ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಉದ್ಯಮಿ ವಿಜಯ್ ಮಲ್ಯ ಗೆ 4 ತಿಂಗಳು ಜೈಲು 2000 ರೂ ನಗದು ದಂಡ ವಿಧಿಸಿದ ಸುಪ್ರೀಂ ಕೋರ್ಟ್.

ಕಂಟಂಪ್ಟ್ ಆಫ್ ಕೋರ್ಟ್ ಕೇಸ್ ಅಂದ್ರೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಉದ್ಯಮಿ ವಿಜಯ್ ಮಲ್ಯ ಗೆ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಹೀಗಂತ ಖುದ್ದು ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿರುವುದು ವಿಜಯ್ ಮಲ್ಯ ಗೆ ದೊಡ್ಡ ತಲೆ ನೋವಾಗಿದೆ. ಮಧ್ಯದ ದೊರೆ ವಿಜಯ್ ಮಲ್ಯ ಅವರಿಗೆ ನ್ಯಾಯಾಂಗ ನಿಂದನೆ ಅಡಿ ನಾಲ್ಕು ತಿಂಗಳ ಜೈಲು ಶಿಕ್ಷೆ ಹಾಗೂ ಎರಡು ಸಾವಿರ ರೂಪಾಯಿ ದಂಡ ವಿಧಿಸಿ ಸುಪ್ರೀಂ ಕೋರ್ಟ್ ಸೋಮವಾರ ತೀರ್ಪನ್ನು ನೀಡಿದೆ. ಈ ಪ್ರಕರಣದಲ್ಲಿ ಶಿಕ್ಷೆ ಅತ್ಯಗತ್ಯ. ಮಲ್ಯ ಅವರು ಯಾವುದೇ ಪಶ್ಚಾತಾಪ ತೋರಿಸಲಿಲ್ಲ ಅಂತ ಸುಪ್ರೀಂ ಕೋರ್ಟ್ ನ್ಯಾಯಾಲಯ ಹೇಳಿದೆ. ನ್ಯಾಯ ಮೂರ್ಥಿಗಳಾದ ಯು ಯು ಲಲಿತಾ ಎಸ್ ರವೀಂದ್ರ ಭಟ್ ಮತ್ತು ಪೀ ಎಸ್ ನರಸಿಂಹ ಒಳಗೊಂಡಂತಹ ಸುಪ್ರೀಂ ಕೋರ್ಟ್ ಪೀಠವು ಕಳೆದ ಮಾರ್ಚ್ 10 ರಂದು ಮಧ್ಯದ ದೊರೆ ವಿಜಯ್ ಮಲ್ಯ ವಿಚಾರಣೆ ಡೆಡ್ ವಾಲ್ ನ ತಲುಪಿದೆ ಅಂತ ಪ್ರಕರಣದಲ್ಲಿ ತನ್ನ ಆದೇಶವನ್ನು ಕಾಯ್ದಿರಿಸಿತ್ತು.

 

ಪ್ರಕರಣದ ಅಂಶಗಳ ಕುರಿತು ಹಿರಿಯ ವಕೀಲರ ವಾದಗಳನ್ನು ಆಲಿಸಿದ ನಂತರ ಮಾರ್ಚ್ 15 ರೊಳಗೆ ಲಿಖಿತ ಸಲ್ಲಿಕೆಗಳಲ್ಲಿ ಸಲ್ಲಿಸಲು ಮಲ್ಯ ಅವರನ್ನು ಪ್ರತಿನಿಧಿಸುತ್ತಿರುವ ವಕೀಲರಿಗೆ ಆದೇಶವನ್ನು ಹೊರಡಿಸಿತ್ತು. ವೈಯಕ್ತಿಕವಾಗಿ ಅಥವಾ ವಕೀಲರ ಮೂಲಕ ಹಾಜರಾಗಲು ಮಲ್ಯ ಅವರಿಗೆ ಹಲವು ಅವಕಾಶಗಳನ್ನು ನೀಡಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಕಳೆದ ವರ್ಷ ನವೆಂಬರ್ 30 ರಂದು ನಿರ್ದಿಷ್ಟ ನಿರ್ದೇಶನಗಳನ್ನು ನೀಡಲಾಗಿತ್ತು. 9 ಸಾವಿರ ಕೋಟಿಗೂ ಅಧಿಕ ಮೊತ್ತದ ಸಾಲ ಮರು ಪಾವತಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶವನ್ನು ಮಲ್ಯ ಪಾಲಿಸುತ್ತಾ ಇಲ್ಲ ಅಂತ ಆರೋಪಿಸಿ ಸ್ಟೇಟ್ ಬ್ಯಾಂಕ್ ಗಳ ಒಕ್ಕೂಟವು ಸುಪ್ರೀಂ ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿತ್ತು. ಅವರು ಆಸ್ತಿಯನ್ನು ಬಹಿರಂಗ ಪಡಿಸುತ್ತಿಲ್ಲ ಹಾಗೂ ನಿರ್ಬಂಧ ದ ಆದೇಶಗಳನ್ನು ಉಲ್ಲಂಘಿಸಿ ತಮ್ಮ ಮಕ್ಕಳಿಗೆ ವರ್ಗಾಯಿಸುತ್ತಿದ್ದಾರೆ ಅಂತ ಆರೋಪಿಸಲಾಗಿದೆ.

 

ಕಳೆದ 2017 ರ ನ್ಯಾಯಾಂಗ ನಿಂದನೆ ಪ್ರಕರಣಕೆಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಉದ್ಯಮಿ ವಿಜಯ್ ಮಲ್ಯ ಬೇಸರ ವ್ಯಕ್ತ ಪಡಿಸಿದ್ದಾರೆ. ಬ್ರಿಟನ್ ನಲ್ಲಿ 5 ವರ್ಷಗಳಿಂದ ನೆಲೆಸಿರುವ ಮಾಜಿ ಕಿಂಗ್ ಫಿಶರ್ ಏರ್ ಲೈನ್ಸ್ a ಮುಖ್ಯಸ್ಥ ವಿಜಯ್ ಮಲ್ಯ ಗೆ ಸೋಮವಾರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನಾಲ್ಕು ತಿಂಗಳ ಜೈಲು ಶಿಕ್ಷೆ ಮತ್ತು 2 ಸಾವಿರ ರೂ ನಗದು ದಂಡವನ್ನು ವಿಧಿಸಲಾಗಿದೆ. ನಾನು ಸ್ವಾಭಾವಿಕವಾಗಿ ನಿರಾಶೆಗೊಂಡಿದ್ದೇನೆ ಅಂತ ಹೇಳುವುದನ್ನು ಹೊರತು ಪಡಿಸಿ ಭಾರತೀಯ ಸುಪ್ರೀಂ ಕೋರ್ಟ್ ನ ತೀರ್ಪಿನ ಬಗ್ಗೆ ನನಗೆ ಯಾವುದೇ ಪ್ರತಿಕ್ರಿಯೆ ಇಲ್ಲ ಅಂತ ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ ಅಂತ ಪಿಟಿ ಐ ಮೂಲ ಹೇಳಿದೆ.

Leave a comment

Your email address will not be published. Required fields are marked *