ನಮಸ್ತೆ ಪ್ರಿಯ ಓದುಗರೇ, ಹತ್ತು ತಿಂಗಳ ಮಗುವಿಗೆ ರೈಲ್ವೇ ಇಲಾಖೆಯಲ್ಲಿ ಕೆಲಸ ಸಿಕ್ಕಿದೆ. ಅರೆ ನೀವು ಕೇಳಬಹುದು ಹತ್ತು ತಿಂಗಳ ಮಗುವಿಗೆ ಹೇಗೆ ಜಾಬ್ ಕೊಡುವುದು ಅಂತ. ಆದ್ರೆ ಈ ಘಟನೆಯಲ್ಲಿ ಮಾನವೀಯ ನೆಲೆಯಲ್ಲಿ ಕೆಲಸ ಕೊಡಲಾಗಿದೆ.ಭಾರತೀಯ ರೈಲ್ವೆ ಇಲಾಖೆಯಲ್ಲಿ ಈಗ ಹತ್ತು ತಿಂಗಳ ಮಗುವಿಗೆ ಕೆಲಸ ಕೊಡಲಾಗಿದೆ. ಇತ್ತೀಚೆಗೆ ಅಷ್ಟೇ ಈ ಮಗು ತನ್ನ ತಂದೆ ತಾಯಿಯನ್ನು ಅಪಘಾತದಲ್ಲಿ ಕಳೆದುಕೊಂಡಿದೆ. ಈ ಮಗುವಿನ ತಂದೆ ರಾಜೇಂದ್ರ ಕುಮಾರ್ ಎನ್ನುವವರು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡ್ತಾ ಇದ್ರು ರೈಲ್ವೆ ಇಲಾಖೆಯಲ್ಲಿ ನೌಕರ ಆಗಿದ್ದರು. ಜೂನ್ 1 ನೆ ತಾರೀಕು ರಸ್ತೆ ಅಪಘಾತ ಆಗುತ್ತೆ. ಆ ಅಪಘಾತದಲ್ಲಿ ರಾಜೇಂದ್ರ ಕುಮಾರ್ ಮತ್ತು ಅವರ ಪತ್ನಿ ಜೊತೆಗೆ ಈ ಹತ್ತು ತಿಂಗಳ ಮಗು ಕೂಡ ಇತ್ತು. ಆದ್ರೆ ಎಂದು ಆದ ಭೀಕರ ರಸ್ತೆ ಅಪಘಾತದಲ್ಲಿ ರಾಜೇಂದ್ರ ಕುಮಾರ್ ಮತ್ತು ಅವರ ಪತ್ನಿ ಸಾವನ್ನು ಅಪ್ಪುತ್ತಾರೆ.
ಆದ್ರೆ ಮಗು ಆ ಅಪಘಾತದಲ್ಲಿ ಪವಾಡ ಸದೃಶ್ಯ ರೂಪದಲ್ಲಿ ಬದುಕಿ ಉಳಿದಿದೆ. ಈಗ ಮಗು ತಂದೆ ತಾಯಿಯನ್ನು ಕಳೆದುಕೊಂಡ ಅನಾಥವಾಗಿದೆ. ತಂದೆ ರಾಜೇಂದ್ರ ಕುಮಾರ್ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡ್ತಾ ಇದ್ರು. ಆದ್ರೆ ಈಗ ಆ ಮಗುವಿಗೆ ಏನು ಮಾಡಬಹುದು ಎಂದು ಯೋಚನೆ ಮಾಡಿ. ರೈಲ್ವೆ ಇಲಾಖೆಯಲ್ಲಿ ಮುಖ್ಯಸ್ಥರು ಅನುಕಂಪದ ಆಧಾರದ ಮೇಲೆ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಟ್ಟಿದ್ದಾರೆ. ಅಂದ್ರೆ ಹತ್ತು ತಿಂಗಳ ಮಗೂಗೆ ಪ್ರತಿ ತಿಂಗಳೂ ಆ ಮಗುವಿನ ತಂದೆಗೆ ಎಷ್ಟು ಸಂಬಳ ಬರುತ್ತಿತ್ತು ಅದನ್ನು ಆ ಮಗುವಿನ ಅಕೌಂಟ್ ಗೆ ಜಮಾ ಮಾಡ್ತಾ ಹೋಗ್ತಾರೆ. ಮಗೂಗೆ ಈಗ ಹತ್ತು ತಿಂಗಳು. ಈ ಹತ್ತು ತಿಂಗಳಿಂದ ಮಗು 18 ವರ್ಷದ ವರೆಗೆ ಮಗುವಿನ ತಂದೆಗೆ ಬರುವಂತಹ ಸಂಪೂರ್ಣ ಸಂಬಳವನ್ನು ಮಗುವಿನ ಅಕೌಂಟ್ ಗೆ ಜಮಾ ಮಾಡ್ತಾರೆ. ಅಂದ್ರೆ ಮಗು ಏನೊ ಮಾಡದೆ 18 ವರ್ಷದ ವರೆಗೆ ತಂದೆಯ ಸಂಬಳವನ್ನು ಪಡಿತಾ ಇರುತ್ತೆ. ಅಲ್ಲಿಯವರೆಗೂ ಮಗುವಿನ ಯಾರಾದರೂ ಕೇರ್ ಟೇಕರ ನೋಡಿಕೊಳ್ತರೆ. ಈ ಕಾರಣದಿಂದ ಮಗುವನ್ನು ಯಾರೇ ಅವರ ಸಂಬಂಧಿಕರು ನೋಡಿಕೊಂಡರು ಯಾವುದೇ ಬರ್ಡನ್ ಇರೋದಿಲ್ಲ.
ಯಾಕಂದ್ರೆ ಆ ಮಗುವಿನ ಖರ್ಚು ವೆಚ್ಚ ತಂದೆಯ ಸಂಬಳ ದಿಂದ ಆಗುತ್ತೆ. ಆಮೇಲೆ ಮಗೂಗೆ 18 ವರ್ಷ ಆದ ಮೇಲೆ ತಂದೆಯ ಕೆಲಸವನ್ನು ಆ ಮಗೂಗೆ ಕೊಡಲಾಗುತ್ತದೆ. ಮಾನವೀಯ ನೆಲೆಯ ಆಧಾರದ ಮೇಲೆ ರೈಲ್ವೆ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ. ಈಗ ಈ ಆರ್ಡರ್ ನ ಪಾಸ್ ಮಾಡಲಾಗಿದೆ. ಮಗುವಿನ ಬೆಳವಣಿಗೆ ಹಾಗೂ ಶಿಕ್ಷಣಕ್ಕೆ ಹಾಗೂ ಅದರ ಜೀವನಕ್ಕೆ ಯಾವುದೇ ತೊಂದರೆ ಆಗಬಾರದು ಎಂದು ಭಾರತೀಯ ರೈಲ್ವೆ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ. ತಂದೆ ಜೂನ್ 1 ರಂದು ತೀರಿ ಹೋಗಿದ್ದಾರೆ. ಅಲ್ಲಿಯವರೆಗೆ ಅವರಿಗೆ ಎಷ್ಟು ಸಂಬಳ ಬರುತ್ತಿತ್ತು ಅಂದ್ರೆ 50-60 ಸಾವಿರ ಎಷ್ಟೇ ಸಂಬಳ ಇರಲಿ ಆ ಸಂಪೂರ್ಣ ಹಣವನ್ನು ಮಗುವಿನ ಖಾತೆಗೆ ಜಮಾ ಮಾಡಿ ನಂತರ 18 ವರ್ಷದ ಬಳಿಕ ತಂದೆಯ ಕೆಲಸವನ್ನು ಮಗುವಿಗೆ ಕೊಡುವ ಮುಖ್ಯ ನಿರ್ಧಾರಕ್ಕೆ ರೈಲ್ವೆ ಇಲಾಖೆ ಬಂದಿದೆ.