ದರ್ಶನ್ ಮೇಲಿನ ಮೀಡಿಯಾ ಮುನಿಸು ಯಾವಾಗ ಕೊನೆಯಾಗುತ್ತೆ??

ದರ್ಶನ್ ಮೇಲಿನ ಮೀಡಿಯಾ ಮುನಿಸು ಯಾವಾಗ ಕೊನೆಯಾಗುತ್ತೆ??

ನಮಸ್ತೆ ಪ್ರಿಯ ಓದುಗರೇ, ಕ್ರಾಂತಿ ಸಿನಿಮಾದ ಪಬ್ಲಿಸಿಟಿ ಬಗ್ಗೆ ಅಭಿಮಾನಿಗಳ ಆತಂಕ! ಏನಂದ್ರು ಚಾಲೆಂಜಿಂಗ್ ಸ್ಟಾರ್? ದರ್ಶನ್ ಮತ್ತು ಮೀಡಿಯಾ ನಡುವೆ ನಡೆಯುತ್ತಿರುವ ಜಟಾಪಟಿ ಸಧ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಟೀವಿಗಳಲ್ಲಿ ಬಿ ಟಿವಿ ಪತ್ರಿಕೆಗಳಲ್ಲಿ ಉದಯವಾಣಿ ಮತ್ತು ವಿಜಯ ಕರ್ನಾಟಕ ಮಾತ್ರ ದರ್ಶನ್ ಗೆ ಸಂಭಂದಿಸಿದ ವಿಚಾರಗಳನ್ನು ಪ್ರಸಾರ ಮಾಡುತ್ತಿವೆ. ಕ್ರಾಂತಿ ಸಿನಿಮಾ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಈ ಸಿನಿಮಾದ ಕುರಿತು ಸೋಶಿಯಲ್ ಮೀಡಿಯಾ ದಲ್ಲಿ ಸಣ್ಣ ಪುಟ್ಟ ಸುದ್ಧಿ ಓಡಾಡುತ್ತ ಇರ್ತವೆ. ಅದು ಬಿಟ್ಟರೆ ಕನ್ನಡದ ಉಳಿದ ಯಾವ ಮೀಡಿಯಾಗಳು ದರ್ಶನ್ ಬಗೆಗಾಗಲೀ ಕ್ರಾಂತಿ ಸಿನಿಮಾ ಕುರಿತಾದ ನ್ಯೂಸ್ ಮಾಡುತ್ತಿಲ್ಲ. ಮಾಧ್ಯಮಗಳ ಮುಖ್ಯಸ್ಥರು ವರದಿಗಾರರು ಖಡಾ ಖಂಡಿತವಾಗಿ ದರ್ಶನ್ ವಿಚಾರಗಳನ್ನು ಬ್ಯಾನ್ ಮಾಡಿದ್ದಾರೆ. ಇನ್ನೇನು ಸರಿ ಹೋಗಬಹುದು ಅಂತ ಕಾದಿದ್ದೆ ಬಂತು. ಆದ್ರೆ ಯಾವ ಕೋನದಲ್ಲಿ ಕದನ ವಿರಾಮ ಘೋಷಣೆ ಆಗುವ ಲಕ್ಷಣ ಕಾಣುತ್ತಿಲ್ಲ. ಈ ಹೊತ್ತಿನಲ್ಲಿ ಖುದ್ದು ದಾಸನ ಅಭಿಮಾನಿಗಳು ಕ್ರಾಂತಿಗೆ ಪ್ರಚಾರದ ಸಮಸ್ಯೆ ಎದುರಾಗಬಹುದು ಕನ್ನಡ ಮಾಧ್ಯಮ ಕ್ರಾಂತಿಯನ್ನು ಬೆಂಬಲಿಸುವುದಿಲ್ಲ.

 

ಮತ್ತೊಂದೆಡೆ ಬಾಸ್ ಗೆ ಬೇರೆ ನಟರಂತೆ ಪ್ರಚಾರ ತಂಡವೂ ಇಲ್ಲ. ನಾವೆಲ್ಲ ಕ್ರಾಂತಿಯಿಂದಿಗೆ ನಿಲ್ಲಬೇಕು. ಮತ್ತು ಯಶಸ್ವಿಗೊಳಿಸಬೇಕು ಎನ್ನುವ ಪೋಸ್ಟ್ ಒಂದನ್ನು ಎಲ್ಲೆಡೆ ವೈರಲ್ ಮಾಡಿದ್ದಾರೆ. ಇದನ್ನು ದರ್ಶನ ಅಭಿಮಾನಿಗಳು ಎಲ್ಲಾ ಕಡೆ ಹರಿ ಬಿಟ್ರಾ ಅಥವಾ ಕ್ರಾಂತಿ ಸಿನೆಮಾದ ನಿರ್ಮಾಪಕಿ ಶೈಲಜಾ ನಾಗ್ ಅವರು ಕುತಂತ್ರ ರೂಪಿಸಿದ್ದಾರಾ ಗೊತ್ತಿಲ್ಲ. ಮುಂದೆ ಎಲ್ಲಿ ತಮ್ಮ ಚಿತ್ರಕ್ಕೆ ಪಬ್ಲಿಸಿಟಿ ಸಿಗುವುದಿಲ್ಲ ವೂ ಅನ್ನೋ ಅಂದಾಜಿನಲ್ಲಿ ಶೈಲಜಾ ಮೇಡಂ ಪ್ರಚಾರಕ್ಕಾಗಿ ಈಗಾಗಲೇ ಪರ್ಯಾಯ ವ್ಯವಸ್ಥೆ ಪ್ರಾರಂಭಿಸಿರಬಹುದು. ಅದೇನೇ ಇರಲಿ ಅಭಿಮಾನಿಗಳ ಹೆಸರಲ್ಲಿ ಓಡಾಡುತ್ತ ಇರುವ ಪೋಸ್ಟ್ ಗೆ ಖುದ್ದು ದರ್ಶನ್ ಕೂಡ ಪ್ರತಿಕ್ರಿಯಿಸಿದ್ದಾರೆ. ನಾ ನಡೆಯೋ ಹಾದಿಯಲ್ಲಿ ನನ್ನೊಂದಿಗೆ ಸದಾ ನಿಲ್ಲುವ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ಯಾವತ್ತೋ ಚಿರಋಣಿ. ನೀವು ನನಗೆ ನೀಡುತ್ತಿರುವ ಸಾಥ್ ಗೆ ನಾನು ಅಭಾರಿ ಆಗಿದ್ದೇನೆ. ನಿಮ್ಮ ಪ್ರೀತಿಯನ್ನು ವರ್ಣಿಸಲು ಬಹು ಕೋಟಿ ಪದಗಳು ಸಾಲದು. ನಿಮ್ಮ್ ದಾಸ ದರ್ಶನ್ ಅಂತ ತಮ್ಮದೇ ಅಫೀಷಿಯಲ್ ಪೇಜ್ ಗಳಲ್ಲಿ ಪೋಸ್ಟ್ ಮಾಡಿದ್ದಾರೆ.

 

ಎಂಥೆಂಥ ಮಹಾನ್ ನಟ ನಿರ್ದೇಶಕ ರೆ ತಾವು ಮಾಡಿದ್ದು ತಪ್ಪು ಎನಿಸಿದಾಗ ಮಾಧ್ಯಮಗಳ ಬಳಿ ಕ್ಷಮೆ ಯಾಚಿಸಿದ್ದಾರೆ. ದರ್ಶನ ಮೀಡಿಯಾ ಅವರೊಂದಿಗೆ ಕಿತ್ತಾಡಿಕೊಂಡ ವರ್ಷ ಕಳೆಯುತ್ತಾ ಬಂದಿದೆ. ಈ ಕ್ಷಣಕ್ಕೂ ಕ್ಷಮಿಸಿ ಹೀಗೆಲ್ಲ ಮಾತಾಡಲ್ಲ ಅಂದು ಬಿಟ್ಟಿದ್ದರೆ ಬಹುಶಃ ಈ ಹೊತ್ತಿಗೆ ಎಲ್ಲವೂ ತಿಳಿ ಆಗುತ್ತಿತ್ತು. ಯಾವತ್ತಿನಂತೆ ಒಂದೆರಡು ದಿನ ಮುನಿಸಿಕೊಂಡು ನಂತರ ಸರಿ ಹೋಗುತ್ತಾರೆ ಅಂದುಕೊಂಡಿದ್ದರು ಏನೋ ಡೀ ಬಾಸ್ ಕ್ಷಮೆ ಯಾಚಿಸುವಂತೆ ಇಲ್ಲ. ಯಾವ ಕಾರಣಕ್ಕೂ ನಾನು ಸಾರಿ ಗೀರಿ ಅಂತ ಕೇಳೋದಿಲ್ಲ ಅಂತ ದರ್ಶನ್ ಆಪ್ತರಲ್ಲಿ ಹೇಳಿಕೊಂಡಿದ್ದಾರೆ. ಈ ಮಟ್ಟಿಗೆ ಮೀಡಿಯಾ ದವರಿಗೆ ಯಾರೋ ತೊಡೆ ತಟ್ಟಿರಲಿಲ್ಲ. ಚಾಲೆಂಜಿಂಗ್ ಸ್ಟಾರ್ ಅಂಥದ್ದೊಂದು ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತೋ ಗೊತ್ತಿಲ್ಲ. ದರ್ಶನ್ ಅವರ ಸಿನಿಮಾಗಳಿಗೆ ಇದು ಪ್ಲಸ್ ಆಗುತ್ತಾ ಮೈನಸ್ ಆಗುತ್ತಾ ಅಂತ ಕೂಡ ಈಗ ಹೇಳುವುದು ಕಷ್ಟ. ಆದ್ರೆ ಇವೆಲ್ಲದರ ಸೈಡ್ ಎಫೆಕ್ಟ್ ಮಾತ್ರ ನೇರವಾಗಿ ಕ್ರಾಂತಿ ಸಿನೆಮಾಕ್ಕೆ ತಟ್ಟುವುದು ಗ್ಯಾರಂಟಿ.

ಸುದ್ದಿ