ನಿಖಿಲ್ ಕುಮಾರಸ್ವಾಮಿ ಮಾಜಿ ಪ್ರಧಾನಿಗಳ ಮೊಮ್ಮಗ, ಮಾಜಿ ಮುಖ್ಯಮಂತ್ರಿಗಳ ಮಗ, ನಟ, ರಾಜಕಾರಣಿ ಎಲ್ಲವೂ ಹೌದು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನು ಕಂಡು. ಸದ್ಯ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ 2015 ರಲ್ಲಿ ಸ್ವಾತಿ ಎಂಬ ಹುಡುಗಿಯ ಜೊತೆಗೆ ಎಂಗೇಜ್ಮೆಂಟ್ ಆಗಿದ್ದು ನಿಮಗೆಲ್ಲ ನೆನಪಿರಬಹುದು. ಆದ್ರೆ ಇದ್ದಕ್ಕಿದ್ದ ಹಾಗೆ ಎಂಗೇಜ್ಮೆಂಟ್ ಬ್ರೇಕಪ್ ಆಗುತ್ತೆ. ತದ ನಂತರ ಕಳೆದ ವರ್ಷ ರೇವತಿ ಎಂಬ ಯುವತಿ ಜೊತೆಗೆ ಮದುವೆಯಾಗಿ ಮಗು ಕಂಡು ಸದ್ಯ ಹಾಯಾಗಿದ್ದಾರೆ. ಹಾಗಾದ್ರೆ ಸ್ವಾತಿ ಜೊತೆ ಎಂಗೇಜ್ಮೆಂಟ್ ಮುರಿಯಲು ಕಾರಣ ಏನು? ಎಂಗೇಜ್ಮೆಂಟ್ ಮುರಿದು ಬಿದ್ದ ನಂತ್ರ ಸ್ವಾತಿ ತಂದೆ ಹಠಕ್ಕೆ ಮಾಡಿದ್ದು ಏನು ಗೊತ್ತಾ? ಆ ಇಂಟರೆಸ್ಟಿಂಗ್ ಡೀಟೇಲ್ಸ್ ನ ನಿಮ್ಮ ಮುಂದೆ ಇಡುವ ಪ್ರಯತ್ನ ನಮ್ಮದು. ಅದು 2015 ಮೇ 20 ಎಲ್ಲಾ ಕಡೆಗಳಲ್ಲಿ ನಿಖಿಲ್ ಕುಮಾರಸ್ವಾಮಿ ಸ್ವಾತಿಯ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಸುದ್ದಿ ಆಗುತ್ತೆ. ಖ್ಯಾತ ನಿರ್ಮಾಪಕ ಕೆ.ಸಿ.ಎನ್ ಮೋಹನ್ ಅವರ ಪುತ್ರಿ ಸ್ವಾತಿ. ಸ್ವಾತಿ ಮತ್ತು ನಿಖಿಲ್ ಕುಮಾರಸ್ವಾಮಿ ದು ಆ ಸಮಯದಲ್ಲಿ ಮನೆಯವರು ಒಪ್ಪಿ ಎಂಗೇಜ್ಮೆಂಟ್ ಮಾಡಿರಲಿಲ್ಲ.
ಸ್ವಾತಿ ನಿಖಿಲ್ ಕುಮಾರಸ್ವಾಮಿ ಈ ಹಿಂದೆ ಪ್ರೀತಿಸುತ್ತಾ ಇದ್ರು, ಇಬ್ಬರೂ ಕೂಡ ಎಂಬಿಎ ಮಾಡುವ ಸಂದರ್ಭದಲ್ಲಿ ಪರಸ್ಪರ ಪರಿಚಯ ಆಗಿತ್ತು, ಇಬ್ಬರೂ ಕೂಡ ಶ್ರೀಮಂತ ಕುಟುಂಬದಿಂದ ಬಂದಿರುವ ಹಿನ್ನೆಲೆ ಇದ್ದುದರ ಕಾರಣ ಸಿನೆಮಾ ರಂಗದ ಹಿನ್ನೆಲೆ ಇದ್ದುದರ ಕಾರಣ ಬೇಗ ಪರಿಚಯ ಆಗುತ್ತೆ. ಆ ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಪ್ರೀತಿಗೆ ತಿರುಗುತ್ತದೆ. ಸಾಕಷ್ಟು ವರ್ಷಗಳ ಕಾಲ ಇಬ್ಬರೂ ಪ್ರೀತಿಸುತ್ತಾ ಇರ್ತಾರೆ. ಈ ವಿಚಾರ ಎರಡೂ ಮನೆಯವರಿಗೆ ತಿಳಿದು ಮದುವೆ ಮಾಡಿಸಲು ಯಾವುದೇ ರೀತಿಯ ಸಮಸ್ಯೆ ಆಗಲ್ಲ. ಕಾರಣ ಇಬ್ಬರೂ ಸಹ ಶ್ರೀಮಂತ ಕುಟುಂಬದಿಂದ ಬಂದವರು. ಹೀಗಾಗಿ 2015 ಮೇ 20 ರಂದು ಇಬ್ಬರ ಎಂಗೇಜ್ಮೆಂಟ್ ಸಹ ಮಾಡಲಾಗುತ್ತೆ. ಎಂಗೇಜ್ಮೆಂಟ್ ಆದ ನಂತರ ಸ್ವಾತಿ ನಿಖಿಲ್ ಮನೆಗೆ ಆಗಾಗ ಬರ್ತಾ ಇದ್ರು. ಎರಡೂ ಕುಟುಂಬದ ನಡುವೆ ಯಾವುದೇ ಸಮಸ್ಯೆ ಇರಲಿಲ್ಲ. ಆಗ ನಿಖಿಲ್ ಕುಮಾರಸ್ವಾಮಿ ಇದ್ದಕ್ಕಿದ್ದ ಹಾಗೆ ಸಿನೆಮಾ ಇಂಡಸ್ಟ್ರಿಗೆ ಎಂಟ್ರಿ ಕೊಡ್ತಾರೆ. 2016 ರಲ್ಲಿ ಜಾಗ್ವಾರ್ ಸಿನೆಮಾ ಸೆಟ್ಟೇರುತ್ತದೆ. ಜಾಗ್ವಾರ್ ಸಿನೆಮಾ ಬರುತ್ತಿದ್ದಂತೆ ಒಂದಷ್ಟು ವೈಯಕ್ತಿಕ ಬದುಕಿನಲ್ಲಿ ಸಮಸ್ಯೆ ಏರುಪೇರು ಆಗಲು ಶುರು ಆಗುತ್ತೆ. ಸ್ವಾತಿ ನಿಖಿಲ್ ನಡುವೆ ಹೊಂದಾಣಿಕೆ ಕೊರತೆ ಉಂಟಾಗುತ್ತದೆ. ಚಿಕ್ಕ ಪುಟ್ಟ ಸಮಸ್ಯೆಗಳಿಗೆ ವೈಮನಸ್ಸು ಬೆಳೆಯಲು ಶುರು ಆಗುತ್ತದೆ. ಈ ಸಮಸ್ಯೆ ಬಹಳ ದೊಡ್ಡ ಮಟ್ಟದಲ್ಲಿ ಬಿರುಕು ಕಾಣಿಸಲು ಶುರು ಆಗುತ್ತೆ. ಹೆಚ್ಚು ಕಡಿಮೆ 2017 ರಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ಮುರಿದು ಬೀಳುತ್ತದೆ. ಆದ್ರೆ ಸ್ವಾತಿ ಮನೆಯಲ್ಲಿ ಅವರ ತಂದೆಗೆ ತುಂಬಾ ಕೋಪ ಬರುತ್ತಂತೆ. ಕುಮಾರಸ್ವಾಮಿ ಕುಟುಂಬದ ವಿರುದ್ಧ.
ಮಗಳ ಭವಿಷ್ಯ ಹಾಳಾಯ್ತು ಎನ್ನುವ ಕಾರಣಕ್ಕೆ ಮೋಹನ್ ಗೆ ತುಂಬಾ ಸಿಟ್ಟು ಬರುತ್ತೆ. ತಕ್ಷಣ ನನ್ನ ಮಗಳಿಗೆ ಆದಷ್ಟು ಬೇಗ ಮದುವೆ ಮಾಡಿ ಅವರ ಕುಟುಂಬಕ್ಕೆ ಒಂದು ಪಾಠ ಕಲಿಸಿದ ಹಾಗೆ ಆಗುತ್ತೆ ಅಂತ ಅವರು ಅಂದುಕೊಳ್ಳುತ್ತಾರೆ. ಅದೇ ರೀತಿ ಅವರು ದೇವೇಗೌಡರ ಕುಟುಂಬಕ್ಕೆ ಆಪೋಸಿಟ್ ಇರುವ ಕುಟುಂಬದ ಅಂದ್ರೆ ಶ್ರೀಕಂಠಯ್ಯ ಎನ್ನುವ ಮಾಜಿ ಸಚಿವರ ಮೊಮ್ಮಗನನ್ನು ನೆಹನೇಶ್ ಜೊತೆಗೆ 2018 ರಲ್ಲಿ ಸ್ವಾತಿಯ ಮದುವೆ ನೆರವೇರುತ್ತದೆ. ಸ್ವಾತಿ ಮದುವೆ ಆಗುತ್ತಿದ್ದ ಹಾಗೆ ಕುಮಾರಸ್ವಾಮಿ ಅವರಿಗೆ ಹಠ ಬಂದು ಆಂಧ್ರ ಮೂಲದ ಕೋಟೇಶ್ವರ ನಾಯಕ ಎನ್ನುವ ಉದ್ಯಮಿಯ ಮಗಳನ್ನು ನಿಖಿಲ್ ಗೆ ಮದುವೆ ಮಾಡಲು ಮಾತುಕತೆಗೆ ಆಂಧ್ರ ಪ್ರದೇಶಕ್ಕೆ ಹೋಗ್ತಾರೆ. ಒಂದು ಹಂತದ ಮಾತುಕತೆ ಸಹ ಆಗಿರುತ್ತೆ ಎಂಗೇಜ್ಮೆಂಟ್ ಗೆ ಸಹ ಪ್ಲಾನ್ ಮಾಡಿರುತ್ತಾರೆ. ಈಗ ನೋಡಿದ ಕುಟುಂಬದ ನಡುವೆಯೂ ಹೊಂದಾಣಿಕೆ ಬಾರದೆ ಅದು ಕೂಡ ಕ್ಯಾನ್ಸಲ್ ಆಗುತ್ತೆ. ಆ ನಂತರ ನಿಖಿಲ್ ಸಿನೆಮಾ ಬದುಕಲ್ಲಿ ಸಕ್ರಿಯ ಆಗ್ತಾರೆ. ನಂತರ ರಾಜಕೀಯಕ್ಕೂ ಭಾಗವಹಿಸುತ್ತಾರೆ. 2020 ರಲ್ಲಿ ನಿಖಿಲ್ ಕುಮಾರಸ್ವಾಮಿ ಗೆ ಮದುವೆ ಮಾಡುವ ನಿರ್ಧಾರ ಮಾಡಿ ರೇವತಿ ಎನ್ನುವಂಥ ಕಾಂಗ್ರೆಸ್ ಪ್ರಮುಖ ಲೀಡರ್ ಎಂ ಕೃಷ್ಣಪ್ಪ ಅವರ ಮಗಳನ್ನು ಮದುವೆ ಮಾಡಿ ಕೊಡ್ತಾರೆ. ಬದುಕಲ್ಲಿ ಏನೇ ಆದ್ರೂ ಈಗ ನಿಖಿಲ್ ಹಾಗೂ ರೇವತಿ ಸೊಗಸಾದ ಜೀವನ ನಡೆಸ್ತಾ ಇದ್ದಾರೆ.