ಗುರೂಜಿ ಹತ್ಯೆ ಪ್ರಕರಣ ಮೂವರು ಆರೋಪಿಗಳು ಅರೆಸ್ಟ್..!!!

ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಯ ಬರ್ಬರ ಕೊಲೆ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಗುರೂಜಿಯ ಆಪ್ತ ಮಹಾಂತೇಶ್ ಶಿರೂರು ಪತ್ನಿ ವನಜಾಕ್ಷಿ, ಮಂಜುನಾಥ ತ್ಹೋಮವಾದ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಗೋಕುಲ್ ರೋಡ್ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಮೂವರು ಧಾರವಾಡ ಜಿಲ್ಲೆಯ ಕಲ್ಗಟ್ಟಗಿ ತಾಲೂಕಿನ ದುಮವಾಡ ಗ್ರಾಮ ವಾಸಿಗಳು ಅಂತ ತಿಳಿದು ಬಂದಿದೆ. ಈ ಕುರಿತು ಶ್ರೀ ಚಂದ್ರಶೇಕರ್ ಸ್ವಾಮೀಜಿ ಅವರ ಬಳಿ ಫೋಟೋ ಲಭ್ಯವಾಗಿವೆ. ಇನ್ನೂ ಮಹಾಂತೇಶ್ ಶಿರೂರ್ ಸಹ ತನ್ನ ಫೆಸ್ ಬುಕ್ ನಲ್ಲಿ ಅಧರ್ಮ ತಾಂಡವ ಆಡ್ತಾ ಇರುವಾಗ ದುಷ್ಟರನ್ನು ನಾಶ ಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನು ಬರುವುದಾಗಿ ವಚನ ನೀಡಿರುವೆ ಪ್ರಭು ಇನ್ನೂ ವಿಳಂಬ ಏಕೆ ಭಗವಂತ? ಆದಷ್ಟು ಬೇಗ ಅವತರಿಸು ಪ್ರಭು.! ಸಂಭವಾಮಿ ಯುಗೇ ಯುಗೇ ಅಂತ ಹೀಗೆ 5 ದಿನಗಳ ಹಿಂದೆ ಫೆಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ.

ಇದು ಪಕ್ಕಾ ಪೂರ್ವ ನಿಯೋಜಿತ ಅಂತ ಅಂದಾಜಿಸಲಾಗಿದೆ. ಗುರೂಜಿಯ ಬರ್ಬರ ಕೊಲೆ ಬೇನಾಮಿ ಆಸ್ತಿಗಾಗಿ ನಡೆಯಿತಾ ಎಂಬ ಅನುಮಾನ ವ್ಯಕ್ತವಾಗಿದ್ದು, ಆರೋಪಿ ವನಜಾಕ್ಷಿ ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿ ಆಗಿದ್ದು, 2019ರ ವರೆಗೆ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡ್ತಾ ಇದ್ರು, ಗುರೂಜಿ ವನಜಾಕ್ಷಿ ಹೆಸರಿಗೆ ಗೋಕುಲ ರಸ್ತೆ ಬಳಿ ಅಪಾರ್ಟ್ಮೆಂಟ್ ಮತ್ತು ಹಲವು ಆಸ್ತಿಗಳನ್ನು ನೋಂದಣಿ ಮಾಡಿಸಿದ್ದರು. ಈ ಬೇನಾಮಿ ಆಸ್ತಿಯನ್ನು ವಾಪಸ್ ಹಿಂದಿರುಗಿಸಲು ಕೇಳಿದಾಗ ಅಥವಾ ಆ ಆಸ್ತಿಯನ್ನು ಮಾರಲು ಹೇಳಿದ್ದಕ್ಕೆ ಮಹಾಂತೇಶ್ ಶಿರೂರು ಗುರೂಜಿಯ ಬರ್ಬರ ಕೊಲೆ ಮಾಡಿದ್ದಾನೆ ಎಂದು ಊಹಿಸಲಾಗಿದೆ.

Leave a comment

Your email address will not be published. Required fields are marked *