ನಮಸ್ತೆ ಪ್ರಿಯ ಓದುಗರೇ, ಗೋಲ್ಡನ್ ಗರ್ಲ್ ಪಿ.ಟಿ ಉಷಾ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಜನಮಾನಸದಲ್ಲಿ ಪಿ.ಟಿ ಉಷಾ ಅಂತ ಫೇಮಸ್ ಆಗಿರುವವರು ಅತ್ಯಂತ ಯಶಸ್ವಿ ಕ್ರೀಡಾಪಟುಗಳಲ್ಲಿ ಒಬ್ಬರು. ಸುಮಾರು 2 ದಶಕಗಳ ಕಾಲ ರನ್ನಿಂಗ್ ಟ್ರ್ಯಾಕ್ ಆಳಿದ ಕೀರ್ತಿ ಇವರದ್ದು. ಪಿ.ಟಿ ಉಷಾ ಮಾಡಿದಂಥ ಸಾಧನೆ ಇವತ್ತಿಗೂ ಕೂಡ ಸಾಧನೆ ಮಾಡ ಬಯಸುವ ಮಹಿಳೆಯರಿಗೆ ಸ್ಪೂರ್ತಿ ಆಗುತ್ತೆ. ಈಗ ಪಿ.ಟಿ ಉಷಾ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ರಾಜ್ಯಸಭಾ ಸ್ಥಾನಕ್ಕೆ ಪಿಟಿ ಉಷಾ ಅವರನ್ನು ಕೇಂದ್ರ ಸರ್ಕಾರ ನಾಮ ನಿರ್ದೇಶನ ಮಾಡಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಈ ವಿಚಾರವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮ ಸಾಧನೆ ಹಲವರಿಗೆ ಸ್ಪೂರ್ತಿ ಎಂದು ಹೇಳಿದ್ದಾರೆ.
ಭಾರತೀಯ ಅಥ್ಲೀಟ್ ಇತಿಹಾಸದಲ್ಲಿ ಪಿಟಿ ಉಷಾ ಎಂದಿಗೂ ಮರೆಯಲಾಗದ ಹೆಸರು. ಭಾರತದ ಕ್ರೀಡೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಡಿಮೆ ಇದ್ದ ಸಮಯದಲ್ಲಿ ಇವರು ಮಾಡಿದಂಥ ಸಾಧನೆ ತುಂಬಾನೇ ಅಮೋಘ. ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು ಪಿಟಿ ಉಷಾ ಮುಡಿಗೆ ರಾಜ್ಯಸಭೆ ನಾಮ ನಿರ್ದೇಶನ ಮಾಡಿದ್ದು ಮತ್ತಿಂದು ಗರಿ ಅಂತಾಗಿದೆ. ಪಿಟಿ ಉಷಾ 1964 ರಂದು ಕೇರಳದ ಕ್ಯಾಲಿಕಟ್ ಸಮೀಪದ ಪಯೋಳಿ ಗ್ರಾಮದಲ್ಲಿ ಜನಿಸಿದರು. ಬಾಲ್ಯದಲ್ಲಿ ಬಡತನ ಹಾಗೂ ಅನಾರೋಗ್ಯ ಉಷಾ ಅವರನ್ನು ಕಾಡಿತ್ತು. ಹದಿಹರೆಯದಲ್ಲಿ ಪಿಟಿ ಉಷಾ ಸಾಕಷ್ಟು ಆಸಕ್ತಿಯನ್ನು ತೋರಿದರು. ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡ್ತಾರೆ. ಪಿಟಿ ಉಷಾ 1985 ರಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಬಾರಿ ಯಶಸ್ಸನ್ನು ಕಂಡ್ರು.
ಜಕರ್ಥದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ 100 ಮೀಟರ್ 200 ಮೀಟರ್ 400 ಮೀಟರ್ 400 ಮೀಟರ್ ಹರ್ಡಲ, 400 ಮೀಟರ್ ರಿಲೇ ಹೀಗೆ ಐದು ಚಿನ್ನದ ಪದಕಗಳನ್ನು ಇವರು ಗೆಲ್ಲುತ್ತಾರೆ. ಇನ್ನ ಲಾಸ್ ಏಂಜಲೀಸ್ ನಲ್ಲಿ ನಡೆದ ಒಲಂಪಿಕ್ ನಲ್ಲಿ ಪಿಟಿ ಉಷಾ ಅವರು ಬ್ರಂಝ್ ಮೆಟಲ್ ಪಡೆಯುವುದರಲ್ಲಿ ಕೇವಲ ಮಿಲಿ ಸೆಕೆಂಡ್ ಗಳಲ್ಲಿ ವಂಚಿತರಾಗುತ್ತಾರೆ. ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್ ಶಿಪ್ ಗಳಲ್ಲಿ ಒಟ್ಟು 30 ಅಂತ್ರಾಷ್ಟೀಯ ಪ್ರಶಸ್ತಿಗಳು ಮತ್ತು 13 ಚಿನ್ನದ ಪದಕಗಳನ್ನು ಇವರು ಗೆದ್ದಿದ್ದಾರೆ. ತಮ್ಮ ವೃತ್ತಿ ಜೀವನದ ನಂತರ ಯುವ ಅಥ್ಲೀಟ್ ಗಳಿಗೆ ತರಬೇತಿ ನೀಡಲು ಮುಂದಾದ ಪಿಟಿ ಉಷಾ ಈಗ ಹೊಸದೊಂದು ಜವಾಬ್ದಾರಿ ಅವರನ್ನು ಹುಡುಕಿಕೊಂಡು ಬಂದಿದೆ. 1995 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಹಜವಾಗಿಯೇ ಇದು ಅವರ ಸಾಧನೆಗೆ ಸಂದ ಗೌರವ. ಈಗ ರಾಜ್ಯಸಭೆ ಕಡೆಗೂ ಕೂಡ ಪಿಟಿ ಉಷಾ ತಮ್ಮ ಓಟವನ್ನು ಶುರು ಮಾಡಿದ್ದಾರೆ ಎಂದು ತಿಳಿದುಬಂದಿದೆ.