ನಮಸ್ತೆ ಪ್ರಿಯ ಓದುಗರೇ, ಸನಾತನ ಹಿಂದೂ ಧರ್ಮದಲ್ಲಿ ಜಗತ್ತಿಗೆ ಬೆಳಕನ್ನು ನೀಡೋ ಸೂರ್ಯ ಮತ್ತು ಸೂರ್ಯ ನಮಸ್ಕಾರ ಕ್ಕ್ ಅದಕ್ಕೆ ಆದ ಮಹತ್ವ ಇದೆ. ಮಾನವನ ಅನೇಕ ಸಮಸ್ಯೆಗಳು ಸೂರ್ಯ ನಮಸ್ಕಾರ ದಿಂದ ಪರಿಹಾರ ಆದ ಉಲ್ಲೇಖವಿದೆ. ಸೂರ್ಯ ಹುಟ್ಟಿದ ನಂತರವೇ ಭೂಮಿಯ ಮೇಲೆ ಹೂವು ಅರಳುತ್ತದೆ. ಹಾಗಾಗಿ ಸೂರ್ಯೋದಯದ ಸಮಯದಲ್ಲಿ ಯಾವುದೇ ಕೆಲಸ ಮಾಡಿದ್ರೆ ಅದು ವಿಗ್ನವಿಲ್ಲದೆ ನಡೆಯುತ್ತೆ ಎಂದು ಹೇಳಲಾಗುತ್ತದೆ. ಅದೇ ರೀತಿ ಸೂರ್ಯ ಮುಳುಗುವ ವೇಳೆ ಕೆಲವು ಕೆಲಸಗಳನ್ನು ಮಾಡುವುದು ನಿಷಿದ್ಧ ಅಂತ ಹೇಳಲಾಗುತ್ತದೆ. ಸೂರ್ಯ ಮುಳುಗಿದ ನಂತರ ಯಾವ ಯಾವ ಕೆಲಸಗಳನ್ನು ಮಾಡಬಾರದು ಎಂದು ನೋಡೋಣ ಸ್ನೇಹಿತರೆ. ಮೊದಲನೆಯದಾಗಿ ಕೆಲವೊಬ್ಬರ ಮನೆಯಲ್ಲಿ ಬೆಳಿಗ್ಗೆ ಸಂಜೆ ಎರಡೂ ಬಾರಿ ಪೂಜೆ ಮಾಡುತ್ತಾರೆ. ಈ ರೀತಿ ಬೆಳಿಗ್ಗೆ ಮತ್ತು ಸಂಜೆ ಪೂಜೆಗೆ ಅದರದ್ದೇ ಆದ ವಿಶೇಷತೆ ಇದೆ. ಆ ಸಮಯದಲ್ಲಿ ನಮಗೆ ತಿಳಿಯದಂತೆ ಕೆಲವೊಂದು ತಪ್ಪುಗಳನ್ನು ಮಾಡಿಬಿಡುತ್ತೇವೆ. ಸೂರ್ಯಾಸ್ತದ ನಂತರ ಮನೆಗಳಲ್ಲಿ ಪೂಜೆ ಮಾಡುವಾಗ ಶಂಖ ಓದುವುದು ಘಂಟೆ ಬಾರಿಸುವುದು ನಿಷಿದ್ಧ ಅಂತ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇದಕ್ಕೆ ಕಾರಣವೂ ಇದೆ. ಸೂರ್ಯಾಸ್ತದ ನಂತರ ದೇವತೆಗಳು ನಿದ್ದೆಗೆ ಜಾರುತ್ತರೆ ಎಂಬ ನಂಬಿಕೆ ಇದೆ. ಈ ವೇಳೆ ದೇವತೆಗಳನ್ನು ಶಂಖ ಹಾಗೂ ಘಂಟೆ ನಾದದ ಮೂಲಕ ಎಬ್ಬಿಸುವುದು ಸರಿಯಲ್ಲ ಎಂದು ನಂಬಲಾಗಿದೆ. ಆದ್ದರಿಂದ ಸೂರ್ಯಾಸ್ತದ ನಂತರ ಪೂಜೆ ಮಾಡುವಾಗ ಆದಷ್ಟು ನಿಶ್ಯಬ್ದವಾಗಿ ಇರಬೇಕು ಎಂದು ಹೇಳಲಾಗುತ್ತದೆ.
ಇನ್ನೂ ಸಂಜೆ ಪೂಜೆನ ಸೂರ್ಯಾಸ್ತದ ಬಳಿಕವೇ ಮಾಡಬೇಕು ಇದು ನಿಮಗೆ ಗೊತ್ತಿರಬೇಕು. ಸೂರ್ಯ ಮುಳುಗಿದ ಮೇಲೆ ತುಳಸಿ ಗಿಡವನ್ನು ಮುಟ್ಟಬಾರದು ಯಾಕಂದ್ರೆ ತುಳಸಿ ದೇವಿ ನಿದ್ರೆ ಮಾಡ್ತಾ ಇರ್ತಾಳೆ. ಹಾಗೆ ತುಳಸಿ ಗಿಡವನ್ನು ಎಡಗೈ ಇಂದ ಮುಟ್ಟಬಾರದು. ಎರಡನೆಯದಾಗಿ ಸಾಮಾನ್ಯವಾಗಿ ಮನೆಯಲ್ಲಿ ಮಹಿಳೆಯರು ತಿಳಿದೋ ತಿಳಿಯದೆಯೋ ಕೆಲವೊಂದು ತಪ್ಪು ಮಾಡ್ತಾರೆ. ಇಂತಹ ತಪ್ಪುಗಳಿಂದ ಕೆಲವೊಂದು ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತತದೆ. ಮನೆಯ ಮಹಾಲಕ್ಷ್ಮಿ ಅಂತಾನೆ ಪರಿಗಣಿಸುವ ಮಹಿಳೆಯರು ಸಂಜೆ ಜಡೆ ಕಟ್ಟಿಕೊಳ್ಳದೆ ಕೂದಲನ್ನು ಹಾಗೆ ಬಿಡುವುದು ಒಳ್ಳೆಯದಲ್ಲ. ವಿಶೇಷವಾಗಿ ರಾತ್ರಿ ಸಮಯದಲ್ಲಿ ಹೆಣ್ಣು ಮಕ್ಕಳು ಕೂದಲನ್ನು ಕಟ್ಟದೇ ಹಾಗೆ ಬಿಟ್ಟುಕೊಂಡು ಓಡಾಡುವುದು ಅಥವಾ ಕೂದಲನ್ನು ಬಿಟ್ಟುಕೊಂಡು ಮಲಗುವುದು ತಪ್ಪು. ಯಾಕಂದ್ರೆ ಈ ರೀತಿಯಾಗಿ ಇರುವುದು ದೆವ್ವಗಳು ಅಥವಾ ದುಷ್ಟ ಶಕ್ತಿಗಳು. ಹಾಗೆ ಪ್ರತಿನಿತ್ಯ ಮನೆಯಲ್ಲಿ ಊಟಾ ಮಾಡಿದ ನಂತರ ಎಂಜಲು ಪಾತ್ರೆಗಳನ್ನು ತೊಳೆದು ಇಡಬೇಕು. ಬೆಳಿಗ್ಗೆ ತೊಳೆದರಾಯ್ತು ಎಂದು ಹಾಗೆ ಬಿಡಬಾರದು. ಅವುಗಳನ್ನು ಹಾಗೆ ಬಿಟ್ರೆ ಅಲ್ಲಿ ದರಿದ್ರ ಲಕ್ಷ್ಮೀ ವಾಸ ಆಗ್ತಾಳೆ.
ಇನ್ನೂ ಶುಕ್ರವಾರ ಸೂರ್ಯಾಸ್ತದ ನಂತರ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡಬಾರದು. ಅದೇ ರೀತಿ ದಾನದ ರೂಪದಲ್ಲಿ ಸಾಲದ ರೀತಿ ನಮ್ಮ ಹಣವನ್ನು ಬೇರೆಯವರಿಗೆ ಕೊಡಬಾರದು. ರಾತ್ರಿ ಸಮಯದಲ್ಲಿ ಹಾಲನ್ನು ಯಾರಿಗೋ ಸಾಲವಾಗಿ ಅಥವಾ ದಾನವಾಗಿ ಕೊಡಬಾರದು. ಅವರು ಎಷ್ಟೇ ಆಪಾಠರಾಗಿದ್ರೋ ಹಾಲು ಅಥವಾ ಮೊಸರನ್ನು ಕೊಡಬಾರದು. ಇದಕ್ಕೆ ಕಾರಣ ಏನು ಅಂದ್ರೆ ಹಾಲು ಲಕ್ಷ್ಮೀ ದೇವಿಯ ಸಂಕೇತ. ಸಂಜೆ ಇದನ್ನು ಹೊರಗೆ ಕೊಟ್ರೆ ಆರ್ಥಿಕ ಸಮಸ್ಯೆ ಬರುತ್ತೆ. ಅರಿಶಿನ ಕೂಡ ಗುರು ಗ್ರಹಕ್ಕೆ ಸಂಬಂಧಿಸಿದ್ದು ಸೂರ್ಯಾಸ್ತದ ನಂತರ ಅರಿಶಿಣ ಬೇರೆಯವರಿಗೆ ಕೊಟ್ರೆ ಅವರ ಸಂತೋಷ ಸಮೃದ್ಧಿ ಯಲ್ಲಿ ಕೊರತೆ ಉಂಟಾಗುತ್ತದೆ. ಹಾಗೆ ಚಿನ್ನವನ್ನು ಅಂದ್ರೆ ಒಡವೆಗಳನ್ನು ಕೊಡುವುದು ಬೇರೆಯವರ ಒಡವೆ ಧರಿಸುವುದು ಒಳ್ಳೆಯದಲ್ಲ. ಸೂರ್ಯ ಮುಳುಗಿದ ಮೇಲೆ ಈರುಳ್ಳಿ ಬೆಳ್ಳುಳ್ಳಿ ನ ಬೇರೆಯವರಿಗೆ ಕೊಡಬಾರದು.