ಗುಜರಾತ್ ನಲ್ಲಿ ಹಿಂದೆಂದೂ ಕೇಳರಿಯದ ಕ್ರಿಕೆಟ್ ಸ್ಕ್ಯಾಮ್!!! ಸುಳ್ಳು ಐಪಿಲ್ ಆಡಿಸಿದ ಮಾಸ್ಟರ್ ಮೈಂಡ್!

ಗುಜರಾತ್ ನಲ್ಲಿ ಹಿಂದೆಂದೂ ಕೇಳರಿಯದ ಕ್ರಿಕೆಟ್ ಸ್ಕ್ಯಾಮ್!!! ಸುಳ್ಳು ಐಪಿಲ್ ಆಡಿಸಿದ ಮಾಸ್ಟರ್ ಮೈಂಡ್!

ನಮಸ್ತೆ ಪ್ರಿಯ ಓದುಗರೇ, ಗುಜರಾತ್ ನ ಹಳ್ಳಿಯೊಂದರಲ್ಲಿ ಬಹಳ ವಿಚಿತ್ರವಾದ ಸ್ಕ್ಯಾಮ್ ನಡೆದಿದೆ. ಗುಜರಾತ್ ನ ಮೇಹಸಾನ ಡೀಸ್ಟಿಕ್ ನಲ್ಲಿ ಈ ಘಟನೆ ನಡೆದಿದ್ದು, ಇದೀಗ ಸ್ಕ್ಯಾಮ್ ಮಾಡಿದವರು ಪೊಲೀಸರ ಅತಿಥಿ ಆಗಿದ್ದಾರೆ. ಸುಮಾರು ನಾಲ್ಕು ಜನ ಮಾಸ್ಟರ್ ಮೈಂಡ್ ಗಳು ಸೇರಿಕೊಂಡು ಒಂದು ವಿಚಿತ್ರವಾದ ಟಿ 20 ಟೂರ್ನಮೆಂಟ್ ಸ್ಟಾರ್ಟ್ ಮಾಡಿದ್ದಾರೆ. ಇದು ಆಚೆಯಿಂದ ನೋಡೋದಕ್ಕೆ ಐಪಿಲ್ ಮಾದರಿಯಲ್ಲಿ ಇರುತ್ತೆ. ಇನ್ನ ಈ ಟೂರ್ನಮೆಂಟ್ ನ ಸ್ಕ್ಯಾಮ್ ರೀತಿಯಲ್ಲಿ ಆಡಿಸಿ ರಷ್ಯಾದಲ್ಲಿ ಇರುವಂಥ ಜೂಜು ಕೋರರು ಈ ಮ್ಯಾಚ್ ಮೇಕೆ ಬೆಟ್ಟಿಂಗ್ ಆಡುವ ಹಾಗೆ ಮಾಡಿದ್ದಾರೆ. ರಷ್ಯಾದ ಮೂರು ಸಿಟಿಗಳಲ್ಲಿ ಟೆಲಿಗ್ರಾಂ ಆಪ್ ಹಾಗೆ ಇನ್ನಿತರ ಬೆಟ್ಟಿಂಗ್ ಆಪ್ ಮೂಲಕ ಇಲ್ಲಿ ಜನಗಳು ಮೋಸ ಹೋಗಿದ್ದಾರೆ.

 

ಅಷ್ಟಕ್ಕೂ ಇಲ್ಲಿ ನಡೆದಿದ್ದು ಏನು ಅಂದ್ರೆ ಐಪಿಲ್ ಮುಗಿದು ಕೆಲವು ದಿನಗಳಾದ ಮೇಲೆ ಇಲ್ಲೊಂದು ಹೊಸ ಟೂರ್ನಮೆಂಟ್ ನ ಗುಜರಾತ್ ಅಲ್ಲಿ ಶುರು ಮಾಡಿದಾರೆ. ಸುಮಾರು 9 ಕ್ಕಿಂತ ಹೆಚ್ಚು ಪಂದ್ಯಗಳು ಇಲ್ಲಿ ನಡೆದಿದೆಯಂತೆ. ಮೆಹಸಾನ ಲೀ ನಡೆದ ಈ ಟೂರ್ನಮೆಂಟ್ ಅಲ್ಲಿ ಫೇಕ್ ಕ್ಯಾಮಾರ ಫೇಕ್ ಎಕ್ಯುಂಮೆಂಟ್ ಹಾಗೆ ಸ್ಪೀಕರ್ ಬಳಸಿ ಸ್ಟೇಡಿಯಂ ನಲ್ಲಿ ಬರುವಂಥ ಸದ್ದನ್ನು ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸ್ಪೀಕರ್ ಅಲ್ಲಿ ಒಂದು ಫೇಕ್ ಕಾಮೆಂಟರಿ ಅನ್ನು ಪ್ಲೇ ಮಾಡಿ ರಷ್ಯಾದ ಜನತೆಗೆ ಮೋಸ ಮಾಡಿದ್ದಾರೆ. ಇನ್ನೂ ಈ ಪಂದ್ಯದ ಒಂದು ಕ್ಲಿಪ್ ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಆ ಕ್ಲಿಪ್ ಅಲ್ಲಿ ಇಬ್ಬರು ಬ್ಯಾಟ್ಸ್ ಮೆನ್, ಒಬ್ಬ ಬೌಲರ್ ಒಬ್ಬ ಅಂಪರ್, ಒಬ್ಬ ವಿಕೆಟ್ ಕೀಪರ್ ಜೊತೆಗೆ ಅಡಿಷನಲ್ ಫೀಲ್ಡರ್ ನ ಸಹ ನಿಲ್ಲಿಸಿದ್ದಾರೆ. ಅವರನ್ನು ಬಿಟ್ರೆ ಕ್ಯಾಮೆರಾ ಇಂದ ಆಚೆಗೆ ಯಾರು ಕೂಡ ಇಲ್ಲ. ಇನ್ನ ಬಾಲ್ ನ ಆಚೆ ಈಚೆ ಹೊಡೆದರೆ ಕ್ಯಾಮೆರಾ ಆ ಕಡೆ ಟರ್ನ್ ಕೂಡ ಆಗೋದಿಲ್ಲ.

 

ಇನ್ನ ವರದಿ ಪ್ರಕಾರ ಆಂಪರ್ ಗಳಿಗೆ ವಾಕಿ ತಾಕಿ ಕೊಟ್ಟು ಕಂಟಿನುಯಸ್ ಆಗಿ ಅವರಿಗೆ ಯಾವ ರೀತಿ ರಿಸಲ್ಟ್ ಬೇಕು ಎನ್ನುವುದನ್ನು ಹೇಳ್ತಾ ಇರ್ಥರಂತೆ. ಯಾವ ಅಪೀಲ್ ಗೆ ಔಟ್ ಕೊಡಬೇಕು ಯಾವ ಅಪೀಲ್ ಗೆ ನಾಟ್ ಔಟ್ ಕೊಡಬೇಕು ಯಾವ ಚೆಂಡನ್ನು ಬೌಂಡರಿ ಕಡೆ ಹೊಡೆಯಬೇಕು ಎನ್ನುವ ಎಲ್ಲಾ ಮಾಹಿತಿಯನ್ನು ಅಂಪೇರ ಗಳಿಗೆ ವಾಕಿ ಟಾಕಿ ಮುಖಾಂತರ ಹೇಳಲಾಗುತ್ತದೆ. ಇನ್ನ ಬೆಟ್ಸ್ ಯಾವ ರೀತಿ ಇದೆ ಎಂದು ನೋಡಿಕೊಂಡು ಆ ಮುಖಾಂತರ ಇವರು ಸಿಕ್ಕಾಪಟ್ಟೆ ಲಾಭವನ್ನು ಗಳಿಸಿದ್ದಾರೆ. ಚೆನ್ನೈ ಫೈಟರ್ಸ್, ಗಾಂಧಿ ನಗರ್ ಚಾಲೆಂಜರ್ಸ್ ಹೀಗೆ ವಿಚಿತ್ರವಾದ ಹೆಸರುಗಳಿಂದ ಈ ಟೂರ್ನಮೆಂಟ್ ನಡೆದಿದೆ. ಇನ್ನ ವಿಚಿತ್ರ ಅಂದ್ರೆ ಇಲ್ಲಿ ಆಟವನ್ನು ಆಡುತ್ತಿರುವವರು ಜೂನಿಯರ್ ಆರ್ಟಿಸ್ಟ್ ಗಳು .ಇವರ ಪ್ರತಿ ಆಟಕ್ಕೆ 400 ರೂ ಕೊಟ್ಟು ಆಕ್ಟಿಂಗ್ ಮಾಡಿಸಲಾಗಿದೆ. ಒಟ್ಟಿನಲ್ಲಿ ಈ ವಿಚಿತ್ರವಾದ ಸ್ಕ್ಯಾಮ್ ನೋಡಿ ಇಡೀ ಇಂಟರ್ನೆಟ್ ಈಗ ಶಾಕ್ ಆಗಿದೆ.

ಸುದ್ದಿ