ಟೈಟಾನಿಕ್ ಹಡಗನ್ನು ಯಾಕೆ ಮೇಲೇತ್ತುತ್ತಿಲ್ಲ? ಟೈಟಾನಿಕ್ ನ ಮೇಲೆ ಎತ್ತೋದ್ರಿಂದ ಆಗುವ ಲಾಭ ಎಷ್ಟು ನಷ್ಟ ಎಷ್ಟು? ಇಲ್ಲಿದೆ ಫುಲ್ ಡೀಟೇಲ್ಸ್.!!!

ಟೈಟಾನಿಕ್ ಹಡಗನ್ನು ಯಾಕೆ ಮೇಲೇತ್ತುತ್ತಿಲ್ಲ? ಟೈಟಾನಿಕ್ ನ ಮೇಲೆ ಎತ್ತೋದ್ರಿಂದ ಆಗುವ ಲಾಭ ಎಷ್ಟು ನಷ್ಟ ಎಷ್ಟು? ಇಲ್ಲಿದೆ ಫುಲ್ ಡೀಟೇಲ್ಸ್.!!!

ಸ್ನೇಹಿತರೆ ಟೈಟಾನಿಕ್ ದುರಂತವನ್ನು ನೀವೆಲ್ಲ ಕೇಳಿಯೇ ಇರುತ್ತೀರಿ. 1911 ರಲ್ಲಿ ನಡೆದ ಈ ಘಟನೆ ಇಂದಿಗೂ ಜನರಲ್ಲಿ ಕುತೂಹಲವನ್ನು ಕೆರಳಿಸುತ್ತುದೆ. ನೀರಿನಲ್ಲಿ ಮುಳುಗಿದ ಹಡಗು ಎಲ್ಲಿಗೆ ಹೋಯಿತು, ಇಂತಹ ತಂತೆಜ್ಞಾನ ಬಂದ್ರೂ ಮನುಷ್ಯ ಚಂದ್ರ ಲೋಕಕ್ಕೆ ಕಾಲಿಟ್ಟರು, ಸಮುದ್ರದಲ್ಲಿ ಮುಳುಗಿದ ಟೈಟಾನಿಕ್ ನ ಎತ್ತಲು ಆಗಲಿಲ್ಲ ಏಕೆ? ಈ ರೀತಿ ಕುತೂಹಲ ಕಾರಿ ವಿಷಯಗಳು ಈ ನಿಗೂಢ ರಹಸ್ಯದ ಸುತ್ತ ಹರಿದಾಡುತ್ತಿವೆ. 1980 ರಲ್ಲಿ ಅಮೆರಿಕಾದ ನೇವಿ ಆಫೀಸರ್ ರಾಬರ್ಟ್ ಬಲ್ಲಾಡ್ ಎನ್ನುವವರು ಸಾಗರದ 4 ಕಿಮೀ ಕೆಳಗೆ ಇರುವ ಈ ಹಡಗನ್ನು ಪತ್ತೆ ಹಚ್ಚಿದರು. ಟೈಟಾನಿಕ್ ನ ಅವಶೇಷಗಳು ನ್ಯೂ ಪೌಂಡ್ ಲ್ಯಾಂಡ್ ನಲ್ಲಿ ಸಿಕ್ಕಿದ್ದವು. ಈ ಅವಶೇಷಗಳನ್ನು ಕೆಲವು ಸಂಶೋಧನೆಗಳಿಗೆ ಒಳಪಡಿಸಿ ಅದರಲ್ಲಿರುವ ಕೆಲವು ಅಮೂಲ್ಯ ಉಪಕರಣಗಳನ್ನು ಹೊರ ತೆಗೆದರು ಆದ್ರೆ ಟೈಟಾನಿಕ್ ನ ಹೊರ ತೆಗೆಯಲು ಆಗಲೇ ಇಲ್ಲ. ಇಲ್ಲಿಯವರೆಗೂ ಟೈಟಾನಿಕ್ ಹಡಗನ್ನು ಹೊರ ತೆಗೆದೆ ಇಲ್ಲ. ಟೈಟಾನಿಕ್ ಹಡಗು ಸುಮಾರು 77 ವರ್ಷಗಳ ಕೆಳಗೆ ಸಮುದ್ರದ ಒಳಗೆ ಮುಳುಗಿತ್ತು.ಅದಕಾಗಿ ಅದರ ಮೇಲೆ ಪಾಚಿಗಳು ಬೆಳೆದಿದ್ದವು ಮತ್ತು ತುಕ್ಕು ಹಿಡಿದಿತ್ತು.

 

ಅಲ್ಲದೆ ಅದು ಬೃತತ್ ಗಾತ್ರದ ಹಡಗು ಹೀಗಾಗಿ ಅದನ್ನು ಮೇಲೆತ್ತಲು ಆಗಲಿಲ್ಲ. ಇದರ ತೂಕವೇ ಸುಮಾರು ಒಂದು ಲಕ್ಷದ ನಲವತ್ತು ಮೂರು ಸಾವಿರ ಟನ್ ಇತ್ತು. ಅದಲ್ಲದೆ ನೀರಿನ ಒತ್ತಡ ಇರುವ ಕಾರಣ ನೀರಿನ ಸಬ್ ಮರೈನ್ ಹಾಗೂ ಮಗ್ನೆಟ್ ನ ಸಹಾಯದಿಂದ ಕೂಡ ಮೇಲೆತ್ತಲು ಆಗಲಿಲ್ಲ. 21 ನೇ ಶತಮಾನದಲ್ಲಿ ವಿಜ್ಞಾನಿಗಳಿಗೆ ಒಂದು ಐಡಿಯಾ ಹೊಳೆಯಿತು ಅದೇನು ಅಂದ್ರೆ ಪಿಂಗ್ ಪಾಂಗ್ ಬಾಲ್ ಗಳ ಸಹಾಯದಿಂದ ಈ ಹಡಗನ್ನು ಮೇಕೆತ್ತಬಹುದು ಎಂದು. ಇದು ಆಶ್ಚರ್ಯ ಪಡುವ ವಿಷಯವೇ. ಪಿಂಗ್ ಪಾಂಗ್ ಬಾಲ್ ಗಳ ತುಂಬಾ ಚಿಕ್ಕವು ಇರುತ್ತವೆ. ಈ ಲಕ್ಷಾಂತರ ತೂಕದ ಹಡಗನ್ನು ಕೇವಲ ಪಿಂಗ್ ಪಾಂಗ್ ಬಾಲ್ ಗಳ ಸಹಾಯದಿಂದ ಮೇಲೆ ಎತ್ತುವುದು ಸುಲಭದ ಮಾತಲ್ಲ. ಆದ್ರೆ ಪಿಂಗ್ ಪಾಂಗ್ ಬಾಲ್ ಗಳನ್ನು ಈ ಹಡಗಿನೊಳಗೆ ತುಂಬಿದರೆ ಹಡಗು ಸುಲಭವಾಗಿ ಮೇಲೆ ಬರುತ್ತೆ ಎನ್ನುವುದು ವಿಜ್ಞಾನಿಗಳ ವಾದ ಆಗಿರುತ್ತೆ. ಆದ್ರೆ ಈ ಪಿಂಗ್ ಪಾಂಗ್ ಬಾಲ್ ಗಳು ಸಾಗರದ ಆಳಕ್ಕೆ ಹೋಗುವಷ್ಟರಲ್ಲಿ ಒಡೆದು ಹೋಗುತ್ತವೆ ಎಂದು ವಿಜ್ಞಾನಿಗಳಿಗೆ ತಿಳಿದಿರಲಿಲ್ಲ. ನಂತರ ಬಲೂನ್ ಗಳನ್ನು ಬಳಸಿ ಮೇಲೆತ್ತಬಹುದು ಎಂದು ಯೋಚಿಸುತ್ತಾರೆ ಆದ್ರೆ ಹೀಲಿಯಂ ಬಲೂನ್ ಗಳು ಸಾಗರದ ಆಳದ ಒತ್ತಡವನ್ನು ತಡೆಯಲು ಸಾಧ್ಯವಿಲ್ಲ. ಮುಂದೆ ಮಂಜುಗಡ್ಡೆ,ಲಿಕ್ವಿಡ್ ನೈಟ್ರೋಜನ್ ಇಂದ ಮೇಕೆತ್ತ ಬಹುದು ಎಂಬ ವಾದಗಳು ಬರುತ್ತವೆ. ಆದ್ರೆ ಯಾವುದು ಅಂದುಕೊಂಡಷ್ಟು ಸುಲಭ ಆಗಿರಲಿಲ್ಲ.

 

ಮುಂದೆ ಸಬ್ ಮಾರೈನ್ ಗಳ ಮೂಲಕ ಮೇಕೆಟ್ಟಬಹುದು ಎಂದು ಯೋಚಿಸುತ್ತಾರೆ. ಸಬ್ ಮೇರೈನ್ ಒಂದು ರೀತಿಯ ಹಡಗು ಆಗಿದ್ದು ಸಮುದ್ರದ ಆಳದಲ್ಲಿ ಹಾಗೆ ಮೇಲೂ ಚಲಿಸಲು ಸಾಧ್ಯವಿರುತ್ತದೆ. ಆದ್ರೆ ಹಡಗನ್ನು ಹೊರ ತೆಗ್ಯುವ ಮುನ್ನ ಹಡಗಿನ ಮೇಲಿರುವ ಪಾಚಿ ಕಸವನ್ನು ತೆಗೆದು ಶುಚಿಗೊಳಿಸಬೇಕು. ಅದಕ್ಕೆ ಸಾಕಷ್ಟು ವಿದ್ಯುತ್ ಅವಶ್ಯಕತೆ ಇರುತ್ತೆ. ಸುಮಾರು 20000 ವ್ಯಾಟ್ ವಿದ್ಯುತ್ ಬೇಕಾಗುತ್ತೆ. ಆದ್ರೆ ಇಷ್ಟೊಂದು ವಿದ್ಯುತ್ ಬೇಕು ಅಂದ್ರೆ ಒಂದು ದೊಡ್ಡ ವಿದ್ಯುತ್ ಸ್ಥಾವರವನ್ನು ನಿರ್ಮಿಸಬೇಕಾಗುತ್ತೆ. ಇದು ಕೂಡ ಅಷ್ಟು ಸುಲಭವಲ್ಲ. ಈಗಾಗಲೇ ಟೈಟಾನಿಕ್ ಹಡಗಿನಲ್ಲಿ ಇರುವ ಅಮೂಲ್ಯ ಅವಶೇಷಗಳನ್ನೂ ತೆಗೆದುಕೊಳ್ಳಲಾಗಿದೆ. ಹಡಗನ್ನು ಮೇಲೆ ತೆಗೆದರೆ ಏನೋ ಪ್ರಯೋಜನ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಈ ಹಡಗನ್ನು ಹೊರ ತೆಗೆದು ಮ್ಯೂಸಿಯಮ್ ಮಾಡಿದ್ರೂ ಅದನ್ನು ಎತ್ತಲು ಬಳಕೆ ಮಾಡಿರುವ ಖರ್ಚು ವಾಪಸ್ ತೆಗೆಯಲು ನೂರಾರು ವರ್ಷಗಳೇ ಬೇಕು. ಹಾಗೆಯೇ ಈ ಹಡಗನ್ನು ಬ್ಯಾಕ್ಟೀರಿಯಾ ಗಳು ತಿನ್ನುತ್ತಿವೆ ಅಂತೆ. ಇನ್ನ ಸ್ವಲ್ಪ ವರ್ಜೆಗಳಲ್ಲಿ ಈ ಬ್ಯಾಕ್ಟೀರಿಯಾ ಗಳು ಪೂರ್ತಿ ಹಡಗನ್ನು ತಿಂದು ಮುಗಿಸುತ್ತವೆ. 2011 ರಲ್ಲಿ ಈ ಹಡಗನ್ನು ನೀರಿನಲ್ಲಿರುವ ವಿಶೇಷ ಉಪಕರಣ ಎಂದು ಯುನೆಸ್ಕೋ ಪಟ್ಟಿಗೆ ಸೇರಿಸಲಾಗಿದೆ. ಇನ್ನೊಂದು ಮುಖ್ಯವಾದ ಸಂಗತಿ ಏನೆಂದರೆ ಎಲ್ಲರೂ ಟೈಟಾನಿಕ್ ವಿಶ್ವದಲ್ಲೇ ಅತಿ ದೊಡ್ಡ ಹಡಗು ಎಂದು ಇಂದಿಗೂ ತಿಳಿದಿದ್ದಾರೆ. ಆದ್ರೆ ಅದಕ್ಕಿಂತಲೂ ದೊಡ್ಡ ಹಡಗನ್ನು ನಿರ್ಮಿಸಿದ್ದಾರೆ. ಟೈಟಾನಿಕ್ ನ ದುರಂತ ಅಂತ್ಯ ಈ ತಪ್ಪು ಕಲ್ಪನೆ ಮೂಡುವಂತೆ ಮಾಡಿದೆ.

ಸುದ್ದಿ