ಮದುವೆಯಲ್ಲಿ ನಯನತಾರಾ ಉಟ್ಟ ಸೀರೆ ಹಾಕಿದ ನೆಕ್ಲೆಸ್ ಬಗ್ಗೆ ಕೇಳಿದ್ರೆ ನಿಮ್ಗೆ ಅಚ್ಚರಿಯಾಗುತ್ತದೆ.!!!

ನಮಸ್ತೆ ಪ್ರಿಯ ಓದುಗರೇ, ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ವಿಗ್ನೇಶ್ ಮದುವೆ ಅದ್ಧೂರಿಯಾಗಿ ನಡೆಯಿತು. ಜೂನ್ 9 ನೆ ತಾರೀಕು ಮಹಾಬಲಿಪುರಂ ನಲ್ಲಿ ನಡೆದ ಅದ್ಧೂರಿ ಮದುವೆ ಸಮಾರಂಭದಲ್ಲಿ ಗಣ್ಯದಿಗಣ್ಯರು ಹಾಜರಾಗಿ ನವಜೋಡಿಗೆ ಹಾರೈಸಿದರು. ಈ ಅದ್ಧೂರಿ ವಿವಾಹ ಸಮಾರಂಭದಲ್ಲಿ ನಯನತಾರಾ ಅವರು ಧರಿಸಿರೋ ಸೀರೆ ಹಾಗೆ ಜಿವೆಲರಿ ಎಲ್ಲರ ಗಮನ ಸೆಳೆಯುತ್ತಾ ಇದೆ. ವೆಲ್ವೆಟ್ ಸೀರೆ ಹಾಗೂ ವಿಭಿನ್ನ ಜಿವೆಲರಿ ಯಲ್ಲಿ ನಟಿ ನಯನತಾರಾ ಕಂಗೊಳಿಸುತ್ತಾ ಇದ್ರು. ನಯನತಾರಾ ಮದುವೆಯ ಉಡುಗೆಯನ್ನು ಸಂಪೂರ್ಣವಾಗಿ ದೆಸೈನ್ ಮಾಡಿದ್ದು ಖ್ಯಾತ ಡಿಸೈನರ್ ಮೋನಿಕಾ ಮತ್ತು ಕರಿಷ್ಮಾ ಸಾಲಿ. ಮದುವೆ ಡ್ರೆಸ್ ಹೀಗೆ ಇರಬೇಕು ಅಂತ ನಯನತಾರಾ ಅವರೇ ಖುದ್ದು ಹೇಳಿ ಮಾಡಿಸಿದ ಡಿಸೈನ್ ಇದಾಗಿದೆ. ಲೈಟ್ ವೇಟ್ ಕೆಂಪು ಬಣ್ಣದ ಸೀರೆಗೆ ಅದೇ ಬಣ್ಣದ ಬಾರ್ಡರ್ ಕೂಡ ಇತ್ತು. ಸೀರೆಯಲ್ಲಿ ಅನೇಕ ವಿಶೇಷ ಡಿಸೈನ್ ಗಳನ್ನು ಮಾಡಿಸಲಾಗಿತ್ತು. ಮದುವೆ ಸೀರೆ ಮೇಲೆ ನಯನತಾರಾ ಹಾಗೂ ವಿಗ್ನೆಶ್ ಅವರ ಹೆಸರನ್ನು ಬರೆಸಲಾಗಿದೆ.

 

ಇನ್ನೂ ವಿಜ್ಞೆಶ್ ಸಿವನ್ ಧರಿಸಿದ್ದ ಬಟ್ಟೆಯ ಬಗ್ಗೆ ಹೇಳುವುದಾದರೆ ವಿಗ್ನೇಶ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಬಿಳಿ ಮತ್ತು ಗೋಲ್ಡ್ ಬಣ್ಣದ ಕುರ್ತಾ ಪಂಚೆ ಮತ್ತು ಶಾಲ್ ಹಾಕಿಕೊಂಡಿದ್ದಾರೆ. Vignesh ಬಟ್ಟೆಯನ್ನು ಕೂಡ ಜೆಡ್ ವಿನ್ಯಾಸಕರು ವಿಶೇಷವಾಗಿ ಡಿಸೈನ್ ಮಾಡಿರೋ ಡ್ರೆಸ್ ಆಗಿತ್ತು. ಶಾಲ್ ನಲ್ಲಿ ಎಂಬ್ರಾಯ್ಡ್ ಡಿಸೈನ್ ಮಾಡಲಾಗಿದೆ. ನಯನತಾರಾ ಡಿಸೈನ್ ಗೆ ಹೈದ್ರಾಬಾದ್ ಟಚ್ ಕೊಡಲಾಗಿತ್ತು. ಡ್ರೆಸ್ ಜೊತೆಗೆ ನಯನತಾರಾ ಧರಿಸಿದ್ದ ಜಿವೇಲರಿ ಕೂಡ ತುಂಬಾನೇ ಅಟ್ಟಕ್ಟ್ ಆಗಿತ್ತು. ಬಹು ಎಳೆಯ ನೆಕ್ಲೆಸ್ ದೊಡ್ಡದಾಗಿ ಇಯರ್ ಸ್ಟಡ್, ಮತ್ತು ಬಳೆಯನ್ನು ಹಾಕಿಕೊಂಡು ಅಪ್ಸರೆ ಹಾಗೆ ಕಾಣುತ್ತಾ ಇದ್ರು ನಯನತಾರಾ.

 

ಇಲ್ಲಿ ಪ್ರಮುಖವಾಗಿ ತುಂಬಾನೇ ಗಮನ ಸೆಳೆದಿದ್ದು ನಯನತಾರಾ ಅವರು ಹಾಕಿಕೊಂಡ ಬಹು ಎಳೆಯ ಜಿವೇಲರಿ. ಇದು ಹೈದ್ರಾಬಾದ್ ನ ಸಾಂಪ್ರದಾಯಿಕ ಜಿವೇಲರಿ ಆಗಿದ್ದು, ರಾಜಮನೆತನದವರು ಧರಿಸುವ ಹಾರವಾಗಿದೆ. ಏಳು ಎಳೆಯ ಈ ಜಿವೇಲರಿಯನ್ನು ಮುತ್ತು ವಜ್ರ ಮತ್ತು ವಿವಿಧ ದುಬಾರಿ ಸ್ಟೋನ್ ಗಳನ್ನು ಬಳಸಿ ಮಾಡಲಾಗಿದೆ. ಇದು ಹೈದ್ರಾಬಾದ್ ನಿಜಾಮರು ಹಾಗೂ ನವಾಬಿ ಪರಂಪರೆ ಆಗಿದ್ದು, ಇಂದಿಗೂ ಕ್ಲಾಸಿಕ್ ಆಗಿ ಉಳಿಕೊಂಡಿದೆ. ನಟಿ ದೀಪಿಕಾ ಪಡುಕೋಣೆ ಕೂಡ ತನ್ನ ಮೆಹಂದಿ ಶಾಸ್ತ್ರದಲ್ಲಿ ಸತ್ತ್ಕೆಡ್ ಹಾರವನ್ನು ಹಾಕಿಕೊಂಡಿದ್ದರು. ನಯನತಾರಾ ಮದುವೆ ಫೋಟೋ ಈಗ ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗ್ತಾ ಇದೆ. ಯಾಕಂದ್ರೆ ಅವರು ಅಪ್ಸರೆ ರೀತಿ ಕಾಣುತ್ತಿರುವ ನಯನತಾರಾ ಹಾಕಿಕೊಂಡ ಸೀರೆ ಜಿವೆಲರಿ ಬಗ್ಗೆನೇ ತುಂಬಾನೇ ಚರ್ಚೆಗಳು ಆಗ್ತಾ ಇದೆ.

Leave a comment

Your email address will not be published. Required fields are marked *