ಮನುಷ್ಯ ತಪ್ಪು ಮಾಡೋದು ಸಹಜ , ಮನುಷ್ಯ ತಪ್ಪು ಮಾಡದೆ ನರ ತಪ್ಪು ಮಾಡಲು ಸಾಧ್ಯವಾ? ನಟ ಸುದೀಪ್ ವಿಚಾರದಲ್ಲಿ ಸಹ ಹಾಗೆ ಆಗಿದೆ. ಓರ್ವ ಅದ್ಭುತ ನಟ ಆಗಿ, ರಾಜ್ಯಾದ್ಯಂತ ಕೋಟಿ ಅಭಿಮಾನಿಗಳು ಇರುವ ನಟನಾಗಿ ರಮ್ಮಿ ಆಪ್ ಆಡ್ ಕೊಟ್ಟಿದ್ದು ಯಾವ ಕಾರಣಕ್ಕೂ ಸಮರ್ಥನೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಓರ್ವ ಜವಾಬ್ದಾರಿಯುತ ನಟನಾಗಿ ಜೂಜು ಆಡಿ ಎಂದು ಯಾವುದೇ ಕಾರಣಕ್ಕೂ ಹೇಳಬಾರದು. ಹೌದು! ಒಂದು ಕಾಲದಲ್ಲಿ ನಟ ಸುದೀಪ್ ರಮ್ಮೀ ಆಪ್ ಆಡ್ ಕೊಟ್ರೂ ತೀವ್ರ ವಿರೋಧ ವ್ಯಕ್ತ ಆಯ್ತು ಅದಾದ ನಂತರ ನಟ ಸುದೀಪ್ ಕ್ಷಮೆ ಕೇಳ್ತಾರೆ. ಅದಾದ ನಂತರ ಸುದೀಪ್ ಇಂತಹ ಆಡ್ ಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಇಂತಹ ಸಂದರ್ಭದಲ್ಲಿ ನಟ ಸುದೀಪ್ ರನ್ನ ಟಾರ್ಗೆಟ್ ಮಾಡೋದು ಎಷ್ಟರ ಮಟ್ಟಿಗೆ ಸರಿ. ಎಲ್ಲೋ ಯಾರದ್ದೋ ಸಾವು ಆಯ್ತು ಎನ್ನುವ ಕಾರಣಕ್ಕಾಗಿ ಇವರ ಮೇಲೆ ಗೋಬೇ ಕೂರಿಸುವುದು ಎಷ್ಟರ ಮಟ್ಟಿಗೆ ಸರಿ? ಯಾಕೆ ಈ ಪೀಟಿಕೆ ಅಂದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಆಗುತ್ತಿರುವ ಚರ್ಚೆ ಹಾಗೂ ಬೆಳವಣಿಗೆ ನ ನೀವೆಲ್ಲ ಗಮನಿಸುತ್ತಾ ಇದ್ದೀರಿ. ಅಹೋರಾತ್ರ ಎನ್ನುವಂಥ ಊರ್ವ ವ್ಯಕ್ತಿಗೆ ಒಳ್ಳೆಯ ಅಭಿಮಾನಿ ಬಳಗ ಇತ್ತು ಜೊತೆಗೆ ಅವರ ಬಗ್ಗೆ ಸಹಜವಾದ ಗೌರವ ಇತ್ತು ಆದ್ರೆ ಆ ಮನುಷ್ಯನ ಇತ್ತೀಚಿನ ಕಾಯಕ ಏನಾಗಿದೆ ಅಂದ್ರೆ ನಟ ಸುದೀಪ್ ನ ಟಾರ್ಗೆಟ್ ಮಾಡುವುದು. ಮನಸ್ಸಿಗೆ ಬಂದ ಹಾಗೆ ಇತಿ ಮಿತಿ ಇಲ್ಲದೆ ಬೈಯ್ಯುವುದು. ಇನ್ನೊಬ್ಬರನ್ನು ಶೆಂಡ ಅಂತ ಪದ ಬಳಕೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಅಪ್ಪ ಅಮ್ಮನನ್ನು ಸೇರಿಸಿ ಬಾಯಿಗೆ ಬಂದ ಹಾಗೆ ಬೈಯ್ಯುವುದು ಎಷ್ಟರ ಮಟ್ಟಿಗೆ ಸರಿ? ಹೌದು ಸುದೀಪ್ ತಪ್ಪು ಮಾಡಿದ್ರೂ ಆಮೇಲೆ ಎಚ್ಚೆತ್ತುಕೊಂಡು ಕ್ಷಮೆ ಕೂಡ ಕೇಳಿದ್ರೂ ಕೂಡ ನೀನು ಹಾಗೆ ನೀವು ಹೀಗೆ ಅಂತ ಹೇಳುವುದು ಎಷ್ಟು ಮಟ್ಟಿಗೆ ಸರಿ.
ಈಗ ಅಹೋರಾತ್ರ ಆಯ್ತು ಇವರ ನಂತರ ಶಿಷ್ಯ ಶ್ರೀ ಚರಣ ಸೇವಕ ಎನ್ನುವಂಥ ಒಂದು ಪ್ರೊಫೈಲ್ ಇಂದ ನಿರಂತರವಾಗಿ ಲೈವ್ ವಿಡಿಯೋಗಳು ಬರ್ತಾ ಇದಾವೆ. ಆ ಲೈವ್ ವಿಡಿಯೋಗಳು ಅಂತೂ ಕೇಳಿಸಿಕೊಳ್ಳಲು ಸಾಧ್ಯವಿಲ್ಲ. ಆ ಯುವಕನ ಸಾಮಾಜಿಕ ಕಾಳಜಿ ಮೆಚ್ಚುವಂಥದ್ದು ಜೂಜು ಆಡಬಾರದು ಎನ್ನುವುದು ಆದ್ರೆ ಆತ ಸಾಮಾಜಿಕ ಕಳಕಳಿ ಬೆರೆಯುವಂತ ಸಂದರ್ಭದಲ್ಲಿ ನಟ ಸುದೀಪ್ ಟಾರ್ಗೆಟ್ ಮಾಡುವುದು ಯಾವುದೇ ಕಾರಣಕ್ಕೂ ಸರಿ ಅಲ್ಲ. ಅದರಲ್ಲಿ ಆ ಚರಣ್ ಬಳಸುವ ಪದಗಳು ಯಾರಿಗೋ ಕೇಳಿಸಿಕೊಳ್ಳಲು ಸಾಧ್ಯ ಇಲ್ಲ. ಸಾಮಾಜಿಕ ಜಾಲತಾಣ ಇದೆ ಅಂತ ಈ ರೀತಿ ಮಿಸ್ ಯೂಸ್ ಮಾಡಿಕೊಳ್ಳಲು ಸಾಧ್ಯ ಇಲ್ಲ. ಒಂದು ಹಂತಕ್ಕೆ ಎಲ್ಲರೂ ಸಹಿಸುತ್ತರೆ, ಅದು ಜಾಸ್ತಿ ಆಗುತ್ತಾ ಹೋದಾಗ ಅದನ್ನು ಯಾರಿಂದಲೂ ಸಹಿಸಲು ಸಾಧ್ಯವಿಲ್ಲ. ಆ ಕಾರಣದಿಂದ ಸುದೀಪ್ ಪರವಾಗಿ ನಿರ್ದೇಶಕ ನಂದ ಕಿಶೋರ್ ಹಾಗೂ ಅಭಿಮಾನಿಗಳು ಎಲ್ಲರೂ ಮಾತನಾಡುತ್ತ ಇದ್ದಾರೆ. ಅದ್ರಲ್ಲೂ ಕೂಡ ಈ ಚರಣ್ ಹಾಗೂ ಅಹೋರಾತ್ರ ಲೈವ್ ವಿಡಿಯೋ ಗಮನಿಸಿದಾಗ ಇದೆಲ್ಲವೂ ಉದ್ದೇಶ ಪೂರ್ವ ಅಂತ ಅನಿಸುತ್ತೆ. ನಟ ಸುದೀಪ್ ಅವರ ಅಭಿನಯದ ಸಿನಿಮಾ ರೆಡಿ ಆಗಿ ಸಿನಿಮಾದ ಪ್ರಚಾರ ನಡೀತಿದೆ ಎನ್ನುವ ಸಮಯದಲ್ಲಿ ಈ ತರಹದ ಎಲ್ಲವನ್ನೂ ಸ್ಟಾರ್ಟ್ ಮಾಡಿಕೊಳ್ಳುತ್ತಾರೆ. ವ್ಯಕ್ತಿಗತ ನಿಂದಿಸುವುದು, ವ್ಯಕ್ತಿಯನ್ನು ಕುಗ್ಗಿಸುವ ಕೆಲ್ಸ ಮಾಡುವುದನ್ನು ಮಾಡುತ್ತಾ ಹೋಗ್ತಾರೆ.
ಏನಾಗಿದ್ದು ಘಟನೆ ಅಂದ್ರೆ ಜೂಜು ಆಟದ ಕಾರಣಕ್ಕೆ ತಂದೆ ಮಗನನ್ನೇ ಬಲಿ ಕೊಟ್ರೂ ಅದು ಯಾವ ಕಾರಣಕ್ಕೂ ಸರಿ ಅಲ್ಲ. ತಂದೆ ಐಪಿಲ್ ಬೆಟ್ಟಿಂಗ್ ಆಡ್ತಾ ಇದ್ರು, ಆ ಐಪಿಲ್ ಬೆಟ್ಟಿಂಗ್ ಅಲ್ಲಿ ಸಿಕ್ಕಾಪಟ್ಟೆ ಹಣವನ್ನು ಕಳೆದುಕೊಂಡಿದ್ದು, ಹೀಗಾಗಿ ಮನೆ ಹತ್ರ ಸ್ವಲ್ಪ ಜನ ಬಂದು ಗಲಾಟೆ ಮಾಡಿದ್ದಾರೆ. ಅದನ್ನು ಮಗ ನೋಡಿ ತಾಯಿಯ ಬಳಿ ಹೇಳಿದ್ದಾನೆ ಗಂಡ ಹೆಂಡತಿ ಗಲಾಟೆ ಆಗಿದೆ. ಇದೆಲ್ಲದಕ್ಕೂ ಮಗನೇ ಕಾರಣ ಎಂದು ತಿಳಿದು ಮಗನನ್ನೇ ಸಾಯಿಸುವ ಹಂತಕ್ಕೆ ತಂದೆ ಹೋಗಿರುತ್ತಾನೆ. ಸಾಯಿಸುವ ಉದ್ದೇಶ ಇರಲಿಲ್ಲವೇ ಅಥವಾ ಏನೋ ಎಡವಟ್ಟು ಆಗಿ ಕೊನೆಗೆ ಮಗ ಸತ್ತು ಹೋಗ್ತಾನೆ. ಗಮನಿಸಬೇಕಾದ ಅಂಶವೆಂದರೆ ತಂದೆ ಅಲ್ಲಿ ರಮ್ಮೀ ಆಡ್ತಾ ಇರಲಿಲ್ಲ. ಆತ ಆಡುತ್ತ ಇದ್ದಿದ್ದು ಐಪಿಲ್ ಬೆಟ್ಟಿಂಗ್. ಐಪಿಲ್ ಬೆಟ್ಟಿಂಗ್ ಗೆ ಹಾಗೂ ರಮ್ಮೀ ಆಟಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ನಟ ಸುದೀಪ್ ಬಗ್ಗೆ ಹೀಗೆ ಟಾರ್ಗೆಟ್ ಮಾಡಿ ಮಾತನಾಡಿದರೆ ನಮಗೆ ಪಬ್ಲಿಸಿಟಿ ಸಿಗುತ್ತೆ ವೈರಲ್ ಆದ್ರೆ ನಾಲ್ಕು ಜನಕ್ಕೆ ನಮ್ಮ ಮುಖ ಗೊತ್ತಾಗುತ್ತೆ ಸುದ್ದಿಯಲ್ಲಿ ಇರ್ತೀವಿ ಅನ್ನೋ ಕಾರಣಕ್ಕೆ ಈ ರೀತಿಯಾಗಿ ಮಾಡುತ್ತಿದ್ದಾರೆ ಅಂತ ಅನಿಸುತ್ತಿದೆ.