬಂಗಲೆ ಆದ್ರೆ ಕುಟುಂಬ ದೊಡ್ಡದಾಗುತ್ತಾ ಹೋದಾಗ ಚಿಕ್ಕದು ಎನ್ನಿಸಲು ಶುರು ಆಗುತ್ತೆ. ಆಗ ಮನೆ ಡಿವೈಡ್ ಆಗಲೇಬೇಕಾದ ಅನಿವಾರ್ಯತೆ ಬರುತ್ತೆ. ಈ ಸಂದರ್ಭದಲ್ಲಿ ಮೊದಲು ಮನೆ ಇಂದ ಹೊರಗೆ ಹೋದವರು ಶಿವ ರಾಜಕುಮಾರ್. ಅವರಿಗೆ ಮಾನ್ಯತಾ ಟೆಕ್ ಪಾರ್ಕ್ ಅಲ್ಲಿ ಬಂಗಾರಪ್ಪ ಕೊಟ್ಟಂತಹ ನಿವೇಶನ ಇರುತ್ತೆ. ಅಲ್ಲಿ ಶಿವಣ್ಣ ಮನೆ ಕಟ್ಟಿಸಿ. ಶ್ರೀ ಮುತ್ತು ಅಂತ ಹೆಸರು ಇಡ್ತಾರೆ. ಶಿವಣ್ಣನಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಹಾಗೆ ಅವರ ಸಿನಿಮಾಗೆ ತಕ್ಕಂತೆ ಅನೇಕ ಬಂದು ಹೋಗುವವರು ಇರ್ಥ ಇದ್ರು. ನಿಮಾಪಕರು ನಿರ್ದೇಶಕರು ಬಂದು ಹೋಗಬೇಕಾಗಿತ್ತು. ಮನೆ ಚಿಕ್ಕದು ಆದ್ದರಿಂದ ಶಿವಣ್ಣ ಬೇರೆ ಮನೆ ಮಾಡುವ ಅನಿವಾರ್ಯತೆ ಇತ್ತು. ಹಾಗಾಗಿ ಅವರು ಹೋದ್ರು ಬಿಟ್ರೆ ಅವರ ನಡುವೆ ಯಾವ ಜಗಳ ಗಲಾಟೆ ಇಲ್ಲ. ನಂತರ ರಾಘಣ್ಣ ಪುನೀತ್ ಜೊತೆಗೆ ಒಂದಷ್ಟು ವರ್ಷಗಳ ಕಾಲ ಇದ್ರು. ಆಮೇಲೆ ಅವರಿಗೂ ತೀರ್ ಚಿಕ್ಕದು ಎನಿಸಿದಾಗ ಆ ಮನೆಯನ್ನು ವಿನ್ಯಾಸಗೊಳಿಸಿ ಅಲ್ಲಿಯೂ ಡಿವೈಡ್ ಮಾಡಿಕೊಂಡು ಪುನೀತ್ ರಾಘಣ್ಣ ಇರಲು ಶುರು ಮಾಡ್ತಾರೆ. ಆಸ್ತಿ ವಿಚರಕ್ಕೆ ಜಗಳ ಗಲಾಟೆ ಆಗುವ ಅವಶ್ಯಕತೆ ಅವರ ನಡುವೆ ಇರಲಿಲ್ಲ. ಎಲ್ಲರಿಗೂ ಸಮನಾಗಿ ಆಸ್ತಿ ಪಾಲು ಮಾಡಿಕೊಂಡಿದ್ದಾರೆ.