ಚಂದ್ರಶೇಕರ್ ಗುರೂಜಿ ದಿನದ ಆದಾಯ 30 ಲಕ್ಷ ಅಂದ್ರೆ ನಂಬ್ತೀರಾ!?? ಗುರೂಜಿ ಮಾಡಿದ ಬೇನಾಮಿ ಆಸ್ತಿ ಅವರ ಪ್ರಾಣಕ್ಕೆ ಕುತ್ತು ತಂದಿದೆ ನೋಡಿ.

ಚಂದ್ರಶೇಕರ್ ಗುರೂಜಿ ಸರಳವಾಸ್ಥು ಮೂಲಕ ಸಾಕಷ್ಟು ಪ್ರಖ್ಯಾತಿ ಪಡೆದುಕೊಂಡಿದ್ದಾರೆ. ಹೆಸರೇನೋ ಸರಳ ಅಂತಿತ್ತು, ಆದ್ರೆ ಅವರು ಹೇಳುವಂಥ ವಾಸ್ತು ಅಷ್ಟು ಸರಳ ಆಗಿರ್ಲಲ್ಲಿ. ಕಾರಣ ಪ್ರತಿಯೊಬ್ಬರಿಗೂ 20 ಸಾವಿರದಿಂದ 30 ಸಾವಿರದಷ್ಟು ಆರಂಭಿಕ ಚಾರ್ಜ್ ಮಾಡುತ್ತಿದ್ದರು ಎನ್ನುವಂತಹ ಮಾಹಿತಿ ಇದೆ. ಆ ನಂತರ ಅದು ಲಕ್ಷ ತಲುಪುತ್ತಿತ್ತು ಎಂಬ ಮಾತಿದೆ. ಸಾಕಷ್ಟು ಮಂದಿ ಹಣವನ್ನು ಕಳೆದುಕೊಂಡಿದ್ದಾರೆ. ಒಂದಷ್ಟು ಜನ ಗುರೂಜಿಯಿಂದ ನಮಗೆ ಒಳ್ಳೆಯದೇ ಆಗಿದೆ ಎಂದೂ ಹೇಳ್ತಾರೆ. ಗುರೂಜಿಯವರು ಎಲ್ಲರಿಗೂ ವಾಸ್ತು ಹೇಳ್ತಾ ಇದ್ರು, ವಾಸ್ತು ಹೇಳುವುದು ಯಾವ್ ಕಾರಣಕ್ಕಾಗಿ? ಮನೆಯಲ್ಲಿ ನೆಮ್ಮದಿ ನೆಲೆಸಿರಬೇಕು ಯಾವುದೇ ರೀತಿ ಮಾನಸಿಕ ಹಿಂಸೆ ಆಗಬಾರದು, ಮನೆಯಲ್ಲಿ ಒಳ್ಳೆಯಲಾಗಲು. ಆದ್ರೆ ದುರಂತ ಏನು ನೋಡಿ. ಊರಿನವರಿಗೆ ಎಲ್ಲಾ ವಾಸ್ತು ಹೇಳ್ತಾ ಇದ್ರು ಆದ್ರೆ ಅವರ ಮನೆಯ ವಾಸ್ತು ವನ್ನು ಸರಿಪಡಿಸಲು ಸಾಧ್ಯ ಆಗಲಿಲ್ಲ. ಯಾಕಂದ್ರೆ ಅವರ ಮೊದಲ ಪತ್ನಿ ಮಾನಸಿಕ ಹಿಂಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಎದುರಾಗುತ್ತದೆ. ವಾಸ್ತು ಮನೆಯಲ್ಲಿ ಮಾಡಿಕೊಳ್ಳುವುದೇ ಆ ಉದ್ದೇಶಕ್ಕಾಗಿ ಅಂದ್ರೆ ಮನೆಯಲ್ಲಿನ ಯಾರೋ ಕೂಡ ಮಾನಸಿಕ ಹಿಂಸೆಗೆ ಅನುಭವಿಸದೆ ಇರಲಿ ಅಂತ. ಅವರ ಪತ್ನಿ ಹೋದ ನಂತರ ಸ್ವತಃ ಗುರೂಜಿ ಮಾನಸಿಕ ಖಿನ್ನತೆ ಅನುಭವಿಸಿದರು.

ಮತ್ತೊಂದು ಕಡೆ ಅವರ ಪ್ರಾಣವನ್ನೇ ಅವರಿಗೆ ಉಳಿಸಿಕೊಳ್ಳಲು ಸಾಧ್ಯ ಆಗಲಿಲ್ಲ. ವಾಸ್ತು ಜ್ಯೋತಿಷ್ಯ ಯಾವುದು ಕೂಡ ಅವರ ಸಹಾಯಕ್ಕೆ ಬರಲಿಲ್ಲ ಅನ್ನುವುದು ಕೂಡ ದುರಂತಮಯ ವಿಷಯ. ಚಂದ್ರಶೇಕರ್ ಗುರೂಜಿ ಅವರ ಆಸ್ತಿಯ ಬಗ್ಗೆ ಹೇಳುವುದಾದರೆ, ಇಂದು ಗುರೂಜಿ ಸಾವಿರಾರು ಕೋಟಿಗಳ ಒಡೆಯ ಆದ್ರೆ ಆರಂಭಿಕ ಹಂತದಲ್ಲಿ ಅಷ್ಟು ಇರಲಿಲ್ಲ. ಅವರ ತಂದೆ ತೆಂಗಿನಕಾಯಿ ವ್ಯಾಪಾರಸ್ಥ ಆಗಿದ್ರೂ. ತಕ್ಕಮಟ್ಟಿಗೆ ಇರುವ ಕುಟುಂಬ ಇವರದ್ದಾಗಿತ್ತು. ನಂತರ ಅವರು ಸಿವಿಲ್ ಎಂಜಿನಿರಿಂಗ್ ಪೂರ್ಣ ಮಾಡ್ತಾರೆ. ನಂತರ ಕೆಲ ದಿನಗಳು ಯಾವುದೇ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಾಗ ಮುಂಬೈ ಗೆ ಹೋಗಲು ಯಾರೋ ಉಪದೇಶ ಕೊಡ್ತಾರೆ. ನಂತರ ಮುಂಬೈ ಗೆ ಹೋಗಿ ದೊಡ್ಡ ಗುತ್ತಿಗೆದಾರ ಬಳಿ ಕೆಲ್ಸಕ್ಕೆ ಹೋಗ್ತಾರೆ ನಂತರ ಸ್ವಂತ ಗುತ್ತಿಗೆ ದಾರ ಆಗ್ತಾರೆ. ಸುಮಾರು 6 ವರ್ಷಗಳ ಕಾಲ ಗುತ್ತಿಗೆ ಕೆಲ್ಸ ಮಾಡ್ತಾರೆ. ನಂತರ ಯಾರೋ ವಾಸ್ತು ಶಾಸ್ತ್ರದ ಸಲಹೆ ನೀಡುತ್ತಾರೆ. ವಾಸ್ತು ಕಲಿತುಕೊಂಡರು ಒಳ್ಳೆಯ ಭವಿಷ್ಯ ಇದೆ ಅಂತ. ಆಮೇಲೆ ಅವರು ಕೆಲ ವರ್ಷ ಸಿಂಗಾಪುರಕ್ಕೆ ಹೋಗ್ತಾರೆ ತರಬೇತಿ ಪಡೆದು ಮತ್ತೆ ಮುಂಬೈ ಗೆ ಹಿಂತಿರುಗಿ ತಮ್ಮದೇ ಆದ ಬ್ರಾಂಚ್ ಗಳನ್ನ ನಡೆಸುತ್ತಾರೆ. ಅದಕ್ಕೆ ಸರಳವಾಸ್ತೂ ಎಂಬ ಹೆಸರು ಬಳಸುತ್ತಾರೆ.

ನಂತರ ಕರ್ನಾಟಕಕ್ಕೆ ಬಂದು ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿಯನ್ನು ತೆರೆಯುತ್ತಾರೆ. ಆಗ ದುಡ್ಡು ಇದ್ದ ಜನಕ್ಕೆ ಅಂತಸ್ತು ಬಂಗಲೆ ಇದ್ದರೂ ಮನೆಯಲ್ಲಿ ನೆಮ್ಮದಿ ಶಾಂತಿ ಇರಲ್ಲ ಹಾಗಾಗಿ ಇವರ ವಾಸ್ತುವಿಗೆ ಜನ ಮುಗಿ ಬೀಳುತ್ತಾರೆ. ಯಾರು ಏನೇ ಹೇಳಿದರೂ ನಂಬುವ ಸ್ಥಿತಿಗೆ ಜನ ಬಂದು ತಲುಪಿರುತ್ತಾರೆ. ಇಲ್ಲಿಂದ ಗುರೂಜಿ ದರ್ಬಾರ್ ಶುರು ಆಗುತ್ತೆ. ಬೆಂಗಳೂರು ಗುಜರಾತ್ ಆಂಧ್ರ ಮುಂಬೈ ನಗರಗಳಲ್ಲಿ ದೊಡ್ಡ ಅಪಾರ್ಟ್ಮೆಂಟ್ ಕಟ್ಟಿಸುತ್ತಾರೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಕಂಪನಿ ಶುರು ಮಾಡ್ತಾರೆ. ಬೆಂಗಳೂರು ಸಮೀಪ ಜಮೀನುಗಳನ್ನು ಕೊಂಡುಕೊಳ್ಳುತ್ತಾರೆ. ಇದೆಲ್ಲದರ ಇಟ್ಟರೆ ಮೌಲ್ಯ ಸುಮಾರು ಒಂದು ಸಾವಿರ ಕೋಟಿಗೂ ಮೀರಿದ್ದು ಎಂದು ಹೇಳಲಾಗುತ್ತಿದೆ. ಅವರ ಒಂದು ದಿನದ ಆದಾಯ ಕೇಳಿದ್ರೆ ನೀವು ಬೆಚ್ಚಿ ಬೇಳ್ತಿರ ಎಷ್ಟು ಅಂದ್ರೆ 30 ಲಕ್ಷ ರೂಪಾಯಿ. ಈ ಸಂದರ್ಭದಲ್ಲಿ ಅವರು ಬೇನಾಮಿ ಆಸ್ತಿಯನ್ನು ಮಾಡಲು ಶುರು ಮಾಡ್ತಾರೆ. ಅದೇ ಬೇನಾಮಿ ಆಸ್ತಿ ಇಂದು ಚಂದ್ರಶೇಕರ್ ಗುರೂಜಿ ಅವರಿಗೆ ಉರುಳಾಗಿದೆ. ಅವರ ಕೊಲೆಗೈದ ಮಹಾಂತೇಶ ಅವರ ಹೆಸರಲ್ಲಿ ಸಹ ಬೇನಾಮಿ ಆಸ್ತಿ ಮಾಡಿರುತ್ತಾರೆ. ಅದಾದ ಮೇಲೆ ಮಹಾಂತೇಶ ನ ಮೇಲೆ ಆಸ್ತಿ ಮಾರಾಟ ಮಾಡಲು ಒತ್ತಡ ಹೇರುತ್ತಾರೆ ಗುರೂಜಿ. ಹೇಗೆ ಜಟಾಪಟಿ ನಡೆದು ಕಿತ್ತಾಟ ಆಗಿ ಕೊನೆಗೆ ಬೇನಾಮಿ ಆಸ್ತಿ ಗುರೂಜಿ ಪ್ರಾಣ ತೆಗೆಯುವ ಹಂತಕ್ಕೆ ಬಂದು ತಲುಪಿತು.

Leave a comment

Your email address will not be published. Required fields are marked *