ನಮಸ್ತೆ ಪ್ರಿಯ ಆತ್ಮೀಯ ಓದುಗರೇ, ರಾಜ್ಯಸಭೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಆಗಿರುವ ಡಾ. ವೀರೇಂದ್ರ ಹೆಗಡೆ ಅವರು ನಾಮ ನಿರ್ದೇಶನ ಗೊಂಡಿರಿವುದಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಹರ್ಷವನ್ನು ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಿ.ಏಮ್ ಬಸವರಾಜ್ ಬೊಮ್ಮಾಯಿ ಅವರು ಡಾ. ವೀರೇಂದ್ರ ಹೆಗಡೆ ಅವರನ್ನು ಸ್ವಾಗತಿಸಿ, ಆರೋಗ್ಯ, ಶಿಕ್ಷಣ, ಸ್ತ್ರೀಶಕ್ತಿ, ಗ್ರಾಮೀಣಾಭಿವೃದ್ಧಿ ಹೀಗೆ ವಿವಿಧ ಕ್ಷೇತ್ರಗಳ ಹಾಗೂ ಆಯಾಮಗಳಲ್ಲಿ ಜನ ಜೀವನದಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಶ್ರಮಿಸುತ್ತಿರುವ ಹೆಗಡೆ ಅವರ ಅನುಭವ ಸಂಸತ್ತಿನ ಕಲಾಪಗಳ ಮಹತ್ವವನ್ನು ಹೆಚ್ಚಿಸಲಿದೆ ಅಂತ ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ. ರಾಜ್ಯಸಭೆಗೆ ನಾಮ ನಿರ್ದೇಶನಕ್ಕೆ ಡಾ. ವೀರೇಂದ್ರ ಹೆಗಡೆ ಅವರಂತಹ ಅರ್ಹರನ್ನು ಶಿಫಾರಸ್ಸು ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯ ಮಂತ್ರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ಅವರೊಂದಿಗೆ ರಾಜ್ಯಸಭೆಗೆ ನಾಮ ನಿರ್ದೇಶನ ಗೊಂಡಂತಹ ಒಲಂಪಿಯನ್ ಅಥ್ಲೀಟ್ ಆದಂಥ ಪಿಟಿ ಉಷಾ, ಖ್ಯಾತ ಸಂಗೀತ ನಿರ್ದೇಶಕ ಇಳಿಯರಾಜ, ಹಾಗೂ ಖ್ಯಾತ ಚಿತ್ರ ನಿರ್ದೇಶಕ ಚಿತ್ರ ಸಾಹಿತಿ ಕೆ. ವಿಜಯೇಂದ್ರ ಪ್ರಸಾದ್ ಅವರನ್ನು ಮುಖ್ಯಮಂತ್ರಿ ಗಳು ಅಭಿನಂದಿಸಿದರು. ರಾಜ್ಯಸಭೆಯ ಸಮಸತ್ತಿಗೆ ನಾಮ ನಿರ್ದೇಶನ ಗೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಆಗಿರುವ ವೀರೇಂದ್ರ ಹೆಗಡೆ ಅವರನ್ನು ಗೃಹ ಸಚಿವರಾದ ಅರಗ ಜ್ಞಾನೇಂದ್ರ ಕೂಡ ಅಭಿನಂದಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಗೃಹ ಸಚಿವರು ಮಾನ್ಯ ಹೆಗಡೆಯವರ ನೇಮಕ ಇಡೀ ರಾಜ್ಯದ ಜನತೆಗೆ ಸಂತಸ ತಂದಿದೆ ಅಂತ ಹೇಳಿದ್ದಾರೆ. ವೀರೇಂದ್ರ ಹೆಗಡೆ ಅವರ ದೂರದತ್ತಿತ್ವ, ಸಮಾಜ ಸೇವೆ ಕಾರ್ಯಗಳಿಂದ ಗ್ರಾಮೀಣ ಜನತೆಯ ಅದರಲ್ಲೂ ವಿಶೇಷವಾಗಿ ಮಹಿಳೆಯರ ಆರ್ಥಿಕ ಸಾಮಾಜಿಕ ಹಾಗೂ ಶೈಕ್ಷಣಿಕ ಸಬಲೀಕರಣದ ಕಾರ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ಗೆ ಕಾರಣವಾಗಿದೆ ಅಂತ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇನ್ನ ಇವರ ನೇಮಕಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ. ಬಿಜೆಪಿ ಯ ರಾಷ್ಟ್ರಾಧ್ಯಕ್ಷ ಜೆ.ಪೀ ನಾಡ್ಡ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಇವರು ಅಭಿನಂದನೆ ತಿಳಿಸಿದ್ದಾರೆ. ಮತ್ತೊಂದು ಕಡೆ ಪಿಟಿ ಉಷಾ ಪ್ರತಿಯೊಬ್ಬ ಭಾರತೀಯ ರಿಗೆ ಕೂಡ ಸ್ಪೂರ್ತಿ ಆಗಿದ್ದರೆ. ಕ್ರೀಡೆಯಲ್ಲಿ ಅವರ ಸಾಧನೆಗಳು ಮಾದರಿ ಆಗಿದೆ. ಕಳೆದ ಹಲವಾರು ವರ್ಷಗಳಿಂದ ಉದಯೋನ್ಮುಖ ಕ್ರೀಡಾ ಪಟುಗಳಿಗೆ ಮಾರ್ಗ ದರ್ಶನ ನೀಡುವ ಅವರ ಕೆಲಸವೂ ಕೂಡ ಅಷ್ಟೇ ಶ್ಲಾಘನೀಯ ಆಗಿದೆ. ರಾಜ್ಯಸಭೆಗೆ ನಾಮ ನಿರ್ದೇಶನ ಆಗಿರುವ ಕಾರಣ ಅವರಿಗೆ ಅಭಿನಂದನೆಗಳು ಅಂತ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್ ಅಲ್ಲಿ ತಿಳಿಸಿದ್ದಾರೆ. ಇಳಿಯಾರಾಜ ಅವರ ಸೃಜನ ಶೀಲ ಪ್ರತಿಭೆ ತಲೆಮಾರುಗಳಿಂದ ಜನರನ್ನು ಆಕರ್ಷಿಸುತ್ತಿದೆ. ಅವರ ಗೀತೆಗಳು ಅನೇಕ ಭಾವನೆಗಳನ್ನು ಸುಂದರವಾಗಿ ಪ್ರತಿಬಿಂಬಿಸುತ್ತದೆ. ಅವರ ಜೀವನ ಪಯಣ ಕೂಡ ಅಷ್ಟೇ ಸ್ಪೂರ್ತಿದಾಯಕ ಆಗಿದೆ. ಅವರು ವಿನಮ್ರ ಹಿನ್ನೆಲೆಯಿಂದ ಬೆಳೆದು ತುಂಬಾ ಸಾಧಿಸಿದ್ದಾರೆ. ಅವರು ರಾಜ್ಯಸಭೆಗೆ ನಾಮ ನಿರ್ದೇಶನ ಗೊಂಡಿರುವುದು ಸಂತೋಷವಾಗಿದೆ ಅಂತ ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ ಮಾಡಿದ್ದಾರೆ.