ಪ್ರತಿದಿನ ಮೂರು ಪಿಸ್ತಾವನ್ನು ಮೂರು ದಿನ ಸೇವನೆ ಮಾಡುವುದರಿಂದ ಏನಾಗುತ್ತೆ ಗೊತ್ತಾ???

ಪ್ರತಿದಿನ ಮೂರು ಪಿಸ್ತಾವನ್ನು ಮೂರು ದಿನ ಸೇವನೆ ಮಾಡುವುದರಿಂದ ಏನಾಗುತ್ತೆ ಗೊತ್ತಾ???

ನಮಸ್ತೆ ಪ್ರಿಯ ಓದುಗರೇ, ನೈಸರ್ಗಿಕವಾಗಿ ಸುಗುವಂತಹ ಈ ಹಣ್ಣು ಮತ್ತು ತರಕಾರಗಳು ದೇಹಕ್ಕೆ ಉತ್ತಮ ಆರೋಗ್ಯ ಕೊಡಲು ಹೆಚ್ಚು ಯೋಗ್ಯವಾಗಿದೆ. ಅದ್ರಲ್ಲೂ ಡ್ರೈ ಫ್ರೂಟ್ಸ್ ಗಳಲ್ಲಿ ಬಾದಾಮಿ ಮತ್ತ್ಚು ಪಿಸ್ತಾ ಆಗ್ರ ಸ್ಥಾನವನ್ನು ಪಡೆಯುತ್ತದೆ. ಈ ಪೀಸ್ತಾವನ್ನು ಸೇವನೆ ಮಾಡುವುದರಿಂದ ದೇಹದ ಬಹುತೇಕ ಎಲ್ಲಾ ಅಂಗಗಳಿಗೆ ಒಂದಲ್ಲಾ ಒಂದು ರೀತಿಯಾದ ಪ್ರಯೋಜನವನ್ನು ನೀಡುತ್ತದೆ. ಪಿಸ್ತಾ ಸ್ವಲ್ಪ ಕಾಸ್ಟ್ಲಿ ಆದ್ರೂ ಕೂಡ ಇದನ್ನು ಸೇವನೆ ಮಾಡುವುದರಿಂದ ಮುಂದೆ ಬರುವಂತಹ ಹಲವಾರು ರೀತಿಯ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಜೊತೆಗೆ ಇದು ನಮ್ಮ ಆರೋಗ್ಯಕ್ಕೆ ಕೂಡ ಒಳ್ಳೆಯದು. ಇವತ್ತಿನ ಈ ಲೇಖನದಲ್ಲಿ ಕೇವಲ ಎರಡರಿಂದ ಮೂರು ಪಿಸ್ತಾ ನ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಯಾವೆಲ್ಲ ರೀತಿಯ ಲಾಭಗಳು ಉಂಟಾಗುತ್ತವೆ ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಆರೋಗ್ಯಕ್ಕೆ ಸಂಬಂಧ ಪಟ್ಟ ಯಾವುದೇ ಮಾಹಿತಿ ತಿಳಿದುಕೊಳ್ಳಲು ನಮ್ಮ ನ್ಯೂ ನ್ಯೂಸ್ ಕನ್ನಡ ಪೇಜ್ ಲೈಕ್ ಮಾಡಿ. ಸ್ನೇಹಿತರೆ ಮೊದಲನೆಯದಾಗಿ ಈ ಪಿಸ್ಥಾದಲ್ಲಿ ಯಾವೆಲ್ಲ ರೀತಿಯ ಪೌಷ್ಟಿಕಾಂಶಗಳು ಇವೆ ಎಂದು ನೋಡುವುದಾದರೆ, ಇದರಲ್ಲಿ ಫೈಬರ್, ಪ್ರೋಟಿನ್, ವಿಟಮಿನ್ ಸಿ, ಪೊಟಾಸಿಯಂ, ಐರನ್ ಇದೆ. ಮತ್ತು ಮುಖ್ಯವಾಗಿ ಇದರಲ್ಲಿ ವಿಟಮಿನ್ ಬಿ 6 ಇದೆ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಇದು ಆರೋಗ್ಯಕರ ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

 

ಇನ್ನೂ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಪೌಷ್ಟಿಕಾಶಗಳ ಕೊರತೆ ಉಂಟಾಗಿ ಹಿಮೋಗ್ಲೋಬಿನ್ ಪ್ರಮಾಣ ಕೂಡ ಕಡಿಮೆ ಆಗುತ್ತಿದೆ. ಪ್ರತಿನಿತ್ಯ ಎರಡರಿಂದ ಮೂರು ಪಿಸ್ತಾ ಸೇವನೆ ಮಾಡುವುದರಿಂದ ಹಿಮೋಗ್ಲೋಬಿನ್ ಪ್ರಮಾಣ ಕೂಡ ಹೆಚ್ಚಾಗಲು ಸಹಾಯ ಆಗುತ್ತದೆ ಜೊತೆಗೆ ನಮ್ಮ ರಕ್ತದಲ್ಲಿನ ಹಿಮೋಗ್ಲಬಿನ್ ಹೆಚ್ಚಿಸುವುದರ ಜೊತೆಗೆ ಆಮ್ಲಜನಕದ ಪ್ರಮಾಣ ಹೆಚ್ಚಿರುವ ರಕ್ತ ದೇಹದ ಇತರ ಅಂಗಗಳಿಗೆ ರವಾನೆ ಆಗುವಂತೆ ನೋಡಿಕೊಳ್ಳುತ್ತದೆ. ಹಾಗೂ ನಮ್ಮ ದೇಹದಲ್ಲಿ ಇರುವಂಥ ಅಮೈನೋ ಆಮ್ಲ ಹೆಚ್ಚಾಗಲು ಮತ್ತು ದೇಹದಲ್ಲಿ ಇರುವಂಥ ನರಮಂಡಲ ಸರಿಯಾಗಿ ಕೆಲಸ ಮಾಡಲು ಸಹ ಪಿಸ್ತಾ ಸಹಾಯ ಮಾಡುತ್ತದೆ. ಇನ್ನೂ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಪೌಷ್ಟಿಕಾಂಶಗಳ ಕೊರತೆಯಿಂದ ಯಾವುದೇ ರೀತಿಯ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ ಜೊತೆಗೆ ಇಡೀ ದಿನ ನಿಶ್ಯಕ್ತಿ ಮಾತ್ತ್ಚು ಆಯಾಸದಿಂದ ಕೂಡಿರುತ್ತದೆ. ಆಕ್ಟೀವ್ ಆಗಿ ಇರುವುದಿಲ್ಲ. ಅಂಥವರು ಪ್ರತಿ ನಿತ್ಯ ಬೆಳಿಗ್ಗೆ ಎರಡರಿಂದ ಮೂರು ಪಿಸ್ತಾ ಸೇವನೆ ಮಾಡುವುದರಿಂದ ದೇಹಕ್ಕೆ ಒಳ್ಳೆಯ ಚೈತನ್ಯ ಮತ್ತು ಶಕ್ತಿ ಸಿಗುತ್ತೆ. ನೀವು ಇಡೀ ದಿನ ಆಕ್ಟೀವ್ ಆಗಿ ಕೆಲಸ ಮಾಡಲು ಸಹ ಸಹಾಯ ಮಾಡುತ್ತೆ. ಇನ್ನೂ ವಯಸ್ಸಾದಂತೆ ನಮ್ಮ ಕಣ್ಣಿನ ದೃಷ್ಟಿ ಮಂದಾಗುತ್ತದೆ. ಇದನ್ನು ತಪ್ಪಿಸಲು ನಾವು ಪ್ರತಿನಿತ್ಯ ನಮ್ಮ ಆಹಾರದಲ್ಲಿ ಎರಡರಿಂದ ಮೂರು ಪಿಸ್ತಾ ಸೇವನೆ ಮಾಡುವುದರಿಂದ ಮುಂದೆ ನಮಗೆ ಬರಬಹುದಾದ ಕಣ್ಣಿನ ತೊಂದರೆ ತಡೆಗಟ್ಟಬಹುದು,ಕೈ ಕಾಲುಗಳು ಇದ್ದಕ್ಕಿದ್ದ ಹಾಗೆ ನೋವು ಕಂಡು ಬರುತ್ತದೆ ಅಂಥವರು ಕೂಡ ಪಿಸ್ತಾ ತಿನ್ನುವುದರಿಂದ ಕೈಕಾಲುಗಳ ಊತಾ ಕಡಿಮೆ ಆಗುತ್ತದೆ ಈ ಪಿಸ್ತಾ ಲಿ ಇರುವಂಥ ವಿಟಮಿನ್ ಗಳು ನಮ್ಮ ದೇಹದಲ್ಲಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

ಇನ್ನೂ ನಿಯಮಿತವಾಗಿ ಈ ಪಿಸ್ತಾ ಸೇವನೆ ಮಾಡುವುದರಿಂದ ನಮ್ಮ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಹೌದು ಸ್ನೇಹಿತರೆ ಪಿಸ್ತಾ ದಲ್ಲಿ ವಿಟಮಿನ್ ಬಿ 6ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಈ ವಿಟಮಿನ್ಸ್ ಗಳು ನಮ್ಮ ದೇಹದಲ್ಲಿನ ಕ್ಷಮತೆಯ ಅತಿ ಅಗತ್ಯವಾಗಿದೆ. ಪಿಸ್ತಾ ಸೇವನೆ ಮಾಡುವುದರಿಂದ ಮೆದುಳಿನ ಜೀವಕೋಶಗಳು ನಷ್ಟ ಆಗುವುದನ್ನು ತಪ್ಪಿಸಬಹುದು. ಜೊತೆಗೆ ನಮ್ಮ ಮೆದುಳಿಗೆ ರಕ್ತ ಪರಿಚಲನೆ ಹೆಚ್ಚಾಗುವುದರ ಮೂಲಕ ನಮ್ಮ ನೆನಪಿನ ಶಕ್ತಿ, ಸ್ಮರಣೆ ಶಕ್ತಿ, ಏಕಾಗ್ರತೆ ಹೆಚ್ಚುತ್ತೆ. ನಿಮಗೇನಾದರೂ ನಿಮ್ಮ ನೆನಪಿನ ಶಕ್ತಿ ಕಡಿಮೆ ಆಗಿದ್ದರೆ ಪ್ರತಿನಿತ್ಯ ಬೆಳಗ್ಗೆ ಎರಡರಿಂದ ಮೂರು ಪಿಸ್ತಾ ಸೇವನೆ ಮಾಡಿ. ಇನ್ನೂ ನಿಯಮಿತವಾಗಿ ಪಿಸ್ತಾ ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆದ್ರೆ ಹೃದಯಾಘಾತ ಹಾಗೂ ಹೃದಯಕ್ಕೆ ಸಂಬಂಧ ಪಟ್ಟ ರೋಗಗಳು ಬರುವ ಸಾಧ್ಯತೆ ಕಡಿಮೆ ಆಗುತ್ತದೆ. ಸ್ನೇಹಿತರೆ ನೀವು ಪ್ರತಿನಿತ್ಯ ಫಾಸ್ಟ್ ಫುಡ್ ಹಾಗೂ ಇನ್ನಿತರೆ ಕರಿದಿರುವ ತಿಂಡಿಗಳನ್ನು ತಿನ್ನುವ ಬದಲು ಇಂತಹ ಡ್ರೈ ಫ್ರೂಟ್ಸ್ ಪಿಸ್ತಾ ಸೇವನೆ ಮಾಡುವುದರಿಂದ ನಿಮ್ಮ ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ ಹಾಗೆ ನಿಮ್ಮ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚು ಮಾಡಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಇಟ್ಟರೆಯ ನರಮಂಡಲ ವ್ಯವಸ್ಥೆ ಈ ಪಿಸ್ತಾ ಸೇವನೆಯಿಂದ ಕ್ರಮವಾಗಿ ನಡೆಯುತ್ತೆ. ಜೊತೆಗೆ ನೀವು ಯಂಗ್ ಆಗಿ ಸಹ ಕಾಣುತ್ತೀರಿ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.

ಆರೋಗ್ಯ