ಜಮೀರ್ ಅಹ್ಮದ್ ಖಾನ್ ಶಾಸಕ ಸ್ಥಾನ ಗಡಗಡ! ಆಸ್ತಿ ಡೀಟೇಲ್ಸ್ ನೋಡಿ ED ಅಧಿಕಾರಿಗಳು ಶಾಕ್! ಖಾನ್ ವಿರುದ್ಧ FIR..!!!

ನಮಸ್ತೆ ಪ್ರಿಯ ಓದುಗರೇ, ಬೆಂಗಳೂರಿನ ಚಾಮರಾಜ ಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ ಹಾಗೂ ಅವರಿಗೆ ಸಂಬಂಧ ಪಟ್ಟ ಸ್ಥಳಗಳ ಮೇಲೆ ಗುರುವಾರ ಎಸಿಬಿ ಅಧಿಕಾರಿಗಳು ದಾಳಿ ಮಾಡಿದರು. 40 ಕೂ ಅಧಿಕ ಎಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿತ್ತು. ಫ್ರೇಜರ್ ಟೌನ್ ಅಲ್ಲಿರೋ ಮನೆ, ಸಿಲ್ವರ್ ಓಕ್ ಅಪಾರ್ಟ್ಮೆಂಟ್, ಸದಾಶಿವ ನಗರದ ಗೆಸ್ಟ್ ಹೌಸ್, ಬನಶಂಕರಿ ಅಲ್ಲಿರುವ ಜಿ ಕೆ ಅಸೋಸಿಯೇಟ್ ಕಚೇರಿ ಹಾಗೂ ಕಲಾಸಿಪಾಳ್ಯ ದಲ್ಲಿರುವ ನಾಶನಲ್ ಕಚೇರಿ ಮೇಲೆ ದಾಳಿ ಮಾಡಲಾಗಿತ್ತು. ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಅನಾಮಧೇಯ ಮೂಲಗಳಿಂದ ಮಾಹಿತಿ ಸಂಗ್ರಹ ಮಾಡಿತ್ತು. ಜಮೀರ್ ಅಹ್ಮದ್ ಖಾನ್ ಕಳೆದ ಹಣಕಾಸು ವರ್ಷದಲ್ಲಿ ಘೋಷಿಸಿಕೊಂಡ ಆಸ್ಥಿಗಿಂತ ದುಪ್ಪಟ್ಟು ಆಸ್ತಿ ಹೊಂದಿರುವುದರ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತು. ಈ ಹಿನ್ನೆಲೆಯಲ್ಲಿ E D ದಾಳಿ ಮಾಡಿತ್ತು. ಎಸಿಬಿ, ಡಿವೈಎಸ್ಪಿ ಕೆ ರವಿಶಂಕರ ಅವರಿಂದ ದೂರು ದಾಖಲಿಸಿ ತನಿಖೆ ನಡೆಸಿತ್ತು. ಅಕ್ರಮ ಆಸ್ತಿ ಗಳಿಕೆ ಸಂಬಂಧ ಬಸವರಾಜ್ ಅನ್ನುವವರು ದೂರು ದಾಖಲಿಸಿದ್ದು ಈ ತನಿಖೆಯನ್ನು ಕೈಗೊಳ್ಳಲಾಗಿತ್ತು.

 

ಈಗ ಜಮೀರ್ ಅಹ್ಮದ್ ಖಾನ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು , ಶಾಸಕ ಸ್ಥಾನಕ್ಕೆ ಕುತ್ತು ಬರುತ್ತಾ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಂದಹಾಗೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಆದಾಯ ಎಷ್ಟು? ಅವರ ಒಟ್ಟು ಆಸ್ತಿ ಎಷ್ಟು? ಅವರ ಒಟ್ಟು ವೆಚ್ಚ ಎಷ್ಟು ಎನ್ನುವುದರ ಬಗ್ಗೆ ವಿವರವನ್ನು ಕಲೆ ಹಾಕಲಾಗಿದೆ. ಭ್ರಷ್ಟಚಾರ ನಿಗ್ರಹ ಕಾಯ್ದೆ 1988 ಕಾಲಂ 13/1 ಬೀ ಅರ್ 13,2 ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಅದರ ವಿವರ ಹೀಗಿದೆ. ಇಡಿ ದಾಖಲಿಸಿದ ಇಸಿ ಐಎರ್ ತನಿಖೆಯಲ್ಲಿ ಜಮೀರ್ ಅಹ್ಮದ್ ಖಾನ್ ಅವರು 2005 ರಿಂದ 2021 ರ ಅವಧಿಯಲ್ಲಿ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಅಪಾರ ಪ್ರಮಾಣದ ಆಸ್ತಿ ಗಳಿಸಿದ್ದಾರೆ. ಇವರು ಆದಾಯಕ್ಕಿಂತ 87 ಕೋಟಿಯ 44 ಲಕ್ಷದ 5 ಸಾವಿರದ 57 ರೂಪಾಯಿ ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಅಂತ ಎಫ್ಐಆರ್ ನಲ್ಲಿ ಉಲ್ಲೇಖ ಆಗಿದೆ.

Leave a comment

Your email address will not be published. Required fields are marked *