ನಮಸ್ತೆ ಪ್ರಿಯ ಓದುಗರೇ, ಟಾಲಿವುಡ್ ನ ಮೆಗಾ ಸ್ಟಾರ್ ಚಿರಂಜೀವಿ ಅಭಿನಯಿಸಿರುವ ಗಾಡ್ ಫಾದರ್ ಸಿನೆಮಾದ ಫರ್ಸ್ಟ್ ಲುಕ್ ಟೀಸರ್ ರಿಲೀಸ್ ಮಾಡಲಾಯಿತು. ಸ್ಟೈಲಿಷ್ ಆಗಿ ಕಾಣಿಸಿಕೊಂಡಿರುವ ಚಿರಂಜೀವಿ ಲುಕ್ ನೋಡಿ ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಆದ್ರೆ ಎಲ್ಲದಕ್ಕಿಂತ ಹೆಚ್ಚಾಗಿ ಜನರ ಗಮನ ಸೆಳೆದಿರುವುದು ಚಿರಂಜೀವಿ ಹೆಸರು ಚೇಂಜ್ ಆಗಿರೋದು.ಯೆಸ್! ಚಿರಂಜೀವಿ ಅಂತ ಇಷ್ಟು ದಿನ ಹೆಸರು ಬಳಸಲಾಗುತ್ತಿತ್ತು. ಆದ್ರೆ ಈಗ ಚಿರಂಜೀವಿ ಅಂತ ಮಾಡಿಕೊಂಡಿದ್ದಾರೆ. ಅಂದ್ರೆ ಚಿರಂಜೀವಿ ಹೆಸರಲ್ಲಿ ಈ ಈ ಇದ್ದ ಜಾಗದಲ್ಲಿ ಮೂರು ಈ ಈ ಈ ಮಾಡಿಕೊಂಡಿದ್ದಾರೆ.
ಸಣ್ಣ ಬದಲಾವಣೆ ಆಗಿದ್ರೂ ಕೂಡ ಅದರ ಹಿಂದಿನ ಕಾರಣ ಹುಡುಕುವುದಕ್ಕೆ ಅಭಿಮಾನಿಗಳು ಶುರು ಮಾಡಿಕೊಂಡಿದ್ದಾರೆ. ಆಚಾರ್ಯ ಸಿನಿಮಾ ಮೇಲೆ ಚಿರಂಜೀವಿ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದರು. ಸಿನಿಮಾ ಹಿಟ್ ಆಗದೆ ಇದ್ರು ತಮ್ಮ ಪಾತ್ರಕ್ಕೆ ಪ್ರಸಂಶೆ ಸಿಕ್ಕಿ ಮತ್ತಷ್ಟು ಅಫರ್ ಬರುತ್ತೆ ಅಂತ ಅಂದುಕೊಂಡಿದ್ರು ಆದ್ರೆ ಎಲ್ಲಾ ಉಲ್ಟಾ ಹೊಡಿತು. ಆಚಾರ್ಯ ಸಿನೆಮಾ ಸೋತ ಟೈಮ್ ಅಲ್ಲಿ ಚಿರಂಜೀವಿ ಖಿನ್ನತೆಗೆ ಜಾರಿದ್ರು ಎನ್ನಲಾಗಿದೆ. ಮುಂದೆ ಒಪ್ಪಿಕೊಳ್ಳುವ ಸಿನೆಮಾಗಳು ಹಿಟ್ ಆಗಬೇಕು ಜನರಿಗೆ ಇಷ್ಟ ಆಗಬೇಕು ಅಂತ ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಈ ಟೈಮ್ ಅಲ್ಲಿ ಸಂಖ್ಯಾ ಶಾಸ್ತ್ರ ನಂಬಲು ಶುರು ಮಾಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಒಂದು ಅಕ್ಷರ ಹೆಚ್ಚಾಗಿ ಸೇರಿಕೊಂಡಿರಬಹುದು ಅಂತ ಹೇಳಲಾಗುತ್ತಿದೆ. ಚಿರಂಜೀವಿ ಹೆಸರಿನ ಹಿಂದಿರುವ ಕಥೆಯನ್ನು ಹುಡುಕುತ್ತಾ ಇರುವ ನೆತ್ತಿಗರಿಗೆ ಉನ್ನತ ಮೂಲಗಳಿಂದ ಸ್ಪಷ್ಟನೆ ಸಿಕ್ಕಿದೆ. ಗಾಡ್ ಫಾದರ್ ನ ಫರ್ಸ್ಟ್ ಲುಕ್ ನ ಟಿಸರ್ ನಲ್ಲಿ ಹೆಸರು ತಪ್ಪಾಗಿದೆ. ಇದೆಲ್ಲ ತಾಂತ್ರಿಕ ಸಮಸ್ಯೆ ಅಷ್ಟೇ, ಜನರು ಅದನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ ಮುಂದಿನ ವಿಡಿಯೋದಲ್ಲಿ ಅದನ್ನು ಸರಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ನಿರ್ದೇಶಕ ಮೋಹನ್ ರಾಜ್ ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸಲ್ಮಾನ್ ಖಾನ್ ಬಾಯ್ ಜೊತೆಗಿನ ಅದ್ಭುತ ಚಿತ್ರೀಕರಣ ಮುಕ್ತಾಯಗೊಂಡಿದೆ. ಈ ಅದ್ಭುತವಾದ ವೇಳ ಪಟ್ಟಿಯನ್ನು ಸ್ಮರಣೀಯ ಮಾಡಿದ್ದಕ್ಕೆ ಧನ್ಯವಾದಗಳು ಬಾಯ್ ಅಂತ ಬರೆದುಕೊಂಡಿದ್ದಾರೆ.