ಸಿಗಂದೂರು ಬ್ರಿಡ್ಜ್ ದೇಶದ ಎರಡನೇ ಅತೀ ದೊಡ್ಡ ಸೇತುವೆ.!!!

ಸಿಗಂದೂರು ಬ್ರಿಡ್ಜ್ ದೇಶದ ಎರಡನೇ ಅತೀ ದೊಡ್ಡ ಸೇತುವೆ.!!!

ರಾಜ್ಯದ ಪ್ರಮುಖ ಶಕ್ತಿ ಪೀಠ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ದೇಶದ ಎರಡನೇ ಅತಿ ದೊಡ್ಡ ಕೇಬಲ್ ಬ್ರಿಡ್ಜ್ ನಿರ್ಮಾಣಕ್ಕೆ ಇದ್ದ ತೊಡಕುಗಳನ್ನು ಮೀರಿ ಸೇತುವೆಯ ಪ್ರಮುಖ ಕಾಮಗಾರಿ ದಾಖಲೆ ಸಮಯದಲ್ಲಿ ಪೂರ್ಣಗೊಂಡಿದೆ. ಬ್ರಿಡ್ಜ್ ನಿರ್ಮಾಣಕ್ಕೆ ಲಿಂಗನಮಕ್ಕಿ ಜಲಾಶಯದ ನೀರು ತೊಡಕಾಗುತ್ತದೆ ಎಂದು ಹೇಳಲಾಗುತ್ತಿತ್ತು. ಈಗ ಎಲ್ಲಾ ತೊಡಕುಗಳನ್ನು ದಾಟಿ ಸೇತುವೆಯ ಪ್ರಮುಖ ಕಾಮಗಾರಿ ಆದ ಫೈಲ್ ಕ್ಯಾಪ್ ಅಳವಡಿಕೆಯ ನ್ನ ಪೂರ್ಣಗೊಳಿಸಲಾಗಿದೆ. ಇದರಿಂದ ಸೇತುವೆ ನಿರ್ಮಾಣಕ್ಕೆ ಇನ್ನೂ ಮುಂದೆ ಯಾವುದೇ ಅಡೆತಡೆ ಎದುರಾಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತದೆ. ರಾಜ್ಯದ ಶಕ್ತಿ ಪೀಠಗಳಲ್ಲಿ ಒಂದಾದ ಸಿಗಂದೂರು ಜಲಾಶಯಗಳಿಂದ ಆವೃತ್ತಿ ಆಗುತ್ತಿರುವ ಮಲೆನಾಡಿನ ಹಲವು ಗ್ರಾಮಗಳ ಜನರಿಗೆ ಸಂಪರ್ಕ ಮಾರ್ಗವೇ ದೊಡ್ಡ ಸಮಸ್ಯೆ ಆಗುತ್ತಿತ್ತು. ಆಗ ಸಂಪರ್ಕ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿ ಕಾಮಗಾರಿ ಆರಂಭಿಸಲಾಗಿತ್ತು. ಆದ್ರೆ ಆಗ ಹಲವು ಅಡೆತಡೆಗಳು ಎದುರಾಗಿದ್ದವೂ.

 

ಎರಡು ವರ್ಷಗಳು ಕಳೆದರೂ ಕೂಡ ಐದು ಫೈಲ್ ಕ್ಯಾಪ್ ಮಾತ್ರ ಅಳವಡಿಸಲಾಗಿತ್ತು. ಇನ್ನೂ 14 ಫೈಲ್ ಕ್ಯಾಪ್ ಅಳವಡಿಕೆಯ ಕಾಮಗಾರಿ ಬಾಕಿ ಇತ್ತು. ಬಾಕಿ ಫೈಲ್ ಕ್ಯಾಪ್ ಅಳವಡಿಸಲು ಜಲಾಶಯದ ನೀರಿನ ಮಟ್ಟ 538 ಮೀಟರ್ ಗಿಂತ ತಗ್ಗಿರಬೇಕು ಅಂತ ರಾಷ್ಟ್ರೀಯ ಹೈವೇ ಪ್ರಾಧಿಕಾರ ಬೇಡಿಕೆ ಇಟ್ಟಿತ್ತು. ಇದು ಕೆಪಿಸಿ ಗೆ ನುಂಗಲಾರದ ತುತ್ತಾಗಿತ್ತು. ಕಳೆದ ವರ್ಷ ಕೂಡ ಉತ್ತಮ ಮಳೆಯಾಗಿ 1819 ಅದಿ ಗರಿಷ್ಟ ಮಟ್ಟದ ಜಲಾಶಯದಲ್ಲಿ 1815 ಅಡಿ ವರೆಗೂ ನೀರು ಸಂಗ್ರಹ ಆಗಿತ್ತು. ಇಷ್ಟೊಂದು ನೀರನ್ನು ಒಂದೇ ಬಾರಿಗೆ ಇಳಿಸುವುದು ದೊಡ್ಡ ಸವಾಲಾಗಿತ್ತು. ಕೊನೆಗೂ ಮೇ ತಿಂಗಳಿನಲ್ಲಿ ನೀರು ಇಳಿದು ಕಾಮಗಾರಿಗೆ ಅವಕಾಶ ಸಿಕ್ಕಿದೆ. ಯಾವುದೇ ಸೇತುವೆಗೆ ಫೈಲ್ ಕ್ಯಾಪ್ ಹಾಕುವುದು ಪ್ರಮುಖ ಘಟ್ಟ ಆಗಿರುತ್ತೆ. ಫೈಲ್ ಕ್ಯಾಪ್ ಹಾಕಿದ ನಂತರ ಪಿಲ್ಲರ್ ಗಳನ್ನ ನಿರ್ಮಾಣ ಮಾಡಲಾಗುತ್ತದೆ. ನೂತನ ಮಾದರಿಯ ಸಿಂಗಂದೂರು ಸೇತುವೆಗೆ 19 ಫೈಲ್ ಕ್ಯಾಪ್ ಗಳ ಅವಶ್ಯಕತೆ ಇದೆ. ಸದ್ಯ ಕಾಮಗಾರಿ ಭರದಿಂದ ಸಾಗಿದೆ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ.

ಸುದ್ದಿ