ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಅಮರನಾಥ್ ಯಾತ್ರೆ ಈ ಬಾರಿ ದುರಂತ ಯಾತ್ರೆಯಾಗಿ ಪರಿಣಮಿಸಿದೆ. ಮೇಘ ಸ್ಫೋಟದಿಂದ ಶ್ವೇತ ವರ್ಣದ ಶಿವನ ದರ್ಶನ ಪಡೆಯಲು ಹೋದ ಯಾತ್ರಿಗಳು ಉಸಿರು ಚೆಲ್ಲಿದ್ದಾರೆ. ಇನ್ನೂ ಹಲವು ಯಾತ್ರಿಗಳು ಅಪಾಯದಲ್ಲಿ ಸಿಲುಕಿದ್ದಾರೆ. ಇನ್ನೂ ಯಾತ್ರಿಗಳ ರಕ್ಷಣೆಗೆ ಭಾರತೀಯ ಸೇನೆ ಪಣ ತೊಟ್ಟು ನಿಂತಿದೆ. ತಮ್ಮ ಜೀವವನ್ನು ಲೆಕ್ಕಿಸದೆ ರಕ್ಷಣೆ ಮಾಡ್ತಿದೆ. ಪರಶಿವನ ಪವಿತ್ರ ಕ್ಷೇತ್ರ ಅಮರನಾಥ. ಆದ್ರೆ ಕಾಲ ರುದ್ರನ ಕ್ಷೇತ್ರದಲ್ಲಿ ಸಂಭವಿಸಿದ ಮೇಘ ಸ್ಫೋಟ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಸರ್ವೇಶ್ವರನ ದರ್ಶನಕ್ಕೆ ಹೋದವರಲ್ಲಿ ಈಗಾಗಲೇ 16 ಯಾತ್ರಿಗಳು ಜಲ ಸಮಾಧಿ ಆಗಿದ್ದಾರೆ. ರಣ ಬೀಕರ ಪ್ರವಾಹದಲ್ಲಿ ಹಲವು ಯಾತ್ರಿಗಳು ಕಣ್ಮರೆ ಆಗಿದ್ದಾರೆ. ದಕ್ಷಿಣ ಕಾಶ್ಮೀರ ದಲ್ಲಿರುವ ಅಮರನಾಥ ದಲ್ಲಿ ಮೇಘ ಸ್ಫೋಟಕ್ಕೆ ಯಾತ್ರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು 15000 ಕ್ಕ ಹೆಚ್ಚು ಜನರನ್ನು ಈಗಾಗಲೇ ರಕ್ಷಿಸಲಾಗಿದೆ. ಆದ್ರೂ ಇನ್ನೂ ಹಲವಾರು ಯಾತ್ರಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ಕಾನೆಯಾದವರಿಗಾಗಿ NDRF ಕಾರ್ಯಾಚರಣೆ ನಡೆಸುತ್ತಿದೆ.
ಇನ್ನೂ ಕಣಿವೆಗಳಲ್ಲಿ ಕೂಡ ಯಾತ್ರಿಗಳು ಸಿಲುಕಿರುವ ಶಂಖೆ ವ್ಯಕ್ತವಾಗಿದೆ. ಹೀಗಾಗಿ ವಾಯುಪಡೆ ಕೂಡ ರಕ್ಷಣಾ ಕಾರ್ಯದಲ್ಲಿ ತುಂಬಾ ತಲ್ಲೀನ ಆಗಿದೆ. ಆದ್ರೆ ಹವಾಮಾನ ಇಲ್ಲಿ ತೀರಾ ಕೆಟ್ಟದಾಗಿ ಇರುವ ಕಾರಣ ಹೆಲಿಕಾಫ್ಟರ್ ಮೂಲಕ ಸರ್ವೇ ನಡೆಸುವುದು ಕೂಡ ಬಹಳ ಕಷ್ಟವಾಗಿದೆ. ಅಮರನಾಥ್ ಯಾತ್ರೆಗೆ ತೆರಳಿದ್ದ 16 ಜನರು ಈಗಾಗಲೇ ಪ್ರಾಣ ಬಿಟ್ಟಿದ್ದಾರೆ. ಆದ್ರೆ ಈಗ ಮೃತ ಪಟ್ಟವರ ಗುರುತು ಹಚ್ಚುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. 16 ಮೃತ ದೇಹಗಳ ಪೈಕಿ ಇನ್ನೂ 2 ಮೃತ ದೇಹಗಳ ಗುರುತು ಪತ್ತೆ ಹಚ್ಚಲು ಆಗುತ್ತಿಲ್ಲ. ಹೀಗಾಗಿ ಸಧ್ಯ ದೇಹಗಳನ್ನು ಶ್ರೀನಗರದ ಆಸ್ಪತ್ರೆಯಲ್ಲಿ ಇಡಲಾಗಿದೆ. ಇನ್ನೂ ಮೇಘ ಸ್ಫೋಟದಿಂದ ಅಮರನಾಥ್ ನಲ್ಲಿ ಬಾರಿ ದುರಂತ ಸಂಭವಿಸಿರುವ ಕಾರಣ ಹೊಸದಾಗಿ ತೆರಳುವ ಯಾತ್ರಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಅಮರನಾಥ್ ಯಾತ್ರೆಗೆ ತೆರಳಿದ ಬಹುತೇಕ ಕನ್ನಡಿಗರು ಸೇಫ್ ಆಗಿದ್ದಾರೆ. ಇನ್ನೂ ಚಿಕ್ಕಮಗಳೂರಿನಿಂದಾ ತೆರಳಿದ 63 ಯಾತ್ರಿಗಳು ಸುರಕ್ಷಿತವಾಗಿ ಇದ್ದಾರೆ. ಸಾಧ್ಯ ಆರ್ಮಿ ಏರ್ ಬೆಸ್ ನಲ್ಲಿ ಕರ್ನಾಟಕದ ಯಾತ್ರಿಗಳು ಬೀಡು ಬಿಟ್ಟಿದ್ದಾರೆ.