ಪದೇ ಪದೇ ನಿಮ್ಮ ಕಾಲುಗಳಲ್ಲಿ ಊತ ಕಂಡು ಬರುತ್ತಾ ಇದೀಯಾ? ಈ 3 ಕಾಯಿಲೆಗಳಲ್ಲಿ ಯಾವುದಾದರೂ ಒಂದು ಕಾರಣವಾಗಿರಬಹುದು..ತಕ್ಷಣವೇ ಪರೀಕ್ಷಿಸಿ!!!

ಪದೇ ಪದೇ ನಿಮ್ಮ ಕಾಲುಗಳಲ್ಲಿ ಊತ ಕಂಡು ಬರುತ್ತಾ ಇದೀಯಾ? ಈ 3 ಕಾಯಿಲೆಗಳಲ್ಲಿ ಯಾವುದಾದರೂ ಒಂದು ಕಾರಣವಾಗಿರಬಹುದು..ತಕ್ಷಣವೇ ಪರೀಕ್ಷಿಸಿ!!!

ನಮಸ್ತೆ ಪ್ರಿಯ ಓದುಗರೇ, ನಮ್ಮ ಪಾದಗಳಲ್ಲಿ ಯಾಕೆ ಊತ ಕಂಡು ಬರುತ್ತದೆ ಮತ್ತು ಈ ರೀತಿಯಾಗಿ ಕಾಲುಗಳು ಬಾವು ಬರಲು ಯಾವೆಲ್ಲ ರೀತಿಯಾದಂತ ರೋಗ ಲಕ್ಷಣಗಳು ನಮಗೆ ಕಾರಣವಾಗುತ್ತೆ ಎನ್ನುವುದರ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಯೋಣ. ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಹೀಗೆ ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳಿಗೆ ನಮ್ಮ ನ್ಯೂ ನ್ಯೂಸ್ ಕನ್ನಡ ಪೇಜ್ ಲೈಕ್ ಮಾಡಿ ಹಾಗೆ ನಿಮ್ಮ ಪ್ರೀತಿ ಪಾತ್ರರಿಗೆ ಶೇರ್ ಮಾಡಿ. ಸ್ನೇಹಿತರೆ ಅನೇಕ ಬಾರಿ ಪಾದಗಳಿಗೆ ಗಾಯದಿಂದ ಅಥವಾ ಗರ್ಭಾವಸ್ಥೆಯಲ್ಲಿ ಇದ್ದಾಗ ಪಾದಗಳಲ್ಲಿ ಉತಾ ಕಂಡು ಬರುತ್ತದೆ ಮತ್ತು ಸಾಮಾನ್ಯವಾಗಿ ವಯಸ್ಸಾದವರಿಗೆ ಕೂಡ ಪಾದಗಳಲ್ಲಿ ಬಾವು ಕಂಡು ಬರುತ್ತದೆ ಹಾಗೂ ಯಾರಿಗೆ ಸಕ್ಕರೆ ಕಾಯಿಲೆ ಇರುತ್ತೆ ಅಂಥವರಿಗೆ ಕೂಡ ಪಾದಗಳಲ್ಲಿ ಉತ ಕಂಡು ಬರುತ್ತದೆ. ನಿರಂತರವಾಗಿ ಕುರ್ಚಿಯಲ್ಲಿ ಕುಳಿತು ಕಾಲುಗಳನ್ನು ಇಳೆ ಬಿಟ್ಟು ಕುಳಿತರೆ ಅಂತಹ ಜನರಿಗೆ ಸಹ ಕಾಲುಗಳು ಬಾವು ಬರುತ್ತದೆ. ನಿಮಗೂ ಕೂಡ ನಿರಂತರವಾಗಿ ಪಾದಗಳಲ್ಲಿ ಬಾವು ಕಂಡು ಬರುತ್ತಾ ಇದ್ರೆ ನೀವು ಅದನ್ನು ನಿರ್ಲಕ್ಷ್ಯ ಮಾಡಬೇಡಿ.

 

ಯಾಕೆಂದ್ರೆ ಕಾಲುಗಳ ಪಾದಗಳಲ್ಲಿ ಬಾವು ಕಂಡು ಬರುವ ಸಮಸ್ಯೆ ಇನ್ನಿತರ ಅನಾರೋಗ್ಯದ ಸಮಸ್ಯೆಗಳನ್ನು ಕೂಡ ಸೂಚಿಸುತ್ತದೆ. ಅವುಗಳು ಯಾವುವು ಅಂದ್ರೆ ಮೊದಲನೆಯದಾಗಿ ನಿಮ್ಮ ಕಿಡ್ನಿಯ ಆರೋಗ್ಯ ಸರಿಯಾಗಿ ಇಲ್ಲದಿದ್ದರೆ ಈ ರೀತಿಯಾಗಿ ಕಾಲುಗಳಲ್ಲಿ ಊತ ಕಂಡು ಬರುತ್ತದೆ. ಹೌದು ನಮ್ಮ ಮೂತ್ರ ಪಿಂಡಗಳು ರಕ್ತದಲ್ಲಿ ಇರುವಂಥ ಸಂಗ್ರಹವಾದ ಕೊಳೆಯನ್ನು ಫಿಲ್ಟರ್ ಮಾಡುವ ಕೆಲ್ಸ ಮಾಡುತ್ತೆ. ಮೂತ್ರ ಪಿಂಡಗಳು ಸರಿಯಾಗಿ ಕೆಲ್ಸ ಮಾಡದೆ ಇದ್ರೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ದಂತ ಪರಿಸ್ಥಿತಿ ನಮ್ಮ ರಕ್ತದಲ್ಲಿನ ಹೆಚ್ಚುವರಿ ಸೋಡಿಯಂ ಅಂಶದ ವಿಸರ್ಜನೆಗೆ ಕಾರಣ ಆಗುತ್ತೆ. ಇದು ನಮ್ಮ ದೇಹದಲ್ಲಿನ ನೀರಿನ ಪ್ರಮಾಣವನ್ನು ಹೆಚ್ಚಿಸುತ್ತದೆ. ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗ ಎಡಿಮ ಸಮಸ್ಯೆ ಉಂಟಾಗುತ್ತೆ. ನಮ್ಮ ದೇಹ ಕುಳಿತ ತಕ್ಷಣ ನೀರನ್ನು ಕೆಳ ಭಾಗಕ್ಕೆ ಎಳೆಯುತ್ತೆ ಆದ್ದರಿಂದ ನಿಮ್ಮ ಪಾದಗಳಲ್ಲಿ ಈ ರೀತಿಯಾದ ಬಾವು ಕಂಡು ಬರುತ್ತದೆ. ಇನ್ನೂ ಯಾರಿಗೆ ಲಿವರ್ ಸಮಸ್ಯೆ ಇರುತ್ತೆ.

 

ಲಿವರ್ ಗೆ ಸಂಬಂಧ ಪಟ್ಟ ಸಮಸ್ಯೆಗಳಿಂದ ಬಳಲುತ್ತಿದೆ ಅಂಥವರಿಗೆ ಕೂಡ ಕಾಲುಗಳು ಓಡಿಕೊಳ್ಳುತ್ತ ಇರುತ್ತೆ. ಮತ್ತು ಯಾರು ಹೆಚ್ಚಿನ ಪ್ರಮಾಣದಲ್ಲಿ ಈ ಆಲ್ಕೋಹಾಲ್ ಸೇವನೆ ಮಾಡುತ್ತಿದ್ದರೆ ಅಂಥವರು ನಿಮ್ಮ ಲಿವರ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಯಾಕಂದ್ರೆ ನೀವು ಆಲ್ಕೋಹಾಲ್ ಸೇವನೆ ಮಾಡಿದ್ದಾಗ ನಿಮ್ಮ ಲಿವರ್ ಹೆಚ್ಚು ಹಾಳಾಗಿ ಇದರಿಂದ ನಿಮ್ಮ ಲಿವರ್ ನ ಕಾರ್ಯ ವ್ಯವಸ್ಥೆ ಕೂಡ ಹಾಳಾಗುತ್ತೆ. ಯಾರು ಹೆಚ್ಚು ಆಲ್ಕೋಹಾಲ್ ಸೇವನೆ ಮಾಡುತ್ತಾರೆ ಹೊಟ್ಟೆ ಹಾಗೂ ಕಾಲುಗಳಲ್ಲಿ ಹೆಚ್ಚು ದ್ರವ ಶೇಕರ ಆಗುತ್ತೆ. ಇದು ನಿಮ್ಮ ಕಾಲು ಉತಕ್ಕೇ ಕೂಡ ಕಾರಣವಾಗಬಹುದು. ಇನ್ನೂ ಈ ಕಾಳು ಬಾವಿಗೆ ಇನ್ನೊಂದು ಮುಖ್ಯ ಕಾರಣ ಅಂದ್ರೆ ಕೆಲವೊಮ್ಮೆ ನಮ್ಮ ಹೃದಯ ಸರಿಯಾಗಿ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದೇ ಇದ್ದರೆ ಅಂತಹ ಸಂದರ್ಭದಲ್ಲಿ ಕಾಲುಗಳ ಬಾವು ಉಂಟಾಗುತ್ತದೆ. ನಿಮ್ಗೆ ಏನಾದರೂ ಈ ರೀತಿಯ ಲಕ್ಷಣ ಕಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಆರೋಗ್ಯ