ನಮಸ್ತೆ ಪ್ರಿಯ ಓದುಗರೇ, ಮನುಷ್ಯನ ಬದುಕು ಅತ್ಯಂತ ಕ್ಷಣಿಕ. ಈಗ ಇದ್ದಂಥ ಮನುಷ್ಯ ಇನ್ನೂ ಸ್ವಲ್ಪ ದಿನಗಳಲ್ಲಿ ಇರೋದಿಲ್ಲ. ಅದು ನಾಚುರಲ್ ಆಗಿ ಸಾವನ್ನಪ್ಪಿರುವುದು ಬಿಟ್ಟು ಇನ್ನಿತರ ಮೂಲಕವೋ ಕೂಡ ಸಾವು ಬರುವ ಸಾಧ್ಯತೆ ಇದ್ದೇ ಇರುತ್ತೆ. ಇದೀಗ ಸರಳ ವಾಸ್ತು ಮೂಲಕ ಪ್ರಸಿದ್ಧಿ ಪಡೆದಂತಹ ಚಂದ್ರಶೇಕರ್ ಗುರೂಜಿ ಪಾಡು ಕೂಡ ಅದೇ ಆಗಿದೆ. ಚಂದ್ರಶೇಕರ್ ಗುರೂಜಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪ್ರತಿ ದಿನ ಬಹುತಕ ವಾಹಿನಿಗಳಲ್ಲಿ ಅಥವಾ ಎಂಟರ್ಟೈನ್ ಚಾನೆಲ್ಗಳಲ್ಲಿ ನಾವು ಚಂದ್ರಶೇಕರ್ ಗುರೂಜಿ ನ ನೋಡಿಯೇ ಇರ್ತೀವಿ. ವಾಸ್ತುವಿನ ಮೂಲಕ ಸಾಕಷ್ಟು ಪ್ರಖ್ಯಾತಿ ಪಡೆದುಕೊಂಡಿದ್ದರು. ಇಂತಹ ಚಂದ್ರಶೇಕರ್ ಗುರೂಜಿ ಇನ್ನಿಲ್ಲ. ಅದು ಕೂಡ ಭೀಕರವಾಗಿ ತನ್ನ ಶತ್ರುಗಳಿಗೆ ಕೂಡ ಇಂಥ ಸಾವು ಬರಬಾರದು ಅಂತ ಹೇಳ್ತೀವಿ ಅಲ್ವಾ ಅದೇ ಥರ ಬರ್ಬರವಾಗಿ ಚಂದ್ರಶೇಖರ ಗುರೂಜಿ ಕೊಲೆ ಆಗಿದ್ದಾರೆ. ಏನಾಯ್ತು ಎಂದು ಹೇಳ್ತೀವಿ ಕೇಳಿ. ಚಂದ್ರಶೇಖರ್ ಗುರೂಜಿ ಈ ಸರಳ ವಾಸ್ತುವಿಗೆ ಸಂಬಂಧ ಪಟ್ಟ ಹಾಗೆ ಗ್ರಾಹಕರನ್ನು ಭೇಟಿ ಆಗುವಂತಹ ಉದ್ದೇಶದಿಂದ ಹುಬ್ಬಳ್ಳಿಯ ಒಂದು ಖಾಸಗಿ ಹೋಟೆಲ್ ನಲ್ಲಿ ತಂಗುತ್ತಾರೆ.
ಅಲ್ಲಿ ಅವರು ಗ್ರಾಹಕರನ್ನು ಭೇಟಿ ಆಗುವ ಕಾರಣದಿಂದ ಒಂದಿಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾ ಇರ್ತಾರೆ. ಇದೆ ಸಂದರ್ಭದಲ್ಲಿ ಹೋಟೆಲ್ ಇಂದ ಕೆಳಗಡೆ ಬರುತ್ತಿದ್ದ ಹಾಗೆ ಒಂದಿಷ್ಟು ಜನ ಚಂದ್ರಶೇಕರ್ ಗುರೂಜಿ ಬಳಿ ಬರ್ತಾರೆ. ಗುರೂಜಿ ಕೂಡ ಅಂದುಕೊಳ್ತಾರೆ ಬೇರೆ ಬೇರೆ ಕಡೆ ಹೋದಂತಹ ಸಂದರ್ಭದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಕೆಲವೊಂದಿಷ್ಟು ಜನ ಬರ್ತಾರೆ ಇಲ್ಲ ಅಂದ್ರೆ ಅವರಿಗೆ ಕೈ ಕಾಲು ಮುಗಿಯಲು ಕೆಲವೊಂದಿಷ್ಟು ಜನ ಬರ್ತಾ ಇರ್ತಾರೆ. ಅದೇ ರೀತಿಯಾಗಿ ಅವರು ಕೂಡ ಬಂದ್ರು ಅಂತ ಹೇಳಿ ಗುರೂಜಿ ಸುಮ್ಮನೆ ಇರ್ತಾರೆ. ಆಗ ಬಂದಂತಹ ದುಷ್ಕರ್ಮಿಗಳು ಕಾಲಿಗೆ ಬೀಳುವ ನೆಪ ಒಡ್ಡಿ ಇದ್ದಕ್ಕಿದ್ದ ಹಾಗೆ ಚಂದ್ರಶೇಕರ್ ಗುರೂಜಿ ಅವರನ್ನು ಚುಚ್ಚಲು ಶುರು ಮಾಡಿ ಬಿಡ್ತಾರೆ. ಅರೆ ಕ್ಷಣ ಗುರೂಜಿಗೆ ಕೂಡ ಏನಾಗ್ತಿದೆ ಅಂತ ಗೊತ್ತಾಗ್ಲಿಲ್ಲ. ತಕ್ಷಣ ಕುಸಿದು ಕೆಳಗಡೆ ಬೀಳ್ತಾರೆ. ಸುತ್ತ ಮುತ್ತ ಇದ್ದ ದುಷ್ಕರ್ಮಿಗಳು ಎಲ್ಲಾ ಕಡೆ ಆವರಿಸಿಕೊಂಡು ಹಿಗ್ಗಾ ಮುಗ್ಗಾ ನಮ್ಮ ಶತ್ರುವಿಗೆ ಕೂಡ ಅಂತಹ ಸಾವು ಬರಬಾರದು ಅಂದುಕೊಳ್ಳುವ ಹಾಗೆ ಅಷ್ಟರ ಮಟ್ಟಿಗೆ ನಿರಂತರವಾಗಿ ಅವರನ್ನು ಚುಚುತ್ತ ಹೋಗ್ತಾರೆ.
ಚಂದ್ರಶೇಕರ್ ಗುರೂಜಿ ಒಂದಿಷ್ಟು ಕಾಲ ಪ್ರತಿರೋಧ ಒಡ್ಡುವ ಪ್ರಯತ್ನ ಮಾಡ್ತಾರೆ ಆದ್ರೆ ಸಾಧ್ಯ ಆಗೋದಿಲ್ಲ. ಅಷ್ಟರ ಮಟ್ಟಿಗೆ ಅವರನ್ನು ಭೀಕರವಾಗಿ ಅಲ್ಲಿಂದ ದುಷ್ಕರ್ಮಿಗಳು ಎಸ್ಕೇಪ್ ಆಗ್ತಾರೆ. ಯಾರೋ ಕೂಡ ಈ ಪರಿ ಕೊಲೆ ಮಾಡಿದ್ದನ್ನು ಇತ್ತೀಚಿಗೆ ನೋಡಿರಲಿಲ್ಲ. ಅದು ಯಾವ ದ್ವೇಷ ಇತ್ತೋ, ಅದು ಯಾವ ಸಿಟ್ಟು ಇತ್ತೋ ಗೊತ್ತಿಲ್ಲ. ಆ ಪರಿ ಗುರೂಜಿಯನ್ನ ಹಾಡು ಹಗಲೇ ಹುಬ್ಬಳ್ಳಿಯ ಜನತೆ ನೋಡುತ್ತಿರುವ ಸಂದರ್ಭದಲ್ಲಿ ಚುಚ್ಚಿ ಎಸ್ಕೇಪ್ ಆಗಿದ್ದಾರೆ. ಆ ಸಂದರ್ಭಕ್ಕೆ ಯಾರೋ ಸಹ ಸಹಾಯಕ್ಕೆ ಬರಲಿಲ್ಲ. ಯಾರೋ ಕೂಡ ಅವರ ನೆರವಿಗೆ ನಿಂತುಕೊಳ್ಳಲ್ಲಿಲ್ಲ. ಅಥವಾ ದುಷ್ಕರ್ಮಿಗಳನ್ನು ಅಲ್ಲಿಂದ ಓಡಿಸುವಂತ ಕೆಲಸವನ್ನು ಯಾರೂ ಮಾಡಲಿಲ್ಲ. ಅಲ್ಲಿ ಏನಾಗ್ತಿದೆ ಅನ್ನುವುದು ಗೊತ್ತಾಗ್ತಾ ಇಲ್ಲ. ಆ ನಂತರ ಗುರೂಜಿ ಬಂದ್ರು ಗುರೂಜಿಯವರ ಮೃತ ದೇಹವನ್ನು ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡಿದ್ರೂ, ಸಿಸಿಟಿವಿ ಯಲ್ಲಿ ಅವರು ಸತ್ತು ಹೋಗಿರುವ ಭೀಕರ ದೃಶ್ಯ ಸೆರೆಯಾಗಿದೆ. ಆ ವಿಶುವಲ್ ನೋಡಿದ್ರೆ ಯಾರಿಗಾದ್ರೂ ಬೆಚ್ಚಿ ಬೀಳಿಸುತ್ತದೆ. ಯಾರಾದ್ರೂ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರ ಏನು ಅಂತ ಅನುಮಾನ, ಅಥವಾ ಯಾವುದೋ ಹಳೇ ದ್ವೇಷಕ್ಕೆ ಇರಬಹದು ಎನ್ನುವ ಅನುಮಾನ ಮೂಡುವುದು ಸಹಜ.