ಚಳಿ ಚಳಿ ಮಳೆಗೆ ಬಿಸಿ ಬಿಸಿ ಜೋಳವನ್ನು ಚಪ್ಪರಿಸಿದ ಪೂನಂ ಪಾಂಡೆ! ವಿವಾದಗಳಿಂದ ಸೋಶಿಯಲ್ ಮೀಡಿಯಾ ದಲ್ಲಿ ಸದ್ದು ಮಾಡಿರುವ ಬೆಡಗಿ ಪೂನಂ ಪಾಂಡೆ. ಐತ್ತಿಚೆಗೆ ಅಷ್ಟೇ ಮುಕ್ತಾಯಗೊಂಡ ಲಾಕಪ್ ಎಂಬ ರಿಯಾಲಿಟಿ ಶೋ ಮೂಲಕ ಭರ್ಜರಿ ಸದ್ದು ಸುದ್ದಿ ಮಾಡಿದ್ದ ಪೂನಂ ಪಾಂಡೆ ಇದೀಗ ಕ್ಯಾಮೆಯ ಕಣ್ಣುಗಳ ಮುಂದೆ ಬಂದಿದ್ದಾರೆ. ಮುಂಬೈ ನಲ್ಲಿ ಚಳಿ ಹಾಗೂ ಮೇಲೆ ಜೋರಾಗಿರುವ ಸಂದರ್ಭದಲ್ಲಿ ಬಿಸಿ ಬಿಸಿ ಜೋಳ ಚಪ್ಪರಿಸಿದ್ದಾರೆ ನಟಿ ಪೂನಂ ಪಾಂಡೆ. ಹೌದು ಮುಂಬೈ ನ ರಸ್ಥೆಯೊಂದರಲ್ಲಿ ಕಾರು ನಿಲ್ಲಿಸಿ ಫುಟ್ ಪಾತ್ ಪಕ್ಕದಲ್ಲಿ ಮಾರಾಟ ಮಾಡುತ್ತಿದ್ದ ಖಾರಾ ಮಸಾಲೆಯ ಜೋಳವನ್ನು ಖರೀದಿಸಿ ಚಪ್ಪರಿಸುತ್ತಿದ್ದ ಪೂನಂ ಪಾಂಡೆ ಅವರನ್ನು ಕ್ಯಾಮೆರಾ ಕಣ್ಣುಗಳು ಸೆರೆ ಹಿಡಿದಿವೆ. ಈಗಾಗಲೇ ಫಿಯರ್ ಫ್ಯಾಕ್ಟರ್, ಖತ್ರೊಂಕ ಖೀಲಾಡಿ 4 ಹಾಗೂ ಲಾಕಪ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿರುವ ಪೂನಂ ಪಾಂಡೆ ಇದೀಗ ಬಿಗ್ ಬಾಸ್ ಒಟಿಟಿ ಶೋ ನಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.