ನಮಸ್ತೆ ಪ್ರಿಯ ಓದುಗರೇ, ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ 20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಅದ್ಭುತ ಹೋರಾಟ ನಡೆಸಿ ಸೋಲು ಅನುಭವಿಸಿದೆ. ಈ ಮೂಲಕ ಆತಿಥೇಯ ತಂಡ ಇಂಗ್ಲೆಂಡ್ ವೈಟ್ ವಾಶ್ ಮುಖ ಬಂಗದಿಂದ ಪಾರಾಗಿದೆ. ಭಾರತದ ಪರವಾಗಿ ಸೂರ್ಯ ಕುಮಾರ್ ಯಾದವ್ ಅಮೋಘ ಪ್ರದರ್ಶನ ನೀಡಿದ್ದು ಭರ್ಜರಿ ಶತಕ ಸಿಡಿಸಿದರು ಅಂತಿಮ ಹಂತದಲ್ಲಿ ಭಾರತ ತಂಡವನ್ನು ಗೆಲುವಿನ ದಂಡೆ ತಲುಪಿಸುವಲ್ಲಿ ವಿಫಲ ಆದ್ರು. ಇಂಗ್ಲೆಂಡ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತ ಆರಂಭದಲ್ಲಿ ಆಗ್ರ ಕ್ರಮಾಂಕದ ಮೂವರು ದಾಂಡಿಗರನ್ನು ಕಳೆದುಕೊಂಡಿತು. ಆ ನಂತರ ಸೂರ್ಯಾಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್ ಅದ್ಭುತ ಜೊತೆಯಾಟ ನೀಡಿದರು. ಶ್ರೇಯಸ್ ಅಯ್ಯರ್ ನಿರೀಕ್ಷಿತ ಪ್ರದರ್ಶನ ನೀಡದೆ ಇದ್ರೂ ಸೂರ್ಯ ಕುಮಾರ್ ಯಾದವ್ ಗೆ ಉತ್ತಮ ಸಾಥ್ ಕೊಡುವಲ್ಲಿ ಯಶಸ್ವಿ ಆದ್ರು. ಭಾರತ ಈ ಪಂದ್ಯದಲ್ಲಿ ಗೆಲ್ಲಲು 216 ರನ್ ಗಳ ಬೃಹತ್ ಗುರಿಯನ್ನು ಪಡೆಯಿತು. ಬ್ಯಾಟಿಂಗ್ ಶುರು ಮಾಡಿದ ಭಾರತ ತಂಡ ಕಳಪೆ ಆರಂಭ ಪಡೆಯಿತು. ಆರಂಭಿಕ ಆಟಗಾರ ರೀಶಬ್ ಪಂತ್ ಒಂದು ರನ್ ಗಳಿಸಿ ವಿಕೆಟ್ ಕಳೆದುಕೊಂಡರೆ ವಿರಾಟ್ ಕೋಹ್ಲಿ ಹಾಗೂ ರೋಹಿತ್ 11 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.
ಹೀಗಾಗಿ 31 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡ ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಂಡಿತು. ನಂತರ ಜೊತೆಯಾಗಿದ್ದು ಶ್ರೇಯಸ್ ಅಯ್ಯರ್ ಹಾಗೂ ಸೂರ್ಯ ಕುಮಾರ್ ಯಾದವ್ ಜೋಡಿ. ಈ ಜೋಡಿ 120 ರನ್ ಗಳ ಜೊತೆಯಾಟ ಕೊಟ್ರೂ. ಸೂರ್ಯ ಕುಮಾರ್ ಯಾದವ್ ಈ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮೂಲಕ ಮಿಂಚಿದ್ದಾರೆ. ಇಂಗ್ಲೆಂಡ್ ಬೌಲರ್ ಗಳ ದಾಳಿಯನ್ನು ಮೈದಾನದ ನಾಲ್ಕು ದಿಕ್ಕಿಗೂ ಅಟ್ಟಿದ ಸೂರ್ಯ ಕುಮಾರ್ ಯಾದವ್ ಏಕಾಂಗಿ ಹೋರಾಟ ನಡೆಸಿದರು. ನಾಲ್ಕನೇ ವಿಕೆಟ್ ಗೆ 120 ರನ್ ಗಳ ಜೊತೆಯಾಟ ಸೂರ್ಯ ಕುಮಾರ್ ಯಾದವ್ ಹಾಗೂ ಅಯ್ಯರ್ ಮಧ್ಯೆ ಬಂದಿದ್ದರೂ ಅದರಲ್ಲಿ ಅಯ್ಯರ್ ಗೆ 28 ರನ್ ಮಾತ್ರ ನೀಡುವುದಕ್ಕೆ ಸಾಧ್ಯ ಆಯಿತು. ಶ್ರೇಯಸ್ ಅಯ್ಯರ್ ವಿಕೆಟ್ ಕಳೆದುಕೊಂಡ ನಂತರ ಹೋರಾಟ ಮುಂದುವರೆಸಿದ ಸೂರ್ಯ ಕುಮಾರ್ ಯಾದವ್ ಸ್ಪೋಟಕ ಶತಕ ಸಿಡಿಸಿದರು. 55 ಎಸೆತ ಎದುರಿಸಿದ ಸೂರ್ಯ ಕುಮಾರ್ ಯಾದವ್ 117 ರನ್ ಗಳಿಸಿ 19 ನೇ ಓವರ್ ನ 5 ನೆ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು ಈ ಮೂಲಕ ಭಾರತ ತಂಡದ ಹೋರಾಟ ವ್ಯರ್ಥ ಆಯಿತು.