ಚಂದ್ರಶೇಕರ್ ಗುರೂಜಿ ಸಾವಿರಾರು ಕೋಟಿ ಒಡೆಯ. ವಾಸ್ತುವಿನ ಮೂಲಕ ಕೋಟ್ಯಾಂತರ ಹಣವನ್ನು ಗಳಿಸಿದ್ದರು. ಕೇವಲ ಹಣ ಮಾತ್ರ ಅಲ್ಲ ಹುಬ್ಬಳ್ಳಿ ಧಾರವಾಡ ಬೆಂಗಳೂರು ಗುಜರಾತ್ ಮಹರಾಷ್ಟ್ರ ಗಳಲ್ಲಿ ಆಸ್ತಿ ಪಾಸ್ತಿ ಜಾಮೀನು ಫ್ಲಾಟ್ ಅಪಾರ್ಟ್ಮೆಂಟ್ ಐಷಾರಾಮಿ ಕಾರುಗಳು ಇವೆಲ್ಲವನ್ನೂ ಮಾಡಿದ್ರೂ. ಆದ್ರೆ ಇಷ್ಟೆಲ್ಲವನ್ನೂ ಗಳಿಸಿದ್ರೋ ಈಗ ಇದ್ಯಾವುದೂ ಇಲ್ಲದೆ ಬರೀ ಗೈಯಲ್ಲಿ ಪಯಣ ಬೆಳೆಸುವಂತಹ ಪರಿಸ್ಥಿತಿ ಎದುರಾಗಿದೆ. ಕೇವಲ ಚಂದ್ರಶೇಕರ್ ಗುರೂಜಿ ಅಲ್ಲ ಪ್ರತಿಯೊಬ್ಬ ಮನುಷ್ಯನ ಬದುಕು ಹಾಗೆ. ಅವನ ಬದುಕು ಕ್ಷಣಿಕ. ಇರ್ವಷ್ಟು ದಿನಗಳ ಕಾಲ ಜನರಿಗೆ ಒಳಿತನ್ನು ಮಾಡೋಣ ಬೇರೆಯವರಿಗೆ ಕೆಡುಕನ್ನು ಬಯಸೋದು ಬೇಡ ಅಥವಾ ನಮ್ಮ ಕೆಲಸಗಳ ಮೂಲಕ ಬೇರೆಯವರನ್ನು ಹಾಳು ಮಾಡೋದು ಬೇಡ ಅಂತ. ಆದ್ರೆ ಗುರೂಜಿ ಬಗ್ಗೆ ಎರಡು ರೀತಿಯಾದ ಚರ್ಚೆಗಳು ನಡಿತಾ ಇವೆ. ಒಂದಿಷ್ಟು ಜನ ಅವರನ್ನು ಹಾಡಿ ಹೊಗಳುತ್ತಾ ಇದ್ರೆ ಒಂದಷ್ಟು ಜನ ಮೋಸ ಅನ್ಯಾಯ ಮಾಡಿಬಿಟ್ರು,ವಾಸ್ತು ಹೆಸರಲ್ಲಿ ಜನರಿಗೆ ದಿಕ್ಕು ತಪ್ಪಿಸಿದರು ಜನಕ್ಕೆ, ಆ ಮೂಲಕ ಕೋಟ್ಯಾಂತರ ಹಣವನ್ನು ಗಳಿಸಿದ್ದರು ಅದೆಲ್ಲ ಪಾಪದ ಹಣ ಎಂದು ಹೇಳುತ್ತಿದ್ದಾರೆ. ಬೇರೆಯರ್ವ ಬದುಕನ್ನು ಸರಿ ಮಾಡಲಿ ಹೋಗ್ತಾ ಇದ್ರೂ ಆದ್ರೆ ತಮ್ಮ ಜೀವನವನ್ನೇ ಸರಿ ಮಾಡಿಕೊಳ್ಳಲು ಸಾಧ್ಯ ಆಗಲಿಲ್ಲ. ತಮ್ಮ ಭವಿಷ್ಯ ತಮ್ಗೆ ಗೊತ್ತಾಗಲಿಲ್ವ ಅಂತ ಕೇಳುತ್ತಿದ್ದಾರೆ. ತಾವು ಹೋಗುವ ಹೋಟೆಲ್ ತಾವು ಕುಳಿತುಕೊಳ್ಳುವ ಸೋಫಾ ದ ವಾಸ್ತು ಅವರಿಗೆ ಗೊತ್ತಾಗಲಿಲ್ವ ಈ ರೀತಿಯಾಗಿ ಕೆಲವೊಂದಿಷ್ಟು ಚರ್ಚೆಗಳು ನಡಿತಾ ಇದವೆ. ಇನ್ನೂ ತುಂಬಾ ಜನರ ಕಾಮೆಂಟ್ ಗಮನಿಸಿದರೆ, ಸರಿ ಇದ್ದಂಥ ಮನೆಗಳನ್ನು ಕೆಡವಿಬಿಟ್ರು, ಐಷಾರಾಮಿ ಬಂಗಲೆಗಳನ್ನು ಕೆಡವಿದ್ರು, ವಾಸ್ತುವಿನ ಹೆಸರಲ್ಲಿ ಬಡವರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡಿದ್ರು, ಹೀಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಚರ್ಚೆ ಆಗ್ತಾ ಇವೆ.
ಒಬ್ಬ ವ್ಯಕ್ತಿ ಸತ್ತಾಗ ಪರ ವಿರೋಧ ಎರಡೂ ರೀತಿ ಮಾತುಗಳು ಕೇಳಿ ಬರುತ್ತವೆ. ಆದ್ರೆ ಕೊನೆಗೆ ಜನರು ಒಂದು ಅಂತ್ಯ ಹಂತಕ್ಕೆ ಬರ್ತಾರೆ ಅದು ಏನು ಅಂದ್ರೆ ಗುರೂಜಿ ಗಳಿಸಿದ್ದು ಪಾಪದ ಹಣ ಅಂತ. ಇದು ಜನಸಾಮಾನ್ಯರ ಚರ್ಚೆ. ಗುರೂಜಿ ಅವರ ಕೊಲೆಗೆ ಅಸಲಿ ಕಾರಣ ಏನು ಅಂತ ನೋಡೋಣ. ಅಷ್ಟು ಬರ್ಬರವಾಗಿ ಕೊಲೆ ಮಾಡಲು ಕಾರಣ ಏನು ಅಂತ ನೋಡೋಣ. ಇದರಲ್ಲಿ ಪ್ರಮುಖ ಆರೋಪಿ ಮಹಾಂತೇಶ್. ಇವರು ನೀಲಿ ಕಣ್ಣಿನ ಹುಡುಗ ಅಂತ ಕರೆಸಿಕೊಳ್ಳುತ್ತ ಇದ್ರು. ಗುರೂಜಿಯ ತೀರಾ ಆಪ್ತ ವಲಯದಲ್ಲಿ ಇರುತ್ತಿದ್ದರು. ಮಂಜುನಾಥ್ ಗೆ ಸಹ ಲಕ್ಷಗಟ್ಟಲೆ ಸಂಬಳ ಕೊಟ್ಟು ಇಟ್ಟುಕೊಂಡಿದ್ದರೂ. ಈ ರೀತಿ ಮಹಾಂತೇಶ್ ಮಂಜುನಾಥ್ ವನಜಾಕ್ಷಿ ಗೆ ಒಳ್ಳೆಯ ಸಂಬಳ ಕೊಟ್ಟು ನಡೆಸಿಕೊಂಡು ಹೋಗ್ತಾ ಇದ್ರು. ಮಹಾಂತೇಶ್ ವಾಸ್ತು ಕೇಳಲು ಬಂದ ಜನರ ಹತ್ತಿರ ಹಣವನ್ನು ಲಪಟಾಯಿಸುತ್ತ ಇದ್ರು. ಈ ವಿಚಾರ ಗುರೂಜಿಗೆ ಗೊತ್ತಾಗುತ್ತೆ. ಒಂದೆರಡು ಬಾರಿ ಅವನಿಗೆ ವಾರ್ನ್ ಮಾಡ್ತಾರೆ. ಎಷ್ಟೇ ಎಚ್ಚರಿಕೆ ಕೊಟ್ರೂ ಆತ ಯಾವುದಕ್ಕೂ ಬಗ್ಗಲ್ಲ ಅಂತಿಮವಾಗಿ ಆತನಿಗೆ ಪನಿಶ್ಮೆಂಟ್ ಎನ್ನುವ ರೀತಿಯಲ್ಲಿ ಆತನಿಗೆ ಉತ್ತರ ಭಾರತಕ್ಕೆ ಟ್ರಾನ್ಸಫರ್ ಮಾಡ್ತಾರೆ. ಆತನ ಸಂಬಳವನ್ನು ಪಕ್ಷದಿಂದ ಸಾವಿರಕ್ಕೆ ಇಳಿಸುತ್ತಾರೆ. ಆಗ ಆತ ಅಷ್ಟು ಕಡಿಮೆ ಸಂಬಳದಲ್ಲಿ ಬದುಕನ್ನು ಕಟ್ಟಿಕೊಳ್ಳಲು ಆಗದೆ ಕೆಲಸವನ್ನು ಬಿಟ್ಟು ಬಿಡುತ್ತಾನೆ. ಕೆಲಸ ಬಿಟ್ಟ ನಂತರ ಗುರೂಜಿ ಮೇಲೆ ಹಗೆ ಸಾಧಿಸಲು ಶುರು ಮಾಡ್ತಾನೆ.
ವನಜಾಕ್ಷಿ ಸಹ ಗುರೂಜಿ ಹತ್ತಿರ ಕೆಲ್ಸ ಮಾಡ್ತಾ ಇದ್ರೂ ಆದ್ರೆ ಈ ಗಂಡ ಮಹಾಂತೇಶ್ ವಿಚಾರಕ್ಕೆ ಕಿರಿ ಕಿರಿ ಆದ್ದರಿಂದ ಅವರೋ ಸಹ ಕೆಲ್ಸ ಬಿಟ್ರು. ಇಷ್ಟೆಲ್ಲಾ ಆದಮೇಲೆ ಸಮಯ ಸಾಧಿಸಿ ಗುರೂಜಿ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ಲಾನ್ ಮಾಡಿದ್ದ. ಗುರೂಜಿ ವಾಸ್ತು ಪ್ರಕಾರ ಅಪಾರ್ಟ್ಮೆಂಟ್ ನಿರ್ಮಿಸಿ ಅವುಗಳನ್ನು ಮಾರಿ ಹಣ ಮಾಡುತ್ತಿದ್ದರು. ಇದೆ ರೀತಿ ಅಪರ್ಮೆಂಟ್ ನ ಒಂದು ಫ್ಲಾಟ್ ನ ಮಹಾಂತೇಶ್ ಖರೀದಿ ಮಾಡಿದ್ದ. ಅಲ್ಲೇ ವನಜಾಕ್ಷಿ ಮಹಾಂತೇಶ್ ವಾಸ ಇರ್ತಾರೆ. ಹೇಗಾದರೂ ಮಾಡಿ ಗುರೂಜಿ ಮೇಲೆ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಅವರು ನಿರ್ಮಿಸಿರುವ ಫ್ಲಾಟ್ ಅಲ್ಲಿ ವಿದ್ಯುತ್ ವ್ಯವಸ್ಥೆ ಹಾಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಅಂತ ಕನ್ಸೂಮರ್ ಕೋರ್ಟ್ ಗೆ ಹೋಗ್ತಾರೆ. ಕೋರ್ಟ್ ಅಲ್ಲಿ ಗುರೂಜಿ ಮಹಾಂತೇಶ್ ನಡುವೆ ಫೈಟ್ ನಡೆಯುತ್ತೆ ಕೊನೆಗೆ ಕೇಸ್ ಮಹಾಂತೇಶ್ ಕಡೆಗೆ ಹೋಗುವ ಸಂದರ್ಭದಲ್ಲಿ. ಗುರೂಜಿ ಮಹಾಂತೇಶ್ ಗೆ ಒಂದಿಷ್ಟು ಹಣವನ್ನು ಕೊಡ್ತೀನಿ ಕೇಸ್ ವಾಪಸ್ ತಗೊ ಅಂತಾರೆ. ಆದ್ರೆ ಕೇಸ್ ವಾಪಸ್ ಆದಮೇಲೆ ಗುರೂಜಿ ದುಡ್ಡು ಕೊಡಲಿಲ್ಲ. ಇದೆ ವಿಷಯಕ್ಕೆ ಮಾತುಕತೆಗೆ ಹೋಟೆಲ್ ಗೆ ಕರೆಸಿದ್ದರು. ಆದ್ರೆ ಕುಡಿದ ಮತ್ತಿನಲ್ಲಿ ಮಹಾಂತೇಶ್ ಹಾಗಿ ಮಂಜುನಾಥ್ ಇಬ್ರೂ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಮೇಲೆ ಸ್ವಲ್ಪ ದೂರ ಓಡಿ ಹೋಗಿದ್ದಾರೆ ಆದ್ರೆ ಅವರಿಗೆ ನಾವು ಎಲ್ಲೆ ಹಿದ್ರು ಪೊಲೀಸರು ಬಿಡಲ್ಲ ಹಾಗಾಗಿ ತಾವೇ ಫೋನ್ ಮಾಡಿ ತಾವು ಇರುವ ಜಾಗಕ್ಕೆ ಕರೆಸಿಕೊಂಡು ತಪ್ಪು ಒಪ್ಪಿಕೊಂಡಿದ್ದಾರೆ. ಕೆಲವರು ಪೊಲೀಸರು ಕಾರ್ಯಾಚರಣೆ ಮಾಡಿ ಅವರನ್ನು ಹಿಡಿದೀದ್ದಾರೆ ಅಂದುಕೊಂಡಿದ್ದಾರೆ ಆದ್ರೆ ಅಸಲಿ ಸತ್ಯ ಇದೇ.