ನಟಿ ಮೀನಾ ಕನ್ನಡತಿ ಅಲ್ಲ, ಆದ್ರೆ ಬಹುತೇಕರು ಆಕೆಯನ್ನು ಕನ್ನಡತಿ ಅಂದುಕೊಂಡಿದ್ದಾರೆ. ಕಾರಣ ಕನ್ನಡ ಸಿನೆಮಾಗಳ ಮೂಲಕ ಇಡೀ ಸಿನಿಮಾ ಅಭಿಮಾನಿಗಳನ್ನು ಗಮನ ಸೆಳೆದ ಅದ್ಭುತವಾದ ನಟಿ. ಮೀನ ನಟನೆ ಬಗ್ಗೆ ಯಾರಾದರೂ ಆಕ್ಷೇಪಣೆ ತೆಗೆಯಲು ಸಾಧ್ಯವಿಲ್ಲ. ಕಣ್ಣಲ್ಲೇ ನಟಿಸುವ ಕೆಲವೇ ಕೆಲವು ನಟಿಯರಲ್ಲಿ ಪಾತ್ರವೇ ತಾನಾಗಿ ಜೀವಿಸುವ ಕೆಲವು ನಟಿಯರಲ್ಲಿ ಮೀನಾ ಕೂಡ ಒಬ್ರು. ಇನ್ನೂ ಕೇವಲ ಒಂದು ರಾಜ್ಯಕ್ಕೆ ಸೀಮಿತವಾದ ನಟಿ ಮೀನಾ ಅಲ್ಲ. ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ ಎಲ್ಲಾ ಭಾಷೆಗಳಲ್ಲಿ ಅಭಿನಯಿಸುವ ಮೂಲಕ ಆ ಎಲ್ಲಾ ರಾಜ್ಯದ ಗಮನ ಸೆಳೆಯುತ್ತಿದ್ದಾರೆ. ಇಷ್ಟೇ ಅಲ್ಲ ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತಾಡುತ್ತಾರೆ. ಬಂಧುಗಳೇ ಹೇಗೆ ಎಲ್ಲಾ ಸರಿಯಿದ್ದ ಮೀನಾ ಜೀವನದಲ್ಲಿ ಘೋರ ದುರಂತ ಸಂಭವಿಸಿದೆ. ಯಾವ ಹೆಣ್ಣಿನ ಬದುಕಿನಲ್ಲಿ ಸಹ ಇಂತಹ ದುರಂತ ಸಂಭವಿಸಬಾರದು. ಮದುವೆ ಆಗಿ ಕೆಲವೇ ಕೆಲವು ವರ್ಷಗಳು ಆಗಿತ್ತಷ್ಟೇ, ಒಂದು ಚಿಕ್ಕ ಮಗು ಕೂಡ ಇತ್ತು. ಇಂಥ ಸಂದರ್ಭದಲ್ಲಿ ಗಂಡನನ್ನು ಕಳೆದುಕೊಳ್ಳುವ ಸ್ಥಿತಿ ಮೀನಾ ಅವರಿಗೆ ಬಂದಿದೆ. ಹಾಗಾದ್ರೆ ಹೇಗೆ ಮೀನಾ ಗಂಡ ವಿಧಿವಶ ಆದ್ರೂ ಏನಾಯ್ತು ಎಲ್ಲವನ್ನೂ ನೋಡೋಣ.
ಮೀನಾ ಆಗ ಮೈ ಆಟೋಗ್ರಾಫ್ ಸಿನೆಮಾದಲ್ಲಿ ನಟಿಸುತ್ತಾ ಇದ್ರು. ಅದು ಕರ್ನಾಟಕದಲ್ಲಿ ನಡಿತಾ ಇತ್ತು. ಆಗ ಬೆಂಗಳೂರು ಮೂಲದ ಸಾಫ್ಟ್ವೇರ್ ಉದ್ಯೋಗಿ ವಿದ್ಯಾಸಾಗರ್ ಎನ್ನುವವರ ಪರಿಚಯ ಆಗುತ್ತೆ. ಆಗ ಮೀನಾ ವಿದ್ಯಾಸಾಗರ್ ನಡುವೆ ಪ್ರೀತಿ ಪ್ರೇಮ ಶುರು ಆಗುತ್ತೆ ಅಂತಿಮವಾಗಿ ಇಬ್ರೂ ಕೂಡ ಮದುವೆ ಹಂತಕ್ಕೆ ಹೋಗ್ತಾರೆ. ತುಂಬಾ ಅದ್ಧೂರಿಯಾಗಿ ಮೀನಾ ಮತ್ತು ವಿದ್ಯಾಸಾಗರ್ ಮದುವೆ ಆಗ್ತಾರೆ. ಈ ಮೂಲಕ ಕರ್ನಾಟಕದ ಸೊಸೆ ಆಗ್ತಾರೆ. ಇನ್ನೂ ಮದುವೆ ಆದಮೇಲೆ ಸ್ವಲ್ಪ ವರ್ಷಕ್ಕೆ ಮಗು ಕೂಡ ಆಗುತ್ತೆ. ನನೈಕ ಅವರ ಮಗಳ ಹೆಸರು. ಬದುಕು ಎಲ್ಲವೂ ಚೆನ್ನಾಗಿತ್ತು ಆದ್ರೆ ನಾವು ಅಂದುಕೊಂಡ ಹಾಗೆ ಇರೋದಿಲ್ಲ. ಮೀನಾ ವಯಸ್ಸು 45-46 ಆಸುಪಾಸು. ಮೀನಾ ಗಂಡನ ವಯಸ್ಸು 46-47 ವರ್ಷದ ಆಸುಪಾಸು. ಮದುವೆ ಆಗಿ ಬರೀ 13 ವರ್ಷ ಆಗಿತ್ತು. ಮಗಳಿಗೆ ಬರೀ 11 ವರ್ಷ. ಈಗ ತಾನೇ ದಾಂಪತ್ಯದ ಸಂಪೂರ್ಣ ಸವಿಯನ್ನು ಅನುಭವಿಸುವ ಕಾಲ. ಆದ್ರೆ ಅಷ್ಟರಲ್ಲಿ ಗಂಡನನ್ನು ಕಳೆದುಕೊಳ್ಳುವ ಸ್ಥಿತಿ ಏರ್ಪಟ್ಟಿತು. ಪಾರಿವಾಳಗಳನ್ನು ನೀವು ನೋಡಿಯೇ ಇರ್ತಿರ.
ಈ ಪಾರಿವಾಳಗಳನ್ನು ಕೆಲವರು ಇಷ್ಟ ಪಡಲ್ಲ ಯಾಕೆ ಅಂದ್ರೆ ಪಾರಿವಾಳದ ಹಿಕ್ಕೆಯ ಗಾಳಿಯನ್ನು ತೆಗೆದುಕೊಂಡರೆ ಶ್ವಾಸಕೋಶದ ಸಮಸ್ಯೆ ಆಗುತ್ತೆ ಅಂತ. ಶ್ವಾಸಕೋಶದ ಅಲರ್ಜಿಯನ್ನು ಉಂಟು ಮಾಡುತ್ತದೆ. ವಿದ್ಯಾಸಾಗರ್ ಗೆ ಕೂಡ ಅದೇ ಆಗಿದ್ದು. ಆರಂಭದಲ್ಲಿ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ನೆಗ್ಲೆಕ್ಟ್ ಮಾಡ್ತಾರೆ. ಆದ್ರೂ ಕೂಡ ಒಂದು ಹಂತದ ಟ್ರೀಟ್ಮೆಂಟ್ ಆಗಿತ್ತು. ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡರು. ಆದ್ರೆ ಇದೇ ಸಮಯದಲ್ಲಿ ಬರ ಸಿಡಿಲಿನಂತೆ ಬಂದಿದ್ದು ಕೋವಿಡ್ 19. ಈ ಸೋಂಕು ಮೊದಲ ಸಾರಿ ಬಂದಾಗ ಶ್ವಾಸಕೋಶ ತೊಂದರೆ ಮೊದಲೇ ಇದ್ದುದರಿಂದ ಶ್ವಾಸಕೋಶದ ಸಮಸ್ಯೆ ಜಾಸ್ತಿ ಆಗುತ್ತೆ. ಆಗ ಮತ್ತೆ ಟ್ರೀಟ್ಮೆಂಟ್ ತೋಗೊತಾರೆ. ದುರ್ದೈವ ಅಂದ್ರೆ ಕರೋನ 2 ಬಂದಾಗ ಮತ್ತೊಮ್ಮೆ ಕರೋನ ಆಗುತ್ತೆ ಆಗ ಅವರ ಶ್ವಾಸಕೋಶ ಇನ್ನಷ್ಟು ವೀಕ್ ಆಗುತ್ತೆ. ಮತ್ತೆ ಟ್ರೀಟ್ಮೆಂಟ್ ತೋಗೊಂಡಿದ್ರು. ಆದ್ರೆ ಈಗ ಮತ್ತೆ ಶ್ವಾಸಕೋಶದ ಸಮಸ್ಯೆ ಕಾಣಿಸಿಕೊಂಡಾಗ ಚೆನ್ನೈನ ಒಂದು ಆಸ್ಪತ್ರೆಯಲ್ಲಿ ನಿರಂತರವಾಗಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿ ಆಗದೆ ವಿದ್ಯಾಸಾಗರ್ ವಿಧಿವಶ ಆಗಿದ್ದಾರೆ. ಚಿಕ್ಕ ವಯಸ್ಸಿಗೇ ಸಾವನು ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಅರೋಗ್ಯದ ವಿಚಾರದಲ್ಲಿ ಯಾರೋ ಅಸಡ್ಡೆ ತೋರಿಸಬಾರದು.