ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ರವೀಂದ್ರ ಜಡೇಜಾ ಪ್ರಸ್ತುತ ಟೀಮ್ ಇಂಡಿಯಾದ ವಿಶ್ವಾಸಾರ್ಹ ಆಟಗಾರರಲ್ಲಿ ಒಬ್ಬರು. ಈ ಹಿಂದೆ ಬೌಲಿಂಗ್ ಮತ್ತು ಫೀಲ್ಡಿಂಗ್ ಅಲ್ಲಿ ಮಾತ್ರ ಮಿಂಚಿದಂತ ಜಡೇಜಾ ಈಗ ಬ್ಯಾಟಿಂಗ್ ಅಲ್ಲಿ ಕೂಡ ಒಳ್ಳೆಯ ಪರ್ಫಾರ್ಮೆನ್ಸ್ ನ ನೀಡುತ್ತಿದ್ದಾರೆ. ಈ ವರ್ಷ ನಡೆದಂತಹ ಐಪಿಲ್ 2022 ರ ಸೀಸನ್ ಅಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿ ಅಧಿಕಾರವನ್ನು ತೆಗೆದುಕೊಂಡಿದ್ದರು. ಆದ್ರೆ ನಾಯಕರಾಗಿ ನಿರೀಕ್ಷಿತ ಪರ್ಫಾರಮೆನ್ಸ್ ನೀಡದ ಕಾರಣ ಸೀಸನ್ ಮಧ್ಯದಲ್ಲಿ ಧೋನಿಗೆ ಜವಾಬ್ದಾರಿ ನೀಡಿದರು. ಬಳಿಕ ಗಾಯದ ಸಮಸ್ಯೆಯಿಂದ ಕೊನೆಯ ಪಂದ್ಯಗಳಿಂದ ಕೂಡ ಇವರು ಹೊರಗೆ ಉಳಿದುಬಿಟ್ಟರು. ಯೆಸ್ ಆದ್ರೆ ಆ ಸಮಯದಲ್ಲಿ ಜಡೇಜಾ ನಾಯಕತ್ವದಿಂದ ಕೆಳಗೆ ಇಳಿಯೋಕೆ ಬಯಸಲಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಆಡಳಿತ ಆಹ್ವನಕರ ರೀತಿಯಲ್ಲಿ ಅವರ ನಾಯಕತ್ವವನ್ನು ತೆಗೆದುಕೊಂಡಿತು ಎಂಬ ಸುದ್ದಿ ಕೂಡ ಹರಿದಾಡುತ್ತಿತ್ತು. ಈ ಘಟನೆ ಜಡೇಜಾ ಗೆ ತೀವ್ರ ನೋವು ಉಂಟು ಮಾಡಿದೆ ಅಂತ ಅವರ ಆಪ್ತ ಒಬ್ಬರು ಹೇಳಿದಾಗ ಅದು ನಿಜಕ್ಕೂ ಸಂಚಲನವನ್ನು ಸೃಷ್ಟಿ ಮಾಡಿತ್ತು. ಆದ್ರೆ ಇತ್ತೀಚೆಗೆ ರವೀಂದ್ರ ಜಡೇಜಾ ಅವರು ತಮ್ಮ ಇನ್ಸ್ತಾ ಗ್ರಾಮ್ ಖಾತೆಯಿಂದ csk ಪರ ಹಾಕಿದ್ದ ಪೋಸ್ಟ್ ಗಳನ್ನೂ ಡಿಲೀಟ್ ಮಾಡಿದ್ದಾರೆ.
ಚೆನ್ನೈ ಜೊತೆಗಿನ ಸಂಬಂಧವನ್ನು ಜಡೇಜಾ ಸಂಪೂರ್ಣವಾಗಿ ಕಟ್ ಮಾಡಿಕೊಂಡಿದ್ದಾರೆ ಎನ್ನುವುದು ವರದಿಗಳು. ಮುಂದಿನ ವರ್ಷದ ಐಪಿಲ್ ನಲ್ಲಿ ಜಡೇಜಾ ಚೆನ್ನೈ ಹೊರತುಪಡಿಸಿ ಬೇರೆ ಫ್ರಾಂಚೈಸಿ ಗಾಗಿ ಆಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. 2022 ರ ಐಪಿಲ್ ಸೀಸನ್ ನಲ್ಲಿ ಜಡೇಜಾ 10 ಪಂದ್ಯಗಳನ್ನು ಆದಿದ್ರು. ಅದರಲ್ಲಿ 116 ರನ್ ಗಳನ್ನು ಗಳಿಸಿದ್ದಾರೆ. ಬೌಲಿಂಗ್ ಅಲ್ಲಿ ಕೇವಲ 5 ವಿಕೆಟ್ ಮಾತ್ರ ಪಡೆದುಕೊಂಡಿದ್ದಾರೆ. ಐಪಿಲ್ 2022 ರ ಸೀಸನ್ ಗೆ ಮುಂಚಿತವಾಗಿ ಜಡೇಜಾ ಗೆ 16 ಕೋಟಿ ರೂ ನೀಡಿ ಚೆನ್ನೈ ತಂಡ ಜಾರ್ ಜಡೇಜಾ ನ ರಿಟೆನ್ ಮಾಡಿಕೊಂಡಿತ್ತು. ಮುಂದಿನ ಸೀಸನ್ ಅಲ್ಲಿ ರವೀಂದ್ರ ಜಡೇಜಾ ಯಾವ ತಂಡದ ಪರ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ನಿಮಗೆ ಏನು ಅನ್ಸುತ್ತೆ ಮುಂದಿನ ಸೀಸನ್ ಅಲ್ಲಿ ಜಡೇಜಾ ಯಾವ ತಂಡದಲ್ಲಿ ಇರಬೇಕು ಎನ್ನುವುದನ್ನು ಕಾಮೆಂಟ್ ಸೆಕ್ಷನ್ ಅಲ್ಲಿ ತಿಳಿಸಿ.