ಅಪ್ಪುಗೆ ಸಂಬಂಧಪಟ್ಟ ಕಾರ್ಯಕ್ರಮಗಳಲ್ಲಿ ಅಳಿಯ ರಾಮ್ ಕುಮಾರ್ ಕಾಣಿಸಿಕೊಳ್ತಿಲ್ಲ ಯಾಕೆ? ಪ್ರೀತಿಸಿ ಮದುವೆಯಾಗಿದ್ದ ರಾಮ್ ಕುಮಾರ್ ಪೂರ್ಣಿಮಾ ರನ್ನ 2 ವರ್ಷ ಪಾರ್ವತಮ್ಮ ರಾಜಕುಮಾರ್ ಯಾಕೆ ಮನೆಗೆ ಸೇರಿಸಿರಲಿಲ್ಲ?

ನಟ ಪುನೀತ್ ರಾಜಕುಮಾರ್ ವಿಧಿವಶರಾದ ಆ ನೋವಿದೆಯಲ್ಲ ಅದನ್ನು ಈ ಕ್ಷಣಕ್ಕೂ ಕೂಡ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯ ಆಗ್ತಾ ಇಲ್ಲ. ಇದು ಒಂದು ಕಡೆ ಆದ್ರೆ ಮತ್ತೊಂದು ಕಡೆ ಪುನೀತ್ ರಾಜಕುಮಾರ್ ಅವರಿಗೆ ಸಂಬಂಧ ಪಟ್ಟ ಸಾಲು ಸಾಲು ಕಾರ್ಯಕ್ರಮಗಳು ನಡಿತಾ ಇವೆ. ಆರಂಭದಲ್ಲಿ ಹಾಲು ತುಪ್ಪ ಕಾರ್ಯ ಅದಾದ ಇಂತಿಷ್ಟು ದಿನಕ್ಕೆ ಪೂಜೆ, ಸಮಾಧಿ ಬಳಿ ನಿರಂತರವಾಗಿ ಒಂದಿಷ್ಟು ಬೇರೆ ಬೇರೆ ಪೂಜಾ ಕಾರ್ಯ, ಅದಾದ ನಂತರ ಪುನೀತ್ ರಾಜಕುಮಾರ್ ಅವರ ಬರ್ತಡೇ ಸಂಭ್ರಮ. ಜೇಮ್ಸ್ ರಿಲೀಸ್ ಸಂಬ್ರಮ, ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದ ಸಮಯ. ಇದೆಲ್ಲ ಕೂಡ ಆಗಿರಬಹುದು, ಹೀಗೆ ಎಲ್ಲಾ ಬಹುತೇಕ ಕಾರ್ಯಕ್ರಮಗಳಲ್ಲಿ ಇಡೀ ಅಣ್ಣಾವ್ರ ಕುಟುಂಬ ಕಾಣಿಸಿಕೊಳ್ಳುತ್ತಿದೆ,ಆದ್ರೆ ಬಹುತೇಕ ಕಾರ್ಯಕ್ರಮಗಳಲ್ಲಿ ಒಬ್ಬರು ಮಾತ್ರ ಮಿಸ್ ಆಗುತ್ತಿದ್ದಾರೆ, ಅದು ನಟ ರಾಮ್ ಕುಮಾರ್ ಅವರು. ಡಾಕ್ಟರ್ ರಾಜಕುಮಾರ್ ಅವರ ಅಳಿಯ ಪೂರ್ಣಿಮಾ ಅವರ ಪತಿ ಆದಂಥ ರಾಮ್ ಕುಮಾರ್ ಅವರು ಹೆಚ್ಚಿನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತ ಇಲ್ಲ. ಪುನೀತ್ ರಾಜಕುಮಾರ್ ಅವರು ವಿಧಿವಶ ಆದಾಗ ಕಾಣಿಸಿಕೊಂಡರು, ಅದಾದ ಮೇಲೆ ಸಮಾಧಿಯ ಬಳಿ ಒಂದು ಟೈಂ ಬಂದಿದ್ದು ಬಿಟ್ರೆ ಆ ನಂತರ ಯಾವುದೇ ಕಾರ್ಯಕ್ರಮಗಳಲ್ಲಿ ಕೂಡ ರಾಮ್ ಕುಮಾರ್ ಕಾಣಿಸಿಕೊಳ್ಳಲಿಲ್ಲ. ಈ ಜೇಮ್ಸ್ ಬರ್ತಡೇ ವಿಚಾರದಲ್ಲಿ, ಡಾಕ್ಟರೇಟ್ ಪದವಿ ಸ್ವೀಕಾರ ಸಮಾರಂಭಕ್ಕೆ,ಎಲ್ಲೋ ಕೂಡ ರಾಮ್ ಕುಮಾರ್ ಕಾಣಿಸಿಕೊಳ್ಳುತ್ತಿಲ್ಲ.

 

ತುಂಬಾ ಜನರಿಗೆ ಇದೊಂದು ಪ್ರಶ್ನೆ ಇದೆ, ಯಾಕೆ ಇಡೀ ಕುಟುಂಬದವರು ಕಾಣಿಸಿಕೊಂಡರೂ ಕೂಡ ರಾಮ್ ಕುಮಾರ್ ಅವರು ಕಾಣಿಸಿಕೊಳ್ಳುತ್ತಿಲ್ಲ ಅಂತ. ಒಂದು ವಿಚಾರ ಅಂದ್ರೆ ಹಿಂದಿನಿಂದಲೂ ರಾಮ್ ಕುಮಾರ್ ಒಂದು ಪಾಲಿಸಿಯನ್ನು ಫಾಲೋ ಮಾಡಿಕೊಂಡು ಬಂದ ರೀತಿಯಲ್ಲಿ ಕಾಣಿಸುತ್ತಿದೆ. ತುಂಬಾ ವರ್ಷಗಳ ನಂತರ ರಾಮ್ ಕುಮಾರ್ ಪುನೀತ್ ರನ್ನು ಭೇಟಿ ಆಗಿದ್ದರು ಆ ವಿಷ್ಯ ತುಂಬಾ ಚರ್ಚೆಗೆ ಗ್ರಾಸವಾಗಿತ್ತು. ಯಾಕಂದ್ರೆ ಅವರು ಬಹಿರಂಗವಾಗಿ ಪುನೀತ್ ರನ್ನು ಮೀಟ್ ಮಾಡಿದ್ದು, ಯಾರು ಕೂಡ ನೋಡಿರಲಿಲ್ಲ. ಆ ಫೋಟೋ ಕೂಡ ತುಂಬಾ ವೈರಲ್ ಆಗಿತ್ತು. ಅಣ್ಣಾವ್ರ ಕುಟುಂಬದ ಅಳಿಯ ಅಂತ ಅವರ ಹೆಸರನ್ನು ಎಲ್ಲೋ ಮಿಸ್ ಯೂಸ್ ಮಾಡಿಕೊಂಡಿಲ್ಲ. ಜೊತೆಗೆ ಅಣ್ಣಾವ್ರ ಕುಟುಂಬಕ್ಕೆ ಕಪ್ಪು ಚುಕ್ಕೆ ಬರುವಂತಹ ಕೆಲ್ಸ ಸಹ ಮಾಡಿಲ್ಲ. ಹಾಗೆಯೇ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಸಹ ತುಂಬಾ ಕಡಿಮೆಯೇ. ಮೇ ಬೀ ಅವರು ಅವರ ಪ್ರಪಂಚದಲ್ಲಿ ಇರಲು ಬಯಸುತ್ತಾರೆ ಅನಿಸುತ್ತೆ. ಇದರ ಹೊರತಾಗಿ ಅವರಿಗೆ ಯಾವುದಾದರೂ ಕಹಿ ಘಟನೆಗಳು ಆಗಿರಬಹುದು ಎನ್ನುವ ಸಂಶಯ ಹುಟ್ಟುವುದು ಸಹಜ. ಅದ್ಭುತವಾದ ಕಲೆ ಹಾಗೂ ನೋಡಲು ತುಂಬಾ ಸ್ಮಾರ್ಟ್ ಇದ್ರು. ಆದ್ರೆ ಸಿನೆಮಾ ಜೀವನದಿಂದ ಬೇಗ ದೂರ ಆದ್ರು. ಇನ್ನ ರಾಮ್ ಕುಮಾರ್ ಪೂರ್ಣಿಮಾ ಮದುವೆ ವಿಚಾರಕ್ಕೆ ಬಂದ್ರೆ, ಪೂರ್ಣಿಮಾ ರಾಜ್ಕುಮಾರ್ ಅವರ ಪ್ರೀತಿಯ ಮಗಳು. ಅವರು ಕೂಡ ಹಿಂದೆ ನಾ ನಿನ್ನ ಮರೆಯಲಾರೆ ಎಂಬ ಸಿನೆಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸಿ ನಂತರ ಎಜುಕೇಶನ್ ಕಡೆಗೆ ಗಮನ ವಹಿಸಿದರು. ಪೂರ್ಣಿಮಾ ಸಿನೆಮಾ ಮಾಡದಿದ್ದರೂ ಸಿನೆಮಾ ಶೂಟಿಂಗ್ ಸ್ಪಾಟ್ ಗೆ ಬರ್ತಾ ಇದ್ರು, ಈ ರೀತಿ ಶೂಟಿಂಗ್ ಸ್ಪಾಟ್ ಗೆ ಹೋಗುವ ಸಂದರ್ಭದಲ್ಲಿ ರಾಮ್ ಕುಮಾರ್ ಪರಿಚಯ ಆಗುತ್ತೆ,ಪರಿಚಯ ಸ್ನೇಹಕ್ಕೆ ತಿರುಗಿ ಪ್ರೀತಿಯ ಹಂತ ತಲುಪುತ್ತದೆ. ಇದೆ ವಿಚಾರವನ್ನು ಮನೆಯಲ್ಲಿ ಪ್ರಸ್ತಾಪ ಮಾಡಿದಾಗ, ಪಾರ್ವತಮ್ಮ ರಾಜಕುಮಾರ್ ಹಾಗೂ ಸ್ವತಃ ರಾಜ್ ಕುಮಾರ್ ಅವರು ತೀವ್ರವಾದ ವಿರೋಧ ವ್ಯಕ್ತ ಪಡಿಸಿದರು.

 

ಯಾವ ಹಂತಕ್ಕೆ ಅಂದ್ರೆ ಮದುವೆ ಆಗಲು ಆಗೋದೇ ಇಲ್ಲ ಎನ್ನುವ ಹಂತಕ್ಕೆ ವಿರೋಧ ಇರುತ್ತೆ ಯಾವ ಕಾರಣಕ್ಕೆ ವಿರೋಧ ಅಂತ ಎಲ್ಲೋ ಪ್ರಸ್ತಾಪ ಮಾಡಿಲ್ಲ. ಈ ವಿಚಾರವನ್ನು ಸ್ವತಃ ಪೂರ್ಣಿಮಾ ಅವರು ಇಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ನಡುವೆ ಪೂರ್ಣಿಮಾ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡು, ಹೇಳದೆ ಕೇಳದೆ ರಾಮ್ ಕುಮಾರ್ ಜೊತೆ ಮದುವೆಯೂ ಆಗಿಬಿಡುತ್ತಾರೆ. ಇದರಿಂದ ಸಹಜವಾಗಿ ರಾಜ್ ಕುಮಾರ್ ಕುಟುಂಬ ಶಾಕ್ ಗೆ ಒಳಗಾಗುತ್ತಾರೆ. ಈ ರೀತಿ ಆಗಬಾರದು ಎಂದು ಎಲ್ಲಾ ಮಕ್ಕಳಿಗೆ ತುಂಬಾ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿಬಿಡುತ್ತಾರೆ. ನಂತರ ಅವರಿಬ್ಬರನ್ನೂ ಎರಡು ವರ್ಷಗಳ ಕಾಲ ಅಣ್ಣಾವ್ರ ಕುಟುಂಬ ಇವರಿಬ್ಬರನ್ನು ಮನೆಗೆ ಸೆರಿಸಿರಲಿಲ್ಲ. ಧೀರೇಂದ್ರ ರಾಮ್ ಕುಮಾರ್ ಹುಟ್ಟಿದ ಮೇಕೆ ಅಣ್ಣಾವ್ರು ಇವರನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ. ಈ ಎರಡು ವರ್ಷಗಳಲ್ಲಿ ರಾಮ್ ಕುಮಾರ್ ಗೆ ಯಾವುದೇ ಸಿನೆಮಾ ಅವಕಾಶಗಳು ಬರುವುದು ಕಡಿಮೆ ಆಗುತ್ತೆ. ಹೀಗೆ ಅವಕಾಶಗಳು ಕಡಿಮೆ ಆಗಿ ಆಗಿ ಸಿನೆಮಾ ಬದುಕಿನಿಂದ ದೂರ ಉಳಿಯುವ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ರಾಮ್ ಕುಮಾರ್ ಅಂದಿನಿಂದಲೂ ಇಂದಿನವರೆಗೂ ಕೂಡ ಅಣ್ಣಾವ್ರ ಕುಟುಂಬದಿಂದ ಅಂತರವನ್ನು ಕಾಯ್ದುಕೊಂಡು ಬರ್ತಾ ಇದ್ದಾರೆ.

Leave a comment

Your email address will not be published. Required fields are marked *