ಪೆಟ್ರೋಲ್ ಗೆ ಇನ್ನೂ 5 ವರ್ಷ ಆಯಸ್ಸು!!! ಭಾರತದಲ್ಲಿ 5 ವರ್ಷಗಳು ಆದ್ಮೇಲೆ ಪೆಟ್ರೋಲ್ ಸಿಗೋದಿಲ್ಲ:ಶಾಕಿಂಗ್ ಹೇಳಿಕೆ ಕೊಟ್ಟ ನಿತಿನ್ ಗಡ್ಕರಿ!!!

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಇಂಧನ ದರ ಏಕೆ ಹೆಚ್ಚಾಗುತ್ತಿದೆ ಎಂಬ ಪ್ರಶ್ನೆಗೆ ಎರಡು ವಿವರಣೆಗಳನ್ನು ಗಮನಿಸಬಹುದು. ಜಾಗತಿಕವಾಗಿ ತೈಲ ಬೆಲೆ ಏರಿಕೆ ಆಗುವುದು ಒಂದು ಕಾರಣವಾದರೆ, ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿದ ತೆರಿಗೆಯಿಂದ ಇಂಧನ ಬೆಲೆ ಏರಿಕೆಯಾಗುವುದು ಇನ್ನೊಂದು ಕಾರಣ ದೇಶದಲ್ಲಿ, ಎರಡು ವಾರಗಳ ಹಿಂದೆ ಇಂಧನ ದರ ಏರಿಕೆಯತ್ತ ಮುಖಮಾಡಲು ತೊಡಗಿತು. ಕಚ್ಚಾ ತೈಲದ ಬೆಲೆ ಐದು ದಿನಗಳ ಹಿಂದೆ, ಮಾರ್ಚ್ ನಂತರದಲ್ಲೇ ಅತೀ ಹೆಚ್ಚು ಏರಿಕೆಯನ್ನು ಕಂಡಿತು. ಇಂದು ಇಂಧನ ದರದಲ್ಲಿ ಯಾವುದೇ ವ್ಯತ್ಯಾಸ ಕಂಡುಬರದಿದ್ದರೂ ಕಳೆದ 17 ದಿನಗಳಲ್ಲಿ, ಪೆಟ್ರೋಲ್ ಲೀಟರ್​ಗೆ 2-3 ರೂ. ಹಾಗೂ ಡೀಸೆಲ್ ಲೀಟರ್​ಗೆ 3 ರೂ. ಏರಿಕೆಯಾಗಿದೆ.

 

ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಬಳಕೆ ನೇ ಇರೋದಿಲ್ಲ ಅಂತ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಪರ್ಯಾಯ ಇಂಧನಗಳತ್ತ ಮುಖ ಮಾಡಿರುವ ಭಾರತ ಬರೋ ವರ್ಷಗಳಲ್ಲಿ ಪೆಟ್ರೋಲ್ ಬಳಕೆಯ ಅನಿವಾರ್ಯತೆ ಇರೋದಿಲ್ಲ ಅಂತ ವಿಶ್ಲೇಷಣೆ ಮಾಡಲಾಗಿದೆ. ಇದಕ್ಕೆ ಪುಷ್ಠಿ ನೀಡುವ ಹಾಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡ ಮುಂದಿನ 5 ವರ್ಷಗಳಲ್ಲಿ ಪೆಟ್ರೋಲ್ ಅನಿವಾರ್ಯತೆ ಯೆ ಇರೋದಿಲ್ಲ ಅಂತ ಹೇಳಿದ್ದಾರೆ. ಮಹಾರಾಷ್ಟ್ರದ ಆಕೊಲಾದಲ್ಲಿ ಪಂಜಾಬ್ ದೇಶಮುಖ್ ಕೃಷಿ ವಿದ್ಯಾ ಪೀಠದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಿರುವ ಅವರು ಮಹಾರಾಷ್ಟ್ರದ ವಿದರ್ಭ ಜಿಲ್ಲೆಯಲ್ಲಿ ತಯಾರಾಗುತ್ತಿರುವ ಜೈವಿಕ ಎಥನಾಲ್ ಅನ್ನು ವಾಹನಗಳಲ್ಲಿ ಬಳಸಲಾಗುತ್ತಿದೆ ಹಸಿರು ಹೈಡ್ರೋಜನ್ ಅಂದ್ರೆ ಹಸಿರು ಜಲಜನಕ ತಯಾರಿಸಬಹುದು ಹಾಗೆ ಇದನ್ನು ಕೆಜಿಗೆ 70 ರೂಪಾಯಿ ಹಾಗೆ ಮಾರಾಟ ಮಾಡಬಹುದು ಎಂದು ಹೇಳಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಪೆಟ್ರೋಲ್ ಖಾಲಿ ಆಗಬಹುದು ಇದರಿಂದ ಪಳೆಯುಳಿಕೆ ಅಂಧನವನ್ನು ನಿಷೇಧ ಮಾಡಲಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

Leave a comment

Your email address will not be published. Required fields are marked *