ಮಧ್ಯಪಾನ ಮಾಡಿದರೆ ಹೆಣ್ಣಿಗಿಂತ ಗಂಡಿಗೆ ತೊಂದರೆ ಜಾಸ್ತಿ.!!!

ಮಧ್ಯಪಾನ ಮಾಡಿದರೆ ಹೆಣ್ಣಿಗಿಂತ ಗಂಡಿಗೆ ತೊಂದರೆ ಜಾಸ್ತಿ.!!!

ನಮಸ್ತೆ ಪ್ರೀತಿಯ ಆತ್ಮೀಯ ಓದುಗರೇ, ಮನುಷ್ಯನನ್ನು ಸರ್ವನಾಶ ಮಾಡುವ ಕೆಟ್ಟ ಚಟಗಳಲ್ಲಿ ಮದ್ಯಪಾನ ಅಥವಾ ಕುಡಿತ ಅತ್ಯಂತ ಅಪಾಯಕಾರಿಯಾದುದು. ಒಮ್ಮೆ ಕುಡಿತದ ಚಟಕ್ಕೆ ಬಲಿಯಾದರೆ ಜೀವನಪರ್ಯಂತ ಅದನ್ನು ಬಿಡಲು ಸಾಧ್ಯವಿಲ್ಲ. ಕುಡಿತವು, ಕುಡಿತ ಚಟಕ್ಕೆ ಬಲಿಯಾದ ವ್ಯಕ್ತಿಯನ್ನೇ ಅಲ್ಲದೆ, ಅವನನ್ನು ಅವಲಂಬಿಸಿದ ಹೆಂಡತಿ ಮಕ್ಕಳನ್ನೂ ನಿರ್ಗತಿಕರನ್ನಾಗಿ ಮಾಡುತ್ತದೆ. ಮನೆ ಹೊಲಗಳನ್ನೂ, ಒಡವೆ ವಸ್ತುಗಳನ್ನೂ ಮಾರುವಂತೆ ಮಾಡುತ್ತದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಕುಡಿತಕ್ಕೆ ಹಣ ಬೇಕಾಗುತ್ತದೆ. ಇದರಿಂದ ಕುಡುಕರು ಕಳ್ಳತನ ಕೊಲೆಗಳಿಗೂ ಹೇಸುವುದಿಲ್ಲ. ಕುಡಿತ ಹಿಂದಿನ ಕಾಲದಿಂದಲೂ ಮನುಷ್ಯನಿಗೆ ಅಂಟಿಕೊಂಡಿರುವ ಬೆಂಬಿಡದ ಭೂತ, ಸೋಮಪಾನ, ಸುರಾಪಾನ ಎಂಬ ಹೆಸರುಗಳಿಂದ ಋಷಿಗಳ ಕಾಲದಲ್ಲಿ ಇದು ಪ್ರಸಿದ್ಧವಾಗಿತ್ತು. ಈಚೆಗೆ ಹೆಂಡ, ಸಾರಾಯಿ, ವೈನ್, ಬ್ರಾಂದಿ, ರಮ್, ವಿಸ್ಕಿ-ಇತ್ಯಾದಿ ನಾನಾ ರೂಪಗಳಲ್ಲಿ ಮದ್ಯವು ಜನರನ್ನು ಹುಚ್ಚರನ್ನಾಗಿ ಮಾಡಿದೆ. ಮದ್ಯ ಸೇವಿಸಿದಾಗ ಸ್ವಲ್ಪಕಾಲ ಮನುಷ್ಯ ಒಂದು ರೀತಿಯ ಉಲ್ಲಾಸ ಕಾಣುತ್ತಾರೆ. ದುಃಖವನ್ನು ಮರೆಯುತ್ತಾನೆ. ಆದರೆ ಅಮಲು ಇಳಿದ ಮೇಲೆ ಅವನು ಮತ್ತೆ ದುಃಖಿಯಾಗುತ್ತಾನೆ. ಕುಡಿತದಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಪರಿಹಾರ ಕಾಣದ ಸಮಸ್ಯೆಗಳನ್ನು ಮರೆಯಲು ಮನುಷ್ಯ ಮತ್ತೆ ಮತ್ತೆ ಕುಡಿಯುತ್ತಲೇ ಹೋಗುತ್ತಾನೆ.

ಮಧ್ಯಪಾನ ಮಾಡಿದರೆ ಗಂಡು ಹಾಗೂ ಹೆಣ್ಣಿನ ಮೇಲೆ ವಿಭಿನ್ನವಾದ ಪರಿಣಾಮ ಬೀರುತ್ತದೆ ಅಂತ ಇತ್ತೀಚೆಗೆ ಇಲಿಗಳ ಮೇಲೆ ನಡೆಸಿರುವ ಸಂಶೋಧನೆಯಿಂದ ತಿಳಿದು ಬಂದಿದೆಯಂತೆ. ಆಲ್ಕೋಹಾಲ್ ನ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಳಸುತ್ತಾರೆ. ಹಾಗೆ ಇದು ಪರಿಣಾಮಕಾರಿ ಮಾದಕ ವಸ್ತುಗಳಲ್ಲಿ ಒಂದು. ಇನ್ನೂ ಕೆಲವರಿಗೆ ಮಧ್ಯಪಾನ ಚಟ ಆಗಿದ್ದರೆ, ಇನ್ನೂ ಕೆಲವರು ಒತ್ತಡ ಖಿನ್ನತೆಯಿಂದ ಮಧ್ಯಪಾನ ಮಾಡುತ್ತಾರೆ. ಮಧ್ಯಪಾನ ಮಾಡಿದ ತಕ್ಷಣ ಅದು ಮೆದುಳಿನ ಮೇಲೆ ಪರಿಣಾಮ ಬೀರೋಕೆ ಶುರು ಮಾಡುತ್ತೆ. ಹೊಸ ಸಂಶೋಧನೆ ಒಂದರಲ್ಲಿ ಮಧ್ಯಪಾನ ಗಂಡು ಹಾಗೂ ಹೆಣ್ಣು ಮೆದುಳುಗಳ ಮೇಲೆ ಬೇರೆ ಬೇರೆ ರೀತಿಯಾಗಿ ಪರಿಣಾಮ ಬೀರುವುದು ಸಾಬೀತಾಗಿದೆ. ಇದಕ್ಕೆ ಆಧಾರ ಅನ್ನೋ ರೀತಿಯಾಗಿ ವಿಜ್ಞಾನಿಗಳು ಮದ್ಯಪಾನದ ಪರಿಣಾಮಗಳನ್ನು ಕುರಿತು ಇಲಿಗಳ ಮೆದುಳಿನ ಚಟುವಟಿಕೆ ಗಳ ಬದಲಾವಣೆಯನ್ನು ಗಮನಿಸಿದ್ದಾರೆ. ಆದ್ರೆ ಈ ಬದಲಾವಣೆ ಮತ್ತು ಪರಿಣಾಮ ಗಂಡು ಮತ್ತು ಹೆಣ್ಣು ಇಳಿಗಳಲ್ಲಿ ವಿಭಿನ್ನವಾಗಿ ಕಂಡು ಬಂದಿದೆ. ಅಮೆರಿಕಾದಲ್ಲಿ ಶೇಕಡಾ 85 ಪರ್ಸೆಂಟ್ ಆಲ್ಕೋಹಾಲ್ ಸೇವನೆ ಮಾಡುವವರಲ್ಲಿ ಶೇಕಡಾ 5 ರಷ್ಟು ಮಂದಿಯಲ್ಲಿ ಮಾನಸಿಕ ಸಮಸ್ಯೆಗಳು ಕಾಡುತ್ತಿದೆಯಂತೆ. ಹೌದು ! ಮಧ್ಯಪಾನ ಮಾಡಿದ ಪುರುಷರಲ್ಲಿ ಮಾನಸಿಕ ಸ್ಥಿತಿ ಬದಲಾವಣೆ ಆಗುವುದು ಕಂಡು ಬಂದಿದೆ. ಆದ್ರೆ ಆಲ್ಕೋಹಾಲ್ ಕೂಡಿದ ಮಹಿಳೆಯರಲ್ಲಿ ಯಾವುದೇ ರೀತಿಯ ಮಾನಸಿಕ ಸ್ಥಿತಿ ಬದಲಾಗದೆ ಇರುವುದು ಕಂಡು ಬಂದಿದೆಯಂತೆ. ಸಾಕಷ್ಟು ಅಧ್ಯಯನಗಳಲ್ಲಿ ಮದ್ಯಪಾನದಿಂದ ಆಗುವ ಪ್ರಯೋಜನಗಳು ಹಾಗೆ ಅದರಿಂದ ವ್ಯಕ್ತಿ ಅನುಭವಿಸುವ ಮಾನಸಿಕ ಸ್ಥಿತಿ ಬಗ್ಗೆ ವಿವರಣೆ ನೀಡಲಾಗಿದೆ. ಇಲ್ಲಿ ನಾವು ತಿಳಿದುಕೊಳ್ಳ ಬೇಕಾಗಿರುವುದು ಏನು ಅಂದ್ರೆ, ಮದ್ಯಪಾನದಿಂದ ಪುರುಷರಿಗೆ ಹೆಚ್ಚು ಎಫೆಕ್ಟ್ ಆಗ್ತಿದೆ ಎನ್ನುವುದನ್ನು ಅರಿತುಕೊಳ್ಳಬೇಕು.

ಸುದ್ದಿ