ನರೇಶ್ ಹಾಗೂ ಪವಿತ್ರ ಲೋಕೇಶ್ ನಡುವಿಂದ ಸಂಬಂಧ ಪಟ್ಟ ಹಾಗೆ ಸಾಕಷ್ಟು ಚರ್ಚೆಗಳು ಆಗ್ತಾ ಇವೆ. ಈ ಪ್ರಕರಣ ಈಗ ತಾರ್ಕಿಕ ಹಂತಕ್ಕೆ ಬರುವಂತಹ ಎಲ್ಲಾ ಲಕ್ಷಣಗಳು ಕಾಣಿಸುತ್ತವೆ. ಎಷ್ಟರ ಮಟ್ಟಿಗೆ ಇದು ರಾದ್ದಂತ ಆಯ್ತು ಅಂದ್ರೆ, ಪ್ರತಿ ಮಾಧ್ಯಮಗಳಲ್ಲಿ ಈ ವಿಚಾರ ಚರ್ಚೆಗೆ ಬರುವ ಪ್ರಸಂಗ ಎದುರಾಯಿತು. ಕೇವಲ ಕರ್ನಾಟಕ ಅಲ್ಲ, ಆಂಧ್ರ ಪ್ರದೇಶ,ತೆಲಂಗಾಣ ಎಲ್ಲಾ ಕಡೆಗಳಲ್ಲಿ ಇದೆ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಅಂತಿಮವಾಗಿ ನರೇಶ್, ಪವಿತ್ರ ಲೋಕೇಶ್, ಸುಚೇಂದ್ರ ಪ್ರಸಾದ್, ರಮ್ಯಾ ರಘುಪತಿ ಎಲ್ಲರೂ ಕೂಡ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು. ಅದ್ರಲ್ಲೂ ಕೂಡ ರಮ್ಯ ರಘುಪತಿ ತನ್ನ ಗಂಡ ನರೇಶ್ ಹಾಗೂ ಪವಿತ್ರ ಲೋಕೇಶ್ ವಿರುದ್ಧ ತೀವ್ರವಾದ ಆಕ್ರೋಶವನ್ನು ಹೊರ ಹಾಕಿದ್ರು. ಈ ಸಂದರ್ಭದಲ್ಲಿ ನರೇಶ್ ಸ್ಪಷ್ಟನೆ ಕೊಡ್ತಾ ಹೋಗ್ತಾರೆ, ಪವಿತ್ರ ಲೋಕೇಶ್ ನನ್ನ ನಡುವೆ ಬೇರೆ ಏನೋ ಇಲ್ಲ. ನಮ್ಮಿಬ್ಬರ ನಡುವೆ ಇರುವುದು ಪ್ಯೂರ್ ಫ್ರೆಂಡ್ಶಿಪ್ ಅಂತ ಹೇಳ್ತಾರೆ. ಈಕಡೆ ಪವಿತ್ರ ಲೋಕೇಶ್ ಕೂಡ ಪತ್ರಿಕಾ ಗೋಷ್ಠಿ ನಡೆಸಿ ಮಾಧ್ಯಮಗಳ ಕುರಿತು ತಮ್ಮ ಆಕ್ರೋಶ ಹೊರ ಹಾಕ್ತಾರೆ. ಅವರು ಸಹ ನರೇಶ್ ಜೊತೆ ನನಗೆ ಉತ್ತಮ ಸ್ನೇಹ ಇದೆ, ನಮ್ಮಿಬ್ಬರ ಸ್ನೇಹ ಇದ್ರೆ ಯಾರಿಗೆ ಏನು ಸಮಸ್ಯೆ ಎನ್ನುವ ರೀತಿಯಲ್ಲಿ ಪ್ರಶ್ನೆ ಮಾಡ್ತಾರೆ.
ಇದರ ನಡುವೆ ರಮ್ಯಾ ರಘುಪತಿ ಮತ್ತೆ ಮತ್ತೆ ಹೇಳ್ತಾ ಇದ್ರು, ಇಲ್ಲ ಅವರ ನಡುವೆ ಸ್ನೇಹವನ್ನು ಮೀರಿದ ಸಂಬಂಧ ಇದೆ. ಅವರಿಬ್ಬರೂ ಮದುವೆ ಆಗುವ ಹಂತಕ್ಕೆ ಬಂದಿದ್ದಾರೆ. ಅದನ್ನು ನಾನು ಆಧಾರ ಸಹಿತವಾಗಿ ರಾಜ್ಯದ ಜನರ ಮುಂದೆ ಪ್ರೋವ್ ಮಾಡ್ತೀನಿ ಅಂದಿದ್ರು. ಅದೇ ಪ್ರಕಾರವಾಗಿ ಈಗ ಮೈಸೂರಿನ ಖಾಸಗಿ ಹೋಟೆಲ್ ಮುಂದೆ ಹೈ ಡ್ರಾಮಾ ನಡೆದಿದೆ. ನಿನ್ನೆ ಹೋಟೆಲ್ ಒಳಗಡೆ ಹೋಗುವ ಸಂಧರ್ಭದಲ್ಲಿ ನರೇಶ್ ಪವಿತ್ರ ಲೋಕೇಶ್ ಒಟ್ಟಿಗೆ ಹೋಗಿದ್ದಾರೆ. ಇದನ್ನು ಒಂದಿಷ್ಟು ಜನ ನೋಡಿ ರಮ್ಯಾ ರಘುಪತಿ ಗೆ ತಿಳಿಸಿದ್ದಾರೆ. ವಿಷ್ಯ ತಿಳಿದು ರಮ್ಯ ಪೊಲೀಸ್ ಪ್ರೊಟೆಕ್ಷನ್ ಜೊತೆಗೆ ಹೋಟೆಲ್ ಬಳಿ ಹೋಗಿದ್ದಾರೆ. ರಮ್ಯ ಹಠ ಹಿಡಿದು ನರೇಶ್ ಹೊರಗಡೆ ಬರುವ ವರೆಗೆ ನಾನು ಈ ಜಾಗವನ್ನು ಬಿಟ್ಟು ಹೋಗಲ್ಲ ಅಂತ. ಅಲ್ಲೇ ರಾತ್ರಿ ಪೂರ್ತಿ ಕುತ್ಕೊತಾರೆ. ನಿರಂತರವಾಗಿ ಬೆಲ್ ಮಾಡಲು ಶುರು ಮಾಡ್ತಾರೆ. ನರೇಶ್ ಬಾಗಿಲು ತೆರೆಯಲಿಲ್ಲ. ಅಂತಿಮವಾಗಿ ಬೆಳಿಗ್ಗೆ ನರೇಶ್ ಹೊರಗಡೆ ಬರ್ತಾರೆ. ಯಾರೋ ಕೂಡ ನಿರೀಕ್ಷೆ ಮಾಡಿರದ ರೀತಿಯಲ್ಲಿ ರಮ್ಯ ರಘುಪತಿ ಆರೋಪ ಮಾಡಿದ ಹಾಗೆ ನರೇಶ್ ಜೊತೆಗೆ ಪವಿತ್ರ ಲೋಕೇಶ್ ಬರ್ತಾರೆ.
ಆ ಸಮಯದಲ್ಲಿ ಪವಿತ್ರ ಲೋಕೇಶ್ ಸ್ವಲ್ಪ ಮಟ್ಟಿಗೆ ಟೆನ್ಷನ್ ಆದ ರೀತಿ ಕಾಣಿಸ್ಥರೆ. ಆದ್ರೆ ನರೇಶ್ ಮಾತ್ರ ಸಂಪೂರ್ಣವಾಗಿ ಖುಷಿಯಾಗಿ ಹೊರಗಡೆ ಬರ್ತಾರೆ. ಈ ಕಡೆಯಿಂದ ರಮ್ಯ ಚಪ್ಪಲಿ ಇಂದ ಹೊಡೆಯಲು ಪ್ರಯತ್ನ ಮಾಡ್ತಾರೆ ಆದ್ರೆ ಪೊಲೀಸರು ಅವಕಾಶ ಮಾಡಿಕೊಡಲ್ಲ. ಆದ್ರೆ ಮತ್ತೊಂದು ಕಡೆ ನರೇಶ್ ವಿಕ್ಟರಿ ಸಿಂಬಲ್ ತೋರಿಸುತ್ತಾ ಒಂದು ರೀತಿ ವಿಚಿತ್ರವಾಗಿ ಜೋಶ್ ಅಲ್ಲಿ ಕೂಗುತ್ತಾ ಲಿಫ್ಟ್ ಅಲ್ಲಿ ಹೊರಟು ಹೋಗ್ತಾರೆ. ರಮ್ಯ ರಘುಪತಿ ಅವರಿಬ್ಬರನ್ನೂ ತಡೆಯುವ ಪ್ರಯತ್ನ ಪಡ್ತಾರೆ ಆದ್ರೆ ತಡೆಯಲು ಸಾಧ್ಯ ಆಗಲಿಲ್ಲ. ರಮ್ಯ ರಘುಪತಿ ಧೋರಣೆ ಏನು ಅಂದ್ರೆ ಇವರಿಬ್ಬರೂ ಇಷ್ಟು ದಿನ ಸ್ನೇಹಿತರು ಎಂದು ಹೇಳಿ ಓಡಾಡ್ತಾ ಇದ್ರು, ಆದ್ರೆ ಒಂದೇ ರೂಮಿನಲ್ಲಿ ಏನು ಮಾಡ್ತಾ ಇದ್ರು,ಅವರಿಗೆ ನಾಚಿಕೆ ಆಗೋದಿಲ್ವ? ಒಂದು ಕಡೆ ಪವಿತ್ರ ಲೋಕೇಶ ಸುಚೇಂದ್ರ ಪ್ರಸಾದ್ ಅವರಿಗೆ ಇಬ್ಬರು ಮಕ್ಕಳು ಇದ್ದು,ನರೇಶ್ ಗೆ ಎರೆಡು ಮದುವೆ ಆಗಿ ನಂತರ ನನ್ನ ಜೊತೆ ಮೂರನೇ ಮದುವೆ ಆಗಿದ್ದಾರೆ. ನನಗೆ ಡೈವೋರ್ಸ್ ಕೊಟ್ಟಿಲ್ಲ ನಾನು ಓರ್ವ ಹೆಂಡತಿ ಇರುವಾಗ ನನ್ನ ಮುಂದೆ ಇನ್ನೋರ್ವ ಹೆಣ್ಣಿನ ಜೊತೆಗೆ ಹೋಟೆಲ್ ಅಲ್ಲಿ ಇದ್ರೆ ಇದನ್ನು ನಾನು ಸಹಿಸಿಕೊಳ್ಳಲು ಹೇಗೆ ಸಾಧ್ಯ ಎನ್ನುವಂಥ ಪ್ರಶ್ನೆ ಮಾಡ್ತಾ ಇದ್ದಾರೆ. ಇದಕ್ಕೆ ರಮ್ಯ ರಘುಪತಿ ಮಾಧ್ಯಮಗಳು ಮುಂದೇನು ಎಂದು ಕೇಳಿದಾಗ. ನಾನು ಹಿಂದೂ ಸಂಪ್ರದಾಯಗಳಿಗೆ ಬೆಲೆ ಕೊಟ್ಟಿರುವವಳು, ನಾನಂತೂ ಡೈವೋರ್ಸ್ ಕೊಡಲ್ಲ. ಕಷ್ಟಾನೋ ಸುಖಾನೋ ನನಗೆ ನನ್ನ ಗಂಡ ಬೇಕು. ನಾನು ನ್ಯಾಯಕ್ಕಾಗಿ ಹೋರಾಟ ಮಾಡ್ತೀನಿ ಅಂತ ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದಾರೆ.