ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ದಿವಂಗತ ನಟ ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಹಾಗೂ ಅವರ ಕೊನೆಯ ಜೇಮ್ಸ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಮೂಲಕ ಕನ್ನಡಿಗರಿಗೂ ಚಿರ ಪರಿಚಿತ ಆಗಿರುವ ಪ್ರಿಯಾ ಆನಂದ್ ತಮ್ಮ ವಿಚಿತ್ರವಾದ ಹೇಳಿಕೆಯಿಂದ ಈಗ ಭಾರಿ ಟ್ರೊಲ್ ಆಗುತ್ತಿದ್ದರೆ. ಪ್ರಿಯಾ ಆನಂದ್ ಅವರು ಸೋಶಿಯಲ್ ಮೀಡಿಯದಲ್ಲಿ ಯಾವಾಗಲೂ ಆಕ್ಟೀವ್ ಆಗಿರುತ್ತಾರೆ. ಆಗಾಗ ತಮ್ಮ ಫೋಟೋಗಳನ್ನು ಸಿನಿಮಾಗೆ ಸಂಬಂಧ ಪಟ್ಟ ಅಪ್ಡೇಟ್ ಗಳನ್ನೂ ಶೇರ್ ಮಾಡಿಕೊಳ್ಳುತ್ತಾ ಇರ್ತಾರೆ. ಕೆಲವು ಸಲ ಸ್ವಯಂ ಘೋಷಿತ ದೇವ ಮಾನವ ಸ್ವಾಮಿ ನಿತ್ಯಾನಂದರ ಕೋಡ್ ಗಳನ್ನು ಕೂಡ ಸೋಶಿಯಲ್ ಮೀಡಿಯಾ ಲೀ ಶೇರ್ ಮಾಡ್ತಾ ಇರ್ತಾರೆ. ಇದನ್ನು ಪ್ರಿಯಾ ಅವರ ಫ್ಯಾನ್ಸ್ ಗಮನಿಸಿದ್ದಾರೆ. ನಿತ್ಯಾನಂದನ ಬಗ್ಗೆ ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನದಲ್ಲಿ ಪ್ರಿಯಾ ಆನಂದ್ ಗೆ ಒಂದು ಪ್ರಶ್ನೆ ಕೇಳಲಾಯಿತು ಈ ಪ್ರಶ್ನೆಗೆ ಉತ್ತರಿಸಿದ ಪ್ರಿಯಾ ನಾನೂ ನಿಂತ್ಯನಂದರನ್ನ ತುಂಬಾ ಇಷ್ಟಾ ಪಡ್ತೀನಿ. ನನ್ ಹೆಸರು ಪ್ರಿಯಾ ಆನಂದ್ ಒಂದುವೇಳೆ ನಿತ್ಯಾನಂದನನ್ನು ಮದುವೆಯಾದರೆ ನನ್ ಹೆಸರನ್ನು ಬದಲಾಯಿಸಿಕೊಳ್ಳಬೇಕಿಲ್ಲ.
ನಿಂತ್ಯಾನಂದರಿಗೆ ಜನರನ್ನು ಹೇಗೆ ಆಕರ್ಷಿಸಬೇಕು ಎಂದು ಗೊತ್ತಿದೆ. ಇಷ್ಟೊಂದು ಜನ ಅವರನ್ನು ಹಿಂಬಾಲಿಸುತ್ತಾರೆ ಅಂದ್ರೆ ಅವರಲ್ಲಿ ಏನೋ ಇದೆ ಎಂದು ಅರ್ಥ ಅಲ್ವಾ? ಹೀಗೆ ಹೇಳಿಕೆ ಕೊಟ್ಟಿದ್ದಾರೆ. ಪ್ರಿಯಾ ಅವರ ಸಂದರ್ಶನದ ತುಣುಕು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದ್ದು, ಟ್ರೊಲ್ ಕೂಡ ಆಗ್ತಿದೆ. ಪ್ರಿಯಾ ಅವರು ಶೂಟಿಂಗ್ ಸೆಟ್ ಗಳಲ್ಲಿ ಮಾಡುವ ತಮಾಷೆ ಇಂದ ಆಗಾಗ ಸುದ್ದಿ ಆಗ್ತಾ ಇರ್ತಾರೆ. ಈಗ ವಿವಾದಿತ ದೇವ ಮಾನವ ನಿತ್ಯಾನಂದನ ಬಗ್ಗೆ ಅವರು ಮಾತನಾಡಿರುವ ಮಾತು ಕೆಲವರಿಗೆ ನಗು ತರಿಸಿದೆ. ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಅನೇಕ ತಿಂಗಳುಗಳಿಂದ ತಲೆ ಮರೆಸಿಕೊಂಡಿದ್ದಾರೆ. ಮತ್ತು ತನ್ನ ಸ್ವಂತ ದೇಶ ಕೈಲಾಸವನ್ನು ರಚನೆ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಲೈಂಗಿಕ ಅಪರಾಧಗಳು ಸೇರಿದಂತೆ ಅನೇಕ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳ ಪೊಲೀಸರು ನಿತ್ಯಾನಂದನಿಗೆ ಹುಡುಕಾಟ ನಡೆಸುತ್ತಿದ್ದಾರೆ. ನಿತ್ಯಾನಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಕೆಲವು ವರದಿಗಳು ಸೂಚಿಸುತ್ತಾ ಇವೆ. ಹೀಗೆ ಒಬ್ಬ ವಿವಾದಿತ ವ್ಯಕ್ತಿ ಬಗ್ಗೆ ಪ್ರಿಯಾ ಆನಂದ್ ಈ ರೀತಿ ಹೇಳಿಕೆ ಕೊಟ್ಟಿರುವುದು ಈಗ ಸಿಕ್ಕಾಪಟ್ಟೆ ಟ್ರೊಲ್ ಆಗುತ್ತಿದೆ.