ತಮಿಳು ನಟ ವಿಕ್ರಮ್ ಗೆ ಹೃದಯಾಘಾತ! ಆರೋಗ್ಯ ಸ್ಥಿತಿ ಗಂಭೀರ..!!!

ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ನಟರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ವಿಧಿ ವಶ ಆದ ನಂತರ ಈ ಸಾಲು ಇನ್ನಷ್ಟು ಜಾಸ್ತಿ ಆಗ್ತಾ ಇದೆ. ಅದಕ್ಕೆ ಅವರಿಗೆ ಇರುವಂಥ ವರ್ಕ್ ಟೆನ್ಷನ್, ಪ್ರಶರ್ ಅಥವಾ ಜೀವನ ಶೈಲಿ ಇದೆಲ್ಲ ಕಾರಣ ಆಗಿರಬಹುದು. ಇದೀಗ ತಮಿಳಿನ ಪ್ರಖ್ಯಾತ ನಟ ವಿಕ್ರಮ್ ಕೂಡ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ನಿನ್ನೆ ಕಾರ್ಯಕ್ರಮ ಒಂದಕ್ಕೆ ವಿಕ್ರಮ್ ತೆರಳಬೇಕಾಗಿತ್ತು. ಇದೆ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಿಸಿದ ನಂತರ ಅವರಿಗೆ ಹೃದಯಾಘಾತ ಆಗಿರುವಂತಹ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ಹೊರಗಡೆ ಬರುತ್ತಿದ್ದ ಹಾಗೆ ಅಭಿಮಾನಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಸಧ್ಯ ನಟ ವಿಕ್ರಮ್ ಅವರಿಗೆ ಐಸಿಯು ನಲ್ಲಿ ಅಂದ್ರೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನ ಮುಂದುವರೆಸಲಾಗಿದೆ. ವಿಕ್ರಮ್ ಅವರಿಗೆ ವಯಸ್ಸು ಬರೀ 56 ವರ್ಷ. 56 ವರ್ಷಕ್ಕೆ ಹೃದಯಾಘಾತಕ್ಕೆ ಒಳಗಾಗಿರುವ ಕಾರಣಕ್ಕಾಗಿ ಸಹಜವಾಗಿ ಸಾಕಷ್ಟು ಪ್ರಶ್ನೆಗಳು ಉದ್ಭವಿಸುತ್ತವೆ. ಈ ವಯಸ್ಸಿಗೇ ಎಲ್ಲಾದರೂ ಹೃದಯಾಘಾತ ಆಗುತ್ತಾ! ಯಾವ ಕಾರಣಕ್ಕೆ ಹೃದಯಾಘಾತ ಆಗ್ತಿದೆ ಅಂತ ಹೇಳಿ. ಸಧ್ಯ ವಿಕ್ರಮ್ ಅವರ ಆರೋಗ್ಯ ಸ್ಥಿತಿ ಸ್ವಲ್ಪ ಮಟ್ಟಿಗೆ ಗಂಭೀರ ಎನ್ನುವ ಸ್ಥಿತಿಯಲ್ಲಿ ಇದೆ. ಮತ್ತೊಂದು ಕಡೆಯಿಂದ ವೈದ್ಯರು ನಿರಂತರವಾಗಿ ಅವರಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ. ಸಧ್ಯಕ್ಕೆ ಆಸ್ಪತ್ರೆ ಕಡೆಯಿಂದ ಯಾವುದೇ ಮಾಹಿತಿ ಹೊರ ಬಂದಿಲ್ಲ. ಅಂದ್ರೆ ಯಾವುದೇ ಹೆಲ್ತ್ ಬುಲೆಟಿನ್ ಕೂಡ ರಿಲೀಸ್ ಆಗಿಲ್ಲ. ಹೆಲ್ತ್ ಬುಲೆಟಿನ್ ರಿಲೀಸ್ ಆದ ನಂತರ ವಿಕ್ರಮ್ ಅವರ ಆರೋಗ್ಯ ಪರಿಸ್ಥಿತಿ ಹೇಗಿದೆ ಅಂತ ತಿಳಿದು ಬರುತ್ತೆ.

ಇನ್ನೂ ವಿಕ್ರಮ್ ಅವರು ಎಲ್ಲರಿಗೂ ಕೂಡ ಗೊತ್ತಿರುವ ಹಾಗೆ ಅನಿಯನ್ ಸಿನೆಮಾ ಮೂಲಕ ಇಡೀ ಭಾರತದಾದ್ಯಂತ ದೊಡ್ಡ ಮಟ್ಟಿಗೆ ಅಭಿಮಾನಿಗಳನ್ನು ಗಳಿಸಿಕೊಂಡರು. ಕರ್ನಾಟದಲ್ಲಿ ಸಹ ದೊಡ್ಡ ಸಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಓರ್ವ ಸಾಮಾನ್ಯ ನಟನ ಮಗನಾಗಿದ್ದ ವಿಕ್ರಮ್ ಅದಾದ ನಂತರ ಹಂತ ಹಂತವಾಗಿ ಸಿನೆಮಾಗಳನ್ನು ಮಾಡಿಕೊಳ್ಳುತ್ತಾ ಇಂದು ಯಶಸ್ಸಿನ ಶಿಖರವನ್ನು ಏರಿದ್ದಾರೆ. ಹಾಗೆ ಅವರು ಆಯ್ಕೆ ಮಾಡಿಕೊಳ್ಳುವ ಕಥೆಗಳ ವಿಚಾರ ಪ್ರತಿಯೊಬ್ಬರಿಗೂ ಗೊತ್ತೇ ಇದೇ. ಒಂದಕ್ಕಂತ ಒಂದು ಭಿನ್ನ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗೆ ಅವರ ನಟನೆಗೆ ಇನ್ಯಾರು ಸರಿ ಸಾಟಿ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವರ ನಟನೆಯೂ ಕೂಡ ಇದೆ ಇನ್ನೂ ಇತ್ತೀಚೆಗೆ ಸಾಲು ಸಾಲು ಸಿನಿಮಾಗಳನ್ನು ಕೂಡ ನಟ ವಿಕ್ರಂ ಒಪ್ಪಿಕೊಂಡಿದ್ದರು.

Leave a comment

Your email address will not be published.