ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನು ಮಗಳ ಎದುರೇ ಕೊಂದ ಗಂಡ! ಬಚ್ಚಲು ಮನೆಗೂ ಕ್ಯಾಮೆರಾ ಇಟ್ಟಿದ್ದ ಭೂಪ!!!

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನು ಮಗಳ ಎದುರೇ ಕೊಂದ ಗಂಡ! ಬಚ್ಚಲು ಮನೆಗೂ ಕ್ಯಾಮೆರಾ ಇಟ್ಟಿದ್ದ ಭೂಪ!!!

ನಮಸ್ತೆ ಪ್ರಿಯ ಓದುಗರೇ, ಹೆಣ್ಣು ಮಕ್ಕಳು ಹುಟ್ಟಿದ ಮೇಲೆ ಪೋಷಕರಿಗೆ ಒಂದು ಜವಾಬ್ದಾರಿ ಬಂದು ಬಿಡುತ್ತೆ. ಆ ಮಗಳನ್ನು ಬೆಳೆಸಿ ಒಂದು ಮನೆಗೆ ಮದುವೆ ಮಾಡಿ ಕೊಡ್ತಾರೆ. ಮದುವೆ ಮಾಡಿದ್ದೀವಿ ಅಂತ ಕುಳಿತರೆ ಸಾಲಲ್ಲ. ಮದುವೆ ಆದ ಮೇಲೆ ಮಗಳು ಗಂಡನ ಮನೆಯಲ್ಲಿ ಹೇಗಿದ್ದಾಳೆ? ಸುಖವಾಗಿದ್ದಾಳೋ ಮನೆಯವರು ಆಕೆಗೆ ತೊಂದರೆ ಕೊಡಿತ್ತಿದ್ದರೋ ಏನೋ ಅಂತ ನೋಡ್ತಾನೆ ಇರಬೇಕು. ಸ್ನೇಹಿತರೆ ಇವತ್ತು ಅಂಥದ್ದೇ ಒಂದು ಸ್ಟೋರಿ ಹೇಳ್ತೀವಿ ಕೇಳಿ. ಮುದ್ದಾದ ಹುಡುಗಿ ಆಕೆ. ಆಕೆಯನ್ನು ಗಿಳಿಯಂತೆ ಸಾಕಿ ಗಿಡುಗನ ಕೈಗೆ ಕೊಟ್ಟು ಆ ಗಿಡುಗ ಆಕೆಯನ್ನು ಕುಕ್ಕಿ ತಿಂದಿದೆ. ಅಂದ್ರೆ ಪತ್ನಿ ಗಂಡನ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ತನ್ನ ಪುಟ್ಟ ಮಗಳ ಎದುರೇ ಹೆಂಡತಿಯನ್ನು ಸಾಯಿಸಿದ್ದಾನೆ. ಇದು ನಡೆದಿರುವುದು ಮಂಡ್ಯ ಜಿಲ್ಲೆಯ ಶ್ರೀಂಗಪಟ್ಟಣ ದ ಗೆಂಡೆ ಹೊಸಹಳ್ಳಿ ಎಂಬ ಗ್ರಾಮದಲ್ಲಿ. 9 ವರ್ಷಗಳ ಹಿಂದೆ ಯೋಗಿತಾ ಮತ್ತೆ ರವಿಗೆ ಮದುವೆ ಮಾಡಲಾಗಿತ್ತು. ಯೋಗಿತಾ ಮತ್ತೆ ರವಿಗೆ 10 ವರ್ಷಗಳ ವಯಸ್ಸಿನ ಅಂತರ ಇತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಇಬ್ಬರೂ ಹೊಂದಿಕೊಂಡು ಹೋಗ್ತಾ ಇದ್ರು. ಆ ನಂತರ ಇಬ್ಬರು ಮಕ್ಕಳು ಹುಟ್ಟುತ್ತಾರೆ. ಮಕ್ಕಳಾದ ನಂತರ ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯ ಬಿರುಕು ಕಂಡು ಬರುತ್ತದೆ. ಅದಕ್ಕೆ ಕಾರಣ ಏನು ಅಂದ್ರೆ ರವಿಯ ದುಶ್ಚಟಗಳು, ಬೇರೆ ಬೇರೆ ರೀತಿಯ ವರ್ತನೆ ಅಂದ್ರೆ ಈ ರವಿಗೆ ಅದೇ ಊರಿನ ಶಿಲ್ಪಾ ಎಂಬ ಹುಡುಗಿ ಜೊತೆ ಅಕ್ರಮ ಸಂಬಂಧ ಇರುತ್ತೆ. ಯೋಗಿತಾ ನ ಮದುವೆ ಆಗುವ ಮೊದಲಿನಿಂದಲೇ ಶಿಲ್ಪಾ ಅನ್ನೋ ಹುಡುಗಿ ಜೊತೆ ಅಕ್ರಮ ಸಂಬಂಧ ಇರುತ್ತೆ. ಮೊದಲು ಯೋಗಿತಾ ಮನೆಯವರಿಗೆ ಇದು ಗೊತ್ತಿರಲಿಲ್ಲ. ಮದುವೆ ಆಗಿ ಮಕ್ಕಳಾದ ಮೇಲೆ ರವಿಯ ಈ ವಿಷಯ ಯೋಗಿತಾ ಮನೆಯವರಿಗೆ ರವಿಯ ಅಕ್ರಮ ಸಂಬಂಧ ಬಗ್ಗೆ ಗೊತ್ತಾಗುತ್ತೆ.

ಯಾವ ಹೆಂಡತಿಯೂ ಇದನ್ನು ಸಹಜವಾಗಿ ಸಹಿಸುವುದಿಲ್ಲ ಹೀಗಾಗಿ ಯೋಗಿತಾ ಗಂಡನಿಗೆ ಪ್ರಶ್ನೆ ಮಾಡ್ತಾಳೆ. ಹೀಗಾಗಿ ಅವ್ರ ನಡುವೆ ಬಿರುಕು ಕಾಣಿಸುತ್ತೆ. ನಂತರ ಈ ವಿಚಾರ ಯೋಗಿತಾ ಮನೆಯವರಿಗೂ ಗೊತ್ತಾಗುತ್ತೆ. ನಂತರ ಎಲ್ಲರೂ ಸೇರಿ ರಾಜಿ ಪಂಚಾಯಿತಿ ಮಾಡಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಪಡ್ತಾರೆ. ಹೀಗೆ ಹೆಂಗೋ ನಡೆದುಕೊಂಡು ಹೋಗ್ತಾ ಇತ್ತು. ಈ ನಡುವೆ ರವಿ ತಾನು ಮಾಡುವ ಹಲ್ಕಾ ಕೆಲ್ಸ ಮಾಡ್ತಾ ಇದ್ರೂ ತನ್ನ ಪತ್ನಿ ಯೋಗಿತಾ ಮೇಲೆ ಡೌಟು. ಆತ ಅದೆಂಥ ಸೈಕೋಪಾಥ್ ಇರಬೇಕು ಅಂದ್ರೆ ಆತ ಮನೆ ತುಂಬಾ ಕ್ಯಾಮೆರಾ ಇಟ್ಟಿದ್ದ. ಬೆಡ್ರೂಮ್ ಕಿಚನ್ ಅಷ್ಟು ಮಾತ್ರ ಅಲ್ಲ ಬಾತ್ರೂಮ್ ಅಲ್ಲಿ ಸಹ ಕ್ಯಾಮೆರಾ ಇಟ್ಟಿದ್ದ. ಪ್ರತಿದಿನ ಇದೆಲ್ಲವನ್ನೂ ವೀಕ್ಷಿಸುವ ಕೆಲ್ಸ ಮಾಡ್ತಾ ಇದ್ದ. ಎಲ್ಲಿಯವರೆಗೆ ಅಂದ್ರೆ ರವಿಯ ತಾಯಿ ಹೇಳುವ ಪ್ರಕಾರ ನನ್ನನ್ನು ಸಹ ನನ್ನ ಮಗ ಬೆತ್ತಲಾಗಿ ನೋಡಿಬಿಟ್ಟಿದ್ದಾನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗಂಡ ಹೆಂಡತಿ ನಡುವೆ ಗಲಾಟೆ ಜಗಳ ನಡಿತಾ ಇತ್ತು. ಹೆಂಡತಿಯ ಏನೋ ತಪ್ಪು ಗೊತ್ತಾಗದೆ ಅವಳ ಮೇಲೆ ಸುಖ ಸುಮ್ಮನೆ ಗೋಬೆ ಕೂರಿಸಲು ಯೋಗಿತಾ ಮನೆಯವರ ಮುಂದೆ ಈಕೆಗೆ ಅಕ್ರಮ ಸಂಬಂಧ ಇದೆ ಅಂತ ಹೇಳುತ್ತಿದ್ದ. ಇದೆಲ್ಲ ನಡಿತಾ ಇತ್ತು. ಗಂಡನಿಗೆ ಬುದ್ಧಿವಾದ ಹೇಳಿ ಹೇಳಿ ಯೋಗಿತಾ ಗೆ ಸಾಕಾಗಿತ್ತು. ಅಂತಿಮವಾಗಿ ಒಂದು ದಿನ ರವಿ ಶಿಲ್ಪ ಜೊತೆ ಹೊರಗಡೆ ಓಡಾಡಲು ಶುರು ಮಾಡಿದ್ದ. ಇದೆಲ್ಲ ಮನೆಯವರು ಕಣ್ಣಾರೆ ಕಂಡಿದ್ರು ಆದ್ರೆ ಅವರಿಗೆ ಸರಿಯಾದ ರೀತಿಯಲ್ಲಿ ಸಾಕ್ಷಿ ಸಿಕ್ಕಿರಲಿಲ್ಲ. ಆದ್ರೆ ಒಂದು ದಿನ ಯೋಗಿತಾ ತನ್ನ ತವರು ಮನೆಗೆ ಹೋಗಿದ್ದಾಗ ತನ್ನ ಮನೆಯಲ್ಲಿಯೇ ರವಿ ಶಿಲ್ಪ ಜೊತೆ ಲಾಕ್ ಆಗ್ತಾನೆ. ಇದೆಲ್ಲ ಗೊತ್ತಾಗಿ ಸುತ್ತ ಮುತ್ತ ಮನೆಯವರು ಹೊರಗಡೆಯಿಂದ ಲಾಕ್ ಮಾಡಿ ಎಲ್ಲಾ ರಾಧಾಂತ ಆಗುತ್ತೆ.

ಆಮೇಲೆ ಶಿಲ್ಪ ಕೂಡ ಮದುವೆ ಆಗಿ ಗಂಡನಿರುವ ಕಾರಣ ಆಕೆಯ ಸಂಸಾರ ಹಾಳಾಗಬಾರದು ಆಕೆಯನ್ನು ಬಿಟ್ಟು ಕಳಿಸುತ್ತಾರೆ. ರವಿ ಕೂಡ ಆ ಸಮಯದಲ್ಲಿ ಭಾಷೆ ಕೊಟ್ಟಿರುತ್ತಾನೆ ಇನ್ಮೇಲೆ ಈ ತರಹ ನಾನು ಮಾಡಲ್ಲ ಅಂತ. ಹೀಗಾಗಿ ಯೋಗಿತಾ ನಂಬಿದ್ರು ಇನ್ಮೇಲೆ ನಮ್ಮ ಸಂಸಾರ ಸರಿ ಹೋಗುತ್ತೆ ಅಂತ. ಮತ್ತೆ ಆತನ ಬುದ್ದಿ ತೋರಿಸಿಬಿಟ್ಟ ಅಂದ್ರೆ ಮತ್ತೆ ಶಿಲ್ಪ ಜೊತೆ ಓಡಾಡಲು ಶುರು ಮಾಡುತ್ತಾನೆ. ಇದನ್ನು ಯೋಗಿತಾ ಗೆ ಸಹಿಸಿಕೊಳ್ಳಲು ಸಾಧ್ಯ ಆಗಲಿಲ್ಲ. ಜೋರ್ ಜೋರಾಗಿ ಗಲಾಟೆ ಮಾಡಲು ಶುರು ಮಾಡ್ತಾಳೆ. ದಿನವೂ ಇದೆ ರೀತಿ ಜಗಳ ನಡಿತಾ ಇರುತ್ತೆ. ಇದೆ ರೀತಿ ಕೊಲೆ ನಡೆದ ದಿನವೂ ಜಗಳ ಶುರು ಆಗಿತ್ತು. ಮಕ್ಕಳು ಒಂದು ಕಡೆ ಕೂತು ತಿಂಡಿ ತಿಂತಾ ಇದ್ರು. ಮಕ್ಕಳಿಗೆ ಗಲಾಟೆ ನಡಿತಾ ಇದ್ರೂ ಕೂಡ ಕಾಮನ್ ಆಗಿಬಿಟ್ಟಿತ್ತು ದಿನ ಅದೇ ನೋಡಿ ನೋಡಿ. ಅಂದು ನಡೆದ ಜಗಳ ಎಲ್ಲಿಗೆ ಹೋಗುತ್ತೆ ಅಂದ್ರೆ, ರವಿ ಒಂದು ಸೀರೆಯನ್ನು ತೆಗೆದುಕೊಂಡು ಯೋಗಿತಾ ಕೊರಳಿಗೆ ಬಿಗಿದುಬಿಡ್ತಾನೆ. ಎಲ್ಲಿಯವರೆಗೆ ಅಂದ್ರೆ ಉಸಿರು ಕಟ್ಟುವವರೆಗೋ ಬಿಗಿತಾನೆ. ಮಗಳ ಮುಂದೆಯೇ ಆತ ಬಿಗಿಯಾಗಿ ಹೆಂಡತಿಯ ಕೊರಳಿಗೆ ಸೀರೆ ಬಿಗಿತಾನೇ ಕೊನೆಗೆ ಯೋಗಿತಾ ಗೆ ಉಸಿರಾಡಲು ಸಾಧ್ಯ ಆಗಲ್ಲ. ಯೋಗಿತಾ ಪ್ರಾಣ ಪಕ್ಷಿ ಹಾರಿ ಹೋಗುತ್ತೆ. ಈ ಕಡೆ ಪುಟ್ಟ ಕಂದಮ್ಮನಿಗೆ ಕೊನೆಗೆ ಏನೋ ಆಗ್ತಾ ಇದೆ ಅಂತ ಗೊತ್ತಾಗಿ ಆಕೆ ಹೊರಗಡೆ ಓಡಿ ಹೋಗಿ ಅಕ್ಕ ಪಕ್ಕದ ಮನೆಯವರನ್ನು ಕರಿತಾಳೆ. ಅವರು ಬರುವಷ್ಟರಲ್ಲಿ ಯೋಗಿತಾ ಪ್ರಾಣ ಹೋಗಿತ್ತು. ಇಷ್ಟೆಲ್ಲಾ ಆಗುತ್ತಿದ್ದ ಹಾಗೆ ರವಿಗೆ ಆತಂಕ ಆಗಲು ಶುರು ಆಗುತ್ತೆ. ತಕ್ಷಣ ಅವನು ಏನು ಮಾಡ್ತಾನೆ ಯೋಗಿತಾ ತವರು ಮನೆಯವರಿಗೆ ಫೋನ್ ಮಾಡಿ ಯೋಗಿತಾ ಗೆ ಹಾರ್ಟ್ ಅಟ್ಟ್ಯಾಕ್ ಆಗಿದೆ ಅಂತ ಕಥೆ ಕಟ್ಟುತ್ತಾನೆ. ಆದ್ರೆ ಇದನ್ನು ಯಾರೋ ನಂಬಲ್ಲ. ತವರು ಮನೆಯವರು ಪೊಲೀಸರು ಬರುವಷ್ಟರಲ್ಲಿ ರವಿ ಎಸ್ಕೇಪ್ ಆಗಿರುತ್ತಾನೆ. ಆತನಿಗೆ ಪೊಲೀಸರು ಈಗ ಬಲೆ ಬೀಸಿದ್ದಾರೆ. ನೋಡಿ ಗಂಡನ ಅನೈತಿಕ ಸಂಬಂಧ ದಿಂದ ಆ ಪುಟ್ಟ ಕಂದಮ್ಮಗಳು ತಾಯಿ ಇಲ್ಲದೆ ತಬ್ಬಲಿ ಆಗುವ ಪ್ರಸಂಗ ಎದುರಾಯ್ತು.

ಸುದ್ದಿ