ರಕ್ಷಿತ್ ಶೆಟ್ಟಿ ಸಿನಿಮಾ ವಿಚಾರಕ್ಕೆ ಧಿಡೀರ್ ಪೊಲೀಸ್ ಠಾಣೆಗೆ ಬಂದ ನಟಿ ರಮ್ಯಾ, ಏನಾಯ್ತು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ರಕ್ಷಿತ್ ಶೆಟ್ಟಿ ಸಿನಿಮಾ ವಿಚಾರಕ್ಕೆ ಧಿಡೀರ್ ಪೊಲೀಸ್ ಠಾಣೆಗೆ ಬಂದ ನಟಿ ರಮ್ಯಾ, ಏನಾಯ್ತು? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ನ ಎಷ್ಟರ ಮಟ್ಟಿಗೆ ಯೂಸ್ ಮಾಡಿಕೊಳ್ಳುತ್ತಿದ್ದಾರೋ ಅಷ್ಟೇ ಮಿಸ್ ಯೂಸ್ ಮಾಡಿಕೊಳ್ಳುತ್ತಿರುವವರ ಸಂಖ್ಯೆಯೂ ಜಾಸ್ತಿ ಆಗ್ತಾ ಇದೆ. ಅದ್ರಲ್ಲಿ ಕೂಡ ನಟ ನಟಿಯರಿಗೆ ಎಗ್ಗಿಲ್ಲದೆ ನಿಂದಿಸುವವರ ಸಂಖ್ಯೆ ಜಾಸ್ತಿ ಆಗ್ತಾನೆ ಇದೆ. ಸೋಶಿಯಲ್ ಮೀಡಿಯಾ ದಲ್ಲಿ ಯಾವುದಾದರೊಂದು ಪೋಸ್ಟ್ ಹಾಕಿದರೆ ಅದಕ್ಕೆ ನಿಂದನಾರ್ಹ ಕಾಮೆಂಟ್ಗಳನ್ನು ಹಾಕೋದು ಅಥವಾ ಕೆಟ್ಟ ಕೆಟ್ಟದಾಗಿ ಅವರನ್ನು ನಿಂದಿಸುವುದು ಅಂತವೆಲ್ಲವೋ ಕೂಡ ಜಾಸ್ತಿ ಆಗ್ತಾ ಇದೆ. ಅದ್ರಲ್ಲೂ ಕೂಡ ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವುದು ಹೀರೋಯಿನ್ ಗಳು. ಒಂದಷ್ಟು ಜನ ತುಂಬಾ ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಆದ್ರೆ ಒಂದಷ್ಟು ಜನರಿಗೆ ತೀರಾ ಕೆಟ್ಟದಾಗಿ ನಿಂದಿಸಿದ ಸಂದರ್ಭದಲ್ಲಿ ಅವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಇದೀಗ ನಟಿ ರಮ್ಯಾ ವಿಚಾರ ಕೂಡ ಹಾಗೆ ಆಗಿದೆ. ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಟಿ ರಮ್ಯಾ ಒಟ್ಟಾಗಿ ಸೈಲೆಂಟ್ ಆಗಿದ್ರೂ. ರಾಜಕೀಯ ಆಗ್ಲಿ ಸಿನೆಮಾ ಆಗ್ಲಿ ಯಾವುದರಲ್ಲಿ ಕೂಡ ಗುರುತಿಸಿಕೊಂಡಿರಲಿಲ್ಲ.

 

ಕಂಪ್ಲೀಟ್ ಆಗಿ ಎಲ್ಲದರಿಂದಲೋ ದೂರ ಇದ್ರು. ಆದ್ರೆ ಇತ್ತೀಚೆಗೆ ಸಿಕ್ಕಾಪಟ್ಟೆ ಆಕ್ಟೀವ್ ಆದ ಹಾಗೆ ಕಾಣಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಗಮನಿಸಿದ್ರಿ, ಡಿ ಕೆ ಶಿವಕುಮಾರ್ ವರ್ಸಸ್ ರಮ್ಯಾ ಎನ್ನುವ ರೀತಿ ಕೂಡ ಆಗಿತ್ತು. ಈಗ ರಮ್ಯಾ ಹೇಳಿರುವ ಪ್ರಕಾರ ನಾನು ಸಿನೆಮಾ ಇಂಡಸ್ಟ್ರಿಗೆ ಕಮ್ ಬ್ಯಾಕ್ ಮಾಡ್ತಾ ಇದ್ದೀನಿ ಅಂತ ಹೇಳಿ. ಯಾವ ಸಿನೆಮಾ ಏನು ಎತ್ತ ಅಂತ ಇನ್ನಷ್ಟು ಗೊತ್ತಾಗಬೇಕಿದೆ. ರಾಜಕೀಯಕ್ಕೆ ಬರುತ್ತಾರೆ ಎನ್ನುವ ಟಕ್ಸ್ ಇತ್ತು ಆದ್ರೆ ರಾಜಕೀಯದಿಂದ ದೂರ ಉಳಿಯುವ ಹಾಗೆ ಹೇಳಿದ್ದಾರೆ. ಇನ್ನೂ ರಮ್ಯಾ ಎಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚೆಗೆ ಸೋಷಿಯಲ್ ಮೀಡಿಯಾ ದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ, ಅದ್ರಲ್ಲಿ ಇನ್ಸ್ತಾಗ್ರಾಮ್ ನಲ್ಲಿ ಸಾಕಷ್ಟು ಪೋಸ್ಟ್ ಮಾಡ್ತಾ ಇರ್ತಾರೆ ಒಂದಷ್ಟು ಸಿನೆಮಾಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡ್ತಾ ಇರ್ತಾರೆ. ಅದ್ರಲ್ಲೂ ಕೂಡ ಇತ್ತೀಚೆಗೆ ರಕ್ಷಿತ್ ಶೆಟ್ಟಿ ಟೀಮ್ ಜೊತೆಗೆ ಒಂದೊಳ್ಳೆ ಬಾಂಡಿಂಗ್ ಬೆಳೆದುಬಿಟ್ಟಿದೆ. ಕೇವಲ ರಕ್ಷಿತ್ ಶೆಟ್ಟಿ ಅಲ್ಲ ರಿಷಬ್ ಶೆಟ್ಟಿ ಹಾಗೂ ಅವರ ಟೀಮ್ ಅಲ್ಲಿ ಯಾರಿದ್ದಾರೆ ಅವರ ಜೊತೆ ಅವರಿಂದ ಯಾವುದೇ ಸಿನೆಮಾ ಬಂದಾಗ ಅವರ ಸಿನೆಮಾದ ಟ್ರೇಲರ್ ಗೆ ಒಂದೊಳ್ಳೆ ಬರಹವನ್ನು ಬರೆದು ಹಾಕುವುದು ಹೊಸ ತಂಡಕ್ಕೆ ಪ್ರೋತ್ಸಾಹ ಮಾಡುವುದು ಇವೆಲ್ಲಾ ಮಾಡ್ತಾ ಇದ್ರು. ಇತ್ತೀಚೆಗೆ ಚಾರ್ಲಿ ಸಿನೆಮಾದ ಬಗ್ಗೆ ಇದೆ ರೀತಿ ಪೋಸ್ಟ್ ಹಾಕಿದ್ರು.

 

ಚಾರ್ಲಿ ಪ್ರೀಮಿಯರ್ ಶೋ ಗೆ ರಮ್ಯ ನ ಇನ್ವೈಟ್ ಮಾಡಿದ್ರೂ. ಹೀಗಾಗಿ ರಮ್ಯಾ ಕೂಡ ಹೋಗಿ ಸಿನಿಮಾನ ನೋಡಿಕೊಂಡು ಬಂದಿದ್ದಾರೆ. ಇದು ಒಂದು ನಾಯಿಗೆ ಸಂಬಂಧ ಪಟ್ಟ ಕಥೆ. ರಮ್ಯಾ ಅವರಿಗೆ ಪ್ರಾಣಿಗಳ ಬಗ್ಗೆ ಒಂದು ಒಳ್ಳೆಯ ಬಾಂಡಿಂಗ್ ಇದೆ. ಬೀದಿ ನಾಯಿಯನ್ನು ಸಾಯಿಸಿ ಹೋದ ಸಂದರ್ಭದಲ್ಲಿ ಆ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಪ್ರತಿಭಟನೆ ಸಹ ಮಾಡಿದ್ರು. ಈ ಸಿನೆಮಾದಲ್ಲಿ ನಾಯಿ ಹೈ ಲೈಟ್ ಆಗಿರುವ ಕಾರಣಕ್ಕಾಗಿ ಚಾರ್ಲಿ ಸಿನೆಮಾ ನ ನೋಡಿಕೊಂಡು ಬಂದಿದ್ರು. ನೋಡಿಕೊಂಡು ಬಂದ ಕಾರಣ ಇಂದು ಒಕ್ಕೆಯ ಪೋಸ್ಟ್ ಹಾಕಿದ್ರು. ಓರ್ವ ವ್ಯಕ್ತಿ ಇದಕ್ಕೆ ತೀರಾ ಕೆಟ್ಟದಾಗಿ ಕಾಮೆಂಟ್ ನ ಮಾಡಿರ್ತನೆ. ತುಂಬಾ ಕೆಟ್ಟ ಕೆಟ್ಟ ಕೆಟ್ಟ ಕಾಮೆಂಟ್ ಗಳನ್ನು ಬಂದಿರ್ಥವೆ ರಮ್ಯಾ ಅವರಿಗೆ. ಬೇರೆ ಬೇರೆ ರೀತಿಯಲ್ಲಿ ನೀವು ಸಿನೆಮಾ ಇಂಡಸ್ಟ್ರಿಗೆ ಬರಬೇಡಿ ಹಾಗೆ ಹೀಗೆ , ರಾಹುಲ ಗಾಂಧಿ ಹಾಗೆ ಏನೇನೋ ವಿಚಾರಗಳನ್ನು ಪ್ರಸ್ತಾಪ ಮಾಡಿ ನಂತರ ಓರ್ವ ವ್ಯಕ್ತಿ ಒಬ್ಬ ತೀರಾ ಕೆಳ ಮಟ್ಟಕ್ಕೆ ಹೋಗಿ ಕಾಮೆಂಟ್ ಮಾಡಿರುತ್ತಾನೆ. ರಮ್ಯಾ ಗೆ ಈ ವಿಷ್ಯ ಸಹಿಸಲು ಆಗದೆ ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಸ್ವತಃ ರಮ್ಯಾ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವ ಕೆಲಸ ಮಾಡಿದ್ದಾರೆ. ಕಮಿಷನರ್ ಬಳಿ ದಯವಿಟ್ಟು ಕ್ರಮ ತೆಗೆದುಕೊಳ್ಳಲು ಮನವಿ ಮಾಡಿದ್ದಾರೆ.

ಸುದ್ದಿ