ಉಡುಪಿ ಅಂದ ತಕ್ಷಣ ನಮಗೆ ನೆನಪಾಗೋದು ಉಡುಪಿಯ ಶ್ರೀಕೃಷ್ಣ ಮಠ. ಸಾಮಾನ್ಯವಾಗಿ ಉಡುಪಿಗೆ ಭೇಟಿ ನೀಡಿದ ಜನರು ಉಡುಪಿಯ ಶ್ರೀಕೃಷ್ಣ ಮಠವನ್ನು ಕಣ್ಣು ತುಂಬಿಕೊಂಡು ಬರುತ್ತಾರೆ. ಆದ್ರೆ ಉಡುಪಿಗೆ ಹೋದಾಗ ಶ್ರೀಕೃಷ್ಣ ಮಠದಷ್ಟೇ ಮಹತ್ವ ಇರುವ ಈ ಕ್ಷೇತ್ರಕ್ಕೆ ಕೂಡ ಹೋಗಿ ಬಂದ್ರೆ ಮನಸ್ಸು ಪ್ರಶಾಂತ ಆಗುತ್ತೆ. ಬನ್ನಿ ಹಾಗಾದ್ರೆ ಇವತ್ತಿನ ಲೇಖನದಲ್ಲಿ ಮಧ್ವಾಚಾರ್ಯರ ಜನ್ಮಸ್ಥಳ ಆದ ಪಾಜಕ ಕ್ಷೇತ್ರವನ್ನು ದರ್ಶನ ಮಾಡಿ ಕೃತಾರ್ಥ ಆಗೋಣ. ದ್ವೈತ ಮತದ ಪ್ರತಿಪಾದಕರಾದ ಮಧ್ವಾಚಾರ್ಯರು ಜನಿಸಿದ ಪುಣ್ಯ ಕ್ಷೇತ್ರವೂ ಉಡುಪಿಯ ಸಮೀಪದ ಪಾಜಕ ಎಂಬ ಗ್ರಾಮದಲ್ಲಿದೆ. ಮಧ್ವಾಚಾರ್ಯರ ನ್ನ ವಾಯು ದೇವರ ಅವತಾರ ಎಂದು ಹೇಳಲಾಗುತ್ತದೆ. ಮದ್ವ ಗೆಹ ಭತ್ತ ಹಾಗೂ ವೇದಾವತಿ ಪುತ್ರರಾಗಿ ಜನಿಸಿದ ಮನೆಯನ್ನು ನಾವು ಇಂದಿಗೂ ನೋಡಬಹುದು. ಈ ಕ್ಷೇತ್ರದಲ್ಲಿ ಮಧ್ವಾಚಾರ್ಯರ ಪಾದ ಗುರುತು ಸಹ ಇದೆ. ಬಾಲ್ಯದಲ್ಲಿ ವಾಸುದೇವ ಎಂಬ ಹೆಸರನ್ನು ಹೊಂದಿದ್ದ ಮಧ್ವಾಚಾರ್ಯರು ಈ ಸ್ಥಳದಲ್ಲಿ ಅನೇಕ ಪವಾಡಗಳನ್ನು ಮಾಡಿದ್ದು, ವಾದಿರಾಜರು ಈ ಕ್ಷೇತ್ರವನ್ನು ತಮ್ಮ ಗ್ರಂಥಗಳಲ್ಲಿ ಪವಿತ್ರಮ ಪಾಜಕ ಕ್ಷೇತ್ರಮ ಕೊಣಾಸೇವೇತ್ ಕೋವಿದಹ. ಎಂದು ಹೇಳಲಾಗುತ್ತದೆ.
ಈ ಸ್ಥಳದಲ್ಲಿ ಇರುವ ತುಳಸಿ ಕಟ್ಟೆಯ ಬಳಿ ಮಧ್ವಾಚಾರ್ಯರು ವಿಧ್ಯಾಭ್ಯಾಸ ಪ್ರಾರಂಭ ಮಾಡಿದ ಕಲ್ಲಿದ್ದು ಸಾಕಷ್ಟು ಜನರು ತಮ್ಮ ಮಕ್ಕಳಿಗೆ ಮೊದಲ ಅಕ್ಷರಾಭ್ಯಾಸ ಮಾಡಿಸಲು ಈ ಕ್ಷೇತ್ರಕ್ಕೆ ಬಂದು ಮಧ್ವಾಚಾರ್ಯರು ವಿಧ್ಯಾಭ್ಯಾಸ ಪ್ರಾರಂಭ ಮಾಡಿದ ಕಲ್ಲಿನ ಮೇಲೆ ಮಕ್ಕಳ ಕೈಯಿಂದ ಅಕ್ಷರವನ್ನು ಬೆರೆಸಿ ಮಗುವಿಗೆ ಉತ್ತಮ ವಿಧ್ಯಾಭ್ಯಾಸ ಸಿಗಲಿ ಎಂದು ಬೆಳೆಸಿಕೊಳ್ಳುತ್ತಾರೆ. ಇನ್ನೂ ಕಣಕಣದಲ್ಲೂ ಮಧ್ವಾಚಾರ್ಯರು ಪವಾಡಗಳ ಗುರುತಿದೆ. ಮನಿಮಂತ ಎಂಬ ದೈತ್ಯನು ಹಾವಿನ ರೂಪದಲ್ಲಿ ಬಂದಾಗ ಅವನನ್ನು ಮಧ್ವಾಚಾರ್ಯರು ತಮ್ಮ ತಪೋಷಕ್ತಿಯಿಂದ ಸಂಹರಿಸಿದರಂಥೆ. ಈ ಸ್ಥಳವನ್ನು ಮನೀಮಂತ ದೈತ್ಯ ಸಂಹಾರ ಸ್ಥಳವೆಂದು ಕರೆಯಲಾಗುತ್ತದೆ. ಅಲ್ಲದೆ ಈ ಕ್ಷೇತ್ರದಲ್ಲಿ ವಾಸುದೇವ ತೀರ್ಥ ಕೊಳವಿದ್ದು ಈ ತೀರ್ಥ ಕೊಳವನ್ನು ಮಧ್ವಾಚಾರ್ಯರು ನಿರ್ಮಿಸುವುದರ ಹಿಂದೆ ಒಂದು ಘಟನೆ ಇದೆ. ಪಾಜಕಕ್ಕೆ ಸಮೀಪ ಇರುವ ಕುಂಜಾರುಗಿರಿಯ ಬೆಟ್ಟದ ಮೇಲೆ ಸಾಕ್ಷಾತ್ ಪರಶುರಾಮರು ಸೃಷ್ಟಿಸಿದ ಬಾಣ ತೀರ್ಥಗಳು ಇದ್ದು, ಈ ತೀರ್ಥ ಕೊಳಗಳಲ್ಲಿ ಮಿಂದೆದ್ದರು ಸಕಲ ಜನ್ಮ ಪಾಪಗಳು ದೂರಾಗುತ್ತದೆ ಎಂಬ ಪ್ರತೀತಿ ಇರುತ್ತೆ. ಹೀಗಾಗಿ ಮಧ್ವಾಚಾರ್ಯರ ತಾಯಿ ಕೂಡ ಕುಂಜಾರೂಗಿರಿಯ ತೀರ್ಥ ಕೊಳದಲ್ಲಿ ಮಿಂದೆದ್ದು ಬರಬೇಕು ಆಸೆಯನ್ನು ಹೊಂದಿರುತ್ತಾರೆ ಆದ್ರೆ ಅನಾರೋಗ್ಯದ ಕಾರಣ ಆ ತೀರ್ಥ ಸ್ಥಳಗಳಿಗೆ ಭೇಟಿ ನೀಡಲು ಅವರಿಗೆ ಸಾಧ್ಯ ಆಗೋದಿಲ್ಲ. ಇದನ್ನು ತಿಳಿದ ಮಧ್ವಾಚಾರ್ಯರು ಪಾಜಕದಲ್ಲಿ ತಮ್ಮ ಕೈಗಳಿಂದ ವಾಸುದೇವ ತೀರ್ಥ ಎಂಬ ಕೊಳವನ್ನು ನಿರ್ಮಿಸಿದ್ದಾರೆ.
ಇಲ್ಲಿನ ವಾಸುದೇವ ತೀರ್ಥದಲ್ಲಿ ಮಿಂದೆಡ್ಡರೆ ಕುಂಜಾರುಗಿರಿಯಲ್ಲಿ ಇರುವ ತೀರ್ಥಗಳಲ್ಲಿ ಮಿಂದೆದ್ದ ಪುಣ್ಯ ಬರುತ್ತೆ ಎಂದು ಹೇಳಲಾಗುತ್ತದೆ. ಇನ್ನೂ ಈ ಕ್ಷೇತ್ರದಲ್ಲಿ ಮಧ್ವಾಚಾರ್ಯರು ಹಾಲು ಮೊಸರು ಮುಚ್ಚಲು ತಂದ ಕಲ್ಲಿನ ಚಪ್ಪಡಿ ಮತ್ತು ಮಧ್ವರು ನೆಟ್ಟ ಆಲದ ಮರವನ್ನು ನೋಡಬಹುದು. ಅಲ್ಲದೆ ಆಚಾರ್ಯರ ತಂದೆ ಒಮ್ಮೆ ವ್ಯಕ್ತಿಯೊಬ್ಬರ ಬಳಿ ಹಸುವನ್ನು ಪಡೆದಿದ್ದರು ಆದ್ರೆ ಅವರಿಗೆ ಸಕಾಲದಲ್ಲಿ ಹಣವನ್ನು ನೀಡಲು ಸಾಧ್ಯ ಆಗಲಿಲ್ಲ. ಕೆಲ ಕಾಲದ ನಂತರ ಹಸುವನ್ನು ನೀಡಿದ ವ್ಯಕ್ತಿ ಮಧ್ವಾಚಾರ್ಯರ ಮನೆಗೆ ಬಂದು ಹಣವನ್ನು ಕೂಡಲೇ ನೀಡಬೇಕು ಎಂದಾಗ. ಮಧ್ವಾಚಾರ್ಯರು ಅಲ್ಲಿಯೇ ಇರುವ ಹುಣಸೆ ಮರದಿಂದ ಹುಣಸೆ ಮರದ ಬೀಜಗಳನ್ನೂ ಕಿತ್ತು ಮನೆಗೆ ಬಂದ ವ್ಯಕ್ತಿಗೆ ಕೊಡ್ತಾರೆ. ಹುಣಸೆ ಬೀಜಗಳನ್ನು ಮದ್ವರು ಆ ವ್ಯಕ್ತಿಯ ಕೈಗೆ ನೀಡುತ್ತಾ ಇದ್ದ ಹಾಗೆ ಹುಣಸೆ ಬೀಜಗಳು ಚಿನ್ನದ ನಾಣ್ಯಗಳಾಗಿ ಪರಿವರ್ತನೆ ಆಗುತ್ತವೆ. ಇಂದಿಗೂ ಆ ಹುಣಸೆ ಮರವನ್ನು ನೋಡಬಹುದು. ಈ ಕ್ಷೇತ್ರದಲ್ಲಿ ಅನಂತ ಪದ್ಮನಾಭ ಸ್ವಾಮಿ ದೇವಾಲಯ ಹಾಗೂ ವಾದಿರಾಜರು ಪ್ರತಿಷ್ಠಾಪಿಸಿದ ಮಧ್ವಾಚಾರ್ಯರ ಮೂರ್ತಿ ಇರುವ ಸ್ಥಳಗಳು ಇವೆ. ಇಲ್ಲಿನ ಅನಂತ ಪದ್ಮನಾಭ ಸ್ವಾಮಿ ಗೆ ಮಧ್ವಾಚಾರ್ಯರ ವಂಶಸ್ಥರು ನಿತ್ಯ ಪೂಜೆಯನ್ನು ಸಲ್ಲಿಸುತ್ತಾರೆ. ಒಟ್ಟಾರೆಯಾಗಿ ಈ ಕ್ಷೇತ್ರಕ್ಕೆ ಹೋದ್ರೆ ಮಧ್ವಾಚಾರ್ಯರ ಜೀವನಕ್ಕೆ ಸಂಬಂಧಿಸಿದ ಎಲ್ಲ ಸ್ಥಳಗಳನ್ನು ಕಣ್ಣು ತುಂಬಿಕೊಂಡು ಬರಬಹುದು. ಪಾಜಕ ಉಡುಪಿಯಿಂದ 13 ಕಿಮೀ ದೂರದಲ್ಲಿದೆ.