ಜಾಕ್ವೆಲಿನ್ ಫೆರ್ನಾಂಡಿಸ್ ಸಧ್ಯ ಕರ್ನಾಟಕದವರಿಗೆ ಪರಿಚಯ ಇದ್ದಾರೆ. ರಾ ರಾ ರಕ್ಕಮ್ಮ ಸಾಂಗ್ ಮೂಲಕ ಸಕ್ಕತ್ ಮೋಡಿ ಮಾಡ್ತಾ ಇದಾರೆ. ಇದರ ನಡುವೆ ಒಂದು ಕಡೆಯಿಂದ ಇಡಿ ಅಧಿಕಾರಿಗಳನ್ನು ಎದುರಿಸುತ್ತಿದ್ದಾರೆ. ಒಂದು ಕಡೆ ಸುಖೇಶ್ ಚಂದ್ರಶೇಕರ್ ಎಂಬ ವ್ಯಕ್ತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರ ಜಾಕ್ವೆಲಿನ್ ಸುತ್ತ ಥಳುಕು ಹಾಕಿಕೊಂಡಿದೆ. ಇದು ಒಂದು ಕಡೆ ವಿಚಾರ ಆದ್ರೆ ಮತ್ತೊಂದು ಕಡೆ ಜಾಕ್ವೆಲಿನ್ ಫೆರ್ನಾಂಡಿಸ್ ಸುದ್ದಿ ಆಗಲು ಕಾರಣ ಏನು ಅಂದ್ರೆ ಸುಕೇಶ್ ಚಂದ್ರಶೇಕರ್ ಎಂಬುವವರ ಜೊತೆ ನಂಗೆ ಯಾವ ಸಂಬಂಧ ಇಲ್ಲ. ಆತ ಯಾರು ಅಂತ ಗೊತ್ತೇ ಇಲ್ಲ ಅಂತಿದ್ದ ನಟಿ ಈಗ ಸ್ವತಃ ಜೈಲಿಗೆ ಹೋಗಿ ಸುಖೆಶ್ ಚಂದ್ರಶೇಕರ್ ನ ಭೇಟಿಯಾಗಿ ಬಂದಿದ್ದಾರೆ. ಅವರ ಜೊತೆಗೆ ಅಲ್ಲಿ ಮಾತುಕತೆ ನಡೆಸಿ ಬಂದಿದ್ದಾರೆ. ಕೇವಲ ಜಾಕ್ವೆಲಿನ್ ಮಾತ್ರ ಅಲ್ಲ ಜಾಕ್ವೆಲಿನ್ ಸೇರಿದಂತೆ 12 ನಟಿಯರು ಸುಕೇಶ್ ಚಂದ್ರಶೇಕರ್ ಜೊತೆಗೆ ಜೈಲಿಗೆ ಹೋಗಿ ವೈಯಕ್ತಿಕವಾಗಿ ಒಂದಷ್ಟು ಕಾಲ ಆತನ ಜೊತೆಗೆ ಸಮಯ ಕಳೆದು ಮಾತುಕತೆ ನಡೆಸಿ ಬಂದಿದ್ದಾರೆ. ಹಾಗಾದ್ರೆ ಈ ಸುಕೇಶ್ ಚಂದ್ರಶೇಕರ್ ಅಷ್ಟೊಂದು ಪವರ್ಫುಲ್ ವ್ಯಕ್ತಿನಾ? ಈತ ಯಾವ ಪರಿ ನಟಿಯರನ್ನು ಮೋಡಿ ಮಾಡಿದ್ದ. ಜಾಕ್ವೆಲಿನ್ ಹಾಗೂ ಸುಕೇಶ್ ನಡುವೆ ಇರುವ ಸಂಬಂಧ ಆದ್ರೂ ಏನು? ಈ ಸುಕೇಶ್ ಚಂದ್ರಶೇಕರ್ ಯಾವ ಬೇರೆ ಊರಿನವನಲ್ಲ ಆತ ಕರ್ನಾಟಕದವನು ನಮ್ಮ ಬೆಂಗಳೂರಿನ ಯುವಕ.
ಆತ ಹುಟ್ಟಿದ್ದು ಒಂದು ಮಾಧ್ಯಮ ವರ್ಗದ ಕುಟುಂಬದಲ್ಲಿ. ಅವರ ತಂದೆಗೆ ಮಗನಿಗೆ ಒಳ್ಳೆಯ ಎಜುಕೇಶನ್ ಕೊಡಿಸಬೇಕು ಅಂತಿತ್ತು ಆದ್ರೆ ಸಣ್ಣ ವಯಸ್ಸಿನಲ್ಲೇ ಸುಕೇಶ್ ಗೆ ಹಣದ ವ್ಯಾಮೋಹ ಹೆಚ್ಚಿತ್ತು. ಹಾಗಾಗಿ ಚೆನ್ನೈ ನಲ್ಲಿ 12 ನೇ ತರಗತಿ ವರೆಗೆ ಓದಿ. ಅವನ ಸಂಪೂರ್ಣ ಓದಿಗೆ ಎಳ್ಳು ನೀರು ಬಿಟ್ಟು ತುಂಬಾ ಚಿಕ್ಕ ವಯಸ್ಸಿಗೆ ದೊಡ್ಡ ದೊಡ್ಡವರ ಬಳಿ ರಿಯಲ್ ಎಸ್ಟೇಟ್ ದಂಧೆ ಗೆ ಇಳಿಯುತ್ತಾನೆ. ನಿಧಾನವಾಗಿ ಅದರ ಆಳ ಅಗಲ ತಿಳಿತಾನೆ. ನಂತರ ಸಣ್ಣದಾಗಿ ಕಾರ್ ರೇಸ್ ಇಟ್ಟು ದೊಡ್ಡವರ ಪರಿಚಯ ಸ್ನೇಹ ಗಳಿಸುತ್ತಾನೆ. ಆತ ಬರೀ 17ವರ್ಷಕ್ಕೆ ಕ್ರೈಮ್ ಲೋಕಕ್ಕೆ ಇಳಿತಾನೆ. ದೊಡ್ಡ ದೊಡ್ಡ ಉದ್ಯಮಿಗಳ ಪರಿಚಯ ಗಳಿಸಿ ಅವರ ವೀಕ್ನೆಸ್, ಹಾಗೆ ಆ ಉದ್ಯಮಿಗಳು ಯಾವುದಾದರೂ ಕೋರ್ಟ್ ಸಂಕಷ್ಟಗಳಿಗೆ ಸಿಕ್ಕಿ ಹಾಕಿಕೊಂಡಿದ್ದನ್ನೂ ಬೇರೆ ಬೇರೆ ಮೂಲಗಳಿಂದ ತಿಳಿದುಕೊಳ್ಳುತ್ತಿದ್ದ. ನಂತರ ಯಾವುದೇ ರೀತಿಯ ಅನುಮಾನ ಬರದ ರೀತಿಯಲ್ಲಿ ಹೈಯರ್ ಆಫೀಸರ್ ಅಥವಾ ದೊಡ್ಡ ದೊಡ್ಡ ಕೆಲ್ಸಗಳಲ್ಲಿ ಇರುವ ಹಿರಿಯ ಅಧಿಕಾರಿಗಳ ಹೆಸರಲ್ಲಿ ಶ್ರೀಮಂತರಿಗೆ ಕರೆ ಮಾಡುತ್ತಿದ್ದ. ನೀವು ಕಾನೂನು ಸಂಕಷ್ಟದಲ್ಲಿ ಸಿಲುಕಿದ್ದು ನಿಮ್ಮನ್ನು ಸಂಕಷ್ಟದಿಂದ ಪಾರು ಮಾಡ್ತೀನಿ ನಂಗೆ ನೀವು ಇಂತಿಷ್ಟು ಹಣ ಕೊಡಬೇಕು ಅಂತ ಅವರನ್ನು ತುಂಬಾ ನಯವಾದ ಮಾತುಗಳಿಂದ ಸಂಪೂರ್ಣವಾಗಿ ನಂಬುವ ರೀತಿಯಲ್ಲಿ ಮಾತನಾಡಿ ಮೋಡಿ ಮಾಡಿದ. ಎಲ್ಲಾ ವ್ಯವಾಹರ ಫೋನ್ ಮೂಲಕ ಮಾಡುತ್ತಿದ್ದ.
ಇವನು ಯಾರು ಎಂದು ಅವರು ತಿಳಿಯುವ ಹೊತ್ತಿಗೆ ಎಲ್ಲಾ ದಾಖಲೆಗಳನ್ನು ತಿರುಚಿ ಯಾರು ಅಂತ ಗೊತ್ತಾಗದೆ ಇರುವ ಹಾಗೆ ನೋಡಿಕೊಳ್ಳುತ್ತಿದ್ದ. ಈ ಮೂಲಕ ಚಿಕ್ಕ ವಯಸ್ಸಿಗೆ 100 ಹೆಚ್ಚು ಉದ್ಯಮಿಗಳಿಗೆ ವಂಚನೆ ಮಾಡ್ತಾನೆ. ಕೋಟಿ ಕೋಟಿಯ ಒಡೆಯ ಆಗ್ತಾನೆ. ಫರ್ಸ್ಟ್ ಟೈಂ ಈತ ಅರೆಸ್ಟ್ ಆಗಿದ್ದು 2007 ರಲ್ಲಿ. ಆದ್ರೆ ಜೈಲಿಗೆ ಹೋದ್ರು ಅಲ್ಲಿ ಕೂಡ ಐಷಾರಾಮಿ ಬದುಕನ್ನು ನಡೆಸುತ್ತಾನೆ. ಅಲ್ಲಿ ಯಾವ ಲೆವೆಲ್ ಗೆ ಲಂಚ ಕೊಡ್ತಾನೆ ಅಂದ್ರೆ ಜೈಲಿನ ಸಿಬ್ಬಂದಿ, ಜಡ್ಜ್, ಪೊಲೀಸ್ ರನ್ನು ಕೂಡ ನೀಟಾಗಿ ಬುಕ್ ಮಾಡಿಕೊಳ್ಳುತ್ತಾನೆ. ಕೆಲವೇ ದಿನಗಳಲ್ಲಿ ಜೈಲಿನಿಂದ ಹೊರಗೆ ಬರ್ತಾನೆ. ಆಮೇಲೆ ಲೀನಾ ಎಂಬ ಆಕ್ಟ್ರೆಸ್ ನ ಪ್ರೀತಿಸಿ ಮದುವೆ ಆಗ್ತಾನೆ ಆ ಮೂಲಕ ಬೇರೆ ಬೇರೆ ಹೀರೋಯಿನ್ ಗಳ ಕಾಂಟ್ಯಾಕ್ಟ್ ತೆಗೆದುಕೊಳ್ಳುತ್ತಾನೆ. ಆಗ ಆತನ ಇನ್ನೊಂದು ಶೋಕಿ ಬದುಕು ಆರಂಭ ಆಗುತ್ತೆ. ಇದರ ನಡುವೆ ಆತ ಅನೇಕ ಬಾರಿ ಜೈಲಿಗೆ ಹೋಗಿ ಬಂದು ಮಾಡ್ತಾನೆ ಇರ್ತಾನೆ. ಈ ಸಮಯದಲ್ಲಿ ಜಾಕ್ವೆಲಿನ್ ಮೇಲೆ ಕಣ್ಣು ಹಾಕ್ತಾನೆ. ನಾನು ಸನ್ ನೆಟ್ವರ್ಕ್ ನಲ್ಲಿ ಕೆಲಸ ಮಾಡುವ ಹಿರಿಯ ಕೆಲಸಗಾರ ತಮಿಳುನಾಡಿನ ದಿವಂಗತ ಜಯಲಲಿತಾ ಅವರ ರಿಲೇಟಿವ್ ಅಂತ ಹೇಳಿ ಜಾಕ್ವೆಲಿನ್ ನ ನಂಬಿಸುತ್ತ ಇರ್ತಾನೆ. ಜಾಕ್ವೆಲಿನ್ ಈತನ ಐಷಾರಾಮಿ ಬದುಕು ನೋಡಿ ನಂಬಿಬಿಡುತ್ತಾಳೆ. ಕೋಟ್ಯಾಂತರ ರೂಪಾಯಿ ಬೆಲೆಬಾಳುವ ನೆಕ್ಲೆಸ್, ಕಿವಿ ಒಲೆ, ಬಿಎಡಬ್ಲ್ಯು ಕಾರು, 52 ಲಕ್ಷದ ಕುದುರೆ, 38 ಲಕ್ಷದ ಬೆಕ್ಕು ಇದೆಲ್ಲವನ್ನೂ ಆತ ಜಾಕ್ವೆಲಿನ್ ಗೆ ಕೊಡುತ್ತಾನೆ. ಹೀಗೆ ಜಾಕ್ವೆಲಿನ್ ಜೊತೆ ಒಳ್ಳೆಯ ಬಾಂಧವ್ಯ ಬೆಳೆಯುತ್ತೆ. ಇದೀಗ ನೋರಾ ಫಾತೆಹಿ ಗೆ ಕೂಡ ಐಷಾರಾಮಿ ಕಾರ್ ಕೊಟ್ಟು ಆಕೆಯನ್ನು ಸಹ ತನ್ನ ಬುಟ್ಟಿಯಲ್ಲಿ ಬೀಳಿಸಿಕೊಂಡಿದ್ದಾನೆ ಈ ಭೂಪ.