ಕೆ ಎಲ್ ರಾಹುಲ್ ಹಾಗೂ ಸ್ಟಾರ್ ನಟ ಕನ್ನಡಿಗ ಸುನೀಲ ಶೆಟ್ಟಿ ಮಗಳು ಅತಿಯಾ ಶೆಟ್ಟಿ ಮದುವೆ ಸುದ್ದಿ ಕೇಳಿ ಅಭಿಮಾನಿಗಳು ಫುಲ್ ಖುಷ್!!!

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಕನ್ನಡಿಗ ಕೆ ಎಲ್ ರಾಹುಲ ಬಾಲಿವುಡ್ ಸ್ಟಾರ್ ನಟ ಕನ್ನಡಿಗ ಸುನೀಲ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಬಗ್ಗೆ ಮತ್ತೆ ಸುದ್ದು ಹಬ್ಬಿದೆ. ಈ ಇಬ್ಬರೂ ಪ್ರಣಯ ಪಕ್ಷಿಗಳು ವರ್ಷದಿಂದ ಡೇಟಿಂಗ್ ಅಲ್ಲಿರೋ ಸುದ್ದಿ ಹೊಸದೇನಲ್ಲ. ರಾಹುಲ್ ಅತಿಯಾ ಜೋಡಿ ಎಲ್ಲೆ ಓಡಾಡಿದರೂ ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಇರುತ್ತೆ. ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಅಷ್ಟೇ ಎಂಬ ಮಾತಿನಿಂದ ಈಗ ಪ್ರೇಮ ಮದುವೆ ಮಾತುಕತೆ ತನಕ ಬಂದಿದೆ. ಸಧ್ಯ ಗಾಯಾಳು ಆಗಿರುವ ರಾಹುಲ್ ವಿಶ್ರಾಂತಿ ಪಡೆಯುತ್ತಿದ್ದಾರೆ. ವಿಶ್ವ ಕಪ್ ವೇಳೆಗೆ ಟೀಮ್ ಇಂಡಿಯಾ ಗೆ ಮರಳುವ ವಿಶ್ವಾಸ ಹೊಂದಿದ್ದಾರೆ. ಇಂಡಿಯಾ ಟುಡೇ ವರದಿ ಪ್ರಕಾರ ಅತಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಮುಂದಿನ ಮೂರು ತಿಂಗಳಲ್ಲಿ ಮದುವೆ ಆಗಲಿದ್ದಾರೆ.

 

ಸ್ಟಾರ್ ದಂಪತಿಗಳ ಕುಟುಂಬಗಳು ಇತ್ತೀಚೆಗೆ ಭೇಟಿಯಾಗಿ ಈ ಕುರಿತಂತೆ ಆರಂಭಿಕ ಹಂತದ ಮಾತುಕತೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಮದುವೆಗೆ ಭವ್ಯವಾದ ಸಿದ್ಧತೆಗಳು ಕೂಡ ಆರಂಭವಾಗಿದೆ ಎಂದು ಕುಟುಂಬದ ಆಪ್ತರಿಂದ ತಿಳಿದು ಬಂದಿದೆ. ಎರಡೂ ಕುಟುಂಬಗಳಿಗೆ ಈ ಮದುವೆ ಅದ್ಧೂರಿ ಆಚರಣೆ ಆಗಲಿದೆ ಮತ್ತು ಮದುವೆಯ ಪ್ರತಿಯೊಂದು ವಿವರವನ್ನು ವಧು ವರ ಸ್ವತಃ ನೋಡಿಕೊಳ್ಳುತ್ತಿದ್ದಾರೆ ಅಂತ ಮೂಲ ತಿಳಿಸಿದೆ. ಐಪಿಲ್ 2022 ರ ಸೀಸನ್ ಅಲ್ಲಿ ಲಕ್ನೋ ಸೂಪರ್ ಜೇಮ್ಸ್ ತಂಡವನ್ನು ಮುನ್ನಡೆಸಿದ ಕೆ ಎಲ್ ರಾಹುಲ ನಂತರ ಇಂಗ್ಲೆಂಡ್ ಸರಣಿಯಿಂದ ತಂಡದಿಂದ ಹೊರಗೆ ಉಳಿದಿದ್ದರು. ಸಧ್ಯ ಜರ್ಮನಿಯಲ್ಲಿ ಶಸ್ತ್ರ ಚಿಕಿತ್ಸೆ ಯಶಸ್ವಿ ಆಗಿದ್ದು ಚೇತರಿಸಿಕೊಳ್ಳತ್ತಿದ್ದಾರೆ.

 

ಬಾಲಿವುಡ್ ನ ಖ್ಯಾತ ನಟ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಜೊತೆಗೆ ಬಹಳ ಕಾಲದಿಂದ ಪ್ರೀತಿಯಲ್ಲಿ ಇರುವ ರಾಹುಲ್ ಇತ್ತೀಚಿನ ದಿನಗಳಲ್ಲಿ ಮುಕ್ತವಾಗಿ ಅತಿಯ ಶೆಟ್ಟಿ ಹಾಗೂ ತನ್ನ ನಡುವೆ ಪ್ರೀತಿ ಇದೆ ಎನ್ನುವ ವಿಷಯವನ್ನು ಭಿನ್ನ ಭಿನ್ನವಾಗಿ ಫೋಟೋಗಳನ್ನು ಹಚ್ಚಿಕೊಳ್ಳುವ ಮೂಲಕ ವ್ಯಕ್ತಪಡಿಸಿದ್ದಾರೆ. ಆತಿಯ ಶೆಟ್ಟಿ ಕೂಡ ರಾಹುಲ್ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಇರ್ತಾರೆ. ಎಲ್ಲಾ ಅಂದುಕೊಂಡಂತೆ ಆದ್ರೆ ಅತೀಯ ಶೆಟ್ಟಿ ಹಾಗೂ ಕೆ ಎಲ್ ರಾಹುಲ ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ದಂಪತಿಗಳು ತಮ್ಮ ಪ್ರೀತಿ ವಿಷಯದ ಬಗ್ಗೆ ಹೆಚ್ಚು ಮಾತನಾಡಿಲ್ಲ. ಆದ್ರೆ ಇನ್ಸ್ಟ ಗ್ರಾಂ ಚಿತ್ರಗಳು ಈ ಬಗ್ಗೆ ಹೆಚ್ಚು ಹೇಳುತ್ತಿವೆ. ಎರಡು ಮೂರು ವರ್ಷಕ್ಕಿಂತ ಹೆಚ್ಚು ಕಾಲ ಪ್ರೇಮಲೋಕದಲ್ಲಿ ಇರುವಂಥ ಈ ಇಬ್ಬರು ಈ ವರ್ಷಾಂತ್ಯದಲ್ಲಿ ಮದುವೆ ಆಗ್ತಾರೆ ಎನ್ನುವ ಸುದ್ದಿ ಈಗ ಬಂದಿದೆ.

Leave a comment

Your email address will not be published. Required fields are marked *