ಡೆಲಿವರಿ ಬಾಯ್ಸ್ ಗೆ ಭರ್ಜರಿ ಅಫರ್ ಕೊಟ್ಟ ನೀನಾಸಂ ಸತೀಶ್.!!!

ಡೆಲಿವರಿ ಬಾಯ್ಸ್ ಗೆ ಭರ್ಜರಿ ಅಫರ್ ಕೊಟ್ಟ ನೀನಾಸಂ ಸತೀಶ್.!!!

ನಮಸ್ತೆ ಪ್ರಿಯ ಓದುಗರೇ, ಮನೆಗೆ ಕರೆದು ಉಚಿತವಾಗಿ ಊಟಾ ಹಾಕಿಸಿದ್ದು ಅಲ್ಲದೆ ಸಿನಿಮಾ ನೋಡೋದಕ್ಕೆ ಟಿಕೆಟ್ ಕೋಡ್ ಉಚಿತ. ಹೀಗೆ ಒಂದು ಅಫರ್ ಫುಡ್ ಡೆಲಿವರಿ ಬಾಯ್ಸ್ ಗೆ ಸಿಕ್ಕಿದ್ದು ಅವರ ಸಂಭ್ರಮವನ್ನು ಜಾಸ್ತಿ ಮಾಡಿದೆ. ಅಷ್ಟಕ್ಕೂ ಇದಕ್ಕೆಲ್ಲ ಕಾರಣ ಆಗಿದ್ದು ಪೆಟ್ರೊಮ್ಯಕ್ಸ್. ಹೌದು ಪೆಟ್ರೋಮಕ್ಸ್ ಸಿನಿಮಾದ ಪ್ರಚಾರಕ್ಕಾಗಿ ನಡೆದ ಕಾರ್ಯಕ್ರಮದಿಂದ ಡೆಲಿವರಿ ಬಾಯ್ಸ್ ಗೆ ಹೀಗೊಂದು ಚಾನ್ಸ್ ಸಿಕ್ಕಿದೆ. ಯಾಕಂದ್ರೆ ಮೊನ್ನೆ ಮೊನ್ನೆಯಷ್ಟೇ ಡೆಲಿವರಿ ಬಾಯ್ ಆಗಿ ಬೀದಿಗಿಳಿದು ಮನೆ ಮನೆಗೂ ತೆರಳಿದ್ದ ನಾಯಕನಟ ನೀನಾಸಂ ಸತೀಶ್ ಈಗ ಡೆಲಿವರಿ ಬಾಯ್ಸ್ ನ ಮನೆಗೆ ಕರೆಸಿ ಊಟಾ ಕೂಡ ಹಾಕಿಸಿದ್ದಾರೆ. ಸಿನಿಮಾದಲ್ಲಿ ತಾವು ಅನಾಥ ಯುವಕನಾಗಿ ಕಾಣಿಸಿಕೊಂಡಿದ್ದ ಅವರು ಇತ್ತೀಚೆಗೆ ಅನಾಥ ಆಶ್ರಮಕ್ಕೆ ತೆರಳಿ ಅವರ ಜೊತೆ ಸಹ ಭೋಜನ ಮಾಡಿದರೂ. ಈ ಚಿತ್ರದಲ್ಲಿ ಡೆಲಿವರಿ ಬಾಯ್ ಆಗಿ ಕಾಣಿಸಿಕೊಂಡಿದ್ದರಿಂದ ಫುಡ್ ಡೆಲಿವರಿ ಬಾಯ್ ಆಗಿ ಅಭಿನಯಿಸಿರುವ ಕಾರಣ ಒಂದಷ್ಟು ಡೆಲಿವರಿ ಹುಡುಗರನ್ನು ಮನೆಗೆ ಕರೆಸಿ ಜೊತೆಗೆ ಊಟಾ ಮಾಡಿದ್ದಾರೆ. ಈ ಮೂಲಕ ರೀಲ್ ನಲ್ಲಿ ನಡೆದಿದ್ದನ್ನು ರಿಯಲ್ ಅಲ್ಲಿ ಮಾಡಿದ್ದಾರೆ ನಟ ನೀನಾಸಂ ಸತೀಶ್.

 

ಫುಡ್ ಡೆಲಿವರಿ ಮಾಡುವಾಗ ಇಂತಹ ಸಂದರ್ಭಗಳು ಎದುರಾಗಿದ್ದವು ಅವುಗಳನ್ನು ಹೇಗೆ ಎದುರಿಸಿದೆವು ಅಂತ ಹೇಳ್ತಾ ಈ ಸಂದರ್ಭದಲ್ಲಿ ತಮ್ಮ ಸಂಕಷ್ಟಗಳ ಸರಮಾಲೆಯನ್ನು ಬಿಚ್ಚಿಟ್ಟಿದ್ದಾರೆ. ಊಟಾ ಕೊಡಿಸಿದ ಮೇಲೆ ನಿಮ್ಮ ಎಲ್ಲರಿಗೂ ಸಿನಿಮಾ ನೋಡುವುದಕ್ಕೆ ಮಾಲ್ ಅಲ್ಲಿ ಉಚಿತವಾಗಿ ಟಿಕೆಟ್ ಕೊಡುವುದಾಗಿ ಹೇಳಿದ ನಟ ನೀನಾಸಂ ಸತೀಶ್. ನೀವೆಷ್ಟು ಜನರಿದ್ದಿರ ಹೇಳಿ ಎಲ್ಲರಿಗೂ ಉಚಿತವಾಗಿ ಟಿಕೆಟ್ ಕೊಡ್ತೀವಿ ಇನ್ನೂ ಅಫರ್ ಕೊಟ್ಟಿದ್ದಾರೆ. ನೀರ್ ದೋಸೆ ಸಿನಿಮಾ ನಿರ್ದೇಶನ ಮಾಡಿದ ವಿಜಯ್ ಪ್ರಸಾದ್ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ನೀನಾಸಂ ಜೊತೆಗೆ ಹರಿಪ್ರಿಯಾ ಕಾರುಣ್ಯ ರಾಮ್ ಅಭಿನಯಿಸಿದ್ದಾರೆ. ನಾಲ್ವರ ಬದುಕಿನಲ್ಲಿ ಭರವಸೆಯ ಬೆಳಕು ಹೇಗೆ ಮೂಡುತ್ತೆ ಎನ್ನುವುದು ಈ ಚಿತ್ರದ ಚಿತ್ರಕಥೆ ಆಗಿದ್ದು, ನಿರ್ದೇಶಕ ಪೆಟ್ರೋಮ್ಯಕ್ಸ್ ಎನ್ನುವ ಉಪಮೆಯದೊಂದಿಗೆ ಈ ಚಿತ್ರವನ್ನು ಹೇಳಿದ್ದಾರೆ. ಈ ಸಿನಿಮಾ ಇದೆ ಶುಕ್ರವಾರ ಅಂದ್ರೆ ಜುಲೈ 15 ನೆ ತಾರಿಕಿಗೆ ಬಿಡುಗಡೆ ಆಗುತ್ತೆ.

ಸುದ್ದಿ